ನಟಿ ನಯನತಾರ ಯಾರಿಗೆ ತಾನೇ ಗೊತ್ತಿಲ್ಲ ಹೇಳಿ, ಕನ್ನಡ ಸೇರಿದಂತೆ ದಕ್ಷಿಣ ಭಾರತದ ಹಲವು ಚಿತ್ರಗಳಲ್ಲಿ ಅಭಿನಯ ಮಾಡಿದ ನಯನತಾರ ಅವರು ಇಡೀ ದೇಶಾದ್ಯಂತ ಅಪಾರ ಸಂಖ್ಯೆಯ ಅಭಿಮಾನಿ ಬಳಗವನ್ನ ಹೊಂದಿದ್ದಾರೆ ಎಂದು ಹೇಳಿದರೆ ತಪ್ಪಾಗಲ್ಲ. ಉಪೇಂದ್ರ, ರಜನೀಕಾಂತ್ ಸೇರಿದಂತೆ ಹಲವು ದೊಡ್ಡ ದೊಡ್ಡ ನಾಯಕ ನಟರ ಜೊತೆ ಅಭಿನಯ ಮಾಡಿದ ನಯನತಾರ ಅವರು ಸದ್ಯ ದಕ್ಷಿಣ ಭಾರತದ ಚಿತ್ರರಂಗದ ಟಾಪ್ ನಟಿಯರಲ್ಲಿ ಇವರೂ ಕೂಡ ಒಬ್ಬರು ಆಗಿದ್ದಾರೆ. ಇನ್ನು ಈಗ ವಿಷಯಕ್ಕೆ ಬರುವುದಾದರೆ ನಟಿ ನಯನತಾರ ಮತ್ತು ನಿರ್ದೇಶಕ ವಿಘ್ನೇಶ್ ಪ್ರೀತಿ ಮಾಡುತ್ತಿರುವ ವಿಷಯ ಎಲ್ಲರಿಗೂ ತಿಳಿದೇ ಎಂದು ಹೇಳಬಹುದು.

ನಯನತಾರ ಮತ್ತು ನಿರ್ದೇಶಕ ವಿಘ್ನೇಶ್ ಅವರು ಪ್ರೀತಿ ಮಾಡುತ್ತಿದ್ದು ಸದ್ಯದಲ್ಲೇ ಈ ಜೋಡಿ ಹಸೆಮಣೆ ಏರಲಿದ್ದಾರೆ ಎಂದು ಹೇಳಬಹುದು. ಇನ್ನು ನಯನತಾರ ಅವರು 2015 ರಲ್ಲಿ ನಿರ್ದೇಶಕ ವಿಘ್ನೇಶ್ ಅವರು ನಿರ್ದೇಶನ ಮಾಡಿದ ‘ನಾನುಮ್ ರೌಡಿ ಧಾನ್’ ಅನ್ನುವ ಚಿತ್ರದಲ್ಲಿ ನಾಯಕಿಯಾಗಿ ನಟನೆ ಮಾಡಿದ್ದರು ಮತ್ತು ಈ ಚಿತ್ರ ಸೂಪರ್ ಹಿಟ್ ಕೂಡ ಆಗಿತ್ತು. ಇನ್ನು ಈ ಚಿತ್ರದ ನಂತರ ನಿರ್ದೇಶಕ ವಿಘ್ನೇಶ್ ಅವರು ನಿರ್ದೇಶನ ಮಾಡಿದ ‘ಕಾಧುವಾಕುಲ ರೆಂಡು ಕಾಧಲ್’ ಚಿತ್ರದಲ್ಲಿ ಕೂಡ ನಟಿ ನಯನತಾರ ಅವರು ನಾಯಕಿಯಾಗಿ ನಟನೆ ಮಾಡಿದರು. ಇನ್ನು ಈ ಎರಡು ಚಿತ್ರದ ಯಶಸ್ಸಿನ ನಂತರ ನಿರ್ದೇಶಕ ವಿಘ್ನೇಶ್ ಮತ್ತು ನಯನತಾರ ನಡುವೆ ಅನ್ಯೋನ್ಯತೆ ಬೆಳೆದಿದ್ದು ಈಗ ಅವರಿಬ್ಬರ ನಡುವೆ ಪ್ರೀತಿ ಚಿಗುರಿದೆ ಎಂದು ಹೇಳಬಹುದು.

actress-nayanthara

ಇನ್ನು ಸೆಪ್ಟೆಂಬರ್ 18 ನೇ ತಾರೀಕಿನಂದು ನಿರ್ದೇಶಕ ವಿಘ್ನೇಶ್ ಅವರ ಹುಟ್ಟಿದ್ದ ಹಬ್ಬ ಇದ್ದು ನಟಿ ನಯನತಾರ ಅವರು ತಮ್ಮ ಪ್ರಿಯಕರ ಹುಟ್ಟಿದ ಹಬ್ಬವನ್ನ ಬಹಳ ವಿಜೃಂಭಣೆಯಿಂದ ಆಚರಣೆ ಮಾಡಿದ್ದಾರೆ ಎಂದು ಹೇಳಬಹುದು. ಇನ್ನು ತಮ್ಮ ಪ್ರಿಯಕರ ಹುಟ್ಟಿದ್ದ ಹಬ್ಬಕ್ಕೆ ನಟಿ ನಯನತಾರ ಅವರು ಖರ್ಚು ಮಡಿದ ಹಣ ಎಷ್ಟು ಎಂದು ತಿಳಿದರೆ ನೀವು ಒಮ್ಮೆ ಶಾಕ್ ಆಗುವುದು ಗ್ಯಾರೆಂಟಿ ಎಂದು ಹೇಳಿದರೆ ತಪ್ಪಾಗಲ್ಲ. ಹಾಗಾದರೆ ತನ್ನ ಪ್ರಿಯಕರ ಹುಟ್ಟಿದ ಹಬ್ಬಕ್ಕೆ ನಟಿ ನಯನತಾರ ಅವರು ಖರ್ಚು ಮಾಡಿದ ಹಣ ಎಷ್ಟು ಅನ್ನುವುದರ ಬಗ್ಗೆ ಸಂಪೂರ್ಣ ಮಾಹಿತಿಯನ್ನ ನಾವು ಈಗ ನಿಮಗೆ ಕೊಡುತ್ತೀವಿ ಪೂರ್ತಿಯಾಗಿ ಓದಿ ಮತ್ತು ಇದರ ಬಗ್ಗೆ ನಿಮ್ಮ ಅನಿಸಿಕೆಯನ್ನ ನಮಗೆ ತಿಳಿಸಿ.

ಹೌದು ಸೆಪ್ಟೆಂಬರ್ 18 ನೇ ತಾರೀಕಿನಂದು ನಯನತಾರ ಅವರು ತಮ್ಮ ಪ್ರಿಯಕರ ವಿಘ್ನೇಶ್ ಅವರ ಹುಟ್ಟಿದ ಹಬ್ಬವನ್ನ ಗೋವಾದಲ್ಲಿ ಬಹಳ ಅದ್ದೂರಿಯಾಗಿ ಆಚರಣೆ ಮಾಡಿದ್ದಾರೆ. ಇನ್ನು ವಿಘ್ನೇಶ್ ಅವರ ಹುಟ್ಟಿದ ಹಬ್ಬದ ಹಿಂದಿನ ದಿನ ನಯನತಾರ ಅವರ ತಾಯಿಯ ಹುಟ್ಟಿದ ಹಬ್ಬ ಇದ್ದ ಕಾರಣ ಇಬ್ಬರ ಹುಟ್ಟಿದ್ದ ಹಬ್ಬವನ್ನ ಕೂಡ ಗೋವಾದಲ್ಲಿ ಬಹಳ ಸಡಗರದಿಂದ ಆಚರಣೆ ಮಾಡಲಾಗಿದೆ. ಪ್ರಿಯಕರನ ಜನ್ಮದಿನ ನೆನಪಿನಲ್ಲಿ ಉಳಿಯಬೇಕು ಅನ್ನುವ ಉದ್ದೇಶದಿಂದ ನಟಿ ನಯನತಾರ ಅವರು ಪ್ರಿಯಕರ ಹುಟ್ಟಿದ ಹಬ್ಬವನ್ನ ಗೋವಾದಲ್ಲಿ ಆಚರಣೆ ಮಾಡಿದ್ದಾರೆ.

ಇನ್ನು ಪ್ರಿಯಕರ ಹುಟ್ಟಿದ ಹಬ್ಬದ ಸಲುವಾಗಿ ನಟಿ ನಯನತಾರ ಅವರು ಸುಮಾರು 25 ಲಕ್ಷ ರೂಪಾಯಿಯನ್ನ ಖರ್ಚು ಮಾಡಿದ್ದಾರೆ ಎಂದು ಮಾಹಿತಿಗಳಿಂದ ತಿಳಿದು ಬಂದಿದೆ. ಇನ್ನು ವಿಘ್ನೇಶ್ ಅವರು ನಯನತಾರ ಅವರ ಜೊತೆ ಗೋವಾದಲ್ಲಿ ಕಳೆದ ಕ್ಷಣಗಳನ್ನ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ, ಸ್ನೇಹಿತರೆ ನಯನತಾರ ಮತ್ತು ವಿಘ್ನೇಶ್ ಅವರ ಜೋಡಿ ಹೇಗಿದೆ ಅನ್ನುವುದರ ಬಗ್ಗೆ ನಿಮ್ಮ ಅಭಿಪ್ರಾಯವನ್ನ ನಮಗೆ ತಿಳಿಸಿ.

ನಿಮ್ಮ ಸ್ನೇಹಿತರಿಗೂ/ಫೇಸ್ಬುಕ್ ಗ್ರೂಪ್ ಗೆ ಶೇರ್ ಮಾಡಿ...
  •  
  •  
  •  
  •  
  •  
  •  
  •  
  •