ಸ್ಯಾಂಡಲ್ವುಡ್ ವುಡ್ ನಲ್ಲಿ ನಟಿ ಅಂಜಲಿ ಯವರನ್ನು ಮರೆಯುವುದು ಸಾಧ್ಯವೇ ಇಲ್ಲ. ಬೋಲ್ಡ್ ಪಾತ್ರವಾಗಲೀ, ನಟನೆಗೆ ಪ್ರಾಧಾನ್ಯತೆ ಇರುವ ಪಾತ್ರವಾಗಿಲೀ ಯಾವುದೇ ಆಗಲಿ ಅಭಿನಯಿಸಿ ಜನರ ಮೆಚ್ಚುಗೆ ಪಡೆಯುವ ಗತ್ತು ಆ ನಟಿಯಲಿತ್ತು. ಕನ್ನಡ ಸಿನಿಮಾಗಳು ಹಾಗೂ ಕಿರುತೆರೆಯಲ್ಲಿ ಕೂಡಾ ಮಿಂಚಿ ಅಪಾರ ಅಭಿಮಾನಿಗಳ ಅಭಿಮಾನವನ್ನು ತನ್ನದಾಗಿಸಿಕೊಂಡಿದ್ದ ಅಂಜಲಿ ಅವರು ಮದುವೆಯ ನಂತರ ಕುಟುಂಬ ಹಾಗೂ ಮಕ್ಕಳ ಜವಾಬ್ದಾರಿ ಹೊತ್ತು ತಮ್ಮನ್ನು ತಾವು ಅದಕ್ಕೆ ಮೀಸಲು ಮಾಡಿಕೊಂಡು ನಟನೆಯಿಂದ ದೂರವೇ ಉಳಿದಿದ್ದರು. ಈಗ ದಶಕಗಳ ನಂತರ ಮತ್ತೆ ಬಣ್ಣ ಹಚ್ಚಲಿದ್ದಾರೆ ಅಂಜಲಿ.

ನಟಿ ಅಂಜಲಿ ಅವರು ಕನ್ನಡದಲ್ಲಿ ಅನಂತನ ಅವಾಂತರ, ನೀನು ನಕ್ಕರೆ ಹಾಲು ಸಕ್ಕರೆ, ತರ್ಲೆ ನನ್ಮಗ, ಉತ್ಕರ್ಷ, ಉಂಡು ಹೋದ ಕೊಂಡು ಹೋದ ಹೀಗೆ ಹಲವು ಸಿನಿಮಾಗಳಲ್ಲಿ ನಟಿಸಿದ್ದಾರೆ. ವಿಷ್ಣುವರ್ಧನ್ , ಅಂಬರೀಶ್, ಅನಂತನಾಗ್, ಜಗ್ಗೇಶ್ ಹೀಗೆ ಸ್ಟಾರ್ ನಟರ ಜೊತೆ ನಟಿಸಿರುವ ಇವರು ಕನ್ನಡ ಚಿತ್ರರಂಗದಲ್ಲಿ ತನ್ನದೇ ಆದ ಛಾಪನ್ನು ಮೂಡಿಸಿದ ನಟಿ. ದಶಕಗಳ ನಂತರ ಮತ್ತೆ ಕರ್ನಾಟಕಕ್ಕೆ ಬಂದಿರುವ ಅವರು ಇಲ್ಲಿ ಜನರು ನೀಡುತ್ತಿರುವ ಅಭಿಮಾನ ಹಾಗೂ ಅವರು ತನ್ನನ್ನು ಇನ್ನೂ ನೆನಪಲ್ಲಿ ಇಟ್ಟುಕೊಂಡಿರುವುದು ಬಹಳ ಸಂತೋಷ ನೀಡಿದೆ ಎಂದು ಹೇಳಿದ್ದಾರೆ ಅಂಜಲಿ.

anjali-sudhakar

ಮಾದ್ಯಮವೊಂದರ ಸಂದರ್ಶನದಲ್ಲಿ ಅವರು ನಾನು ಇಲ್ಲಿಗೆ ಬಂದ ಮೇಲೆ ನಟನೆ ಮಾಡಬೇಕೆನ್ನುವ ಆಸೆ ಇತ್ತು‌. ಅಲ್ಲದೇ ಅದೇ ಸಮಯಕ್ಕೆ ವಾಹಿನಿಯೊಂದು ಕರೆ ಮಾಡಿ ಒಂದು ಬಹಳ ಚೆನ್ನಾಗಿರೋ ಪಾತ್ರ ಇದೆ ಮಾಡ್ತೀರಾ ಅಂದಾಗ ಅಂಜಲಿ ತನಗೆ ಬಹಳ ಖುಷಿಯಾಯ್ತು ಎಂದಿದ್ದಾರೆ. ಆದರೆ ಅದರಲ್ಲಿ ನೆಗೆಟಿವ್ ರೋಲ್ ಇದ್ದಿದ್ರಿಂದ ಯಾಕೋ ಅದು ಬೇಡ ಅನಿಸಿ ನಾನು ಆ ಪಾತ್ರ ಮಾಡೋಕಾಗಲ್ಲ ಎಂದು ಅಂಜಲಿ ಅವರು ವಾಹಿನಿಯವರಿಗೆ ತಿಳಿಸಿದರಂತೆ. ಅದಾದ ಮೇಲೆ ನಿರ್ದೇಶಕ ಬಿ.ರಾಮಮೂರ್ತಿ ಅವರು ಕರೆ ಮಾಡಿ ಉದಯ ಟಿವಿಗಾಗಿ ಒಂದು ಸೀರಿಯಲ್ ಮಾಡ್ತಾ ಇರೋದಾಗಿ ಪಾತ್ರ ಒಂದಿದೆ ನೀನು ಮಾಡಬೇಕಮ್ಮಾ ಎಂದರಂತೆ.

ಅಂಜಲಿ ಅವರು ಕಾಶೀನಾಥ್ ಅವರ ಜೊತೆ ಬಿ.ರಾಮಮೂರ್ತಿ ಅವರ ನಿರ್ದೇಶನದಲ್ಲಿ ಸಿನಿಮಾ ಒಂದು ಮಾಡಿದ್ದರಿಂದ ಅವರ ಪರಿಚಯ ಚೆನ್ನಾಗಿ ಇದೆ. ಅಂತ ವ್ಯಕ್ತಿ ಕೇಳಿದಾಗ ನಾನು ಸರಿ ಅಂತ ಒಪ್ಕೊಂಡೆ. ಅವರು ನನಗೆ ವಯಸ್ಸಿಗೆ ತಕ್ಕ ತಾಯಿ ಪಾತ್ರ ಕೊಟ್ಟಿದ್ದಾರೆ ನಿಜಕ್ಕೂ ಖುಷಿ ಇದೆ. ಈಗ ಗ್ಲಾಮರ್ ಪಾತ್ರ ಮಾಡೋ ವಯಸ್ಸು ಕೂಡಾ ಅಲ್ಲ.

ಅದಕ್ಕೆ ನನಗೆ ಸರಿಯಾದ ಪಾತ್ರ ಸಿಕ್ಕದ್ದಕ್ಕೆ ಸಂತೋಷ ಆಗಿದೆ ಎಂದಿದ್ದಾರೆ‌. ಅವರ ಈ ಮಾತು ಕೇಳಿದ ಮೇಲೆ ಬಹುಶಃ ಅತಿ ಶೀಘ್ರದಲ್ಲೇ ಅಂಜಲಿ ಅವರು ಕಿರುತೆರೆಯಲ್ಲಿ ಅಭಿಮಾನಿಗಳನ್ನು ರಂಜಿಸುವುದಕ್ಕೆ ಬರೋದು ಖಚಿತ ಎನ್ನಬಹುದಾಗಿದೆ.‌

ನಿಮ್ಮ ಸ್ನೇಹಿತರಿಗೂ/ಫೇಸ್ಬುಕ್ ಗ್ರೂಪ್ ಗೆ ಶೇರ್ ಮಾಡಿ...
  •  
  •  
  •  
  •  
  •  
  •  
  •  
  •