ಸ್ಯಾಂಡಲ್ವುಡ್ ಕ್ವೀನ್ ಎಂದು ಯಾವುದಾದರು ಬಿರುದು ಇದ್ದರೆ ಅದು ಎವರ್ ಗ್ರೀನ್ ರಮ್ಯಾ ಅವರಿಗೆ ಮಾತ್ರ.. ಯಾರೇ ಇರಲಿ.. ಯಾರೇ ಬರಲಿ ನಿನ್ನ ರೇಂಜಿಗೆ ಯಾರಿಲ್ಲ ಎಂದು ಈಗಲೂ ಸಾಮಾಜಿಕ ಜಾಲತಾಣದಲ್ಲಿ ರಮ್ಯಾ ಅವರ ಫೋಟೋ ಜೊತೆಗೆ ಬರೆದ ಸಾಲುಗಳು ಆಗಾಗ ಕಾಣಸಿಗುತ್ತವೆ..

ಇನ್ನು ಸದ್ಯ ಕನ್ನಡದ ಬಹಳಷ್ಟು ಸಿನಿಪ್ರಿಯರ ನೆಚ್ಚಿನ ನಟಿ ಎನಾದರು ಸದ್ಯ ಎಲ್ಲಿದ್ದಾರೆ ಎಂದು ಕುತೂಹಲ ಇದ್ದೇ ಇದೆ.. ಅದಕ್ಕೆಲ್ಲಾ ಉತ್ತರ ಇಲ್ಲಿದೆ ನೋಡಿ.. ಸ್ಯಾಂಡಲ್ವುಡ್ ನಲ್ಲಿ ಸ್ಟಾರ್ ನಟಿಯಾಗಿ ಕನ್ನಡದ ಟಾಪ್ ಹೀರೋಯಿನ್ ಆಗಿ ಮಿಂಚುತ್ತಿದ್ದ ಸಮಯದಲ್ಲಿ ರಾಜಕೀಯದ ಕಡೆ ಮುಖ ಮಾಡಿದ್ದು ರಮ್ಯಾ ಅವರು ಸರಿ ನಿರ್ಧಾರವೋ ತಪ್ಪು ನಿರ್ಧಾರವೋ ತಿಳಿಯದು.. ಆದರೆ ಅವರ ಸಿನಿಮಾ ಅಭಿಮಾನಿಗಳಿಗಂತೂ ಬಹಳಷ್ಟು ಬೇಸರ ತರಿಸಿದ್ದಂತೂ ಸತ್ಯ.. ಹೌದು ಸಿನಿಮಾದಿಂದ ಧಿಡೀರ್ ರಾಜಕಾರಣಕ್ಕೆ ಬಂದ ರಮ್ಯಾ ಅವರು ಮಂಡ್ಯ ಲೋಕಸಭಾ ಉಪಚುಮಾವಣೆಯಲ್ಲಿ ನಿಂತು ಗೆದ್ದು ಸಂಸದರೂ ಆದರು.. ಆದರೆ ಮತ್ತೊಂದು ಚುನಾವಣೆಯಲ್ಲಿ ಸಂಸದರಾಗುವ ಅವಕಾಶ ದೊರಕಲಿಲ್ಲ..

ಇನ್ನು ರಾಹುಲ್ ಗಾಂಧಿ ಅವರೊಂದಿಗೆ ಆಪ್ತರಾಗಿದ್ದ ರಮ್ಯಾ ಅವರು 

actress-romaya

ಕಾಂಗ್ರೆಸ್ ನ ಸಾಮಾಜಿಕ ಜಾಲತಾಣದ ಹೆಡ್ ಕೂಡ ಆದರು.. ಆದರೆ ಅವರ ಕೆಲ ಪೋಸ್ಟ್ ಗಳು ಕಾಂಗ್ರೆಸ್ ಪಕ್ಷಕ್ಕೆ ಕೊಂಚ ಮುಜುಗರವನ್ನುಂಟು ಮಾಡಿತ್ತು.. ಕೆಲ ದಿನಗಳ ನಂತರ ತಮ್ಮ ಒಅದವಿ ತ್ಯಜಿಸಿದ ರಮ್ಯಾ ಅವರು ಸಾಮಾಜಿಕ ಜಾಲತಾಣದಿಂದ ದೂರ ಉಳಿದರು.. ರಾಜಕೀಯಕ್ಕೂ ಬರುವ ಮುನ್ನ ಅಮೇರಿಕಾದ ಹುಡುಗನೊಬ್ಬನ ಜೊತೆ ಮದುವೆ ಎಂಬ ಮಾತುಗಳು ಕೇಳಿ ಬರುತ್ತಿದ್ದವು. ಆದರೆ ರಾಜಕೀಯಕ್ಕೆ ಬಂದ ನಂತರ ಆ ವಿಚಾರ ಮತ್ತೆ ಎಲ್ಲಿಯೂ ಸುದ್ದಿಯಾಗಲಿಲ್ಲ.. ರಮ್ಯಾ ಅವರ ಮದುವೆ ವಿಚಾರವೂ ಅಲ್ಲಿಯೇ ನಿಂತಿತು..

ಇನ್ನು 2020 ರಲ್ಲಿ ಸಾಮಾಜಿಕ ಜಾಲತಾಣದಲ್ಲಿ ಮತ್ತೆ ಕಾಣಿಸಿಕೊಂಡ ರಮ್ಯಾ ಅವರು ಸದ್ಯ ಅಭಿಮಾನಿಗಳೊಟ್ಟಿಗೆ ಆಗಾಗ ಮಾತನಾಡುತ್ತಿರುತ್ತಾರೆ.. ಅಭಿಮಾನಿಗಳ ಪ್ರಶ್ನೆಗಳಿಗೂ ಉತ್ತರ ನೀಡುವ ರಮ್ಯಾ ಅವರು ಸಿನಿಮಾ ಬಗ್ಗೆಯೂ ಮಾತನಾಡಿದ್ದರು.. ಸಿನಿಮಾ ನನ್ನ ಆಯ್ಕೆಯಾಗಿರಲಿಲ್ಲ ಎಂದು ಹೇಳುವ ಮೂಲಕ‌ಮತ್ತೆ ಚಿತ್ರರಂಗಕ್ಕೆ ಬರುವ ಮಾತನ್ನು ಅಲ್ಲಿಗೆ ನಿಲ್ಲಿಸಿದರು.. ಇನ್ನು ಆದ್ಯಾತ್ಮದ ಕಡೆ ಒಲವು ತೋರಿರುವ ರಮ್ಯಾ ಅವರು ಆದ್ಯಾತ್ಮದ ಕಾಲೇಜಿಗೂ ಸೇರಿಕೊಂಡಿದ್ದಾರೆ ಎಂದು ತಿಳಿದು ಬಂದಿದೆ.

ಆದರೆ ಮದುವೆಯಿಂದ ದೂರ ಉಳಿದ ರಮ್ಯಾ ಅವರು ಒಂಟಿಯಾಗಿ ನಮ್ಮನ್ನು ನಾವು ಅರ್ಥ ಮಾಡಿಕೊಳ್ಳಲು ಸಮಯ ನೀಡುತ್ತಿದ್ದೇನೆ ಎಂದಿದ್ದರು.. ಆದರೆ ರಮ್ಯಾ ಅವರು ಮದುವೆ ನಿರಾಕರಿಸಿದ್ದು ಮಾತ್ರ ಅವರ ಅಭಿಮಾನಿಗಳಿಗೆ ಬಹಳ ಬೇಸರವನ್ನುಂಟು ಮಾಡಿತ್ತು.. ಈಗಲೂ ರಮ್ಯಾ ಅವರ ಫೋಟೋಗಳಿಗೆ ಮದುವೆಯಾಗಿ ಎಂದು ಅಭಿಮಾನಿಗಳು ಕಮೆಂಟ್ ಮಾಡುವುದೂ ಉಂಟು.. ಇಂದು ಅಂತರಾಷ್ಟ್ರೀಯ ರೈತರ ದಿನದ ವಿಶೇಷವಾಗಿ ರಮ್ಯಾ ಅವರು ಒಂದು ಹೊತ್ತಿನ ಊಟ ತ್ಯಜಿಸಿ ರೈತರಿಗೆ ಗೌರವ ನೀಡಿದ್ದು ಜೊತೆಗೆ ಮೋದಿ ಸರ್ಕಾರದ ವಿರುದ್ಧ ಮಾತನಾಡಿದ್ದಾರೆ.. ಇನ್ನು ಸದ್ಯ

ಇನ್ನು ಸಿನಿಮಾ ವಿಚಾರಕ್ಕೆ ಬಂದರೆ ರಮ್ಯಾ ಅವರು ಸ್ಯಾಂಡಲ್ವುಡ್ ನಲ್ಲಿ ಬ್ಯುಸಿ ಆಗಿದ್ದಾಗ.. ಸಾಲು ಸಾಲು ಚಿತ್ರಗಳನ್ನು ಮಾಡುತ್ತಿದ್ದರು.. ಆ ಸಮಯದಲ್ಲಿ ಬೆಂಗಳೂರಿನಲ್ಲಿಯೇ ಸೆಟಲ್ ಆಗಿದ್ದರು.. ನಂತರ ಮಂಡ್ಯದ ಲೋಕಸಭಾ ಸದಸ್ಯೆಯಾದ ಬಳಿಕ ಮಂಡ್ಯದಲ್ಲಿ‌ ಒಂದು ಬಾಡಿಗೆ ಮನೆಯನ್ನೂ ಸಹ ಮಾಡಿಕೊಂಡಿದ್ದರು.. ಆದರೆ ಕಳೆದ ಲೋಕಸಭಾ ಚುನಾವಣೆಯಲ್ಲಿ ಸೋತ ಬಳಿಕ ಅವರು ಮಂಡ್ಯದಲ್ಲಿನ ಮನೆಯನ್ನು ಖಾಲಿ ಮಾಡಿದ್ದರು.. ಇತ್ತ ಬೆಂಗಳೂರಿನಲ್ಲಿಯೂ ಕಾಣದ ಅತ್ತ ಮಂಡ್ಯದಲ್ಲಿಯೂ ಮನೆ ಖಾಲಿ ಮಾಡಿದ ರಮ್ಯ ಅವರು ಸದ್ಯ ಎಲ್ಲಿದ್ದಾರೆ ಎಂದು ಬಹಳಷ್ಟು ಜನರು ಪ್ರಶ್ನಿಸಿದ್ದರು.. ಇದಕ್ಕೆಲ್ಲಾ ಉತ್ತರ ಇಲ್ಲಿದೆ ನೋಡಿ..

ರಮ್ಯ ಅವರು ಬೆಂಗಳೂರಿನಿಂದ ದೂರಾದ ನಂತರ ಸದ್ಯ ದೆಹಲಿಯಲ್ಲಿ ಸೆಟಲ್ ಆಗಿದ್ದು ಅಲ್ಲಿಯೇ ವಾಸವಿದ್ದಾರೆ.. ಅವರೊಟ್ಟಿಗೆ ಮೂರು ನಾಯಿ ಮರಿಗಳನ್ನು ಸಾಕಿಕೊಂಡಿರುವ ರಮ್ಯಾ ಅವರು ನಾನು ಇವರೊಡನೆಯೇ ಡೇಟ್ ಮಾಡುತ್ತಿರುವೆ ಎಂದು ಅಭಿಮಾನಿಯೊಬ್ಬರ ಪ್ರಶ್ನೆಗೆ ಉತ್ತರಿಸಿದ್ದರು.. ಸದ್ಯ ದೆಹಲಿಯಲ್ಲೊ ಸೆಟಲ್ ಆಗಿರುವ ಸ್ಯಾಂಡಲ್ವುಡ್ ನ ಮೋಹಕ ತಾರೆ ರಮ್ಯ ಅವರು ಈಗಲೂ ಕನ್ನಡ ಚಿತ್ರರಂಗಕ್ಕೆ ಮರಳಲಿ.. ಮತ್ತೆ ಸಿನಿಮಾಗಳಲ್ಲಿ ಕಾಣಿಸಿಕೊಳ್ಳಲಿ ಎಂಬುದೇ ಅಭಿಮಾನಿಗಳ ಆಶಯ..

…………….
ನಿಮ್ಮ ಸ್ನೇಹಿತರಿಗೆ ಮತ್ತು ಫೇಸ್ಬುಕ್ ಗ್ರೂಪ್ ಗೆ ಶೇರ ಮಾಡಿ...
DMCA.com Protection Status
error: Fuck you !!