ನಿತ್ಯಾನಂದ ಸ್ವಾಮಿ ಬಗ್ಗೆ ನಾವೆಲ್ಲರೂ ಸಾಕಷ್ಟು ಕೇಳಿದ್ದೇವೆ. ಭಾರತದಿಂದ ಹೊರಹೋಗಿರುವ ಅವರು, ಇತ್ತೀಚೆಗೆ ಕೈಲಾಸ ಎಂಬ ತಮ್ಮದೇ ದೇಶವನ್ನು ಕಂಡುಕೊಂಡಿದ್ದಾರೆ ಎನ್ನುವುದು ದೊಡ್ಡ ಸುದ್ದಿಯಾಗಿತ್ತು. ಈ ವ್ಯಕ್ತಿ ಆಧ್ಯಾತ್ಮಿಕವಾಗಿ ಹೆಸರು ಮಾಡಿದ್ದರು. ಆದರೆ, ನಿತ್ಯಾನಂದ ಸ್ವಾಮಿಯ ರಾಸಲೀಲೆ ವಿಡಿಯೋಗಳು ಹೊರಬಂದ ನಂತರ ಆತನ ಮೇಲಿದ್ದ ಒಳ್ಳೆ ಅಭಿಪ್ರಾಯಗಳು ಜನರಿಂದ ದೂರವಾಗಿತ್ತು. ಆದರೂ ಈ ವ್ಯಕ್ತಿಯ ಅನುಯಾಯಿಗಳು ಕಡಿಮೆಯಾಗಿಲ್ಲ. ಭಾರತ ಮತ್ತು ಅಮೆರಿಕಾದಲ್ಲಿ ಇವರ ಆಶ್ರಮಗಳಿವೆ. ಕೆಲವು ವರ್ಷಗಳ ಹಿಂದೆ ಆಶ್ರಮದ ರೂಮಿನಲ್ಲಿ ಇಬ್ಬರು ಹೆಣ್ಣುಮಕ್ಕಳ ಜೊತೆ ಇದ್ದದ್ದನ್ನು ನಿತ್ಯಾನಂದರ ಕಾರು ಚಾಲಕ ವಿಡಿಯೋ ಚಿತ್ರೀಕರಣ ಮಾಡಿದ್ದರು. ಈ ವಿಡಿಯೋದಲ್ಲಿ ನಿತ್ಯಾನಂದ ಅವರ ಜೊತೆ ಇದ್ದ ಇಬ್ಬರಲ್ಲಿ ಒಬ್ಬರು ನಟಿ ರಂಜಿತಾ ಎಂದು ಗುರುತಿಸಲಾಗಿತ್ತು. ಈ ವಿಡಿಯೋವನ್ನು ಸನ್ ಟಿವಿಯಲ್ಲಿ ಟೆಲಿಕಾಸ್ಟ್ ಮಾಡಿ, ನಿತ್ಯಾನಂದನ ನಿಜ ಸ್ವರೂಪವನ್ನು ತೋರಿಸಲಾಗಿತ್ತು.

actress-kausalya

ನಟಿ ರಂಜಿತಾ ನಂತರ ಇದೀಗ ಕನ್ನಡದ ಮತ್ತೊಬ್ಬ ನಟಿ ನಿತ್ಯಾನಂದ ಸ್ವಾಮಿಯ ಶಿಷ್ಯೆಯಾಗಿದ್ದಾರೆ. ಆ ನಟಿ ಮತ್ಯಾರು ಅಲ್ಲ, ಬೆಂಗಳೂರಿನಲ್ಲಿ ಹುಟ್ಟಿ ತಮಿಳು, ತೆಲುಗು, ಕನ್ನಡ ಮತ್ತು ಕೆಲವು ಮಲಯಾಳಂ ಸಿನಿಮಾಗಳಲ್ಲೂ ನಟಿಸಿ ಜನಪ್ರಿಯತೆ ಪಡೆದಿರುವ ನಟಿ ಕೌಸಲ್ಯ. ಇವರು ಹುಟ್ಟಿದ್ದು ಬೆಂಗಳೂರಿನಲ್ಲಿ. ನಟನೆಗು ಮೊದಲು ಮಾಡೆಲಿಂಗ್ ಮಾಡುತ್ತಿದ್ದರು ನಟಿ ಕೌಸಲ್ಯ. ಮಲಯಾಳಂ ಸಿನಿಮಾದಲ್ಲಿ ನಟಿಸುವ ಮೂಲಕ ನಾಯಕಿಯಾದರು. ನಂತರ ಹಲವಾರು ತಮಿಳು ಸಿನಿಮಾಗಳಲ್ಲಿ ನಟಿಸಿದರು. ತೆಲುಗು ಚಿತ್ರರಂಗದಲ್ಲೂ ಜನಪ್ರಿಯತೆ ಪಡೆದರು. ಕನ್ನಡದಲ್ಲಿ ಬದ್ರಿ, ಗೌತಮ್ ಸೇರಿದಂತೆ ಕೆಲವು ಸಿನಿಮಾಗಳಲ್ಲಿ ನಟಿಸಿದ್ದಾರೆ.

ಈ ನಟಿಗೆ ಬಹಳ ಹಿಮ್ಮಡಿ ನೋವು ಕಾಣಿಸಿಕೊಂಡು, ಯಾವ ವೈದ್ಯರ ಬಳಿ ತೋರಿಸಿದರು ಕಡಿಮೆ ಆಗಲಿಲ್ಲವಂತೆ. ನಂತರ ಸ್ನೇಹಿತೆಯೊಬ್ಬರು ನಿತ್ಯಾನಂದ ಅವರ ಆಶ್ರಮಕ್ಕೆ ಹೋಗಲು ಸೂಚನೆ ನೀಡಿದರಂತೆ. ಸ್ನೇಹಿತೆಯ ಸೂಚನೆಯಂತೆ ನಿತ್ಯಾನಂದ ಸ್ವಾಮಿ ಅವರ ಆಶ್ರಮಕ್ಕೆ ಹೋಗಿ, ಅಲ್ಲಿ ಹೀಲಿಂಗ್ ಥೆರಪಿ ತೆಗೆದುಕೊಳ್ಳಲು ಆರಂಭಿಸಿದರಂತೆ ನಟಿ ಕೌಸಲ್ಯ. ಹೀಲಿಂಗ್ ಥೆರಪಿ ಶುರು ಮಾಡಿದ ನಂತರ ಅವರಿಗಿದ್ದ ಹಿಮ್ಮಡಿ ನೋವು ಕಡಿಮೆ ಆಗುತ್ತಿದೆಯಂತೆ. ಈ ಮೂಲಕ ನಟಿ ಕೌಸಲ್ಯ ಕೂಡ ನಿತ್ಯಾನಂದ ಸ್ವಾಮಿಯ ಶಿಷ್ಯೆಯಾಗಿದ್ದಾರೆ. ನಟಿ ಕೌಸಲ್ಯ ಅನೈತಿಕ ಚಟುವಟಿಕೆಗಳಿಂದಾಗಿ ವಿವಾದ ಸೃಷ್ಟಿಸಿದ್ದ ಆಶ್ರಮ ಮತ್ತು ಆ ಗುರುಗಳ ಶಿಷ್ಯೆಯಾಗಿರುವುದು ಎಲ್ಲರಿಗೂ ಆಶ್ಚರ್ಯ ಉಂಟುಮಾಡಿದೆ. ಸದ್ಯ ಈ ಸುದ್ದಿ ದಕ್ಷಿಣ ಭಾರತದ ಚಿತ್ರ ರಂಗದಲ್ಲಿ ಭಾರಿ ಚರ್ಚೆಗೆ ಈಡಾಗಿದೆ.

ನಿಮ್ಮ ಸ್ನೇಹಿತರಿಗೆ ಮತ್ತು ಫೇಸ್ಬುಕ್ ಗ್ರೂಪ್ ಗೆ ಶೇರ ಮಾಡಿ...
DMCA.com Protection Status
error: Fuck you !!