ಕಲರ್ಸ್ ಕನ್ನಡ ವಾಹಿನಿಯಲ್ಲಿ ಹಲವಾರು ಧಾರಾವಾಹಿಗಳು ಪ್ರಸಾರವಾಗುತ್ತವೆ ಹಾಗೂ ಹಲವಾರು ಕಲಾವಿದರು ನಟಿಸುತ್ತಾರೆ. ಅವರಲ್ಲಿ ಕೆಲವರು ಬಹಳ ಜನಪ್ರಿಯತೆ ಗಳಿಸುತ್ತಾರೆ. ಕೆಲವು ಧಾರಾವಾಹಿಗಳು ವೀಕ್ಷಕರ ಮನಗೆಲ್ಲುತ್ತವೆ. ಅವುಗಳಲ್ಲಿ ಒಂದು ಈಗ ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಕನ್ನಡತಿ ಧಾರಾವಾಹಿ. ಹೊಸ ರೀತಿಯ ಕಥೆಯಿಂದ ಈ ಧಾರಾವಾಹಿ ಬಹಳ ಮೆಚ್ಚುಗೆ ಗಳಿಸಿದೆ. ಕನ್ನಡತಿ ಧಾರಾವಾಹಿ ಕನ್ನಡ ಕಿರುತೆರೆ ಲೋಕದ ಸೆನ್ಸೇಷನ್ ಎಂದರೆ ತಪ್ಪಾಗುವುದಿಲ್ಲ. ಕನ್ನಡತಿ ಧಾರಾವಾಹಿಯ ವಿಶೇಷತೆ ಕಥೆ, ಹಾಗು ಕನ್ನಡ ಬಳಕೆ. ಕಥಾನಾಯಕಿ ಬಳಸುವ ಶುದ್ಧ ಕನ್ನಡ ಪದಗಳು ಎಲ್ಲರಿಂದ ಪ್ರಶಂಸೆ ಪಡೆಡಿದೆ.
ಕನ್ನಡ ಎಂದರೆ ಮೂಗು ಮುರಿಯುತ್ತಿದ್ದ ಅದೆಷ್ಟೋ ಜನ, ಕನ್ನಡತಿ ಧಾರಾವಾಹಿಯಲ್ಲಿ ಭುವಿ ಮಾತನಾಡುವುದನ್ನು ಕೇಳಿ, ಭುವಿ ಥರ ಕನ್ನಡ ಮಾತಾಡಬೇಕು ಎನ್ನುತ್ತಿದ್ದಾರೆ. ಭುವಿ ಪಾತ್ರ ನಿರ್ವಹಿಸುತ್ತಿರುವ ನಟಿ ರಂಜನಿ ಬಗ್ಗೆ ಎಲ್ಲರಿಗೂ ವಿಶೇಷವಾದ ಆಸಕ್ತಿ ಇದೆ. ಪುಟ್ಟಗೌರಿ ಮದುವೆ ಇವರು ನಟಿಸಿದ ಮೊದಲ ಧಾರಾವಾಹಿ ನಂತರ ಕನ್ನಡತಿ ಧಾರಾವಾಹಿಯಲ್ಲಿ ನಟಿಸುತ್ತಿದ್ದಾರೆ. ಕನ್ನಡತಿ ಧಾರಾವಾಹಿಯ ಭುವಿ ಪಾತ್ರ ಕರ್ನಾಟಕದ ಜನತೆಯ ಫೇವರೆಟ್ ಆಗಿರುವುದು ನಮಗೆಲ್ಲರಿಗೂ ಗೊತ್ತು. ಇತ್ತೀಚೆಗೆ ನಡೆದ ಅನುಬಂಧ ಅವಾರ್ಡ್ಸ್ ಕಾರ್ಯಕ್ರಮದಲ್ಲಿ ಭುವಿಗೆ ಜನ ಮೆಚ್ಚಿದ ನಾಯಕಿ ಅವಾರ್ಡ್ ಬಂತು. ಜೊತೆಗೆ ಕರ್ನಾಟಕದ ಎಲ್ಲಾ ಭಾಗದ ಜನರು ಕನ್ನಡತಿ ಧಾರಾವಾಹಿ ಬಗ್ಗೆ ಮಾತನಾಡಿರುವ ಮಾತುಗಳು ಭುವಿ ಮತ್ತು ಆಕೆ ಮಾತನಾಡುವ ಶುದ್ಧ ಕನ್ನಡವನ್ನು ಎಷ್ಟು ಇಷ್ಟಪಡುತ್ತಾರೆ ಎಂಬುದು ನಮಗೆಲ್ಲ ತಿಳಿದುಬಂದಿದೆ. ಪ್ರತಿ ಎಪಿಸೋಡ್ ನ ಕೊನೆಯಲ್ಲಿ ‘ಸರಿಗನ್ನಡಂ ಗೆಲ್ಗೆ’ ಎಂದು ಭುವಿ ಹೇಳಿಕೊಡುವ ಕನ್ನಡ ಪಾಠಕ್ಕಾಗಿಯೇ ಹಲವಾರು ಜನ ಕಾದು ಕುಳಿತಿರುತ್ತಾರೆ.
ಭುವಿ ಅವರ ನಿಜ ಜೀವನದ ಬಗ್ಗೆ ಹಲವರಿಗೆ ಗೊತ್ತಿಲ್ಲ. ನಟಿ ರಂಜನಿ ರಾಘವನ್ ಮೂಲತಃ ಬೆಂಗಳೂರಿನವರೆ. ಇವರ ಮನೆ ಇರುವುದು ಬೆಂಗಳೂರಿನ ವಿದ್ಯಾರಣ್ಯ ಪುರಂನಲ್ಲಿ. ರಂಜನಿ ಅವರದ್ದು ಸುಂದರ ಕುಟುಂಬ. ಇವರಿಗೆ ಅಪ್ಪ ಅಮ್ಮ ಮತ್ತು ಇಬ್ಬರು ತಂಗಿಯರಿದ್ದಾರೆ. ರಂಜನಿ ಅವರೇ ಮೊದಲ ಮಗಳು. ಮನೆ ಜವಾಬ್ದಾರಿಯನ್ನು ತಾವೇ ತೆಗೆದುಕೊಂಡಿದ್ದಾರೆ ರಂಜನಿ. ಇಬ್ಬರು ತಂಗಿಯರನ್ನು ಇವರೇ ನೋಡಿಕೊಳ್ಳುತ್ತಿದ್ದಾರೆ. ರಂಜಿನಿ ಅವರ ತಂಗಿಯರು ಇನ್ನೂ ಕೂಡ ತಮ್ಮ ವಿದ್ಯಾಭ್ಯಾಸ ಮಾಡುತ್ತಿದ್ದು, ಅಕ್ಕಂತಂತೆ ಧಾರಾವಾಹಿಗಳಲ್ಲಿ ನಟಿಸಲು ಆಸಕ್ತಿ ಇದು ಎಂದು ತಿಳಿದು ಬಂದಿದೆ! ಭುವಿ ಅವರ ಮುದ್ದಾದ ಕುಟುಂಬ ಸದಾ ಸಂತೋಷದಿಂದ ಹೀಗೆ ಇರಲಿ.
ಕನ್ನಡ ಕಿರುತೆರೆಯ ಖ್ಯಾತ ನಟಿ ರಂಜಿನಿ ಅವರು ಧಾರಾವಾಹಿಗಳ ಮೂಲಕ ಇಡೀ ಕರ್ನಾಟಕದಲ್ಲಿ ಮನೆ ಮಾತಾಗಿದ್ದಾರೆ. ಈ ಸುದ್ದಿ ಇಷ್ಟ ವಾಗಿದ್ದಲ್ಲಿ ಇದನ್ನು ಲೈಕ್ ಮಾಡಿ ಶೇರ್ ಮಾಡಿ ಹಾಗು ನಿಮ್ಮ ಅನಿಸಿಕೆ ಅಭಿಪ್ರಾಯ ಗಳನ್ನೂ ತಪ್ಪದೆ ಕಾಮೆಂಟ್ ಮೂಲಕ ನಮಗೆ ತಿಳಿಸಿರಿ. ಕನ್ನಡ ಚಿತ್ರಗಳ ಬಗ್ಗೆ, ಕನ್ನಡ ನಾಡಿನ ಬಗ್ಗೆ, ಕನ್ನಡ ಧಾರಾವಾಹಿಗಳ ಬಗ್ಗೆ, ಕನ್ನಡ ನಟ ನಟಿಯರ ಬಗ್ಗೆ ಹಾಗು ಬೇರೆ ಎಲ್ಲಾ ಮಾಹಿತಿ ಗಳಿಗಾಗಿ ನಮ್ಮ ಪೇಜನ್ನು ಇಂದೇ ಫಾಲೋ ಮಾಡಿ.
………….