ನಮಸ್ತೇ ಸ್ನೇಹಿತರೇ, ಪ್ರೀತಿ ಎಂದರೆ ಹಾಗೇ, ಎಲ್ಲಿ ಯಾವಾಗ, ಯಾವ ಕಾರಣಕ್ಕೆ, ಯಾರ ಮಧ್ಯೆ ಪ್ರೀತಿ ಹುಟ್ಟಿಕೊಳ್ಳುತ್ತೋ ಅನ್ನೋದನ್ನ ಖಚಿತವಾಗಿ ಯಾರು ಹೇಳಲು ಸಾಧ್ಯವಿಲ್ಲ. ಹೌದು, ಇದೆ ರೀತಿ ನಾವು ನೀವು ಊಹಿಸಲು ಸಾಧ್ಯವಾಗದ ಸ್ಯಾಂಡಲ್ವುಡ್ ನಟಿ ಮತ್ತು ನಿರ್ದೇಶಕನ ಮಧ್ಯೆ ವಿಚಿತ್ರ ಪ್ರೇಮ್ ಕಹಾನಿಯೊಂದು ನಡೆದುಹೋಯಿತು. ಅದು ಎಷ್ಟರ ಮಟ್ಟಿಗೆ ಎಂದರೆ ಒಂದೇ ದಿನದಲ್ಲಿ ಪ್ರೀತಿ ಆಗಿದ್ದು, ಹಾಗೆಯೇ ಅದೇ ದಿನ ಮದುವೆ ಆಗಿದ್ದು.. ಇಂತದ್ದೆಲ್ಲ ಕೇವಲ ಕಲ್ಪನೆಯಲ್ಲಿ ಮಾತ್ರ ನಡೆಯಲು ಸಾಧ್ಯ..ನಿಜಜೀವನದಲ್ಲಿ ಕಷ್ಟ ಸಾಧ್ಯೆ ಅಲ್ಲವೇ..

ಹೌದು, ಬೆಳಿಗ್ಗೆ ಮೊದಲ ಬಾರಿಗೆ ಒಬ್ಬರೊನ್ನೊಬ್ಬರು ನೋಡುತ್ತಾರೆ, ಒಂದೇ ನೋಟದಲ್ಲಿ ಪ್ರೀತಿ ಹುಟ್ಟಿದ್ದು, ಸಂಜೆ ಆಗೋಷ್ಟರಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದು..ಇದು ಕನಸೋ ಇಲ್ಲೋ ನನಸೋ ಅಂತ ಅನ್ನಿಸದೆ ಇರೋದಿಲ್ಲ. ಆದರೆ ಈ ರೀತಿ ಯಾರೂ ಮದುವೆ ಆಗಿರಲು ಸಾಧ್ಯವಿಲ್ಲ. ಆದರೆ ಇಂತಹದೊಂದು ವಿಚಿತ್ರ ಮದುವೆಗೆ ಸಾಕ್ಷಿಯಾಗಿದ್ದು ಮಾತ್ರ ಕನ್ನಡದ ನಟಿ ಮತ್ತು ನಿರ್ದೇಶಕ. ಅವರೇ ಈಗ ಪೋಷಕ ಪಾತ್ರಗಳಲ್ಲಿ ಮಿಂಚುತ್ತಿರುವ ನಟಿ ತುಳಸಿ. ಇನ್ನು ಇವರು ೯೦ರ ದಶಕದಲ್ಲಿ ಕನ್ನಡ ಸೇರಿದಂತೆ ದಕ್ಷಿಣ ಭಾರತದ ಖ್ಯಾತ ನಟಿಯರಲ್ಲಿ ಒಬ್ಬರಾಗಿದ್ದರು.

tulasi-shivamani-family-photos

ನಟ ದೇವರಾಜ್ ಅಭಿನಯದ ಮದರ್ ಇಂಡಿಯಾ ಚಿತ್ರದ ಚಿತ್ರೀಕರಣದ ಸಮಯ. ಶಿವಮಣಿ ಈ ಚಿತ್ರದ ನಿರ್ದೇಶಕರಾಗಿದ್ದರು. ಇನ್ನು ನಟಿ ತುಳಸಿಯವರು ಕೂಡ ಈ ಚಿತ್ರದ ಒಂದು ಪಾತ್ರಕ್ಕೆ ಆಯ್ಕೆಯಾಗಿದ್ದು ಶೂಟಿಂಗ್ ಸೆಟ್ ನಲ್ಲಿ ಬಂದು ಕುಳಿತಿದ್ದರು. ಮತ್ತೊಂದು ಕಡೆಯಲ್ಲಿ ನಿರ್ದೇಶಕ ಶಿವಮಣಿ ಕುಳಿತು ಸಿ’ಗರೇಟ್ ಸೇ’ದುತ್ತಿದ್ದರು. ಇನ್ನು ಇವರಿಂದ ಬಂದ ಹೊ’ಗೆಯಿಂದ ನಟಿ ತುಳಸಿಯವರು ಕೆಮ್ಮುತ್ತಾರೆ. ಇನ್ನು ಇದನ್ನ ಕಂಡ ನಿರ್ದೇಶಕ ಶಿವಮಣಿ ಸಿ’ಗರೇಟ್ ಮತ್ತು ಲೈ’ಟರ್ ನ್ನ ಬಿಸಾಡುತ್ತಾರೆ. ಇನ್ನು ಇದರ ಬಳಿಕ ಅವರಿಬ್ಬರ ಮಧ್ಯೆ ಮೊದಲ ನೋಟ ಹಾಗು ಏನೋ ಸೆಳೆತ ಉಂಟಾಗಿ ಮಧ್ಯನ್ಹದ ಸಮಯಕ್ಕೆ ಇವರಿಬ್ಬರು ಆಪ್ತ ಸ್ನೇಹಿತರಂತೆ ಮಾತನಾಡಲು ಶುರುಮಾಡುತ್ತಾರೆ.

ಇನ್ನು ಸಂಜೆಯಾಗುತ್ತಲೇ ಮನೆಗೆ ಹೋದ ನಿರ್ದೇಶಕ ಶಿವಮಣಿ ತಮ್ಮ ತಂದೆ ತಾಯಿಯರ ಆಶೀರ್ವಾದ ಪಡೆದು ತಾಳಿ ತೆಗೆದುಕೊಂಡು ನಟಿ ತುಳಸಿಯವರ ಬಳಿ ಬಂದ ಶಿವಮಣಿ ನಾನು ನಿಮ್ಮನ್ನ ಇಷ್ಟಪಡುತ್ತಿದ್ದು ಮದ್ವೆಯಾಗುತ್ತೇನೆ ಎಂದು ಒಂದೇ ಮಾತಿಗೆ ಹೇಳಿದ್ದಾರೆ. ಇನ್ನು ತುಳಸಿಯವರಿಗೂ ಕೂಡ ಅದಾಗಲೇ ಶಿವಮಣಿ ಮೇಲೆ ಪ್ರೀತಿ ಹುಟ್ಟಿತ್ತು ಅನ್ನಿಸುತ್ತೆ. ಹಾಗಾಗಿ ಅವರು ಮದುವೆಗೆ ಗ್ರೀನ್ ಸಿಗ್ನಲ್ ಕೊಡುತ್ತಾರೆ. ಇನ್ನು ಅದೇ ಸಮಯಕ್ಕೆ ದೇವಸ್ಥಾನವೊಂದರಲ್ಲಿ ಇವರಿಬ್ಬರ ಮದುವೆ ನೆರವೇರುತ್ತದೆ.

tulasi-shivamani-family

ಆದರೆ ಇವರು ಮದುವೆಯಾಗಿರುವುದನ್ನ ಯಾರಿಗೂ ಹೇಳಿರುವುದಿಲ್ಲ. ಬಳಿಕ ಪತ್ನಿ ತುಳಸಿಯಂನ ಶಿವಮಣಿ ತಮ್ಮ ಮನೆಗೆ ಕರೆದುಕೊಂಡು ಹೋದ ಬಳಿಕವೇ ಎಲಾಲರಿಗೂ ಇವರಿಬ್ಬರ ಮದುವೆ ವಿಷಯ ಗೊತ್ತಾಗಿ ಒಂದು ಕ್ಷಣ ಶಾಕ್ ಆಗುತ್ತಾರೆ. ಇನ್ನು ಇವರಿಬ್ಬರ ಮದುವೆಯಾಗಿದ್ದು ೧೯೯೫ರಲ್ಲಿ. ಇನ್ನು ನಟಿ ತುಳಸಿ ತೆಲುಗು ಚಿತ್ರವೊಂದರ ಮೂಲಕ ೧೯೬೭ರಲ್ಲಿ ಬಣ್ಣದ ಲೋಕಕ್ಕೆಎಂಟ್ರೀ ಕೊಡುತ್ತಾರೆ. ಆಗ ಅವರ ವಯಸ್ಸು ಕೇವಲ ೩ ತಿಂಗಳು. ಇನ್ನು ಈಗ ನೆಮ್ಮದಿ ಜೀವನ ನಡೆಸುತ್ತಿರುವ ತುಳಸಿ ಶಿವಮಣಿ ದಂಪತಿಗೆ ಸಾಯಿ ತರುಣ್ ಎಂಬ ಮಗ ಇದ್ದಾನೆ. ಅದಕ್ಕೆ ಹೇಳಿರೋದು ಪ್ರೀತಿ ಮಾಯೆ ಹುಷಾರು ಅಂತ. ಸ್ನೇಹಿತರೇ, ಒಂದೇ ದಿನದ ಪ್ರೀತಿ ಮದುವೆಯ ಬಗ್ಗೆ ನಿಮ್ಮ ಅಭಿಪ್ರಾಯವನ್ನ ಕಾಮೆಂಟ್ ನಲ್ಲಿ ತಿಳಿಸಿ..

ನಿಮ್ಮ ಸ್ನೇಹಿತರಿಗೂ/ಫೇಸ್ಬುಕ್ ಗ್ರೂಪ್ ಗೆ ಶೇರ್ ಮಾಡಿ...
  •  
  •  
  •  
  •  
  •  
  •  
  •  
  •