ಹೌದು ಈಗಾಗಲೇ ಎಲ್ಲರಿಗೂ ಗೊತ್ತಿರುವ ಹಾಗೆ, ಜೀ ಕನ್ನಡದ ಖ್ಯಾತ ಧಾರಾವಾಹಿ ಜೊತೆಜೊತೆಯಲಿ ಈಗಾಗಲೇ ಸಾಕಷ್ಟು ಅಭಿಮಾನಿಗಳನ್ನು ಹೊಂದಿದ್ದು, ಈ ಸೀರಿಯಲ್ ನಲ್ಲಿ ನಾಯಕಿ ಪಾತ್ರದ ಅನು ಅವರು ಕೂಡ ತುಂಬಾ ಅಭಿಮಾನಿ ಬಳಗವನ್ನು ಹೊಂದಿದ್ದಾರೆ. ಜೊತೆಗೆ ನಾಯಕ ನಟ ಅನಿರುದ್ಧ್ ಅವರು ಕೂಡ, ಹಿರಿತೆರೆಯಿಂದ, ಕಿರುತೆರೆಗೆ ಕಾಲಿಟ್ಟು ಬಳಿಕ ಸಾಕಷ್ಟು ಸೆನ್ಸೇಷನಲ್ ಕ್ರಿಯೇಟ್ ಮಾಡಿದ್ದಾರೆ.  

ಇದರ ನಡುವೆ, ಜೊತೆ ಜೊತೆಯಲಿ ಧಾರಾವಾಹಿ ನಟಿ ಮೇಘಾ ಶೆಟ್ಟಿ ಅವರು, ಇತ್ತೀಚೆಗೆ ಗಣೇಶ್ ಅವರ ಜೊತೆ ‘ತ್ರಿಬಲ್ ರೈಡಿಂಗ್’ ಸಿನಿಮಾದಲ್ಲಿ ಅವಕಾಶ ಪಡೆದು ಅಭಿಮಾನಿಗಳಿಗೆ ಸಿಹಿಸುದ್ದಿ ನೀಡಿದರು. ಹಾಗೂ ನಟ ಗೋಲ್ಡನ್ ಸ್ಟಾರ್ ಗಣೇಶ್ ಅವರ ಜೊತೆ ತೆರೆ ಹಂಚಿಕೊಳ್ಳುತ್ತಿರುವ ವಿಷಯವನ್ನು ಕೂಡ ಖುಷಿಯಿಂದ ಹೇಳಿಕೊಂಡಿದ್ದರು. ಹೌದು ಈ ಚಿತ್ರದ ಶೂಟಿಂಗ್ ನಲ್ಲಿ ಪಾಲ್ಗೊಳ್ಳುವ ಮುನ್ನವೇ, ಇನ್ನೊಂದು ಸಿಹಿಸುದ್ದಿಯನ್ನು ನಟಿ ಮೇಘಾ ಶೆಟ್ಟಿಯವರು ಅಭಿಮಾನಿಗಳ ಹತ್ತಿರ ಹಂಚಿಕೊಂಡಿದ್ದಾರೆ ಎಂದು ತಿಳಿದುಬಂದಿದೆ. 

Actress-Megha-Shetty

ಹೌದು ಕನ್ನಡ ರ್ಯಾಪರ್ ಚಂದನ್ ಶೆಟ್ಟಿ ಅವರ ಮುಂದಿನ, ಹೌದು ನೋಡು ಶಿವ ಎನ್ನುವ ಆಲ್ಬಮ್ ಸಾಂಗ್ ಅಲ್ಲಿ ನಟಿ ಮೇಘಾ ಶೆಟ್ಟಿ ಅವರು ವಿಶೇಷ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರಂತೆ. ಈ ಆಲ್ಬಮ್ ಸಾಂಗ್ ಗೆ, ಈಗಾಗಲೇ ನಿರ್ಮಾಪಕರು ಮೂವತ್ತು ಲಕ್ಷ ಹಣವನ್ನು ಹೂಡಿಕೆ ಮಾಡಲು ಮುಂದಾಗಿದ್ದು, ನಟಿ ಮೇಘಾ ಶೆಟ್ಟಿ ಅವರನ್ನು ಈ ಹಾಡಿನ ಮೂಲಕ ಆಲ್ಬಂ ಲೋಕಕ್ಕೆ ಪರಿಚಯ ಮಾಡಲಿದ್ದಾರಂತೆ. ಮತ್ತು ಮೇಘಾ ಶೆಟ್ಟಿ ಅವರಿಗೆ, ಇನ್ನಷ್ಟು ಹೊಸ ಹೊಸ ಪ್ರಯತ್ನದ ಆಫರುಗಳು ಸಿಗಲಿ ಎಂಬುದಾಗಿ ಹೇಳಿ ಸೋಶಿಯಲ್ ಮೀಡಿಯಾದಲ್ಲಿ ನಟಿಯ ಕೆಲ ಅಭಿಮಾನಿಗಳು ಹಾರೈಸುತ್ತಿದ್ದಾರೆ. ಜೊತೆಗೆ ಶುಭಕೋರುತ್ತಿದ್ದಾರೆ ಎಂದು ತಿಳಿದುಬಂದಿದೆ. ಹೌದು ಈ ಮೇಲಿನ ಮಾಹಿತಿಯ ಬಗ್ಗೆ, ನಿಮ್ಮ ಅನಿಸಿಕೆ ಕಾಮೆಂಟ್ ಮಾಡಿ ತಿಳಿಸಿ. ಜೊತೆಗೆ ಶೇರ್ ಕೂಡ ಮಾಡಿ ಧನ್ಯವಾದಗಳು…

ನಿಮ್ಮ ಸ್ನೇಹಿತರಿಗೆ ಮತ್ತು ಫೇಸ್ಬುಕ್ ಗ್ರೂಪ್ ಗೆ ಶೇರ ಮಾಡಿ...
  •  
  •  
  •  
  •  
  •  
  •  
  •