ಹಣ ಸಂಪಾದನೆ ಹೇಗೆ ಮಾಡುತ್ತಿದ್ದೇನೆ ಅಂತ ನನಗೆ ಗೊತ್ತಿದೆ,ಗಟ್ಟಿಮೇಳ ನಟಿ ಅನ್ವಿತಾ ಸಾಗರ್.

ಗಟ್ಟಿಮೇಳ ಕನ್ನಡ ಕಿರುತೆರೆಯಲ್ಲಿ ಸತತ ಎಂಟು ತಿಂಗಳಿಂದ ನಂಬರ್ ಒನ್ ಧಾರಾವಾಹಿಯಾಗಿ ಯಶಸ್ವಿ ಪಯಣ ಮುಂದುವರೆಸುತ್ತಿರುವ ಧಾರಾವಾಹಿ.. ರೇಟಿಂಗ್ ವಿಚಾರದಲ್ಲಿ ಮಾತ್ರವಲ್ಲ ಕಲಾವಿದರ ವಿಚಾರವಾಗಿಯೂ ಆಗಾಗ ಸುದ್ದಿಯಾಗುತ್ತಲೇ ಇರುತ್ತದೆ.. ಆದ್ಯ ಗಟ್ಟಿಮೇಳ ಧಾರಾವಾಹಿಯಲ್ಲಿ ವೇದಾಂತ್ ತಂಗಿಯಾಗಿ ನಟಿಸಿರುವ ಆದ್ಯ ಪಾತ್ರಧಾರಿ ಅನ್ವಿತಾ ಸಾಗರ್ ವಿಚಾರವಾಗಿ ಮತ್ತೊಮ್ಮೆ ಸುದ್ದಿಯಾಗಿದೆ..

ಹೌದು ಮುದ್ದು ಮುಖದ ಆದ್ಯ ಪಾತ್ರಧಾರಿ ಅನ್ವಿತಾ ಸಾಗರ್ ಗಟ್ಟಿಮೇಳ ಧಾರಾವಾಹಿ ಮೂಲಕ ಕನ್ನಡ ಕಿರುತೆರೆ ಪ್ರೇಕ್ಷಕರ ಮನಗೆದ್ದರು.. ಹುಡುಗರು ಸಹ ಆದ್ಯಾಗಾಗಿ ಗಟ್ಟಿಮೇಳ ಧಾರಾವಾಹಿ ನೋಡ್ತಾರೆ ಅನ್ನೋ ಮಾತಿದೆ.. ಆದರೆ ಇದೀಗ ನಾನು ಸತ್ಯವಾದ ದಾರಿಯಲ್ಲಿ ನಡೆಯುತ್ತಿದ್ದೇನೆ ಎನ್ನುವ ಮಾತನ್ನು ಅನ್ವಿತಾ ಸಾಗರ್ ಆಡಿದ್ದಾರೆ.. ಅನ್ವಿತಾ ಈ ರೀತಿ ಹೇಳಲು ಕಾರಣವೇನು.. ಅಷ್ಟಕ್ಕೂ ನಡೆದದ್ದಾದರು ಏನು ಎಂಬುದಕ್ಕೆ ಉತ್ತರ ಇಲ್ಲಿದೆ ನೋಡಿ..

ಹೌದು ಗಟ್ಟಿಮೇಳ ನಟಿ ಅನ್ವಿತಾ ಸಾಗರ್ ಧಾರಾವಾಹಿ‌ ಮಾತ್ರವಲ್ಲ ಅವರು ಮಳಯಾಳಂ ಸಿನಿಮಾಗಳಲ್ಲಿಯೂ ನಟಿಸಿದ್ದು ಕಿರುಚಿತ್ರಗಳ ಮೂಲಕ ಅಲ್ಲಿಯೂ ಹೆಸರು ಮಾಡಿದ್ದಾರೆ.. ಸಿನಿಮಾಗಳಲ್ಲಿ‌ ನಟಿಸಿದ್ದರೂ ಸಹ ಧಾರಾವಾಹಿಯನ್ನು ಬಿಡದೆ ಮುಂದುವರೆಸುತ್ತಿದ್ದಾರೆ.. ಕೆಲ ದಿನಗಳ ಹಿಂದಷ್ಟೇ ಮಾದ್ಯಮವೊಂದರ ಸಂದರ್ಶನದಲ್ಲಿ ಮಾತನಾಡಿದ್ದ ಅನ್ವಿತಾ ಸಾಗರ್.. ಮಾರಿರುವ ತನ್ನ ತಾತನ ಮನೆಯನ್ನು ಮತ್ತೆ ಕೊಂಡುಕೊಳ್ಳಬೇಕು ಎಂಬ ಕನಸಿದೆ ಎಂದು ತಿಳಿಸಿದ್ದರು.. ಇನ್ನು ಸಾಮಾಜಿಕ ಜಾಲತಾಣದಲ್ಲಿ ಆಕ್ಟೀವ್ ಇರುವ ಅನ್ವಿತಾ ಆಗಾಗ ತಮ್ಮ ಫೋಟೋಗಳನ್ನು ಹಂಚಿಕೊಳ್ಳುತ್ತಿರುತ್ತಾರೆ..

actress-anvita-sagar

ಧಾರಾವಾಹಿಯಲ್ಲಿ ಸದಾ ಸೀರೆಯಲ್ಲಿ ಕಾಣಿಸಿಕೊಳ್ಳುವ ಅನ್ವಿತಾ ಸಾಗರ್ ನಿಜ ಜೀವನದಲ್ಲಿ ಟ್ರೆಡಿಷನಲ್ ಜೊತೆಗೆ ಸಂದರ್ಭಕ್ಕೆ ತಕ್ಕಂತೆ ಮಾಡ್ರನ್ ಕೂಡ ಹೌದು.. ಅದೇ ರೀತಿ ಅನ್ವಿತಾ ಹಂಚಿಕೊಂಡಿದ್ದ ಮಾಡ್ರನ್ ಫೋಟೋಗಳಿಗೆ ಕೆಲವರು ಕೆಟ್ಟದಾಗಿ ಕಮೆಂಟ್ ಮಾಡಿದ್ದರು.. ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಅನ್ವಿತಾ ಸಾಗರ್ ಖಡಕ್ ಆಗಿ ಮಾತನಾಡಿದ್ದಾರೆ..

ಹೌದು ಧಾರಾವಾಹಿ ಅಥವಾ ಸಿನಿಮಾವನ್ನು ಜನರು ಪ್ರೀತಿಸುತ್ತಾರೆ ನಿಜ.. ಆದರೆ ಕೆಲವರು ಅವುಗಳನ್ನು ವೈಯಕ್ತಿಕವಾಗಿ ತೆಗೆದುಕೊಳ್ಳುವುದುಂಟು.. ಕಲಾವಿದರನ್ನು ಬಹಳ ಸುಲಭವಾಗಿ ಟಾರ್ಗೆಟ್ ಮಾಡುತ್ತಾರೆ.. ಪಾತ್ರಗಳು ಬೇರೆ.. ನಾವು ನಮ್ಮ ಜೀವನದಲ್ಲಿ ಇರುವ ರೀತಿ ಬೇರೆ.. ಎಲ್ಲರ ಹಾಗೆ ನಾವು ಕೆಲಸ ಮಾಡುತ್ತೇವೆ.. ಹಣ ಗಳಿಸುತ್ತೇವೆ.. ನಾವು ತೆರೆ ಮೇಲೆ ಪ್ರತಿ ದಿನ ಕಾಣಿಸಿಕೊಳ್ಳುತ್ತಿದ್ದೇವೆ ಅಂದರೆ ನಾವು ತುಂಬ ದುಡಿಯುತ್ತಿದ್ದೇವೆ ಎಂದರ್ಥವಲ್ಲ.. ನಾವು 10 ದಿನ ಕೆಲಸ ಮಾಡಿದರೆ 20 ದಿನ ಮನೆಯಲ್ಲಿ ಖಾಲಿ ಕೂತಿರುತ್ತೇವೆ.. ನಾವು ಏನೇ ಫೋಟೋಶೂಟ್ ಮಾಡಿದರೂ ಕೂಡ ನಮ್ಮ ಮನೆಯವರಿಗೆ ತೋರಿಸುವ ಧೈರ್ಯ ಇದೆ.. ಆದರೆ ಟ್ರೋಲ್ ಮಾಡುವವರು.. ಕೆಟ್ಟದಾಗಿ ಕಮೆಂಟ್ ಮಾಡುವವರು ಅವರ ತಂದೆ ತಾಯಿಗೆ ಅವರ ಕಮೆಂಟ್ ತೋರಿಸುವ ಧೈರ್ಯ ಇದೆಯಾ? ಎಂದು ಪ್ರಶ್ನೆ ಮಾಡಿದ್ದಾರೆ.. ಅಷ್ಟೇ ಅಲ್ಲದೇ

ನಿಮ್ಮ ಸ್ನೇಹಿತರಿಗೂ/ಫೇಸ್ಬುಕ್ ಗ್ರೂಪ್ ಗೆ ಶೇರ್ ಮಾಡಿ...
  •  
  •  
  •  
  •  
  •  
  •  
  •  
  •