ಹೌದು ಕ್ರೇಜಿಸ್ಟಾರ್ ರವಿಚಂದ್ರನ್ ಅವರ ಜೊತೆ ಹಿಂದೆ ನೀಲಕಂಠ ಸಿನಿಮಾದಲ್ಲಿ ಅಭಿನಯಿಸಿದ್ದ ನಟಿ ನಮಿತಾ ರವರು ಇದೀಗ ಒಂದು ವಿಚಾರವನ್ನು ಹಂಚಿಕೊಂಡಿದ್ದು ಎಲ್ಲರಿಗೂ ಶಾಕ್ ನೀಡಿದ್ದಾರೆ ಮತ್ತು ತಾವು ಡಿಪ್ರೆಶನ್ ಗೆ ಹೋಗಿದ್ದರ ಬಗ್ಗೆ ಬಾಯಿ ಬಿಟ್ಟಿದ್ದಾರೆ ಅಷ್ಟಕ್ಕೂ ನಟಿ ಹೇಳಿದ್ದೇನು ಗೊತ್ತಾ ಇಲ್ಲಿದೆ ನೋಡಿ ಪೂರ್ತಿ ಮಾಹಿತಿ ಹೌದು ನಟಿ ನಮಿತಾ ರವರು ಸಾಯುವ ಯೋಚನೆ ಮಾಡಿದ್ದಾರಂತೆ ಮತ್ತು ಡಿಪ್ರೆಶನ್ ಗೂ ಒಳಗಾಗಿದ್ದರಂತೆ ಹೀಗಂತ ಹೇಳಿದ್ದು ನಟಿ ನಮಿತಾ ಜೊತೆಗೆ ಇದರ ಬಗ್ಗೆ ನಟಿ ನಮಿತಾ ‘ ಕಪ್ಪು ಬಣ್ಣದ ಡ್ರೆಸ್‌ನಲ್ಲಿ ಇರೋದು 9-10 ವರ್ಷದ ಹಿಂದಿನ ಫೋಟೋ.

ಅದರ ಪಕ್ಕದಲ್ಲಿ ಇರೋದು ಕೆಲವೇ ಕೆಲವು ನಿಮಿಷಗಳ ಹಿಂದೆ ತೆಗೆದ ಫೋಟೋದಲ್ಲಿ ಯಾವುದೇ ಮೇಕಪ್ ಇಲ್ಲ. ಡಿಪ್ರೆಶನ್ ಕುರಿತು ಜಾಗೃತಿ ಮೂಡಿಸುವ ಸಲುವಾಗಿ ಈ ಪೋಸ್ಟ್ ಹಾಕುತ್ತಿದ್ದೇನೆ. ಹಳೆಯ ಫೋಟೋದಲ್ಲಿ ನಾನು ಡಿಪ್ರೆಶನ್‌ನಿಂದ ಕೂಡಿದ್ದೆ. ಅದು ನಿಜಕ್ಕೂ ನನಗೆ ಗೊತ್ತಿರಲಿಲ್ಲ ಎಂಬುದು ದುರಂತದ ವಿಷಯ. ಅಷ್ಟೇ ಅಲ್ಲದೆ ನಾನು ಅಷ್ಟೊಂದು ಮಾನಸಿಕವಾಗಿಯೂ ಚೆನ್ನಾಗಿರಲಿಲ್ಲ, ಸಮಾಜದ ವಿರೋಧಿಯಾಗಿ ನಡೆಯುತ್ತಿದ್ದೆ’ ಎಂದು ನಟಿ ಹೇಳಿದ್ದಾರೆ ಎಂದು ತಿಳಿದುಬಂದಿದೆ.97ಕೆಜಿ ದಪ್ಪಗಾಗಿದ್ದ ನಟಿ ನಮಿತಾರವರು ‘ರಾತ್ರಿ ಸರಿಯಾಗಿ ನಿದ್ದೆ ಬರುತ್ತಿರಲಿಲ್ಲ

ಸಿಕ್ಕಾಪಟ್ಟೆ ಊಟ-ತಿಂಡಿ ಮಾಡುತ್ತಿದ್ದೆ. ಪ್ರತಿದಿನ ಪಿಜ್ಜಾ ಆರ್ಡರ್ ಹಾಕಿ ತಿನ್ನುತ್ತಿದ್ದೆ. ಇದ್ದಕ್ಕಿದ್ದ ಹಾಗೆ ದಪ್ಪಗಾದೆ, ಬಾಡಿ ಶೇಪ್ ಕೂಡ ಹಾಳಾಗೋಯ್ತು. 97ಕೆಜಿ ದಪ್ಪಗಾದೆ. ನಾನು ಮದ್ಯಪಾನ ಮಾಡುತ್ತಿದ್ದೇನೆ ಅಂತ ಜನರು ಗುಸುಗುಸು ಅಂತ ಮಾತನಾಡಿಕೊಳ್ಳಲು ಆರಂಭಿಸಿದರು, ಬಾಯಿಗೆ ಬಂದಹಾಗೆ ಮಾತನಾಡಿದರು. ನಾನು ಪಿಸಿಓಡಿ, ಥೈರಾಯಿಡ್ ಸಮಸ್ಯೆಯಿಂದ ಬಳಲುತ್ತಿದ್ದೆ ಎಂದು ನನಗೆ ಮಾತ್ರ ಗೊತ್ತಿತ್ತು’  ಎಂದು ಖ್ಯಾತ ನಟಿ ನಮಿತಾರವರು ಹೇಳಿಕೊಂಡಿದ್ದಾರೆ..

ಕೃಷ್ಣನ ಆರಾಧನೆಯಲ್ಲಿ ಮುಳುಗಿದ್ದರಂತೆ ನಟಿ ನಮಿತಾ, ಹೌದು ಈ ಹಿನ್ನೆಲೆಯಲ್ಲಿ ಮಾತನಾಡಿದ ನಮಿತಾರವರು ‘ಆತ್ಮಹತ್ಯೆ ಮಾಡಿಕೊಳ್ಳುವ ನಿರ್ಧಾರ ಮಾಡಿದ್ದೆ. ಯಾರೂ ಕೂಡ ನನಗೆ ನೆಮ್ಮದಿಯಾಗಿ ಇರುವಂತೆ ಬಿಡೋದಿಲ್ಲ. ಐದೂವರೆ ವರ್ಷಗಳ ನಂತರದಲ್ಲಿ ನಾನು ಕೃಷ್ಣನನ್ನು ಪಡೆದೆ. ಮಹಾ ಮಂತ್ರ ಧ್ಯಾನ ಮಾಡಲು ಕಲಿತೆ. ನಾನು ಯಾವತ್ತೂ ಎಂದಿಗೂ ವೈದ್ಯರ ಬಳಿ ಹೋಗಿಲ್ಲ, ಥೆರಪಿ ಕೂಡ ಮಾಡಿಸಿಕೊಂಡಿಲ್ಲ. ನನ್ನ ಥೆರಪಿ ಅಂದರೆ ಕೃಷ್ಣ, ಕೃಷ್ಣನ ಆರಾಧನೆಯಲ್ಲಿಯೇ ಸಮಯ ಕಳೆಯುತ್ತೇನೆ. ಏನನ್ನು ಹೊರಗಡೆ ಹುಡುಕುತ್ತಿದ್ದೀರೋ ಅದು ನಿಮ್ಮೊಳಗೆ ಇದೆ’ ಎಂಬುದಾಗಿ ನಮಿತಾ ಹೇಳಿದರು…

ನಿಮ್ಮ ಸ್ನೇಹಿತರಿಗೂ/ಫೇಸ್ಬುಕ್ ಗ್ರೂಪ್ ಗೆ ಶೇರ್ ಮಾಡಿ...
  •  
  •  
  •  
  •  
  •  
  •  
  •  
  •