ಕನ್ನಡ ಸೇರಿದಂತೆ ತೆಲುಗು ಸಿನಿಮಾ ಇಂಡಸ್ಟ್ರಿಯಲ್ಲಿ ಜನಪ್ರಿಯತೆ ಗಳಿಸಿದ್ದ ನಟಿ ಸೌಂದರ್ಯ ಜೊತೆಗೆ ನಾನು ಸಂಬಂಧದಲ್ಲಿದೆ ಎಂದು ತೆಲುಗಿನ ಖ್ಯಾತ ನಟ ಜಗಪತಿ ಬಾಬು ಹೇಳಿದ್ದಾರೆ.ಆಕಾಲಕ್ಕೆ ಬೇಡಿಕೆಯ ನಟಿಯಾಗಿದ್ದ ನಟಿ ಸೌಂದರ್ಯ 2004 ಅಪಘಾತದಿಂದಾಗಿ ಸಾವನ್ನಪ್ಪುತ್ತಾರೆ. ಚುನಾವಣಾ ಪ್ರಚಾರಕ್ಕೆಂದು ಕಿರು ವಿಮಾನದಲ್ಲಿ ತೆರಳುತ್ತಿದ್ದ ವೇಳೆ ಅಪಘಾತಕ್ಕೀಡಾಗಿ ಕೊನೆಯುಸಿರೆಳೆಯುತ್ತಾರೆ.
ಆದರೆ ನಟಿ ಸೌಂದರ್ಯ ಸಾವಿನ ನಂತರವೂ ಜಗಪತಿ ಬಾಬು ಅವರ ಜೊತೆಗೆ ಸಂಬಂಧದಲ್ಲಿದ್ದರು ಎಂಬ ವದಂತಿಗಳು ಹರಿದಾಡುತ್ತಿದ್ದವು.ಇದೀಗ ಸ್ವತಃ ಜಗಪತಿ ಬಾಬು ಅವರೇ ಈ ಸುಳ್ಳು ಸುದ್ದಿಗೆ ಸ್ಪಷ್ಟನೆ ನೀಡಿದ್ದಾರೆ.ಇತ್ತೀಚೆಗೆ ಮಾಧ್ಯಗಳ ಮುಂದೆ ಮಾತನಾಡಿದ್ದ ನಟ ಜಗಪತಿ ಬಾಬು ನಟಿ ಸೌಂದರ್ಯ ಜೊತೆಗೆ ಸಂಬಂಧ ಇರುವುದಾಗಿ ಒಪ್ಪಿಕೊಂಡಿದ್ದಾರೆ.
ನನಗೆ ಸೌಂದರ್ಯ ಜೊತೆಗೆ ಸಂಬಂಧವಿತ್ತು. ನಾನು ಸೌಂದರ್ಯ ಮತ್ತು ಆಕೆಯ ಸಹೋದರ ಉತ್ತಮ ಸ್ನೇಹಿತರಾಗಿದ್ದೆವು.ಆಗಾಗ ಅವರ ಮನೆಗೆ ನಾನು ಭೇಟಿ ನೀಡುತ್ತಿದ್ದೆ. ಅವರ ಜೊತೆಗೆ ಮಾತನಾಡುತ್ತಿದ್ದೆ. ಆದರೆ ಜನರು ಮಾತ್ರ ಅವರ ಬಗ್ಗೆ ತಪ್ಪಾಗಿ ಮಾತನಾಡುತ್ತಿದ್ದಾರೆ.ಜನರು ನಮ್ಮಿಬ್ಬರ ಸಂಬಂಧದ ಬಗ್ಗೆ ಅರ್ಥ ಮಾಡಿಕೊಳ್ಳದೆ ತಪ್ಪು ತಿಳಿದುಕೊಂಡಿದ್ದಾರೆ ಎಂದು ಬೇಸರ ಹೊರಹಾಕಿದ್ದಾರೆ.
ಜನರು ನಮ್ಮಿಬ್ಬರ ಸಂಬಂಧವನ್ನು ದೈಹಿಕ ಸಂಬಂಧವೆಂದು ಭಾವಿಸಿದ್ದಾರೆ. ಆದರೆ ನಮ್ಮಿಬ್ಬರ ಸ್ನೇಹ ಸಂಬಂಧ ವಿಭಿನ್ನವಾಗಿತ್ತು. ಇಬ್ಬರಲ್ಲೂ ಉತ್ತಮ ಭಾಂದವ್ಯವಿತ್ತು ಎಂದು ಹೇಳಿದ್ದಾರೆ.ನಟಿ ಸೌಂದರ್ಯ ‘ರೈತು ಭಾರತಂ‘ ಸಿನಿಮಾದ ಮೂಲದ ಟಾಲಿವುಡ್ಗೆ ಪಾದಾರ್ಪಣೆ ಮಾಡಿದ್ದರು. ಆನಂತರ ಕನ್ನಡ, ಮಲಯಾಳಂ, ಹಿಂದಿ ಸಿನಿಮಾಗಳಲ್ಲಿ ನಟಿಸಿದ್ದಾರೆ. ಅಮಿತಾಭ್ ಬಚ್ಚನ್ ಜೊತೆಗೆ ಕೂಡ ಅಭಿನಯಿಸಿದ್ದರು.
2004ರಲ್ಲಿ ತೆರೆಕಂಡ ಅಪ್ತಮಿತ್ರ ಸಿನಿಮಾ ಅವರ ಕೊನೆಯ ಸಿನಿಮಾವಾಗಿದೆ. ಇವರ ಸಾವು ಸಾಕಷ್ಟು ನಟ-ನಟಯರಿಗೆ ಬೇಸರವನ್ನು ಉಂಟು ಮಾಡಿದೆ.ನಟ ಜಗಪತಿ ಬಾಬು ಸದ್ಯ ಸಾಂಡಲ್ವುಡ್ನಲ್ಲಿ ‘ರಾಬರ್ಟ್‘ ಮತ್ತು ‘ಉಪ್ಪಿ ರುಪಿ‘ ಸಿನಿಮಾದಲ್ಲಿ ನಟಿಸುತ್ತಿದ್ದಾರೆ.
ಮತ್ತಷ್ಟು ಇಂಟರೆಸ್ಟಿಂಗ್ ಸುದ್ದಿಗಳನ್ನು ಓದಲು ನಮ್ಮ ಪೇಜ್ ಲೈಕ್ ಮಾಡಿ ಹಾಗೂ ನಿಮ್ಮ ಅನಿಸಿಕೆಗಳನ್ನು ನಮ್ಮ ಕಾಮೆಂಟ್ ಬಾಕ್ಸ್ ನಲ್ಲಿ ತಿಳಿಸಿ ಧನ್ಯವಾದಗಳು.