ದಕ್ಷಿಣ ಭಾರತ ಚಿತ್ರರಂಗದ ಪಾಲಿಗೆ 70 ಮತ್ತು 80ರ ದಶಕ ಗೋಲ್ಡನ್ ಎರಾ ಎಂದರೆ ತಪ್ಪಾಗಲಾರದು. 80ರ ದಶಕದಲ್ಲಿ ಹಲವಾರು ಪ್ರತಿಭಾನ್ವಿತ ಕಲಾವಿದರು ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ್ದಾರೆ. ನಟನೆ ಮೂಲಕ ಹೊಸ ಛಾ-ಪು ಮೂಡಿಸಿ ತಮ್ಮದೇ ಆದ ಅಭಿಮಾನಿ ಬಳಗವನ್ನು ಸಂಪಾದಿಸಿದ್ದಾರೆ ಹಲವಾರು ಕಲಾವಿದರು. ಅವರಲ್ಲಿ, ಎಂದಿಗೂ ಮರೆಯದ ನಟಿಯರಲ್ಲಿ ಒಬ್ಬರು ನಟಿ ಭವ್ಯ. ಭವ್ಯ ಅವರು ಜನವರಿ 12, 1966 ರಲ್ಲಿ ಬೆಂಗಳೂರಿನಲ್ಲಿ ಜನಿಸಿದರು. 17 ವರ್ಷದವರಿದ್ದಾಗ 1983 ರಲ್ಲಿ ಚಿತ್ರರಂಗ ಪ್ರವೇಶಿಸಿದರು. ಮೊದಲ ಚಿತ್ರದಲ್ಲೇ ಕನ್ನಡ ಚಿತ್ರರಂಗದ ದಿಗ್ಗಜರಾದ ಶ್ರೀ ಸಿದ್ದಲಿಂಗಯ್ಯ ಅವರು ನಿರ್ದೇಶನ ಮಾಡಿದ ಪ್ರೇಮ ಪರ್ವ ಸಿನಿಮಾದಲ್ಲಿ ಅವರ ಮಗ ಮುರಳಿ ಅವರೊಡನೆ ನಟಿಸಿದರು. ನಂತರ ಅನೇಕ ಕನ್ನಡ ಸಿನಿಮಾಗಳಲ್ಲಿ ನಟಿಸುವ ಅವಕಾಶ ಭವ್ಯ ಅವರಿಗೆ ಸಿಕ್ಕಿತು.

ಪ್ರೇಮ ಪರ್ವ, ಫ್ರಾ-ಣ ಸ್ನೇಹಿತ, ನೀ ಬರೆದ ಕಾದಂಬರಿ, ಬಡ್ಡಿ ಬಂಗಾರಮ್ಮ, ಮತ್ತೆ ಹಾಡಿತು ಕೋಗಿಲೆ, ಹೃದಯ ಹಾಡಿತು, ಸಾಂಗ್ಲಿಯಾನ ಸೇರಿದಂತೆ ಹಲವಾರು ಯಶಸ್ವಿ ಸಿನಿಮಾಗಳ ನಾಯಕಿಯಾಗಿ ನಟಿಸಿದ್ದಾರೆ. 1985 ರಲ್ಲಿ ಸಾಹಸಸಿo-ಹ ವಿಷ್ಣುವರ್ಧನ್ ಅವರೊಡನೆ ನಟಿಸಿದ ನೀ ಬರೆದ ಕಾದಂಬರಿ ಸಿನಿಮಾ ಭವ್ಯ ಅವರ ಕೆರಿಯರ್ ನಲ್ಲಿ ದೊಡ್ಡ ಯೆಶಸ್ಸನ್ನು ಕಂಡಿತು. ನಂತರ ವಿಷ್ಣುವರ್ಧನ್ ಅವರೊಡನೆ ಹೃದಯ ಹಾಡಿತು, ಲಯನ್ ಜಗಪತಿ ರಾವ್, ಜನನಾಯಕ ಸೇರಿದಂತೆ ಹಲವಾರು ಸಿನಿಮಾಗಳಲ್ಲಿ ನಟಿಸಿ ವಿಷ್ಣುವರ್ಧನ್ ಹಾಗೂ ಭವ್ಯ ಅವರ ಜೋಡಿ ಫೇಮಸ್ ಜೋಡಿ ಎನಿಸಿಕೊಂಡಿತು. ಒಂದು ಕಾಲದಲ್ಲಿ ನಟಿ ಭವ್ಯ ಅವರು ಕನ್ನಡದ ಟಾಪ್ ಹೀರೋಯಿನ್ ಆಗಿ ಅತೀ ಹೆಚ್ಚು ಸಂಭಾವನೆಯನ್ನು ತೆಗೆದು ಕೊಳ್ಳುತ್ತಿದ್ದರು.

actress-bhavya

ರೆಬೆಲ್ ಸ್ಟಾರ್ ಅಂಬರೀಶ್ ಅವರೊಡನೆ ನಾಯಕಿಯಾಗಿ 6 ಸಿನಿಮಾಗಳಲ್ಲಿ ನಟಿಸಿದರು. ಕರಾಟೆ ಕಿಂಗ್ ಶಂಕರ್ ನಾಗ್ ಅವರೊಡನೆ ಸಾಂಗ್ಲಿಯಾನ ಸೀರೀಸ್ ನಲ್ಲಿ ನಾಯಕಿಯಾಗಿ ನಟಿಸಿ ಇನ್ನಷ್ಟು ಭರ್ಜರಿ ಯೆಶಸ್ಸು ನೀಡಿದರು. ಅನಂತ್ ನಾಗ್, ಕಾಶಿನಾಥ್ ಹಾಗೂ ಹೊಸ ನಟರಾದ ವಿನೋದ್ ಆಳ್ವ, ಚರಣ್ ರಾಜ್ , ಶಶಿ ಕುಮಾರ್ ಅವರೊಡನೆ ಕೂಡ ನಟಿಸಿದರು ಭವ್ಯ. ಕಡಿಮೆ ಸಮಯದಲ್ಲಿ 100ಕ್ಕು ಹೆಚ್ಚು ಸಿನಿಮಾಗಳಲ್ಲಿ ನಟಿಸಿದ ಹೆಗ್ಗಳಿಕೆ ಭವ್ಯ ಅವರದ್ದು. ಕನ್ನಡದ ಜೊತೆಗೆ ಕೆಲವು ತಮಿಳು ಸಿನಿಮಾಗಳು ಮತ್ತು ತೆಲುಗು ಸಿನಿಮಾಗಳಲ್ಲಿ ಕೂಡ ನಟಿಸಿದ್ದಾರೆ. ಆ ನಂತರ ಕೆಲ ಕಾಲ ಸಿನಿಮಾ ಜಗತ್ತಿನಿಂದ ದೂರ ಉಳಿದಿದ್ದರು ನಟಿ ಭವ್ಯ, ನಂತರ ಸುದ್ದಿಗೆ ಬಂದಿದ್ದು ತಮ್ಮ ಮದುವೆಯ ವಿಚಾರದ ಬಗ್ಗೆ! ಮುಂದೆ ಓದಿರಿ

ಬುರ್ಜ್ ಖಲೀಫಾ ಮೇಲೆ ಸುದೀಪ್ ಕಟೌಟ್ ಮೂರು ನಿಮಿಷ ಹಾಕಲು ಕೊಟ್ಟ ಹಣವೆಷ್ಟು ಗೊತ್ತಾ?

ಇವರ ವೈಯಕ್ತಿಕ ಜೀವನಕ್ಕೆ ಬಂದರೆ ಮುಖೇಶ್ ಪಾಟೀಲ್ ಎಂಬುವರೊಡನೆ ವಿವಾಹವಾದರು ಭವ್ಯ. ಇವರ ಪತಿ ಮುಂಬೈ ನಲ್ಲಿ ಹೋಟೆಲ್ ಉದ್ಯಮಿ. ಭವ್ಯ ಮುಖೇಶ್ ದಂಪತಿಗೆ ಒಬ್ಬ ಮುದ್ದಾದ ಮಗಳಿದ್ದಾಳೆ, ಅವರಿಗೆ ನಟನೆಯಲ್ಲಿ ಆಸಕ್ತಿಯಿಲ್ಲ. ವಿದೇಶದಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ. ಮದುವೆ ನಂತರ ಮುಂಬೈ ನಲ್ಲಿಯೇ ಸೆಟಲ್ ಆಗಿದ್ದಾರೆ ಭವ್ಯ. ಸದ್ಯ ನಟಿ ಭವ್ಯ ಅವರು ತಮ್ಮ ಪತಿ ಮುಖೇಶ್ ಪಾಟೀಲ್ ಹಾಗು ಮಗಳ ಜೊತೆ ಮುಂಬೈ ಯಲ್ಲಿ ಕುಟುಂಬದ ಜೊತೆ ಫ್ಯಾಮಿಲಿ ಲೈಫ್ ನಲ್ಲಿ ಬಹಳ ಬ್ಯುಸಿ ಆಗಿದ್ದರೆ. ನಟಿ ಭವ್ಯ ಅವರ ಪತಿ ಹಾಗು ಮಗಳ ಫೋಟೋಗಳನ್ನು ನೀವು ಇಲ್ಲಿ ನೋಡಬಹುದು!

2000 ಇಸವಿಯ ನಂತರ ಭವ್ಯ ಅವರು ಹೆಚ್ಚಾಗಿ ಸಿನಿಮಾಗಳಲ್ಲಿ ಕಾಣಿಸಿಕೊಂಡಿಲ್ಲ. ಆಗೊಮ್ಮೆ ಈಗೊಮ್ಮೆ ಪೋಷಕ ಪಾತ್ರಗಳಲ್ಲಿ ನಟಿಸುತ್ತಾರೆ. ಅಮೃತಧಾರೆ, ನನ್ನ ಪ್ರೀತಿಯ ಹುಡುಗಿ ಇವರು ಪೋಷಕ ಪಾತ್ರದಲ್ಲಿ ನಟಿಸಿದ ಸಿನಿಮಾಗಳಲ್ಲಿ ಕೆಲವು. ಇತ್ತೀಚಿನ ದಿನಗಳಲ್ಲಿ ಭವ್ಯ ಅವರು ಹೆಚ್ಚಾಗಿ ಸಿನಿಮಾಗಳಲ್ಲಿ ನಟಿಸುತ್ತಿಲ್ಲ, ಕೆಲವು ಸೀರಿಯಲ್ ಗಳಲ್ಲಿ ಅತಿಥಿ ಪಾತ್ರಗಳಲ್ಲಿ ನಟಿಸಿದ್ದಾರೆ. ಜೊತೆಗೆ ಕಲರ್ಸ್ ಕನ್ನಡ ವಾಹಿನಿಯ ಮಜಾ ಟಾಕೀಸ್ ಕಾರ್ಯಕ್ರಮದಲ್ಲಿ ಒಂದೆರಡು ಬಾರಿ ಬಂದಿದ್ದಾರೆ. ಈ ಸುದ್ದಿ ಇಷ್ಟವಾಗಿದ್ದಲ್ಲಿ ಇದನ್ನು ಲೈಕ್ ಮಾಡಿ ಶೇರ್ ಮಾಡಿ ಹಾಗು ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ತಪ್ಪದೆ ಕಾಮೆಂಟ್ ಮೂಲಕ ನಮಗೆ ತಿಳಿಸಿರಿ. ಕನ್ನಡ ಚಿತ್ರಗಳ ಬಗ್ಗೆ, ಕನ್ನಡ ಕಿರುತೆರೆ ಬಗ್ಗೆ ಬೇರೆ ಎಲ್ಲಾ ಮಾಹಿತಿಗಳಿಗಾಗಿ ನಮ್ಮ ಪೇಜನ್ನು ಇಂದೇ ಫಾಲೋ ಮಾಡಿ.

ನಿಮ್ಮ ಸ್ನೇಹಿತರಿಗೆ ಮತ್ತು ಫೇಸ್ಬುಕ್ ಗ್ರೂಪ್ ಗೆ ಶೇರ ಮಾಡಿ...
  •  
  •  
  •  
  •  
  •  
  •  
  •