ಕನ್ನಡ ಕಿರುತೆರೆಯಲ್ಲಿ ಅತಿಹೆಚ್ಚು ಜನಪ್ರಿಯತೆ ಪಡೆದುಕೊಂಡಿರುವ ಕಾರ್ಯಕ್ರಮಗಳಲ್ಲಿ ಒಂದು ಬಿಗ್ ಬಾಸ್. ಈಗ ಬಿಗ್ ಬಾಸ್ ರಿಯಲಿಟಿ ಶೋನ 8 ನೆ ಆವೃತ್ತಿ ಶುರುವಾಗಿ ಎರಡು ವಾರ ಕಳೆದಿದೆ. ಬಿಗ್ ಬಾಸ್ ಮನೆಯೊಳಗೆ ಸ್ಪರ್ಧಿಯಾಗಿ ಹೋಗುವ ಅವಕಾಶ ಎಲ್ಲಾ ಸೆಲೆಬ್ರಿಟಿಗಳಿಗೂ ಸಿಗುವುದಿಲ್ಲ. ಹಲವಾರು ಜನ ಬಿಗ್ ಬಾಸ್ ಮನೆಯೊಳಗೆ ಹೋಗಲು ತು-ದಿಗಾಲಲ್ಲಿ ನಿoತಿರುತ್ತಾರೆ. ಅವಕಾಶ ಸಿಕ್ಕವರಿಗೆ ಆದು ಅದೃಷ್ಟ ಎಂದುಕೊಳ್ಳಬಹುದು. ಹಲವಾರು ಸೆಲೆಬ್ರಿಟಿಗಳಿಗೆ ಬಿಗ್ ಬಾಸ್ ಮನೆಯೊಳಗೆ ಹೋಗಿ ಬಂದ ನಂತರ ಅದೃಷ್ಟವೆ ಬದಲಾಗುತ್ತದೆ. ಈ ಬಾರಿ ಬಿಗ್ ಬಾಸ್ ಕನ್ನಡ ಸೀಸನ್ 8 ರಲ್ಲಿ 17 ಸ್ಪರ್ಧಿಗಳು ಮನೆಯೊಳಗೆ ಪ್ರವೇಶ ಮಾಡಿದ್ದಾರೆ. ಬಿಗ್ ಬಾಸ್ ಮನೆಯೊಳಗೆ ಇರುವ ಸ್ಪರ್ಧಿಗಳ ವಯಸ್ಸು ಎಷ್ಟು? ನಿಜ ಜೀವನದಲ್ಲಿ ಯಾವ ಸ್ಪರ್ಧಿ ಏನೆಲ್ಲಾ ಸಾಧನೆ ಮಾಡಿದ್ದಾರೆ ಗೊತ್ತಾ? ಮೊದಲ 8 ಸ್ಪರ್ಧಿಗಳ ಕುರಿತು ತಿಳಿಯಲು ಮುಂದೆ ಓದಿ..


ಬಿಗ್ ಬಾಸ್ ಸೀಸನ್ ೮ ರಲ್ಲಿ ಮೊದಲ ಸ್ಪರ್ಧಿಯಾಗಿ ಮನೆ ಪ್ರವೇಶ ಮಾಡಿದ ಧನುಶ್ರೀ ಟಿಕ್ ಟಾಕ್ ಮತ್ತು ಸೋಷಿಯಲ್ ಮೀಡಿಯಾದಲ್ಲಿ ಬಹಳ ಫೇಮಸ್ ಆಗಿದ್ದವರು. ಈಗ ಒಂದು ಸಿನಿಮಾದಲ್ಲಿ ಕೂಡ ಅಭಿನಯಿಸುತ್ತಿದ್ದಾರೆ. ಇವರ ವಯಸ್ಸು 21. ಕನ್ನಡ ಚಿತ್ರರಂಗದ ಹಿರಿಯ ನಟ ಶಂಕರ್ ಅಶ್ವತ್ಥ್, ಇವರು ಹೆಸರಾಂತ ನಟ ಕೆ.ಎಸ್.ಅಶ್ವತ್ಥ್ ಅವರ ಮಗ, ಚಿತ್ರರಂಗದಲ್ಲಿ ಸರಿಯಾದ ಅವಕಾಶ ಸಿಗದೆ ಊಬರ್ ಕ್ಯಾಬ್ ಓಡಿಸುತ್ತಿದ್ದರು. ಶಂಕರ್ ಅಶ್ವತ್ಥ್ ಅವರ ವಯಸ್ಸು 63.

ಮೊ-ಗ್ಗಿನ ಮ-ನಸ್ಸು ಸಿನಿಮಾದಲ್ಲಿ ಮುಗ್ಧ ಹುಡುಗಿಯಾಗಿ ನಟಿಸಿ ಅವಾರ್ಡ್ ಪಡೆದು, ಇಲ್ಲಿಯವರೆಗು ಸುಮಾರು 49 ಸಿನಿಮಾಗಳಲ್ಲಿ ನಟಿಸಿರುವ ಶುಭಾ ಪೂಂಜಾ ಕನ್ನಡ ಮಾತ್ರವಲ್ಲದೆ ತಮಿಳು ಚಿತ್ರರಂಗದಲ್ಲಿ ಕೂಡ ಹೆಸರು ಮಾಡಿದ್ದಾರೆ. ಇವರ ವಯಸ್ಸು 34. ಅಗ್ನಿಸಾಕ್ಷಿ ಧಾರಾವಾಹಿ ಮೂಲಕ ಸಾಕಷ್ಟು ಖ್ಯಾತಿ ಪಡೆದು, ಕರ್ನಾಟಕದ ಮನೆ ಮಗಳಾಗಿ ಇದ್ದವರು ವೈಷ್ಣವಿ ಗೌಡ. ಅಗ್ನಿಸಾಕ್ಷಿ ನಂತರ ನಿರೂಪಣೆ ಶುರು ಮಾಡಿದ್ದರು. ಕೆಲವು ಸಿನಿಮಾಗಳಲ್ಲಿ ಕೂಡ ನಟಿಸಿದ್ದರು ವೈಷ್ಣವಿ ಅವರ ವಯಸ್ಸು 27.

ಅಭಿಮಾನಿ ಸಿನಿಮಾ ಮೂಲಕ ಸ್ಯಾಂಡಲ್ ವುಡ್ ಗೆ ಎಂಟ್ರಿ ಕೊಟ್ಟ ನಟಿ ನಿಧಿ ಸುಬ್ಬಯ್ಯ. ಪo-ಚರಂಗಿ, ಅಣ್ಣಾ ಬಾoಡ್, ಕೃಷ್ಣನ್ ಮ್ಯಾರೇಜ್ ಸ್ಟೋರಿ ಅಂತಹ ಸಿನಿಮಾಗಳಲ್ಲಿ ನಟಿಸಿ, ಬಾಲಿವುಡ್ ಗು ಎಂಟ್ರಿ ಕೊಟ್ಟಿದ್ದರು. ಬಾಲಿವುಡ್ ನಲ್ಲಿ ಕೆಲವು ಸಿನಿಮಾಗಳು ಮತ್ತು ಆಲ್ಬಮ್ ಸಾಂಗ್ ಗಳಲ್ಲಿ ನಟಿಸಿದ್ದಾರೆ. ನಿಧಿ ಅವರ ವಯಸ್ಸು 36. ಹಾಡು ಕರ್ನಾಟಕ ಕಾರ್ಯಕ್ರಮದ ಮೂಲಕ ಹೆಸರುವಾಸಿಯಾಗಿರುವ ಯುವ ಪ್ರತಿಭೆ ವಿಶ್ವ. ಇವರು ಮೂಲತಃ ಧಾರವಾಡದವರು. ಸುಶ್ರಾವ್ಯವಾಗಿ ಹಾಡುತ್ತಾ ಎಲ್ಲರ ಗಮನ ಸೆಳೆದಿದ್ದರು. ವಿಶ್ವ ಅವರ ವಯಸ್ಸು 19.

ಕಳೆದ ಹಲವು ವರ್ಷಗಳಿಂದ ಬೈ-ಕರ್ ಆಗಿರುವವರು ಅರವಿಂದ್ ಕೆ.ಪಿ. ಇವರು ರಾಷ್ಟ್ರಿಯ ಮತ್ತು ಅಂತರಾಷ್ಟ್ರೀಯ ಮಟ್ಟದಲ್ಲಿ ಹಲವಾರು ಪುರಸ್ಕಾರ ಪಡೆದುಕೊಂಡಿದ್ದಾರೆ. ಅರವಿಂದ್ ಕೆಪಿ ಅವರ ವಯಸ್ಸು 31. ಕಿರುತೆರೆ ಕಲಾವಿದೆ ಗೀತಾ ಭಾರತಿ ಭಟ್ ಬ್ರಹ್ಮಗಂಟು ಧಾರಾವಾಹಿ ಮೂಲಕ ಹೆಚ್ಚಿನ ಜನಪ್ರಿಯತೆ ಪಡೆದಿದ್ದರು. ಕೆಲವು ಆಲ್ಬಮ್ ಗಳಿಗೆ ಧ್ವನಿ ಕೂಡ ನೀಡಿದ್ದಾರೆ. ಕಿರುತೆರೆಯಲ್ಲಿ ಈಗಿನ ಫೇವರೆಟ್ ನಟಿ ಗೀತಾ ಎಂದು ಹೇಳಬಹುದು. ಗೀತಾ ಭಾರತ್ ಭಟ್ ಅವರ ವಯಸ್ಸು 27. ಶಮಂತ್ ಗೌಡ ಅವರು ಸೋಷಿಯಲ್ ಮೀಡಿಯಾದಲ್ಲಿ ಬ್ರೌಗೌಡ ಎಂದೇ ಬಹಳ ಫೇಮಸ್ ಆದವರು. ಇವರು ಸೋಷಿಯಲ್ ಮೀಡಿಯಾ ಸೆಲೆಬ್ರಿಟಿ ಎನ್ನುವುದರ ಜೊತೆಗೆ ನಿರ್ದೇಶಕ ಮತ್ತು ಸಿಂಗರ್ ಕೂಡ ಹೌದು. ಬ್ರೋಗೌಡ ಅವರ ವಯಸ್ಸು 29.

ನಿಮ್ಮ ಸ್ನೇಹಿತರಿಗೂ/ಫೇಸ್ಬುಕ್ ಗ್ರೂಪ್ ಗೆ ಶೇರ್ ಮಾಡಿ...
  •  
  •  
  •  
  •  
  •  
  •  
  •  
  •