ಫೋಟೋ ಶೂಟ್‌ನ ಬಿಹೈಂಡ್ ಸೀನ್ ವಿಡಿಯೋ ಒಂದು ವೈರಲ್ ಆಗಿದ್ದು, ಹೆಣ್ಮಕ್ಕಳ ಆಭರಣ ಪ್ರೀತಿಯನ್ನು ತೋರಿಸುತ್ತೆ ಊರ್ವಶಿ ರೌಟೇಲಾ ಅವರ ರಿಯಾಕ್ಷನ್. ಬಾಲಿವುಡ್ ನಟಿ ಊರ್ವಶಿ ರೌಟೇಲಾ ಫೋಟೋಗೆ ಪೋಸ್ ಕೊಡೋವಾಗ ಅವರ ಕೈಯಲ್ಲಿದ್ದ ದುಬಾರಿ ಆಭರಣ ಕಳಚಿ ಬಿದ್ದಿದೆ.

ರೂಪದರ್ಶಿ ನೀಲಿ ಬಣ್ಣದ ಡ್ರೆಸ್ ಧರಿಸಿ ಬೋಲ್ಡ್ ಪೋಸ್ ಕೊಡೋಕೆ ಕೈ ಎತ್ತೋ ಭರದಲ್ಲಿ ಕೈಯಲ್ಲಿದ್ದ ಬ್ರೇಸ್‌ಲೆಟ್ ಬಿದ್ದಿತ್ತು. ಸದ್ಯ ದುಬಾರಿ ಬ್ರೇಸ್ಲೆಟ್‌ಗೆ ಏನೂ ಹಾನಿಯಾಗಿಲ್ಲ. ಆದ್ರೆ ನಟಿ ಮಾತ್ರ ಒಮ್ಮೆ ಶಾಕ್ ಆಗಿದ್ದಾರೆ.

ಬ್ರೇಸ್ಲೆಟ್ ಹಾನಿಯಾಗದೆ ಮರಳಿ ಸಿಕ್ಕಾಗ ನಗುತ್ತಾರೆ ಊರ್ವಶಿ. ನಿಮ್ಮ ಭಾರೀ ದುಬಾರಿ ಡೈಮಂಡ್‌ ಕೆಳಗೆ ಬೀಳಿಸ್ಕೊಂಡಾಗ ಹೀಗಾಗುತ್ತೆ, ಇದು ಹೆಣ್ಮಕ್ಕಳಿಗಷ್ಟೇ ಅರ್ಥವಾಗಬಲ್ಲದು ಎಂದಿದ್ದಾರೆ..

ಅಂದಹಾಗೆ ಇಲ್ಲಿ ಊರ್ವಶಿಯವರು ಧರಿಸಿರೋ ಉಡುಪಿನ ಬೆಲೆ ಬರೋಬ್ಬರಿ 7 ಲಕ್ಷ, ಇನ್ನು ಆಭರಣದ ಬೆಲೆ 52 ಲಕ್ಷ ರೂಪಾಯಿ. ಊರ್ವಶಿ ಓ ಚಾಂದ್ ಕಹಾಸೆ ಲಾವೋಗಿ ಹಾಡಿನಲ್ಲಿ ಕಾಣಿಸಿಕೊಂಡಿದ್ದರು. 2020ರಲ್ಲಿ ರಿಲೀಸ್ ಆದ ವರ್ಜಿನ್ ಭಾನುಪ್ರಿಯ ಸಿನಿಮಾದಲ್ಲಿ ನಟಿ ಕಾಣಿಸಿಕೊಂಡಿದ್ದರು.

ನಿಮ್ಮ ಸ್ನೇಹಿತರಿಗೂ/ಫೇಸ್ಬುಕ್ ಗ್ರೂಪ್ ಗೆ ಶೇರ್ ಮಾಡಿ...
  •  
  •  
  •  
  •  
  •  
  •  
  •  
  •