ಅಗ್ನಿಸಾಕ್ಷಿ ಧಾರಾವಾಹಿ ಮೂಲಕ ಹೆಸರು ಮಾಡಿದ ನಟಿ ವೈಶ್ಣವಿ ಗೌಡ ಸದ್ಯ ಮದುವೆ ಸಂಭ್ರಮದಲ್ಲಿದ್ದಾರೆ.. ಹೌದು ಸತತ ಏಳು ವರ್ಷಗಳ ಕಾಲ ಪ್ರಸಾರವಾದ ಧಾರಾವಾಹಿ ಅಗ್ನಿಸಾಕ್ಷಿ ಧಾರಾವಾಹಿಯಲ್ಲಿ ಸನ್ನಿಧಿ ಪಾತ್ರದ ಮೂಲಕ ಮನೆಮಾತಾದ ನಟಿ ವೈಶ್ಣವಿ ಗೌಡ ಅವರ ಮನೆಯಲ್ಲಿ ಮದುವೆ ಸಂಭ್ರಮ ಮನೆ ಮಾಡಿದೆ..
ಹೌದು ದೇವಿ ಧಾರಾವಾಹಿ ಮೂಲಕ ಕನ್ನಡ ಕಿರುತೆರೆಗೆ ಎಂಟ್ರಿ ಕೊಟ್ಟ ವೈಶ್ಣವಿ ಗೌಡ ನಂತರ 2013 ರಲ್ಲಿ ಕಲರ್ಸ್ ಕನ್ನಡ ವಾಹಿನಿಯಲ್ಲಿ ಅಶ್ವಿನಿ ನಕ್ಷತ್ರ ಧಾರಾವಾಹಿಯಲ್ಲಿ ಜೆಕೆ ತಂಗಿಯ ಪಾತ್ರದ ಮೂಲಕ ಪರಿಚಯವಾಗಿ ನಂತರ ಅಗ್ನಿಸಾಕ್ಷಿ ಧಾರಾವಾಹಿ ಮೂಲಕ ಮನೆ ಮಾತಾದ ನಟಿ ವೈಶ್ಣವಿ ಗೌಡ ಎಂದರೆ ಈಗಲೂ ಕಿರುತೆರೆಯ ಡಿಂಪಲ್ ಕ್ವೀನ್ ಎಂದೇ ಫೇಮಸ್ಸು.. ಏಳು ವರ್ಷಗಳ ಕಾಲ ಜನರು ಯಾವುದೇ ಬೇಸರವಿಲ್ಲದೇ ನೋಡಿದ ಧಾರಾವಾಹಿ.. ಅದರಲ್ಲೂ ಕೊನೆಯಲ್ಲಿನ ಕೆಲ ತಿಂಗಳು ಹೀರೋ ಇಲ್ಲದಿದ್ದರೂ ಸಹ ಸನ್ನಿಧಿಯೇ ಧಾರಾವಾಹಿಯನ್ನು ಬಹಳಷ್ಟು ತಿಂಗಳು ಮ್ಯಾನೇಜ್ ಮಾಡಿಕೊಂಡು ಹೋದದ್ದು ಮಾತ್ರ ಸಿಕ್ಕಾಪಟ್ಟೆ ಟ್ರೋಲ್ ಕೂಡ ಆದರೂ ಕೊನೆಯವರೆಗೂ ಒಳ್ಳೆಯ ರೇಟಿಂಗ್ ಪಡೆದು ಮುಕ್ತಾಯಗೊಂಡಿತು..
ಇನ್ನು ಕಲಾವಿದರ ವ್ಯಯಕ್ತಿಕ ಜೀವನದ ಬಗ್ಗೆ ಪ್ರೇಕ್ಷಕರಿಗೆ ಅದರಲ್ಲೂ ಕಿರುತೆರೆ ಪ್ರಿಯರಿಗೆ ಬಹಳಷ್ಟು ಆಸಕ್ತಿ ಇರುತ್ತದೆ.. ಇನ್ನು ಅವರ ಮದುವೆ ವಿಚಾರದ ಬಗ್ಗೆ ಸಾಕಷ್ಟು ಕುತೂಹಲ ವಿದ್ದು.. ಅವರನ್ನು ಮದುವೆಯಾಗಿ ಇವರನ್ನು ಮದುವೆಯಾಗಿ ಎಂದು ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ಸಲಹೆಗಳನ್ನು ನೀಡುವುದೂ ಉಂಟು.. ಇನ್ನು ಅಗ್ನಿಸಾಕ್ಷಿ ಧಾರಾವಾಹಿ ಮೂಲಕ ಹಿಟ್ ಆಗಿದ್ದ ಸನ್ನಿಧಿ ಸಿದ್ಧಾರ್ಥ್ ಜೋಡಿ ನಿಜ ಜೀವನದಲ್ಲಿಯೂ ಒಂದಾಗಿ ಎಂದು ನೂರಾರು ಮಂದಿ ಮನವಿ ಮಾಡಿದ್ದೂ ಉಂಟು.. ಅದಕ್ಕೂ ಒಂದು ಹೆಜ್ಜೆ ಮುಂದೆ ಹೋಗಿ ಇವರಿಬ್ಬರು ಪ್ರೀತಿಯಲ್ಲಿದ್ದಾರೆ.. ಮದುವೆ ಆಗ್ತಾರೆ ಅನ್ನೋ ಕೆಲ ಊಹಾಪೋಹದ ಸುದ್ದಿಯೂ ಹಬ್ಬಿ ಹೋಗಿತ್ತು..
ಆದರೆ ಇದೆಲ್ಲದಕ್ಕೂ ಖುದ್ದು ಸನ್ನಿಧಿ ಹಾಗೂ ಸಿದ್ಧಾರ್ಥ್ ತೆರೆ ಎಳೆದು ನಾವಿಬ್ಬರು ಸ್ನೇಹಿತರು ಮಾತ್ರವೆಂದಿದ್ದರು.. ಅಷ್ಟೇ ಅಲ್ಲದೇ ಸಿದ್ಧಾರ್ಥ್ ಪಾತ್ರಧಾರಿ ವಿಜಯ್ ಸೂರ್ಯ ಅವರು ತಮ್ಮ ಅಮ್ಮ ತೋರಿದ ದೂರದ ಸಂಬಂಧಿ ಚೈತ್ರಾ ಅವರೊಡನೆ ದಾಂಪತ್ಯ ಜೀವನಕ್ಕೆ ಕಾಲಿಟ್ಟು ಅದಾಗಲೇ ವರ್ಷಗಳೇ ಕಳೆದವು.. ಸದ್ಯ ಮುದ್ದಾದ ಗಂಡು ಮಗುವಿನ ತಂದೆಯೂ ಆಗಿದ್ದು ಸಾಮಾಜಿಕ ಜಾಲತಾಣದಲ್ಲಿ ಆಗಾಗ ಮಗನೊಟ್ಟಿಗಿನ ಫೋಟೋಗಳನ್ನು ಹಂಚಿಕೊಳ್ಳುತ್ತಿರುತ್ತಾರೆ..
ಇನ್ನು ಅಗ್ನಿಸಾಕ್ಷಿ ಹೀರೋ ಮದುವೆಯಂತೂ ಆಯ್ತು.. ಆದರೆ ಸನ್ನಿಧಿ ಮದುವೆ ಯಾವಾಗ ಎಂದು ಸಾಕಷ್ಟು ಮಂದಿ ಕಮೆಂಟ್ ಮೂಲಕ ವೈಷ್ಣವಿ ಗೌಡ ಅವರನ್ನು ಪ್ರಶ್ನಿಸಿದ್ದೂ ಉಂಟು.. ಆದರೆ ಇದೀಗ ಸದ್ಯ ವೈಶ್ಣವಿ ಗೌಡ ಅವರ ಮನೆಯಲ್ಲಿ ಮದುವೆ ಸಂಭ್ರಮ ಮನೆ ಮಾಡಿದೆ ಎನ್ನಬಹುದು.. ಆದರೆ ಎಲ್ಲರೂ ಅಂದುಕೊಂಡಂತೆ ವೈಶ್ಣವಿ ಅವರ ಮದುವೆಯಲ್ಲ.. ಹೌದು ವೈಶ್ಣವಿ ಗೌಡ ಅವರು ಸದ್ಯ ಅದ್ಯಾಕೋ ಮದುವೆಯ ಮನಸ್ಸು ಇನ್ನೂ ಮಾಡಿಲ್ಲದ ಕಾರಣ ವೈಶ್ಣವಿ ಅವರ ಅಣ್ಣನ ಮದುವೆ ಅದ್ಧೂರಿಯಾಗಿ ನೆರವೇರಿದ್ದು ವೈಶ್ಣವಿ ಗೌಡ ಮದುವೆ ಸಮಾರಂಭದಲ್ಲಿ ಸಿಕ್ಕಾಪಟ್ಟೆ ಓಡಾಡಿದ್ದು ಪ್ರಮುಖ ಆಕರ್ಷಣೆಯಾಗಿದ್ದರೆನ್ನಬಹುದು..
ಹೌದು ನಟನಾ ರಂಗದಲ್ಲಿ ಇನ್ನೂ ಏನಾದರೂ ಸಾಧಿಸಬೇಕೆಂದು ಕೊಂಡಿರುವ ವೈಶ್ಣವಿ ಗೌಡ ಸದ್ಯ ಮದುವೆಗೆ ಮನಸ್ಸು ಮಾಡದ ಕಾರಣ ಅವರ ಮನೆಯಲ್ಲಿ ಅಣ್ಣನ ಮದುವೆಯನ್ನು ನೆರವೇರಿಸಲಾಗಿದೆ..
ಹೌದು ವೈಶ್ಣವಿ ಅವರ ಅಣ್ಣ ಸುನೀಲ್ ಅವರ ಮದುವೆಯನ್ನು ಕೊರೊನಾ ಕಾರಣದಿಂದ ಸರಳವಾಗಿ ನೆರವೇರಿಸಲಾಗಿದ್ದು ವೈಶ್ಣವಿ ಸಾಂಪ್ರದಾಯಿಕ ಉಡುಗೆ ತೊಟ್ಟಿ ಪಿಂಕ್ ಕಲರ್ ಸೀರಿಯಲ್ಲಿ ಮಿಂಚಿದ್ದಾರೆ.. ಸದ್ಯ ಅಣ್ಣ ಅತ್ತಿಗೆಯನ್ನು ಪ್ರೀತಿಯಿಂದ ಬರಮಾಡಿಕೊಂಡಿರುವ ವೈಶ್ಣವಿ ಗೌಡ ಸಾಮಾಜಿಕ ಜಾಲತಾಣದಲ್ಲಿ ಫೋಟೋ ಪೋಸ್ಟ್ ಮಾಡುವ ಮೂಲಕ ಸಂತೋಷ ಹಂಚಿಕೊಂಡಿದ್ದಾರೆ.. ಆದರೆ ಅಣ್ಣ ಅತ್ತಿಗೆಗೆ ಶುಭಾಶಯ ತಿಳಿಸುವ ಕಮೆಂಟ್ ಗಳಿಗಿಂತ ಹೆಚ್ಚಾಗಿ ವೈಶ್ಣವಿ ಅವರಿಗೆ ತಮ್ಮ ಮದುವೆಯಾವಾಗ ಎಂದು ಪ್ರಶ್ನಿಸಿರುವ ಕಮೆಂಟ್ ಗಳೆ ಹೆಚ್ಚಾಗಿದ್ದು ನಗುವ ಎಮೋಜಿ ಮೂಲಕ ಉತ್ತರ ನೀಡಿದ್ದಾರೆ ವೈಶ್ಣವಿ ಗೌಡ..