ದಕ್ಷಿಣ ಭಾರತ ಚಿತ್ರರಂಗದ ಪಾಲಿಗೆ 80 ಹಾಗೂ 90ರ ದಶಕ ಗೋಲ್ಡನ್ ಎರಾ ಎಂದರೆ ತಪ್ಪಾಗಲಾರದು. 80ರ ದಶಕದಲ್ಲಿ ಹಲವಾರು ಪ್ರತಿಭಾನ್ವಿತ ಕಲಾವಿದರು ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ್ದಾರೆ. ನಟನೆ ಮೂಲಕ ಹೊಸ ಛಾಪು ಮೂಡಿಸಿ ತಮ್ಮದೇ ಆದ ಅಭಿಮಾನಿ ಬಳಗವನ್ನು ಸಂಪಾದಿಸಿದ್ದಾರೆ ಹಲವಾರು ಕಲಾವಿದರು. ಅವರಲ್ಲಿ, ಎಂದಿಗೂ ಮರೆಯದ ನಟಿಯರಲ್ಲಿ ಒಬ್ಬರು ಚಾರುಲತಾ. ಮುಗ್ಧ ನೋಟ ಮತ್ತು ನಟನೆಯಿಂದಲೇ ಜನರ ಮನಗೆದ್ದವರು ಚಾರುಲತಾ. ದಕ್ಷಿಣ ಭಾರತದಲ್ಲಿ, ಅದರಲ್ಲೂ ಕನ್ನಡ ಚಿತ್ರರಂಗದಲ್ಲಿ ಹೆಚ್ಚಿನ ಯಶಸ್ಸು ಗಳಿಸಿದವರು ಚಾರುಲತಾ. ಇವರು ಮೂಲತಃ ಪಂಜಾಬ್ ನವರು. ಬೆಳೆದಿದ್ದು ಹಾಗೂ ವಿದ್ಯಾಭ್ಯಾಸ ಮಾಡಿದ್ದು ಕೇರಳದಲ್ಲಿ. ಇವರ ನಿಜವಾದ ಹೆಸರು ಸೋನಿಯಾ. ಸಿನಿಮಾದಲ್ಲಿ ನಟಿಸುವ ಮೊದಲು ಮಾಡೆಲ್ ಆಗಿದ್ದರು. ಮಲಬಾರ್ ಜ್ಯುವೆಲರ್ಸ್, ಅಯೋಧ್ಯ ಜ್ಯುವೆಲರ್ಸ್, ಸ್ಯಾರಿ ಕೇಂದ್ರ, ತ್ರಿವೇಣಿ ಅಗರಬತ್ತಿ, ರೂಪಮ್ ಸ್ಯಾರೀಸ್ ಸೇರಿದಂತೆ ಹಲವಾರು ಬ್ರಾಂಡ್ ಗಳಿಗೆ ಮಾಡೆಲ್ ಆಗಿದ್ದರು. ಇವರನ್ನು ಗುರುತಿಸಿ ನಟನೆಗೆ ಅವಕಾಶ ನೀಡಿದ್ದು ನಿರ್ದೇಶಕ ಮತ್ತು ಸಂಗೀತ ನಿರ್ದೇಶಕ ವಿ.ಮನೋಹರ್ ಅವರು.

ವಿ.ಮನೋಹರ್ ಅವರು ನಿರ್ದೇಶಿಸಿದ ಓ ಮಲ್ಲಿಗೆ ಸಿನಿಮಾದಲ್ಲಿ ನಟಿಸುವ ಮೂಲಕ ಚಿತ್ರರಂಗಕ್ಕೆ ಕಾಲಿಟ್ಟರು ಸೋನಿಯಾ. ಓ ಮಲ್ಲಿಗೆ ಸಿನಿಮಾ ಮೂಲಕ ಇವರ ಹೆಸರು ಚಾರುಲತಾ ಆಯಿತು. ರಮೇಶ್ ಅರವಿಂದ್ ಅವರಿಗೆ ನಾಯಕಿಯಾಗಿ ಓ ಮಲ್ಲಿಗೆ ಸಿನಿಮಾದಲ್ಲಿ ನಟಿಸಿದ್ದರು. ಈ ಸಿನಿಮಾ ಸಕತ್ ಯೆಶಸ್ಸನ್ನು ಕಂಡಿತ್ತು! ನಂತರ ಹ್ಯಾಟ್ರಿಕ್ ಹೀರೋ ಶಿವ ರಾಜ್ ಕುಮಾರ್ ಅವರೊಡನೆ ಜೋಡಿ ಹಕ್ಕಿ ಸಿನಿಮಾದಲ್ಲಿ ನಟಿಸಿ ಇನ್ನಷ್ಟು ಜನಪ್ರಿಯತೆ ಪಡೆದರು. ಮುಂದೆ ರಮೇಶ್ ಅರವಿಂದ್ ಅವರೊಡನೆ ಮದುವೆ ಸಿನಿಮಾದಲ್ಲಿ ನಟಿಸಿದರು. ಮೂರು ಯೆಶಸ್ಸು ಕಂಡ ಸಿನಿಮಾಗಳಲ್ಲಿ ನಟಿಸಿ ಕರ್ನಾಟಕದ ಮನೆಮಾತಾದರು.

actress-charulata

ನಂತರ ಜಗತ್ ಕಿಲಾಡಿ, ಮಾತಿನ ಮಲ್ಲ, ಸುವ್ವಿ ಸುವ್ವಲಾಲಿ, ಹಬ್ಬ, ಅಂಡರ್ ವರ್ಲ್ಡ್ ಸೇರಿದಂತೆ ಹಲವಾರು ಕನ್ನಡ ಚಿತ್ರಗಳಲ್ಲಿ ನಟಿಸಿ, ಕನ್ನಡ ಚಿತ್ರರಂಗದ ಟಾಪ್ ಹೀರೋಯಿನ್ ಗಳ ಪಟ್ಟಿಗೆ ಸೇರಿದರು. ಕನ್ನಡದಲ್ಲಿ ಒಂದು ಕಾಲದಲ್ಲಿ ಸಾಕಷ್ಟು ಸಿನಿಮಾಗಳನ್ನು ಮಾಡಿ, ಕನ್ನಡದ ಎಲ್ಲಾ ಸ್ಟಾರ್ ಗಳ ಜೊತೆ ನಟಿಸಿ ಟಾಪ್ ನಲ್ಲಿ ಇದ್ದರು ನಟಿ ಚಾರುಲತಾ! ಇದಲ್ಲದೆ ಆಕಾಲಕ್ಕೆ ನಟಿ ಚಾರುಲತಾ ಅವರು ಅತೀ ಹೆಚ್ಚು ಸಂಭಾವನೆಯನ್ನು ಪಡೆಯುತ್ತಿದ್ದರು. ಚಾರುಲತಾ ಒಬ್ಬ ಅದ್ಭುತ ಡ್ಯಾನ್ಸರ್ ಕೂಡ. ಮುಂದಿನ ದಿನಗಳಲ್ಲಿ ಕನ್ನಡ ಮಾತ್ರವಲ್ಲದೆ ತಮಿಳು, ತೆಲುಗು ಮತ್ತು ಮಲಯಾಳಂ ಸಿನಿಮಾಗಳಲ್ಲಿ ಕೂಡ ನಟಿಸಲು ಆರಂಭಿಸಿದರು. ಚಾರುಲತಾ ಅವರು ಈಗ ಏನು ಮಾಡುತ್ತಿದ್ದಾರೆ ಗೊತ್ತಾ ? ತಿಳಿಯಲು ಮುಂದೆ ಓದಿ..

ಕೆಲ ವರ್ಷಗಳ ಕಾಲ ಸಿನಿ ರಂಗದಿಂದ ಬ್ರೇ-ಕ್ ತೆಗೆದುಕೊಂಡಿದ್ದ ಚಾರುಲತಾ ಆಗೊಮ್ಮೆ ಈಗೊಮ್ಮೆ ಒಂದೊಂದು ಸಿನಿಮಾಗಳಲ್ಲಿ ನಟಿಸುತ್ತಿದ್ದರು. 2017 ರಲ್ಲಿ ತೆರೆಕಂಡ ಚಕ್ರವರ್ತಿ ಸಿನಿಮಾದಲ್ಲಿ ಪೋಷಕ ಪಾತ್ರದಲ್ಲಿ ನಟಿಸುವ ಮೂಲಕ ಕನ್ನಡ ಚಿತ್ರರಂಗಕ್ಕೆ ಕ-ಮ್ ಬ್ಯಾಕ್ ಮಾಡಿದ್ದರು. ಚಕ್ರವರ್ತಿ ಚಿತ್ರದಲ್ಲಿ ನಟಿ ಚಾರುಲತಾ ಅವರು ನಮ್ಮ ಡಿಬಾಸ್ ದರ್ಶನ್, ಕುಮಾರ್ ಬಂಗಾರಪ್ಪ ಅವರ ಜೊತೆ ನಟನೆ ಮಾಡಿದ್ದರು. ತಮ್ಮ ಅದ್ಭುತ ನಟನೆಯಿಂದ ಕರ್ನಾಟಕದ ಮನೆ ಮಾತಾಗಿರುವಾ ನಟಿ ಚಾರುಲತಾ ಅವರು ಡಿಬಾಸ್ ಅವರ ಚಕ್ರವರ್ತಿ ಚಿತ್ರದ ನಂತರ ಬೇರೆ ಯಾವುದೇ ಕನ್ನಡ ಚಿತ್ರಗಳಲ್ಲಿ ಕಾಣಿಸಿಕೊಂಡಿಲ್ಲ. ಇನ್ನು ಮುಂದಾದರು ಇವರು ಇನ್ನಷ್ಟು ಕನ್ನಡ ಸಿನಿಮಾಗಳಲ್ಲಿ ಇವರು ನಟಿಸಲಿ ಎಂಬುದು ಇವರ ಅಭಿಮಾನಿಗಳ ಆಸೆ.

ಸದ್ಯ ಕೆಲವೊಂದು ಮಲಯಾಳಂ ರಿಯಾಲಿಟಿ ಶೋಗಳಲ್ಲಿ ಗೆಸ್ಟ್ ಆಗಿ, ಜಡ್ಜ್ ಆಗಿ ಆಗಾಗ ಕಾಣಿಸಿಕೊಳ್ಳುತ್ತಾರೆ ಚಾರುಲತಾ. ಇದಲ್ಲದೆ ತಮ್ಮ ಕುಟುಂಬದ ಜೊತೆ, ಫ್ಯಾಮಿಲಿ ಲೈಫ್ ನಲ್ಲಿ ಬಹಳ ಬ್ಯುಸಿ ಇದ್ದಾರೆ ನಟಿ ಚಾರುಲತಾ. ಚಾರುಲತಾ ಅವರ ಕುಟುಂಬದ ಅಪರೂಪದ ಕ್ಷಣಗಳನ್ನು ನೀವು ಇಲ್ಲಿ ನೋಡಬಹುದು! ಈ ಸುದ್ದಿ ಇಷ್ಟ ವಾಗಿದ್ದಲ್ಲಿ ಇದನ್ನು ಲೈಕ್ ಮಾಡಿ ಶೇರ್ ಮಾಡಿ ಹಾಗು ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ತಪ್ಪದೆ ಕಾಮೆಂಟ್ ಮೂಲಕ ನಮಗೆ ತಿಳಿಸಿರಿ. ಕನ್ನಡ ಚಿತ್ರಗಳ ಬಗ್ಗೆ, ಕನ್ನಡ ನಟ ನಟಿಯರ ಬಗ್ಗೆ ಇನ್ನಷ್ಟು ಮಾಹಿತಿಗಳಿಗಾಗಿ ನಮ್ಮ ಪೇಜನ್ನು ಇಂದೇ ಫಾಲೋ ಮಾಡಿ.

ನಿಮ್ಮ ಸ್ನೇಹಿತರಿಗೆ ಮತ್ತು ಫೇಸ್ಬುಕ್ ಗ್ರೂಪ್ ಗೆ ಶೇರ ಮಾಡಿ...
DMCA.com Protection Status
error: Fuck you !!