ತನ್ನ ಸಹಜ ನಟನೆ ಮೂಲಕ ಎಲ್ಲರ ಮನೆಯ ಮಾತಾದ ನಟಿ ಸಿತಾರ, ಇವರು ಕೇರಳದಲ್ಲಿ ಹುಟ್ಟಿದರೂ ಕನ್ನಡ ಹುಡುಗಿನೇನೊ ಅನ್ನೋ ತರ ನಟಿಸಿದರು, ದಕ್ಷಿಣ ಭಾರತದ ಎಲ್ಲಾ ಭಾಷೆಗಳಲ್ಲೂ ನಟಿಸಿದ ಸಿತಾರ ಅವರು ಜೀವನದಲ್ಲಿ ಕೆಲವೊಂದು ಆಕಸ್ಮಿಕ ಘಟನೆಗಳನ್ನು ಎದುರಿಸಿದ್ದಾರೆ.

90ರ ದಶಕದಲ್ಲಿ ದಕ್ಷಿಣ ಭಾರತದ ಜನಪ್ರಿಯ ಚಿತ್ರ ನಟಿ ಸಿತಾರ. ಅನೇಕ ಯಶಸ್ವಿ ಚಿತ್ರಗಳಲ್ಲಿ ನಟಿಸಿರುವ ಇವರು ಸಾಹಸ ಸಿಂಹ ವಿಷ್ಣುವರ್ಧನ್ ಅವರ ಜೊತೆ ಹಾಲುಂಡ ತವರು, ಬಂಗಾರದ ಕಲಶದಲ್ಲಿ ನಟಿಸಿದ್ದಾರೆ. ಇತ್ತೀಚೆಗೆ ಸಿತಾರ ಚಿರಂಜೀವಿ ಸರ್ಜಾಗೆ ತಾಯಿಯಾಗಿ ‘ಅಮ್ಮಾ ಐ ಲವ್ ಯೂ’ ಎಂಬ ಚಿತ್ರದಲ್ಲಿಯೂ ನಟಿಸಿದ್ದಾರೆ.

Actress-Sitara

ನಟಿ ಸಿತಾರ ಅವರ ತಂದೆ ವಿದ್ಯುತ್ ಶಾಖೆಯಲ್ಲಿ ಇಂಜಿನಿಯರ್. ಓದುತ್ತಿದ್ದಾಗಲೇ ಸಿತಾರ ಅವರಿಗೆ ಅವಕಾಶಗಳು ಅರಸಿ ಬಂದವು.ಅಂದಹಾಗೆ ಸಿತಾರ ಅವರಿಗೆ 2010ರಲ್ಲೇ ಮದುವೆಯಾಗಿದೆ ಎಂದು ಸುದ್ಧಿ ಹೊರಬಂತು, ಆದರೆ ಇತ್ತೀಚೆಗೆ ಒಂದು ಸಂದರ್ಶನದಲ್ಲಿ ದೊಡ್ಡ ಸತ್ಯವನ್ನು ಬಯಲು ಮಾಡಿದ್ದಾರೆ ಸಿತಾರ.

ಹೌದು, ನನಗೆ ಇನ್ನೂ ಮದುವೆ ಆಗಿಲ್ಲ ಎಂದು ಹೇಳಿದ್ದಾರೆ ಸಿತಾರ. 45 ವರ್ಷ ಆದರೂ ಇಲ್ಲಿಯವರೆಗೂ ಸಿತಾರ ಯಾಕೆ ಮದುವೆಯಾಗಿಲ್ಲ ಎಂಬ ಪ್ರಶ್ನೆಗೆ ಉತ್ತರವೂ ಸಿಕ್ಕಿದೆ.ಕನ್ನಡದ ನಟ ಮುರಳಿ ಹಾಗೂ ಸಿತಾರ ಆತ್ಮೀಯ ಸ್ನೇಹಿತರು, ಆದ್ರೆ ಮುರಳಿ ಸಾವಿನಿಂದಾಗಿ ಸಿತಾರ ಬಹಳ ವರ್ಷ ಡಿಪ್ರೆಶನ್ ಗೆ ಒಳಗಾಗಿದ್ದರಂತೆ. ಅದರಿಂದ ಆಚೆ ಬರಲು ತುಂಬಾ ವರ್ಷ ಬೇಕಾಯಿತಂತೆ ಆದರೆ ಅದೇ ಸಮಯದಲ್ಲಿ ಸಿತಾರ ತಂದೆ ಕೂಡ ಮರಣ ಹೊಂದಿದ್ದರು. ಆಗ ಇನ್ನಷ್ಟು ದುಃಖದಲ್ಲಿ ಮುಳುಗಿದರು ಸಿತಾರ.

Actress-Sitara

ನಟ ಮುರಳಿ ಸಾವು, ಜೀವನ ಅಂದ್ರೆ ಇಷ್ಟೇನಾ? ಅನ್ನೋ ಭಾವನೆ ಸಿತಾರ ಅವರ ಮನಸ್ಸಲ್ಲಿ ಮೂಡಿಸಿತಂತೆ, ನಂತರ ಅವರು ಮದುವೆ ಬಗ್ಗೆ ಅಲೋಚಿಸಿಯೇ ಇಲ್ಲ.ಮತ್ತಷ್ಟು ಲೇಟೆಸ್ಟ್ ಸುದ್ದಿಗಳನ್ನು ಓದಲು ನಮ್ಮ ಪೇಜ್ ಲೈಕ್ ಮಾಡಿ ಹಾಗೂ ನಿಮ್ಮ ಅನಿಸಿಕೆಗಳನ್ನು ನಮ್ಮ ಕಾಮೆಂಟ್ ಬಾಕ್ಸ್ ನಲ್ಲಿ ತಿಳಿಸಿ ಧನ್ಯವಾದಗಳು.

…………..
ನಿಮ್ಮ ಸ್ನೇಹಿತರಿಗೂ/ಫೇಸ್ಬುಕ್ ಗ್ರೂಪ್ ಗೆ ಶೇರ್ ಮಾಡಿ...
  •  
  •  
  •  
  •  
  •  
  •  
  •  
  •