ಕನ್ನಡ ಚಿತ್ರರಂಗದಲ್ಲಿ ಬಹಳ ವೇಗವಾಗಿ ಹೆಚ್ಚು ಖ್ಯಾತಿಯನ್ನು ಅಲ್ಪಾವಧಿಯಲ್ಲಿ ಪಡೆದುಕೊಂಡ ನಟಿ ಎಂದರೆ ಅದು ಪ್ರೇಮ ಅವರು ಎಂದೇ ಹೇಳಬಹುದು. ಹೌದು, ನಟಿ ಪ್ರೇಮಾ ಅವರು ಕನ್ನಡ ಚಿತ್ರರಂಗಕ್ಕೆ ಕಾಲಿಟ್ಟ ಚಿತ್ರ ಅದು ಹೆಚ್ಚು ಯಶಸ್ವಿಗಳಿಸಿದ್ದು, ಅಂದರೆ ನಟ ಶಿವರಾಜ್ ಕುಮಾರ್ ಅವರೊಟ್ಟಿಗೆ ಅಭಿನಯಿಸಿದ ಓಂ ಚಿತ್ರ. ಉಪೇಂದ್ರ ಅವರು ನಿರ್ದೇಶಿಸಿದ ಈ ಸಿನಿಮಾದಲ್ಲಿ ಪ್ರೇಮ ಅವರು ನಾಯಕಿ ನಟಿಯಾಗಿ ಕನ್ನಡ ಚಿತ್ರರಂಗಕ್ಕೆ ಹೊಸ ಯಶಸ್ವಿ ನಟಿಯಾಗಿ ಹೊರಹೊಮ್ಮುತ್ತಾರೆ.

Actress-Prema

ಪ್ರೇಮ ಅವರು ಕನ್ನಡ ಚಿತ್ರರಂಗಕ್ಕೆ ಬಂದ ನಂತರ ಒಂದರ ಹಿಂದೆ ಒಂದು ಬ್ಯಾಕ್ ಟು ಬ್ಯಾಕ್ ಹಿಟ್ ಚಿತ್ರಗಳನ್ನು ನೀಡುವ ಮೂಲಕ ಕನ್ನಡ ಚಿತ್ರರಸಿಕರ ಮನದಲ್ಲಿ ಬಹಳ ಆಳವಾಗಿ ನೆಲೆಯೂರುತ್ತಾರೆ. ಇದಾದ ಬಳಿಕ ನಟಿ ಪ್ರೇಮ ಅವರ ಕಲಾಸೇವೆ ಕನ್ನಡ ಚಿತ್ರರಂಗಕ್ಕೆ ಅತ್ಯಗತ್ಯವಾಗಿ ಹೋಗಿತ್ತು.! ಹೌದು, ಪ್ರೇಮಾ ಅವರು ನಿರಂತರವಾಗಿ ೨೦ರ ದಶಕದಲ್ಲಿ ಮೇರು ನಟ ಸಾಹಸಸಿಂಹ ವಿಷ್ಣುವರ್ಧನ್ ಅವರೊಂದಿಗೆ ಹೆಚ್ಚು ಕೌಟುಂಬಿಕ ಸಿನಿಮಾಗಳಲ್ಲಿ ಮಿಂಚಿ ಅನೇಕ ಹಿರಿಯರ ಹೃದಯದಲ್ಲೂ ಕೂಡ ಸ್ಥಾನವನ್ನು ಪಡೆದುಕೊಂಡಿದ್ದರು.

Actress-Prema

ರವಿಚಂದ್ರನ್, ಉಪೇಂದ್ರ ಶಿವಣ್ಣ, ರಮೇಶ್ ಅರವಿಂದ್ ಸೇರಿದಂತೆ ಇನ್ನೂ ಅನೇಕ ಸ್ಟಾರ್ ನಟರ ಜತೆ ಒಳ್ಳೊಳ್ಳೆ ಸಿನಿಮಾಗಳನ್ನು ತಮ್ಮ ಅಭಿಮಾನಿಗಳಿಗೆ ಹಾಗೂ ಕನ್ನಡ ಚಿತ್ರರಂಗಕ್ಕೆ ಉತ್ತಮ ಕಲಾವಿದೆಯಾಗಿ ಕೊಡುಗೆಯಾಗಿ ನೀಡಿದರು. ಸ್ವಲ್ಪ ಸಮಯದ ನಂತರ ಕೊಡಗಿನ ಸುಂದರ ನಟಿ ಪ್ರೇಮಾ ಅವರು ತಮ್ಮ ವೈವಾಹಿಕ ಜೀವನದ ಬಗ್ಗೆ ಯೋಚನೆ ಮಾಡುತ್ತಾ, ಮನೆಯವರ ಒಪ್ಪಿಗೆಯಂತೆ ಅವರು ಸಾಫ್ಟ್ ವೇರ್ ಇಂಜಿನಿಯರ್ ಜೀವನ್ ಅಪ್ಪಚ್ಚು ಎಂಬುವರನ್ನು ಮದುವೆಯಾಗುತ್ತಾರೆ. ಅದಾಗಲೇ ಕನ್ನಡ ಚಿತ್ರರಂಗದಲ್ಲಿ ಅವರದ್ದೇ ಹೆಸರು ಸೃಷ್ಟಿಯಾಗಿತ್ತು ಹಾಗೂ ನಿರಂತರವಾಗಿ ಅವರಿಗೆ ಸಾಲು ಸಾಲು ಸಿನಿಮಾಗಳ ಅವಕಾಶಗಳು ಸಜ್ಜಾಗಿತ್ತು. ಆದರೂ ಕೂಡ ಪ್ರೇಮಾ ಅವರು ಅದನ್ನು ಕೈಬಿಟ್ಟು ದಾಂಪತ್ಯ ಜೀವನಕ್ಕೆ ಕಾಲಿಡುತ್ತಾರೆ.

Actress-Prema

ಮದುವೆಯಾದ ಬಳಿಕ ಸಿನಿಮಾದಲ್ಲಿ ನಟಿಸಬಾರದು, ಸಂಸಾರ ಕಟ್ಟಿಕೊಂಡು ಪತಿಯ ದುಡಿಮೆಯಲ್ಲಿ ಅಚ್ಚುಕಟ್ಟಾಗಿ ಸಂಸಾರ ಸಾಗಿಸಬೇಕು, ನೆಮ್ಮದಿಯಿಂದ ಬದುಕಬೇಕು ಎಂದು ನಟಿ ಪ್ರೇಮಾ ಆಸೆಗಳನ್ನು ಕಟ್ಟಿಕೊಂಡಿದ್ದರು. ಆದರ ಪ್ರೇಮಾ ಅವರ ಕನಸುಗಳು ಉಲ್ಟವಾಯಿತು. ಪ್ರೇಮಾ ಅವರ ಪತಿ ತಾವು ಸಾಫ್ಟ್ ವೇರ್ ಇಂಜಿನಿಯರ್ ಎಂಬ ಸುಳ್ಳು ಪಟ್ಟವನ್ನು ಹೊತ್ತುಕೊಂಡು ಅವರಿಗೆ ಮೋಸ ಮಾಡಿದ್ದರು.!

ಆದರೆ ಅವರು ಸಾಫ್ಟ್ ವೇರ್ ಇಂಜಿನಿಯರ್ ಬದಲಿಗೆ ಒಬ್ಬ ಸಾಮಾನ್ಯ ಉದ್ಯೋಗಿ ಆಗಿದ್ದರು. ಪ್ರೇಮಾ ಅವರನ್ನು ಮದುವೆಯಾದ ಬಳಿಕ ಅವರನ್ನು ಚಿತ್ರರಂಗದಲ್ಲಿ ದುಡಿಮೆಗೆ ಕಳುಹಿಸಿ ಅವರ ದುಡ್ಡಿನಲ್ಲಿ ನಾನು ಬದುಕಬೇಕು, ಐಷಾರಾಮಿ ಜೀವನ ನಡೆಸಬೇಕು ಎಂಬ ಯೋಚನೆಯಲ್ಲಿದ್ದ ಪತಿಯ ನಿರ್ಧಾರ ತಿಳಿದ ಪ್ರೇಮಾ ಅವರು ಬಹಳ ನೋವಿಗೆ ತುತ್ತಾಗುತ್ತಾರೆ.

ಪ್ರೇಮಾ ಅವರಿಗೆ ಪ್ರತಿಯೊಂದು ವಿಷಯ ಕೂಡ ತಿಳಿದ ಬಳಿಕ ಅವರು ಈ ವಿಷಯಗಳನ್ನು ತಿಳಿದುಕೊಳ್ಳಲು ಕೂಡ ಹೆಚ್ಚು ಸಮಯವನ್ನು ತೆಗೆದುಕೊಳ್ಳಲಿಲ್ಲ. ಪತಿಯ ಸುಳ್ಳನ್ನು ತಿಳಿದು ವಿಚ್ಛೇದನಕ್ಕೆ ಅರ್ಜಿಯನ್ನು ಕೂಡ ಹಾಕಿ, ೨೦೧೬ ರಲ್ಲಿ ತನ್ನ ಪತಿಯಿಂದ ವಿಚ್ಚೇದನ ಪಡೆದುಕೊಂಡರು. ಸದ್ಯ ಪ್ರೇಮ ಅವರು ವಿಚ್ಛೇದನ ಪಡೆದ ನಂತರ ಮರು ಮದುವೆಯಾಗದೆ ಈಗ ಒಬ್ಬಂಟಿಯಾಗಿ ಜೀವನವನ್ನು ನಡೆಸುತ್ತಿದ್ದಾರೆ. ಒಂದು ಕಾಲದಲ್ಲಿ ಕನ್ನಡ ಚಿತ್ರರಂಗವನ್ನು ಹಾಗೂ ಕನ್ನಡಿಗರನ್ನು ನಿರಂತರವಾಗಿ ಮನರಂಜಿಸಿ, ಅವರ ಮನದಲ್ಲಿ ನೆಲೆಸಿದಂತ ನಟಿ ಪ್ರೇಮಾ ಅವರ ಬದುಕಿನ ಕೆಟ್ಟ ಪುಟವನ್ನು ನೋಡುವುದಕ್ಕೆ ಬಹಳ ಬೇಸರವಾಗುತ್ತದೆ.

ನಿಮ್ಮ ಸ್ನೇಹಿತರಿಗೂ/ಫೇಸ್ಬುಕ್ ಗ್ರೂಪ್ ಗೆ ಶೇರ್ ಮಾಡಿ...
  •  
  •  
  •  
  •  
  •  
  •  
  •  
  •