ನಮಸ್ತೆ ಸ್ನೇಹಿತರೆ, ಕೆಲವು ರೈತರು ತಮ್ಮ ಮಕ್ಕಳು ತಮ್ಮಂತೆ ರೈತರು ಆಗಬೇಕೆಂದು ಎಂದೂ ಕೂಡ ಬಯಸೋದಿಲ್ಲ ಯಾಕೆಂದರೆ, ಬೆಳಗ್ಗೆ ರಾತ್ರಿ ಕಷ್ಟಪಟ್ಟರು  ಕೈಗೆ ಬಿಡುಗಾಸು ಸಿಗೋದಿಲ್ಲ.. ಜೀವನಾನು ಕೂಡ ನೆಮ್ಮದಿಯಾಗಿ ಮಾಡುವುದಕ್ಕೆ ಆಗೋದಿಲ್ಲ ಅನ್ನೋದು ಕೆಲವು ರೈತರ ಅಭಿಪ್ರಾಯ. ಆದರೆ ಹರಿಯಾಣದ ರೈತರು ವ್ಯವಸಾಯ ಮಾಡಿ ಐಷಾರಾಮಿ ಜೀವನ ನಡೆಸುತ್ತಿದ್ದಾರೆ. ಇನ್ನೂ ಅಮೇರಿಕಾ, ನ್ಯೂಜಿಲೆಂಡ್, ಥೈಲ್ಯಾಂಡ್ ರೈತರು ಕೋಟಿ ಕೋಟಿ ಸಂಪಾದನೆ ಮಾಡಿ ದೊಡ್ಡ ವ್ಯವಹಾರಸ್ಥರಾಗಿ ಜೀವನ ನಡೆಸುತ್ತಿದ್ದಾರೆ.. ಯಾಕೆಂದರೆ ಅವರು ಕೃಷಿಯಲ್ಲಿ ಬಹಳ ಮುಂದಿದ್ದಾರೆ ಎನ್ನಬಹುದು. ಇನ್ನೂ ನಾವು ತಾತ ಮುತ್ತಾತನ ಕಾಲದಲ್ಲಿ ಮಾಡುತ್ತಿದ್ದ ವ್ಯವಸಾಯ ಪದ್ದತಿಯನ್ನು ಈಗಲೂ ಅನುಸರಿಸುತ್ತಾ ಅಲ್ಲೇ ಉಳಿದುಕೊಂಡಿದ್ದೇವೆ..

Agriculture

ಹಿಂದಿನ ಕಾಲದಲ್ಲಿ ಕುದುರೆ ಗಾಡಿ ಹಾಗೂ ಎತ್ತಿನ ಬಂಡಿಯಲ್ಲಿ ಪ್ರಯಾಣ ಮಾಡುತ್ತಿದ್ದರು. ಈಗ ಪ್ರಪಂಚ ಬದಲಾಗಿದೆ. ಬಸ್ಸು, ಕಾರು, ವಿಮಾನದಲ್ಲಿ ಪ್ರಯಾಣ ಮಾಡುತ್ತೇವೆ.. ಹಾಗೆ ಹೊಸತನಕ್ಕೆ, ಹೊಸ ಪದ್ದತ್ತಿಗೆ ನಾವು ಹೊಂದಿಕೊಂಡು ಹೋಗಲೇ ಬೇಕು ಅಲ್ವಾ.. ಇನ್ನೂ ಈ ಹುಡುಗಿಗೆ ಕಂಪನಿಯವರು ಲಕ್ಷ ಲಕ್ಷ ಸಂಭಾವನೆ ಬರುವ ಕೆಲಸ ಕೊಟ್ಟರು.. ಆ ಕೆಲಸವನ್ನು ಬಿಟ್ಟು ಈಗ ತನ್ನ ಕೆಲಸವನ್ನು ವ್ಯವಸಾಯದಲ್ಲಿ ಹುಡುಕಿಕೊಂಡಿದ್ದು ಹೇಗೆ ಯಶಸ್ಸು ಗಳಿಸಿದ್ದಾರೆ ಗೊತ್ತಾ? ಈ ಹುಡುಗಿಯ ಹೆಸರು ವಲ್ಲಾರಿ ಚಂದ್ರಾಕರ್.. ಕಂಪ್ಯೂಟರ್ ಸೈನ್ಸ್ ನಲ್ಲಿ ಎಮ್ ಟೆಕ್ ಮುಗಿಸಿಕೊಂಡಿದ್ದ ಈ ಹುಡುಗಿಗೆ ಒಂದು ದೊಡ್ಡ ಕಂಪನಿಯಲ್ಲಿ ಲಕ್ಷ ಲಕ್ಷ ಸಂಭಾವನೆಯ ಕೆಲಸ ಸಿಕ್ಕಿತ್ತು. ಆದರೆ ವಲ್ಲಾರಿ ಅವರಿಗೆ ಈ ಕೆಲಸ ಇಷ್ಟವಿಲ್ಲದೇ ಸ್ವಲ್ಪ ದಿನಗಳ ಕಾಲ ಕಾಲೇಜ್ ಪ್ರೊಪೇಸರ್ ಆಗಿ ಕೆಲಸ ಮಾಡುತ್ತಾರೆ.

ಇನ್ನೂ ಆಗಾಗ ಹಳ್ಳಿಗೆ ಬರುತ್ತಿದ್ದ ಇವರಿಗೆ ವ್ಯವಸಾಯದ ಮೇಲೆ ಗಮನ ಸೆಳೆಯುತ್ತದೆ.. ಆಗ ವಲ್ಲಾರಿ ಅವರು ಯೋಚನೆ ಮಾಡಿ ನನಗೆ ಒಂದಷ್ಟು ಜಮೀನನ್ನು ಖರೀದಿ ಮಾಡಿ ಕೊಡಿ ನಾನು ವ್ಯವಸಾಯ ಮಾಡಲು ಇಷ್ಟಪಡುತ್ತೇನೆ ಎಂದು ತಂದೆಯ ಬಳಿ ಮನವಿ ಮಾಡಿಕೊಳ್ಳುತ್ತಾರೆ. ಆಗ ಅಲ್ಲಿನ ಜನ ಈ ಹುಡುಗಿಯ ಬಗ್ಗೆ ಮಾತನಾಡಿಕೊಳ್ಳಲು ಶುರುಮಾಡುತ್ತಾರೆ.. ಹೌದು ವಲ್ಲಾರಿ ಎಷ್ಟು ಓದಿದ್ದರು ಈಕೆ ಅನಕ್ಷರಸ್ಥೆ ಎಂದು ಗೇಲಿ ಮಾಡುತ್ತಾರೆ. ಆದರೆ ವಲ್ಲಾರಿ ತಂದೆ ಜನರ ಮಾತಿಗೆ ಕಿವಿ ಕೊಡದೆ ತನ್ನ ಮಗಳ ಆಸೆಯನ್ನು ಪೂರೈಸುತ್ತಾರೆ.‌ ಮಗಳ ಆಸೆಯಂತೆ ಸುಮಾರು 15 ಎಕರೆಯ ಜಮೀನನ್ನು ಖರೀದಿ ಮಾಡುತ್ತಾರೆ..

Agriculture

ಆಗ ಒಂದಿಷ್ಟು ವ್ಯವಸ್ಥಿತವಾಗಿ ಪ್ಲಾನ್ ಮಾಡಿದ ವಲ್ಲಾರಿ ಅವರು ರೈತರು ನಷ್ಟ ಅನುಭವಿಸುತ್ತಿರುವ ಹಳೆಯ ಸಾಂಪ್ರದಾಯಿಕ ಪದ್ದತಿಯನ್ನು ಬಿಟ್ಟು ಹೊಸ ಪದ್ದತಿಯಲ್ಲಿ ವ್ಯವಸಾಯ ಮಾಡಲು ಶುರುಮಾಡುತ್ತಾರೆ.. ಆಗ ಆಧುನಿಕ ಕೃಷಿಯ ಬಗ್ಗೆ ಒಂದಷ್ಟು ಮಾಹಿತಿಯನ್ನು‌ ಕಲೆ ಹಾಕಿದ ವಲ್ಲಾರಿ ಅವರು ಹಿಸ್ರಾಯಿಲ್ ಹಾಗೂ ಥೈಲ್ಯಾಂಡ್ ನಲ್ಲಿ ಮಾಡುತ್ತಿದ್ದ ಕೃಷಿಯ ಪದ್ದತಿಯನ್ನು ಇವರು ಮಾಡಲು ನಿರ್ಧಾರ ಮಾಡುತ್ತಾರೆ.. ಎಲ್ಲಿ ನಮ್ಮ ಪ್ರಯತ್ನ ಒಂದು ಗುರಿಯ ಕಡೆಗೆ ಇರುತ್ತದೋ ಅಲ್ಲಿ ಫಲ ಅನ್ನೋದು ಸಿಕ್ಕೆ ಸಿಗುತ್ತದೆ.

ಮೊದ ಮೊದಲು ವಲ್ಲಾರಿ ಅವರಿಗೆ ವ್ಯವಸಾಯದಲ್ಲಿ ತುಂಬಾ ಕಷ್ಟ ಅನಿಸುತ್ತದೆ ನಂತರ ಕೃಷಿಯ ಲಯಾ ಕಂಡುಕೊಂಡ ಇವರು ಹೊಸ ಪದ್ದತಿಯಲ್ಲಿ ಬೀನ್ಸ್, ಟೊಮೆಟೊ, ಹಾಗಲಕಾಯಿ, ಕ್ಯಾಪ್ಸಿಕಮ್, ಈಗೆ ಹಲವು ತರಕಾರಿಗಳನ್ನು ಬೆಳೆದು ಸಖತ್ ಆದಾಯ ಮಾಡುವ ಮೂಲಕ ಸಕ್ಸಸ್ ಕೂಡ ಕಾಣುತ್ತಾರೆ.. ಈಗ ಅತಿ ಹೆಚ್ಚು ಇಳುವರಿ ತೆಗೆಯುತ್ತಿರುವ ವಲ್ಲಾರಿ ಅವರು ಬೆಂಗಳೂರು, ಡೆಲ್ಲಿ, ನಾಗಪುರ್, ಬೂಪಾಲ್ ಗೆ ಕಳುಹಿಸಿ ಕೊಡುತ್ತಿದ್ದಾರೆ.. ಅಷ್ಟೇ ಅಲ್ಲದೇ ವಲ್ಲಾರಿ ಬೆಳೆಯುತ್ತಿರುವ ತರಕಾರಿ ಒಳ್ಳೆಯ ಗುಣಮಟ್ಟವಿರುವ ಕಾರಣ ವಿದೇಶಗಳಿಂದ ಬಹಳ ಬೇಡಿಕೆ ಬರುತ್ತಿದ್ದು ಅಲ್ಲಿಗೂ ಸಹ ಕಳುಹಿಸಿಕೊಡುತ್ತಿದ್ದಾರೆ. ಆಗೆ ತಿಂಗಳಿಗೆ ಲಕ್ಷ ಲಕ್ಷ ಹಣ ಗಳಿಸುತ್ತಿದ್ದಾರೆ..

ನಿಮ್ಮ ಸ್ನೇಹಿತರಿಗೆ ಮತ್ತು ಫೇಸ್ಬುಕ್ ಗ್ರೂಪ್ ಗೆ ಶೇರ ಮಾಡಿ...
  •  
  •  
  •  
  •  
  •  
  •  
  •