ದಕ್ಷಿಣ ಭಾರತ ಚಿತ್ರರಂಗದ ಪಾಲಿಗೆ 80ರ ದಶಕ ಗೋಲ್ಡನ್ ಎರಾ ಎಂದರೆ ತಪ್ಪಾಗಲಾರದು. 80ರ ದಶಕದಲ್ಲಿ ಹಲವಾರು ಪ್ರತಿಭಾನ್ವಿತ ಕಲಾವಿದರು ಚಿತ್ರರಂಗಕ್ಕೆ ಪಾ’ದಾರ್ಪಣೆ ಮಾಡಿದ್ದಾರೆ. ನಟನೆ ಮೂಲಕ ಹೊಸ ಛಾ’ಪು ಮೂಡಿಸಿ ತಮ್ಮದೇ ಆದ ಅಭಿಮಾನಿ ಬಳಗವನ್ನು ಸಂಪಾದಿಸಿದ್ದಾರೆ ಹಲವಾರು ಕಲಾವಿದರು. ಅವರಲ್ಲಿ, ಎಂದಿಗೂ ಮರೆಯದ ನಟಿಯರಲ್ಲಿ ಒಬ್ಬರು ಗೀತ. ಗೀತಾ ಅವರ ಜೀವನ ಹೇಗಿತ್ತು ? ಈಗ ನಟಿ ಗೀತಾ ಎಲ್ಲಿದ್ದಾರೆ ? ತಿಳಿಯಲು ಮುಂದೆ ಓದಿ.ಮೂಲತಃ ಬೆಂಗಳೂರಿನವರಾದ ನಟಿ ಗೀತ, ಹು’ಟ್ಟಿದ್ದು ಜುಲೈ 18, 1962 ರಲ್ಲಿ.

7ನೇ ತರಗತಿ ಓದುವಾಗ, ಭೈರವಿ ಎಂಬ ತಮಿಳು ಸಿನಿಮಾದಲ್ಲಿ ರಾಜಿನಿಕಾಂತ್ ಅವರಿಗೆ ತಂಗಿ ಪಾತ್ರದಲ್ಲಿ ನಟಿಸುವ ಮೂಲಕ ಸಿನಿರಂಗಕ್ಕೆ ಕಾಲಿಟ್ಟರು ನಟಿ ಗೀತಾ. ಆ ನಂತರ ಹಲವಾರು ತಮಿಳು, ಕನ್ನಡ, ಮಲಯಾಳಂ ಹಾಗೂ ತೆಲುಗು ಸಿನಿಮಾಗಳಲ್ಲಿ ನಟಿಸಿದರು. ಕನ್ನಡದಲ್ಲಿ ಡಾ.ರಾಜ್ ಕುಮಾರ್, ಸಾಹ’ಸಸಿಂ’ಹ ವಿಷ್ಣುವರ್ಧನ್, ಅನಂತ್ ನಾಗ್, ಅಂಬರೀಶ್ ರಂತಹ ಮೇರು ನಟರ ಜೊತೆ ನಟಿಸಿದ ಹೆಗ್ಗಳಿಕೆ ಗೀತಾ ಅವರದ್ದು. ಶ್ರುತಿ ಸೇರಿದಾಗ, ಆಕಸ್ಮಿಕ, ಧ್ರುವ ತಾರೆ, ಎರಡು ರೇಖೆಗಳು, ದೇವ’ತಾ ಮ’ನುಷ್ಯ, ಮಿ’ಥಿಲೆಯ ಸೀತೆಯರು, ಗ’ರುಡ ರೇಖೆ, ನಾ’ಗಿಣಿ ಸೇರಿದಂತೆ ಹಲವಾರು ಸೂಪರ್ ಹಿಟ್ ಸಿನಿಮಾಗಳಲ್ಲಿ ನಟಿಸಿದ್ದಾರೆ. ಅಂದಿನ ಕಾಲದಲ್ಲಿ ನೋಡಲು ಬಹಳ ಸುಂದರವಾಗಿದ್ದ ನಟಿಯರಲ್ಲಿ ಒಬ್ಬರು ಗೀತಾ. ಕನ್ನಡ ಮಾತ್ರವಲ್ಲದೆ, ತಮಿಳು ತೆಲುಗು ಹಾಗೂ ಮಲಯಾಳಂ ಸಿನಿಮಾಗಳಲ್ಲಿ ಬಹಳ ಜನಪ್ರಿಯತೆ ಪಡೆದವರು.
1997 ರಲ್ಲಿ ವಾಸನ್ ಎಂಬ ಚಾರ್ಟಡ್ ಅಕೌಂಟೆಂಟ್ ರೊಡನೆ ವಿವಾಹವಾದರು, ನಂತರ ಪತಿಯೊಡನೆ ನ್ಯೂಜೆರ್ಸಿಗೆ ಶಿಫ್ಟ್ ಆದರು ನಟಿ ಗೀತಾ. ಮದುವೆಯ ನಂತರ ಒಂದು ಬ್ರೇ’ಕ್ ತೆಗೆದುಕೊಂಡರು, ಈ ದಂಪತಿಗೆ ಒಬ್ಬ ಮ’ಗನಿದ್ದಾನೆ. ಕೆಲವು ವರ್ಷಗಳ ಬ್ರೇ’ಕ್ ನಂತರ, ಕೆಲವು ತಮಿಳು ಧಾರಾವಾಹಿಗಳಲ್ಲಿ ನಟಿಸುವ ಮೂಲಕ ಕಿರುತೆರೆಯಲ್ಲೂ ಖ್ಯಾತಿ ಪಡೆದರು. ಬೇರೆ ಭಾಷೆಯಲ್ಲಿ ನಟಿಸಿದರೂ ಸಹ ಕನ್ನಡದಲ್ಲಿ ಗೀತಾ ಅವರು ಬಹಳಷ್ಟು ವರ್ಷಗಳ ಕಾಲ ನಟಿಸಲಿಲ್ಲ.ಇತ್ತೀಚೆಗೆ ಹಳ್ಳಿ ಪಂಚಾಯಿತಿ ಎಂಬ ಕನ್ನಡ ಸಿನಿಮಾದಲ್ಲಿ ನಟಿಸುವ ಮೂಲಕ ಬಹಳ ವರ್ಷಗಳ ನಂತರ ಕನ್ನಡಕ್ಕೆ ಮತ್ತೆ ಗೀತಾ ಅವರ ರೀಎಂಟ್ರಿ ಆಯಿತು. ಇಷ್ಟು ವರ್ಷಗಳ ಕಾಲ ನಟಿ ಗೀತಾ ಕನ್ನಡ ಸಿನಿಮಾಗಳಲ್ಲಿ ಏಕೆ ನಟಿಸಿಲ್ಲ ಎಂಬ ಪ್ರಶ್ನೆಗೆ ಉತ್ತರ ಏನೆಂದರೆ, ಬೇರೆ ಭಾಷೆಗಳಲ್ಲಿ ಸಿಕ್ಕಂತಹ ಒಳ್ಳೆಯ ಪಾತ್ರಗಳು ನಟಿ ಗೀತಾರಿಗೆ ಕನ್ನಡದಲ್ಲಿ ಸಿಗಲಿಲ್ಲ. ಒಳ್ಳೆಯ ಪಾತ್ರ ಸಿಕ್ಕರೆ ಖಂಡಿತವಾಗಿಯೂ ಅಮೆರಿಕಾದಿಂದ ಬಂದು ನಟಿಸುತ್ತೇನೆ ಎನ್ನುತ್ತಾರೆ. ಕನ್ನಡಕ್ಕೆ ಕೀರ್ತಿ ತಂದ ಈ ಹಿರಿಯ ನಟಿಯರಿಗೆ ಕನ್ನಡ ನಿರ್ದೇಶಕರು ಹಾಗೂ ನಿರ್ಮಾಪಕರು ಒಳ್ಳೆಯ ಪಾತ್ರಗಳನ್ನು ರಚಿಸಬೇಕು.ಈ ಸುದ್ದಿ ಇಷ್ಟವಾದಲ್ಲಿ ಇದನ್ನು ಲೈಕ್ ಮಾಡಿ ಶೇರ್ ಮಾಡಿ ಹಾಗು ನಿಮ್ಮ ಅನಿಸಿಕೆ ಅಭಿಪ್ರಾಯ ಗಳನ್ನೂ ತಪ್ಪದೆ ಕಾಮೆಂಟ್ ಮೂಲಕ ನಮಗೆ ತಿಳಿಸಿರಿ. ಕನ್ನಡ ಚಿತ್ರಗಳ ಬಗ್ಗೆ, ಕನ್ನಡ ನಾಡಿನ ಬಗ್ಗೆ, ಕನ್ನಡ ದರವಾಹಯಿಗಳ ಬಗ್ಗೆ ಎಲ್ಲಾ ಮಾಹಿತಿಗಾಗಿ ನಮ್ಮ ಪೇಜನ್ನು ಇಂದೇ ಫಾಲೋ ಮಾಡಿ.

ನಿಮ್ಮ ಸ್ನೇಹಿತರಿಗೂ/ಫೇಸ್ಬುಕ್ ಗ್ರೂಪ್ ಗೆ ಶೇರ್ ಮಾಡಿ...
  •  
  •  
  •  
  •  
  •  
  •  
  •  
  •