ಕನ್ನಡದ ಖ್ಯಾತ ನಟಿಯ ಮನೆಯ ಬಾಗಿಲು ಮುರಿದು ಕಳ್ಳತನ
ಬಾಗಲಕೋಟೆ ಜಿಲ್ಲೆಯ ರಬಕವಿ ಬನಹಟ್ಟಿ ತಾಲೂಕಿನ ರಬಕವಿಯ ವಿದ್ಯಾ ನಗರದಲ್ಲಿರುವ ಮಾಜಿ ಸಚಿವೆ, ನಟಿ ಉಮಾಶ್ರೀ ಅವರ ಮನೆಯಲ್ಲಿ ಕಳ್ಳತನ ಮಾಡಲಾಗಿದೆ.
ಮನೆಯ ಬಾಗಿಲನ್ನು ಮುರಿದು ಒಳನುಗ್ಗಿರುವ ಕಳ್ಳರು ಅಪಾರ ಪ್ರಮಾಣದ ವಸ್ತು ಮತ್ತು ಹಣ ಹೋಗಿರಬಹುದು ಎಂಬ ಶಂಕೆ ವ್ಯಕ್ತವಾಗಿದೆ.
ಸ್ಥಳಕ್ಕೆ ದೌಡಾಯಿಸಿದ ಸಿಪಿಐ ಕರುಣೇಸಿಗೌಡ ಮತ್ತು ಪಿಎಸ್ಐ ವಿಜಯಕುಮಾರ ಕಾಂಬಳೆ ಪರಿಶೀಲನೆ ನಡೆಸಿದ್ದು, ಆರೋಪಿಗಾಗಿ ಬಲೆ ಬೀಸಿದ್ದಾರೆ.ತೇರದಾಳ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಉಮಾಶ್ರೀ ಕನ್ನಡದ ಬಹು ಜನಪ್ರಿಯ ನಟಿಯಾಗಿದ್ದು ಹಾಸ್ಯ ನಟಿಯಾಗಿ ಇವರು ಜನಮಾನಸದಲ್ಲಿ ಬಹಳ ಅಭಿಮಾನ ಗಳಿಸಿದ್ದಾರೆ. ಪುಟ್ನಂಜ, ಕುರಿಗಳು ಸಾರ್ ಕುರಿಗಳು, ಕೋತಿಗಳು ಸಾರ್ ಕೋತಿಗಳು, ಹಾಲುಂಡ ತವರು, ದಿಗ್ಗಜರು ಮುಂತಾದ ಚಿತ್ರಗಳಲ್ಲಿ ನಟಿಸಿದ್ದಾರೆ.