ಅನುಶ್ರೀಯ ಇಂದು ಇಡೀ ಕರ್ನಾಟಕದ ಜನತೆಗೆ ಚಿರ ಪರಿಚಿತರಾಗಿದ್ದಾರೆ ಇವರು ಮೂಲತಃ ಮಂಗಳೂರಿನವರು.ಹಲವು ಜನಪ್ರಿಯ ಕಾರ್ಯಕ್ರಮಗಳಿಗೆ ಇವರೇ ನಿರೂಪಕರು ಆಗಿದ್ದಾರೆ .ಹಾಗೆ ಇವರು ಮಾಡುವ ಕಾರ್ಯಕ್ರಮಗಳು ಇವರಿಂದನೇ ಜನಪ್ರಿಯ ಆಗಿರುವ ಉದಾಹರಣೆಗಳು ಇವೆ.ಅನುಶ್ರೀ ಮೊದಲಿನಿಂದಲೂ ಸಹ ಮಾತಿನಮಲ್ಲಿ ಎಂದೇ ಹೆಸರಾಗಿದ್ದರಂತೆ. ಇವರು ತಮ್ಮ ಪಿಯುಸಿ ಓದುವ ಸಮಯದಲ್ಲಿ ಅಲ್ಲಿಯೇ ಮಂಗಳೂರಿನಲ್ಲಿ ಸಣ್ಣ ವಾಹಿನಿಯಲ್ಲಿ ಕೆಲಸಕ್ಕೆ ಸೇರಿಕೊಂಡಿದ್ದರಂತೆ.ಅಲ್ಲಿ ಅವರಿಗೆ ಹೇಳುವಷ್ಟು ಸಂಬಳ ಸಿಗುತ್ತಿರಲಿಲ್ಲ ಆದ್ದರಿಂದ ಅವರು ಅಲ್ಲಿ ಕೆಲಸವನ್ನ ಬಿಟ್ಟು ಬಿಡುತ್ತಾರೆ .
ಇಷ್ಟೆಲ್ಲಾ ಆದ ನಂತರ ನಾನು ಏನನ್ನಾದರೂ ಸಾಧಿಸಬೇಕು ಎಂಬ ಛಲದಿಂದ ಬೆಂಗಳೂರಿಗೆ ಹೊರಟು ಬಿಡುತ್ತಾರೆ.ಆ ನಂತರ ಬೆಂಗಳೂರಿನಲ್ಲಿ ಇವತ್ತು ಕಲರ್ಸ್ ಕನ್ನಡ ಎಂದು ಹೆಸರಾಗಿರುವ ಇಟಿವಿ ಚಾನೆಲ್ನಲ್ಲಿ ಒಂದು ಚಿಕ್ಕ ಕಾರ್ಯಕ್ರಮದಲ್ಲಿ ನಿರೂಪಕಿಯಾಗಿ ಕೆಲಸವನ್ನೂ ಮಾಡುತ್ತಾರೆ. ಆಗ ಅವರಿಗೆ ದೊರಕುತ್ತಿರುವ ಸಂಭಾವನೆ ಕೇವಲ 250 ರೂಪಾಯಿಗಳು ಮಾತ್ರ .ಕೈ ಕೆಸರಾದರೆ ಬಾಯಿ ಮೊಸರು ಎಂಬ ಗಾದೆ ಮಾತಿದೆ ಅದರಂತೆ ಅನುಶ್ರೀ ಅವರು ಕೂಡ ತಮ್ಮ ಶ್ರಮದಿಂದ ತಮ್ಮ ಕಲೆಯಿಂದ ತುಂಬಾ ಎತ್ತರಕ್ಕೆ ಇಂದು ಬೆಳೆದು ನಿಂತಿದ್ದಾರೆ. ಇವತ್ತಿಗೆ ಅನುಶ್ರೀ ಅವರು ಒಂದು ಎಪಿಸೋಡ್ ಗೆ ಸುಮಾರು 1 ಲಕ್ಷ 20 ಸಾವಿರ ರುಪಾಯಿಗಳನ್ನು ತೆಗೆದುಕೊಳ್ಳುತ್ತಾರಂತೆ.ಕನ್ನಡದ ಅತ್ಯಂತ ಟಾಪ್ ನಿರೂಪಕರಲ್ಲಿ ಅನುಶ್ರೀ ಅವರ ಹೆಸರು ಕೇಳಿಬರುತ್ತದೆ .ಇವರು ನಡೆಸಿಕೊಡುವ ಸರಿಗಮಪ ಡ್ಯಾನ್ಸ್ ಕರ್ನಾಟಕ ಹೀಗೆ ಹಲವು ಕಾರ್ಯಕ್ರಮಗಳು ತುಂಬಾನೇ ಪ್ರಸಿದ್ಧಿಯನ್ನು ಪಡೆದಿದೆ.
ಅನುಶ್ರೀ ಅವರಿಗೆ ಯಾವಾಗಲೂ ತನ್ನ ಅಮ್ಮ ಹಾಗೂ ತಮ್ಮನನ್ನು ತುಂಬಾನೇ ಚೆನ್ನಾಗಿ ನೋಡಿಕೊಳ್ಳಬೇಕು ಎಂಬ ಆಸೆ ಇತ್ತಂತೆ. ಅದರಂತೆಯೇ ಇವರು ಇವತ್ತು ತಮ್ಮನಿಗೆ ಉತ್ತಮವಾದ ವಿದ್ಯಾಭ್ಯಾಸವನ್ನು ಒಳ್ಳೆಯ ಶಾಲೆ ಕಾಲೇಜುಗಳಲ್ಲಿ ನೀಡುತ್ತಿದ್ದಾರೆ.ಇವರು ಬಿಗ್ ಬಾಸ್ ಕಾರ್ಯಕ್ರಮಕ್ಕೆ ಕೂಡ ಹೋಗಿದ್ದರು ಅಲ್ಲಿಂದ ಬಂದ ಮೇಲೆ ಅವರ ಬದುಕಿಗೆ ಹೊಸ ತಿರುವು ಬಂದಿದೆ ಎಂದರೂ ತಪ್ಪಾಗಲಾರದು .ಇನ್ನೊಂದು ವಿಷಯ ಏನಪ್ಪಾ ಅಂದರೆ ಮೊಗ್ಗಿನ ಮನಸು ಚಿತ್ರಕ್ಕೆ ರಾಧಿಕಾ ಪಂಡಿತ್ ಅವರನ್ನು ಆಯ್ಕೆ ಮಾಡುವ ಮೊದಲು ಅನುಶ್ರೀಯನ್ನ ಆ ಪಾತ್ರ ಮಾಡಲು ನಿರ್ದೇಶಕರು ಕೇಳಿದ್ದರಂತೆ, ಆದರೆ ಅನುಶ್ರೀ ಸ್ವಲ್ಪ ನಾಚಿಕೆ ಸ್ವಭಾವದವರು ಆಗಿದ್ದರಂತೆ ಆದಕಾರಣ ಅವರು ಆ ಸಿನೆಮಾವನ್ನು ನಟಿಸಲಿಲ್ಲ .
……………..