ತಮಿಳು ಮತ್ತು ದಕ್ಷಿಣ ಭಾರತ ಚಿತ್ರರಂಗದ ಎವರ್ ಗ್ರೀನ್ ಬ್ಯೂಟಿ ಮೀನಾ ತಮ್ಮ ಮುಂಬರುವ ಚಿತ್ರಗಳಾದ  ‘ಅನ್ನಾಥೆ’ ಮತ್ತು ‘ದೃಶ್ಯಂ 2’ನಲ್ಲಿ ನಟಿಸುತ್ತಿದ್ದಾರೆ. ‘ಅನ್ನಾಥೆ’ ಆಕ್ಷನ್ ಚಿತ್ರವಾಗಿದ್ದು, ಶಿವ ಬರೆದು ನಿರ್ದೇಶಿಸಿದ್ದಾರೆ.  ಸನ್ ಪಿಕ್ಚರ್ಸ್ ಬ್ಯಾನರ್ ಅಡಿಯಲ್ಲಿ ಕಲಾನಿತಿ ಮಾರನ್ ನಿರ್ಮಿಸಿದ್ದಾರೆ. ಈ ಚಿತ್ರದಲ್ಲಿ ರಜನಿಕಾಂತ್, ಮೀನಾ, ಖುಷ್ಬು, ಕೀರ್ತಿ ಸುರೇಶ್, ನಯನತಾರಾ, ಪ್ರಕಾಶ್ ರಾಜ್ ಮತ್ತು ಜಾಕಿ ಶ್ರಾಫ್ ನಟಿಸಿದ್ದಾರೆ. ಚಿತ್ರಕ್ಕೆ ಸಂಗೀತವನ್ನು ಡಿ. ಇಮ್ಮನ್ ಸಂಯೋಜಿಸಲಿದ್ದು, ಛಾಯಾಗ್ರಹಣ ಮತ್ತು ಎಡಿಟಿಂಗ್ ಅನ್ನು ಕ್ರಮವಾಗಿ ವೆಟ್ರಿ ಮತ್ತು ರುಬೆನ್ ನಿರ್ವಹಿಸುತ್ತಿದ್ದಾರೆ. ಈ ಚಿತ್ರದ ಮೂಲಕ ನಟಿ ಮೀನಾ ಕಾಲಿವುಡ್’ಗೆ ಪುನರಾಗಮನ ಮಾಡುತ್ತಿದ್ದಾರೆ.

Actress-Meena

ಇನ್ನು’ದೃಶ್ಯಂ 2′ ಚಿತ್ರದಲ್ಲಿ ಮಲಯಾಳಂ ಸೂಪರ್‌ ಸ್ಟಾರ್ ಮೋಹನ್‌ಲಾಲ್  ಜೋಡಿಯಾಗಿ ಮೀನಾ ನಟಿಸುತ್ತಿದ್ದು, ಇದನ್ನು ಜೀತು ಜೋಸೆಫ್ ನಿರ್ದೇಶನ ಮಾಡುತ್ತಿದ್ದಾರೆ. ಈ ಚಿತ್ರದ ಮೊದಲ ಭಾಗ 2013 ರಲ್ಲಿ ಬಿಡುಗಡೆಯಾಗಿದ್ದು, ಪ್ರೇಕ್ಷಕರಿಂದ ಭಾರಿ ಮೆಚ್ಚುಗೆ ಪಡೆಯಿತು. ಈ ವರ್ಷದ ಸೆಪ್ಟೆಂಬರ್‌ನಲ್ಲಿ ‘ದೃಶ್ಯಂ 2’ ಚಿತ್ರದ ಚಿತ್ರೀಕರಣ ಆರಂಭವಾಗಿದೆ. ದೃಶ್ಯಂ ಮೊದಲನೆಯ ಭಾಗ ಮಾಲಿವುಡ್’ನಲ್ಲಿ ಭಾರಿ ಯಶಸ್ಸು ಕಂಡ ನಂತರ, ಇದನ್ನು ತಮಿಳು, ತೆಲುಗು, ಹಿಂದಿ ಮತ್ತು ಕನ್ನಡ ಭಾಷೆಗಳಲ್ಲಿ ನಿರ್ಮಿಸಲಾಯಿತು.

ಅಂದಹಾಗೆ ನ್ಯೂಸ್ ಪ್ರೆಸೆಂಟರ್, ತೆಲುಗು ಬಿಗ್ ಬಾಸ್ ಸೀಸನ್ 4 ಸ್ಪರ್ಧಿ ದೇವಿ ನಾಗವಲ್ಲಿ ಇತ್ತೀಚೆಗೆ ಸಸಿ ನೆಟ್ಟರು. ಆ ನಂತರ ಗ್ರೀನ್ ಇಂಡಿಯಾ ಚಾಲೆಂಜ್ ಅಭಿಯಾನದಡಿಯಲ್ಲಿ ಮೀನಾ ಅವರನ್ನು ಟ್ಯಾಗ್ ಮಾಡಿದ್ದಾರೆ.

Actress-Meena

‘ಬಿಗ್ ಬಾಸ್ 4’ ಸ್ಪರ್ಧಿಯ ಈ ಗ್ರೀನ್ ಇಂಡಿಯಾ ಚಾಲೆಂಜ್​ ಅನ್ನು ಸ್ವೀಕರಿಸಿದ ಮೀನಾ ತಕ್ಷಣವೇ ತಮ್ಮ ಮನೆಯ ತೋಟದಲ್ಲಿ ಸಸಿಗಳನ್ನು ನೆಟ್ಟು, ಈ ಫೋಟೋಗಳನ್ನು  ಪೋಸ್ಟ್ ಮಾಡಿದರು. ನಂತರ  ಗ್ರೀನ್ ಇಂಡಿಯಾ ಅಭಿಯಾನ ಆರಂಭಿಸಿದ ಸಂಸದ ಸಂತೋಷ್ ಕುಮಾರ್ ಅವರನ್ನು ಸಹ ಶ್ಲಾಘಿಸಿದರು.

https://youtu.be/5wRzFdKVNV0

ಇತ್ತೀಚೆಗೆ ಟಾಲಿವುಡ್ ಸೂಪರ್‌ಸ್ಟಾರ್ ಮಹೇಶ್ ಬಾಬು ಅವರು ದಳಪತಿ ವಿಜಯ್ ಅವರಿಗೆ ಗ್ರೀನ್ ಇಂಡಿಯಾ ಚಾಲೆಂಜ್‌’ಗೆ ನಾಮನಿರ್ದೇಶನ ಮಾಡಿದರು. ನಂತರ ವಿಜಯ್ ಅವರು ತಮ್ಮ ಮನೆಯಲ್ಲಿ ಗಿಡ ನೆಟ್ಟು, ಆ ಚಿತ್ರವನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದರು. ಈ ಇಬ್ಬರು ಸ್ಟಾರ್’ಗಳ ಈ ಸಂವಹನವು ಅಂತರ್ಜಾಲದಲ್ಲಿ ಆಗ ನಟ್ಟಿಗರ ಗಮನಸೆಳೆದಿತ್ತು.

ನಿಮ್ಮ ಸ್ನೇಹಿತರಿಗೂ/ಫೇಸ್ಬುಕ್ ಗ್ರೂಪ್ ಗೆ ಶೇರ್ ಮಾಡಿ...
  •  
  •  
  •  
  •  
  •  
  •  
  •  
  •