ನಟಿ ರಾಗಿಣಿ ಸದ್ಯ 144 ದಿನಗಳ ಪರಪ್ಪನ ಅಗ್ರಹಾರದ ವಾಸ್ ಅಮುಗಿಸಿ ಜಾಮೀನಿನ ಮೇಲೆ ಹೊರ ಬಂದಿದ್ದು ಅಪ್ಪ ಅಮ್ಮನ ಜೊತೆ ಸಮಯ ಕಳೆಯುತ್ತಿದ್ದಾರೆ… ಈ ನಡುವೆ ನೆಮ್ಮದಿಗಾಗಿ ಹೊಸ ಕೆಲಸ ಆರಂಭಿಸಿದ್ದಾರೆ.. ಹೌದು ಕಳೆದ ಐದು ತಿಂಗಳ ಹಿಂದೆ ಸ್ಯಾಂಡಲ್ವುಡ್ ನಲ್ಲಿ ದೊಡ್ಡ ಸುದ್ದಿಯಾದ ವಿಚಾರಕ್ಕೆ ಸಂಬಂಧಪಟ್ಟಂತೆ ನಟಿ ರಾಗಿಣಿ ಹಾಗೂ ನಟಿ ಸಂಜನಾ ಸೇರಿದಂತೆ ಅನೇಕರು ಪರಪ್ಪನ ಅಗ್ರಹಾರದ ಅತಿಥಿಗಳಾಗಿದ್ದರು..
ಆದರೆ ನಟಿ ರಾಗಿಣಿ ಹಾಗೂ ಸಂಜನಾರಿಗೆ ಜಾಮೀನು ಕೊಡಿಸಲು ಕುಟುಂಬದವರು ಹರಸಾಹಸ ಪಟ್ಟದ್ದಂತೂ ಸತ್ಯ.. ಸೆಷನ್ಸ್ ನ್ಯಾಯಾಲಯ.. ಮುಖ್ಯ ನ್ಯಾಯಾಲಯ.. ಕೊನೆಗೆ ಸುಪ್ರಿಂ ಕೋರ್ಟ್ ಮೆಟ್ಟಿಲ್ಲನ್ನೂ ಸಹ ಏರಿದ್ದಾಯಿತು.. ಕೊನೆಗೆ ನವೆಂಬರ್ ತಿಂಗಳಿನಲ್ಲಿಯೇ ನಟಿ ಸಂಜನಾರಿಗೆ ರಾಜ್ಯದ ಮುಖ್ಯ ನ್ಯಾಯಾಲಯದಲ್ಲಿ ಜಾಮೀನು ಸಿಕ್ಕಿತಾದರೂ ನಟಿ ರಾಗಿಣಿಗೆ ಮಾತ್ರ ಪರಪ್ಪನ ಅಗ್ರಹಾರವೇ ಗತಿಯಾಯಿತು.. ಆದರೆ ರಾಗಿಣಿ ಅವರ ತಂದೆ ತಾಯಿ ಮಾತ್ರ ಮಗಳನ್ನು ಹೊರ ಕರೆತರಲೇ ಬೇಕೆಂದು ಸುಪ್ರಿಂ ಕೋರ್ಟ್ ಮೊರೆ ಹೋಗಿ ಕೊನೆಗೂ ಜಾಮೀನಿನ ಮೇಲೆ ಹೊರ ಕರೆತಂದರು..
ಸದ್ಯ ಜನವರಿ 25 ರಂದು ಹೊರ ಬಂದ ರಾಗಿಣಿ ಹೊರ ಬರುತ್ತಿದ್ದಂತೆಯೇ ಮಾದ್ಯಮದ ಮುಂದೆ ಮಾತನಾಡಿದ್ದಾರೆ.. ಹೌದು ನಟಿ ಸಂಜನಾ ಮಾತ್ರ ತಾವು ಹೊರ ಬಂದದ್ದು ಯಾರಿಗೂ ತಿಳಿಯದಂತೆ ಸ್ನೇಹಿತರನ್ನು ಕರೆಸಿಕೊಂಡು ಮಾದ್ಯಮದ ಕಣ್ಣಿಗೆ ಬೀಳದಂತೆ ಬೆಂಗಳೂರಿನ ಹೊರವಲಯದಲ್ಲಿನ ಖಾಸಗಿ ರೆಸಾರ್ಟ್ ಒಂದರಲ್ಲಿ ವಿಶ್ರಾಂತಿ ಪಡೆಯುತ್ತಿದ್ದರು ಎಂದು ಸುದ್ದಿಯಾಗಿತ್ತು.. ಮೊನ್ನೆ ಮೊನ್ನೆ ಸಾಮಾಜಿಕ ಜಾಲತಾಣದಲ್ಲಿ ಜನರಿಗೆ ಜನರು ನೀಡಿರುವ ಪ್ರೀತಿಗೆ ಥ್ಯಾಂಕ್ಸ್ ಎಂದು ಪೋಸ್ಟ್ ಮಾಡಿದ್ದು ಅಲ್ಲಿಯವರೆಗೂ ಸಾಮಾಜಿಕ ಜಾಲತಾಣದಲ್ಲಾಗಲಿ.. ಮಾದ್ಯಮದ ಮುಂದೆಯಾಗಲಿ ಕಾಣಿಸಿಕೊಂಡಿರಲಿಲ್ಲ.. ಆದರೆ ರಾಗಿಣಿ ಅವರ ವಿಚಾರವೇ ಬೇರೆಯಾಗಿದೆ.. ಪರಪ್ಪನ ಅಗ್ರಹಾರದಿಂದ ಹೊರ ಬರುತ್ತಿದ್ದಂತೆ ಮಾದ್ಯಮದ ಜೊತೆ ಮಾತನಾಡಿ ಇಂದು ಸತ್ಯಕ್ಕೆ ಜಯ ಸಿಕ್ಕಿದೆ.. ಕಾನೂನಿನ ಮೇಲೆ ನಂಬಿಕೆ ಬಂದಿದೆ ಎಂದಿದ್ದರು.. ಅಷ್ಟೇ ಅಲ್ಲದೇ ಆದಷ್ಟು ಬೇಗ ಪತ್ರಿಕಾಗೋಷ್ಠಿ ಕರೆದು ಮಾತನಾಡುವೆ ಎಂದಿದ್ದರು..
ಎಲ್ಲಕ್ಕಿಂತ ಮುಖ್ಯ ಕುಟುಂಬ ಅವರ ಜೊತೆ ನಾನು ಸಮಯ ಕಳೆಯಬೇಕೆಂದಿದ್ದರು.. ಇನ್ನು ಹೊರ ಬರುತ್ತಿದ್ದಂತೆ ದೇವರ ಮೊರೆ ಹೋದ ರಾಗಿಣಿ ಹಾಗೂ ಕುಟುಂಬ ನಾನಾ ರೀತಿಯ ವಿಶೇಷ ಪೂಜೆ ಹಾಗೂ ಹೋಮಗಳನ್ನು ನೆರವೇರಿಸಿದರು.. ಇನ್ನು ಇದೀಗ ರಾಗಿಣಿ ಅವರು ತಮ್ಮ ನೆಮ್ಮದಿಗಾಗಿ ಹೊಸ ಕೆಲಸವನ್ನು ಆರಂಭ ಮಾಡಿದ್ದಾರೆ.. ಹೌದು ಸದ್ಯ ನಟಿ ರಾಗಿಣಿ ಸಿನಿಮಾ ಚಿತ್ರೀಕರಣಗಳಲ್ಲಿ ಪಾಲ್ಗೊಳ್ಳುವುದು ಸಂದೇಹವಾಗಿದ್ದು ಕೆಲ ದಿನ ಚಿತ್ರರಂಗದಿಂದ ಬ್ರೇಕ್ ಪಡೆಯಬಹುದಾಗಿದ್ದು ತಮ್ಮನ್ನು ತಾವು ಹೊಸ ಕೆಲಸದಲ್ಲಿ ತೊಡಗಿಸಿಕೊಂಡಿದ್ದಾರೆ..
ಹೌದು ರಾಗಿಣಿ ಅವರು ಓದುವ ಅಭ್ಯಾಸವನ್ನು ರೂಡಿಸಿಕೊಳ್ಳುತ್ತಿದ್ದು ತಮ್ಮ ಜೀವನದಲ್ಲಿ ಬದಲಾಯಿಸಿಕೊಳ್ಳಲು ಸಾಧ್ಯವಾಗದ ಆಭ್ಯಾಸವನ್ನು ಬಿಟ್ಟು ಬಿಡುವುದೇ ಒಳ್ಳೆಯದು ಎಂದಿದ್ದಾರೆ.. ರಾಗಿಣಿ ಮುಂಚಿನ ರೀತಿಯಲ್ಲಿ ಜೀವನ ಮಾಡಲು ಅಪ್ಪ ಅಮ್ಮ ಬೆಂಬಲವಾಗಿ ನಿಂತಿದ್ದು ಮಗಳಿಗೆ ಪುಸ್ತಕಗಳನ್ನು ಉಡುಗೊರೆಯಾಗಿ ನೀಡಿದ್ದಾರೆ..
ಓದಿನಲಿ ತಲ್ಲೀನರಾದರೆ ಇತರ ಆಲೋಚನೆಗಳು ಬಾರದೆಂದು ಮಗಳ ಮನಸೈಗೆ ನೆಮ್ಮದಿ ಸಿಗಲೆಂದು ಪುಸ್ತಕ ಹಾಗೂ ಹೊಸ ವರ್ಷ ಹೊಸ ಬದಲಾವಣೆ ತರಲೆಂದು ಹೊಸ ವರ್ಷದ ಡೈರಿಯನ್ನು ಉಡುಗೊರೆಯಾಗಿ ನೀಡಿದ್ದು ಸಾಮಾಜಿಕ ಜಾಲತಾಣದಲ್ಲಿ ಫೋಟೋಗಳನ್ನು ಹಂಚಿಕೊಂಡಿರುವ ರಾಗಿಣಿ ಅಪ್ಪ ಅಮ್ಮನಿಗೆ ಧನ್ಯವಾದಗಳನ್ನು ತಿಳಿಸಿದ್ದಾರೆ.. ಅಷ್ಟೇ ಅಲ್ಲದೇ ಸಕಾರಾತ್ಮಕವಾದ ಮಾತುಗಳ ಮೂಲಕ ಜೀವನದಲ್ಲಿ ಬದಲಾವಣೆ ತಂದುಕೊಳ್ಳುತ್ತಿರುವುದಾಗಿ ತಿಳಿಸಿದ್ದಾರೆ..