ಮದುವೆ ಎನ್ನುವುದು ಪ್ರತಿಯೊಬ್ಬರ ಜೀವನದಲ್ಲಿ ಬಹಳ ಮುಖ್ಯವಾದ ಘಟ್ಟ. ಪ್ರತಿಯೊಬ್ಬ ಹುಡುಗ ಮತ್ತು ಹುಡುಗಿ ತಾವು ಮದುವೆಯಾಗುವವರು ಇದೇ ರೀತಿ ಇರಬೇಕು ಎಂದು ಸಾಕಷ್ಟು ಕನಸುಗಳನ್ನು ಕಂಡಿರುತ್ತಾರೆ. ತಮ್ಮ ಕನಸಿಗೆ ತಕ್ಕಂತಹ ಜೀವನ ಸಂಗಾತಿಯನ್ನೇ ಆರಿಸಿಕೊಳ್ಳುತ್ತಾರೆ. ಕೆಲವರು ಪ್ರೀತಿಸಿ ಮದುವೆಯಾದರೆ ಇನ್ನು ಕೆಲವರು ತಂದೆ ತಾಯಿ ತೋರಿಸಿದವರೊಡನೆ ಮದುವೆಯಾಗುತ್ತಾರೆ. ಪ್ರತಿಯೊಬ್ಬರಿಗೂ ತಮ್ಮ ಸಂಗಾತಿಯನ್ನು ಆರಿಸಿಕೊಳ್ಳುವ ಸ್ವಾತಂತ್ರ್ಯ ಇರಬೇಕು ಎಂದು ಬಯಸುತ್ತಾರೆ. ಒಂದು ಮದುವೆಯಲ್ಲಿ ಎಲ್ಲರೂ ಮುಖ್ಯವಾಗಿ ಪರಿಗಣಿಸುವ ಒಂದು ಅಂಶ ವಯಸ್ಸು. ಸಾಮಾನ್ಯವಾಗಿ ಹುಡುಗನ ವಯಸ್ಸು ಹುಡುಗಿಗಿಂತ ಹೆಚಿರಬೇಕು ಎನ್ನುತ್ತಾರೆ. ಆದರೆ ಕೆಲವರ ವಿಷಯದಲ್ಲಿ ಇದು ವಿರುದ್ಧವಾಗಿದೆ.ಕೆಲವು ಹುಡುಗಿಯರು ಹುಡುಗನಿಗಿಂತ ದೊಡ್ಡವರಾಗಿರುತ್ತಾರೆ. ಹಳ್ಳಿ ಕಡೆ ಇಂದಿಗೂ ಸಹ ಹಡುಗಿಯ ವಯಸ್ಸು ಹುಡುಗನಿಗಿಂತ ಕಡಿಮೆ ಇರುವುದನ್ನು ನೋಡಿಕೊಂಡೆ ಮದುವೆ ಮಾಡುತ್ತಾರೆ. ಆದರೆ ನಗರ ಪ್ರದೇಶಗಳಲ್ಲಿ ಹಾಗೂ ಸೆಲೆಬ್ರಿಟಿಗಳ ಜೀವನದಲ್ಲಿ ವಯಸ್ಸನ್ನು ಹೆಚ್ಚಾಗಿ ಪರಿಗಣಿಸಿಲ್ಲ. ಹಲವಾರು ಹೀರೋಯಿನ್ ಗಳು ವಯಸ್ಸಲ್ಲಿ ತಮಗಿಂತ ಚಿಕ್ಕವರನ್ನು ಮದುವೆಯಾಗಿ ಸಂತೋಷವಾಗಿದ್ದಾರೆ. ಯಾರೆಲ್ಲಾ ಕನ್ನಡದ ಹೀರೋಯಿನ್ ಗಳು ವಯಸ್ಸಿನಲ್ಲಿ ಚಿಕ್ಕವರನ್ನು ಮದುವೆಯಾಗಿದ್ದಾರೆ ಗೊತ್ತಾ? ಈ ಸಾಲಿನಲ್ಲಿ ಕನ್ನಡದ ಯಾವ್ ಯಾವ ನಟಿಯರಿದ್ದಾರೆ ಗೊತ್ತಾ! ಇದರ ಬಗ್ಗೆ ಸಂಪೂರ್ಣ ವಾಗಿ ತಿಳಿಯಲು ಸ್ಕ್ರಾಲ್ ಡೌನ್ ಮಾಡಿ ಮುಂದೆ ಓದಿರಿ..

Actress


ಕನ್ನಡ ಚಿತ್ರರಂಗದ ರಾಕಿಂಗ್ ಜೋಡಿ ಎಂದೇ ಹೆಸರುವಾಸಿಯಾಗಿ ಇರುವವರು ರಾಧಿಕಾ ಪಂಡಿತ್ ಮತ್ತು ಯಶ್ ದಂಪತಿ. ಪ್ರೀತಿಸಿ ಮದುವೆಯಾದ ಇವರಿಬ್ಬರು ಈಗ ಸಂತೋಷವಾದ ದಾಂಪತ್ಯ ನಡೆಸುತ್ತಿದ್ದಾರೆ. ಯಶ್ ರಾಧಿಕಾ ದಂಪತಿಗೆ ಆಯ್ರಾ ಮತ್ತು ಯಥರ್ವ್ ಎಂಬ ಇಬ್ಬರು ಮಕ್ಕಳಿದ್ದಾರೆ. ವಿಷಯ ಏನೆಂದರೆ ಯಶ್ ಅವರಿಗಿಂತ ರಾಧಿಕಾ ಪಂಡಿತ್ ಎರಡು ವರ್ಷ ದೊಡ್ಡವರು. ಆದರೂ ಇವರಿಬ್ಬರು ಬಹಳ ಅನ್ಯೋನ್ಯತೆಯಿಂದ ಜೀವನ ಸಾಗಿಸುತ್ತಿದ್ದಾರೆ. ಕನ್ನಡ ನಟಿ ಛಾಯಾ ಸಿಂಗ್, ಕನ್ನಡ ಮಾತ್ರವಲ್ಲದೆ ತಮಿಳು ಮತ್ತು ತೆಲುಗು ಚಿತ್ರರಂಗದಲ್ಲಿ ಹೆಸರು ಗಳಿಸಿದವರು. ಈ ನಟಿ ತಮಿಳು ನಟ ಕೃಷ್ಣ ಅವರೊಡನೆ ವಿವಾಹವಾಗಿದ್ದಾರೆ. ಕೃಷ್ಣ ಅವರಿಗಿಂತ ಛಾಯಾ ಸಿಂಗ್ ಎರಡು ವರ್ಷ ದೊಡ್ಡವರು.

Actress
ದಕ್ಷಿಣ ಭಾರತದ ಖ್ಯಾತ ನಟಿ ಸ್ನೇಹ. ತಮಿಳು, ತೆಲುಗು, ಕನ್ನಡ ಮತ್ತು ಮಲಯಾಳಂ ಎಲ್ಲಾ ಭಾಷೆಗಳಲ್ಲೂ ನಟಿಸಿ ಸೈ ಎನಿಸಿಕೊಂಡವರು. ಇವರು ತಮಿಳು ನಟ ಪ್ರಸನ್ನ ಅವರೊಡನೆ ವಿವಾಹವಾಗಿದ್ದಾರೆ. ಈ ದಂಪತಿಗೆ ಮಕ್ಕಳಿದ್ದಾರೆ. ನಟ ಪ್ರಸನ್ನ ಸ್ನೇಹ ಅವರಿಗಿಂತ ಒಂದು ವರ್ಷ ಚಿಕ್ಕವರು. ಕರ್ನಾಟಕದಲ್ಲಿ ಹುಟ್ಟಿ ಬಾಲಿವುಡ್ ನ ಟಾಪ್ ನಟಿಯಾಗಿ ಮೆರೆದವರು ಶಿಲ್ಪಾ ಶೆಟ್ಟಿ. ಇವರು ಉದ್ಯಮಿ ರಾಜ್ ಕುಂದ್ರಾ ಅವರೊಡನೆ ವಿವಾಹವಾದರು. ಶಿಲ್ಪಾ ಶೆಟ್ಟಿ ಅವರಿಗಿಂತ ರಾಜ್ ಕುಂದ್ರಾ ಎರಡು ವರ್ಷ ಚಿಕ್ಕವರು. ಈ ದಂಪತಿಗಳ ಇತ್ತೀಚಿನ ಫೋಟೋಗಳನ್ನು, ಮುದ್ದಾದ ಕ್ಷಣಗಳನ್ನು ನೀವು ಇಲ್ಲಿ ನೋಡಬಹುದು!
ವಿಶ್ವ ಸುಂದರಿ ಮಂಗಳೂರಿನ ಬೆಡಗಿ ನಟಿ ಐಶ್ವರ್ಯ ರೈ, ಬಾಲಿವುಡ್ ನ ಟಾಪ್ ಮೋಸ್ಟ್ ನಟಿಯಾಗಿ ಯಶಸ್ಸು ಗಳಿಸಿದ ಇವರು ಅಭಿಷೇಕ್ ಬಚ್ಚನ್ ಅವರೊಡನೆ ಮದುವೆಯಾಗಿ, ಬಚ್ಚನ್ ಮನೆತನದ ಸೊಸೆಯಾದರು. ಅಭಿಷೇಕ್ ಬಚ್ಚನ್ ಐಶ್ವರ್ಯ ಗಿಂತ ಎರಡು ವರ್ಷ ಚಿಕ್ಕವರು. ಕನ್ನಡದ ಪ್ರತಿಭಾನ್ವಿತ ನಟಿ ಅನು ಪ್ರಭಾಕರ್. ಹಲವಾರು ಕನ್ನಡ ಸಿನಿಮಾಗಳಲ್ಲಿ ನಟಿಸಿ ಯಶಸ್ಸು ಗಳಿಸಿದವರು. ಮೊದಲ ಮದುವೆಯಿಂದ ವಿ-ಚ್ಛೇದನ ಪಡೆದ ನಂತರ ರಘು ಮುಖರ್ಜಿ ಅವರೊಡನೆ ಮದುವೆಯಾದರು ಅನು ಪ್ರಭಾಕರ್, ರಘು ಮುಖರ್ಜಿ ಅನು ಪ್ರಭಾಕರ್ ಅವರಿಗಿಂತ ಒಂದು ವರ್ಷ ಚಿಕ್ಕವರು. ಈ ದಂಪತಿಗಳ ಇತ್ತೀಚಿನ ಫೋಟೋಗಳನ್ನು, ಮುದ್ದಾದ ಕ್ಷಣಗಳನ್ನು ನೀವು ಇಲ್ಲಿ ನೋಡಬಹುದು!

Actress

ದಕ್ಷಿಣ ಭಾರತದ ಮತ್ತೊಬ್ಬ ಖ್ಯಾತ ನಟಿ ನಮ್ರತಾ ಶಿರೋಡ್ಕರ್. ಕನ್ನಡದಲ್ಲಿ ಚೋರ ಚಿತ್ತ ಚೋರ ಸಿನಿಮಾದಲ್ಲಿ ನಟಿಸಿದರು, ಇವರು ತೆಲುಗು ಸೂಪರ್ ಸ್ಟಾರ್ ಮಹೇಶ್ ಬಾಬು ಅವರನ್ನು ಪ್ರೀತಿಸಿ ಮದುವೆಯಾದರು. ನಮ್ರತಾ ಅವರಿಗಿಂತ ಮಹೇಶ್ ಬಾಬು ಎರಡು ವರ್ಷ ಚಿಕ್ಕವರು. ವಯಸ್ಸಿನಲ್ಲಿ ತಮಗಿಂತ ಚಿಕ್ಕವರನ್ನು ಮದುವೆಯಾದರು ಬಹಳ ಅನ್ಯೋನ್ಯವಾಗಿ ಸಂತೋಷವಾಗಿ ಜೀವನ ನಡೆಸುತ್ತಿದ್ದಾರೆ ಈ ನಟಿಯರು. ಈ ಸುದ್ದಿ ಇಷ್ಟ ವಾಗಿದ್ದಲ್ಲಿ ಇದನ್ನು ಲೈಕ್ ಮಾಡಿ ಶೇರ್ ಮಾಡಿ ಹಾಗು ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ತಪ್ಪದೆ ಕಾಮೆಂಟ್ ಗಳ ಮೂಲಕ ನಮಗೆ ತಿಳಿಸಿರಿ. ಕನ್ನಡ ಚಿತ್ರಗಳ ಬಗ್ಗೆ, ಕನ್ನಡ ನಾಡಿನ ಬಗ್ಗೆ, ಕನ್ನಡ ಧಾರಾವಾಹಿಗಳ ಬಗ್ಗೆ, ಕನ್ನಡ ನಟ ನಟಿಯರ ಬಗ್ಗೆ, ಬೇರೆ ಎಲ್ಲಾ ಮಾಹಿತಿ ಗಳಿಗಾಗಿ ನಮ್ಮ ಪೇಜನ್ನು ಇಂದೇ ಫಾಲೋ ಮಾಡಿ.

ನಿಮ್ಮ ಸ್ನೇಹಿತರಿಗೆ ಮತ್ತು ಫೇಸ್ಬುಕ್ ಗ್ರೂಪ್ ಗೆ ಶೇರ ಮಾಡಿ...
  •  
  •  
  •  
  •  
  •  
  •  
  •