actor-tennis-krishna

ಹಾಸ್ಯ ನಟ ಟೆನಿಸ್ ಕೃಷ್ಣ ಅವರ ಹೆಂಡತಿ ಯಾರು,ಮಗಳು ಹೇಗಿದ್ದಾಳೆ ಗೊತ್ತಾ!

Cinema/ಸಿನಿಮಾ Home Kannada News/ಸುದ್ದಿಗಳು

ಕನ್ನಡ ಚಿತ್ರರಂಗದ ಹೆಸರಾಂತ ಹಾಸ್ಯನಟರಲ್ಲಿ ಒಬ್ಬರು ಟೆನ್ನಿಸ್ ಕೃಷ್ಣ. ಇವರು ನಟಿಸಿದ ಪಾತ್ರಗಳು ಹಲವಾರು. ಕನ್ನಡದಲ್ಲಿ 600ಕ್ಕು ಹೆಚ್ಚಿನ ಸಿನಿಮಾಗಳಲ್ಲಿ ನಟಿಸಿ, ರೆಕಾರ್ಡ್ ಸೃಷ್ಟಿಸಿದ ಕೀರ್ತಿ ಟೆನ್ನಿಸ್ ಕೃಷ್ಣ ಅವರದ್ದು. ದೊಡ್ಡಣ್ಣ ಹಾಗೂ ಟೆನ್ನಿಸ್ ಕೃಷ್ಣ ಕಾಂಬಿನೇಷನ್ ಇರುವ ಹಾಸ್ಯದೃಶ್ಯಗಳನ್ನು ಕನ್ನಡ ಸಿನಿಪ್ರಿಯರು ಮರೆಯುವ ಹಾಗಿಲ್ಲ. ಟೆನ್ನಿಸ್ ಕೃಷ್ಣ ಅವರು ಗಡಿಬಿಡಿ ಗಂಡ ಸಿನಿಮಾದಲ್ಲಿ ಹೇಳಿದ ಮಾರಮ್ಮನ ಡಿ-ಸ್ಕೊ ಡೈಲಾಗ್ ಬಹಳ ಫೇಮಸ್. ಈ ಡೈಲಾಗ್ ಎಷ್ಟರ ಮಟ್ಟಿಗೆ ಫೇಮಸ್ ಆಗಿತ್ತು ಎಂದರೆ, ಇತ್ತೀಚೆಗೆ ಕನ್ನಡ ರಾಪ್ ಸಿಂಗರ್ ಆಲ್ ಓಕೆ ಈ ಡೈಲಾಗ್ ಇಟ್ಟುಕೊಂಡು ಹೊಸ ರಾಪ್ ಸಾಂಗ್ ಮಾಡಿದರು, ಆ ರಾಪ್ ಸಾಂಗ್ ನಲ್ಲಿ ಟೆನ್ನಿಸ್ ಕೃಷ್ಣ ಕಾಣಿಸಿಕೊಂಡು, ಮಾರಮ್ಮನ ಡಿಸ್ಕೊ ಹಾಡು ಸಿಕ್ಕಾಪಟ್ಟೆ ಫೇಮಸ್ ಆಯಿತು.

ಕೃಷ್ಣ ಅವರ ಹೆಸರಿನ ಜೊತೆ ಟೆನ್ನಿಸ್ ಎಂಬ ಪದ ಸೇರಿಕೊಳ್ಳಲು ಒಂದು ಕಾರಣವಿದೆ, ಸಿನಿರಂಗಕ್ಕೆ ಬರುವ ಮೊದಲು ಇವರು ಟೆನ್ನಿಸ್ ಕೋಚ್ ಆಗಿದ್ದರು, ಜೊತೆಗೆ, ಕನ್ನಡ ಚಿತ್ರರಂಗದಲ್ಲಿ ಆ ಸಮಯಕ್ಕಾಗಲೇ ಕೃಷ್ಣ ಹೆಸರಿನಲ್ಲಿ ಬೇರೆ ಕಲಾವಿದರು ಇದ್ದ ಕಾರಣ, ಇವರನ್ನು ಗುರುತಿಸಲು ಸುಲಭ ಆಗಲಿ ಎಂಬ ಸಲುವಾಗಿ ಇವರ ಟೆನ್ನಿಸ್ ಕೃಷ್ಣ ಎಂದಾಯಿತು. 1990ರಲ್ಲಿ ಕನ್ನಡ ಚಿತ್ರರಂಗದಲ್ಲಿ ನಟನೆ ಶುರು ಮಾಡಿದರು ಟೆನ್ನಿಸ್ ಕೃಷ್ಣ. ರಾಜ ಕೆಂಪು ರೋಜಾ ಇವರು ನಟಿಸಿದ ಮೊದಲ ಸಿನಿಮಾ. ನಂತರ ಒಂದಾದ ಮೇಲೊಂದು ಕನ್ನಡ ಸಿನಿಮಾಗಳಲ್ಲಿ ಹಾಸ್ಯಪಾತ್ರಗಳಲ್ಲಿ ನಟಿಸಿದರು. ಕನ್ನಡದ ಮೇರು ನಟರಾದ ಡಾ. ರಾಜ್ ಕುಮಾರ್, ಸಾಹಸಸಿ-oಹ ವಿಷ್ಣುವರ್ಧನ್, ರೆಬೆಲ್ ಸ್ಟಾರ್ ಅಂಬರೀಶ್, ಕ್ರೇಜಿ ಸ್ಟಾರ್ ರವಿಚಂದ್ರನ್, ಅನಂತ್ ನಾಗ್ ಎಲ್ಲರ ಸಿನಿಮಾದಲ್ಲೂ ಟೆನ್ನಿಸ್ ಕೃಷ್ಣ ಅವರ ಹಾಸ್ಯ ಸನ್ನಿವೇಶ ಇರುತ್ತಿತ್ತು.

actor-tennis-krishna

ಇದಲ್ಲದೆ ಈಗಿನ ಸ್ಟಾರ್ ಗಳಾದ ಡಿಬಾಸ್ ದರ್ಶನ್, ಕಿಚ್ಚ ಸುದೀಪ್, ಶಿವಣ್ಣ, ಅಪ್ಪು ಜೊತೆಗೆ ಕೂಡ ಟೆನಿಸ್ ಕೃಷ್ಣ ಅವರು ನಟಿಸಿದ್ದಾರೆ. ಹಾಸ್ಯನಟಿ ರೇಖಾ ದಾಸ್ ಅವರೊಡನೆ 100 ಕ್ಕು ಹೆಚ್ಚು ಸಿನಿಮಾಗಳಲ್ಲಿ ಜೋಡಿಯಾಗಿ ನಟಿಸಿದ್ದಾರೆ. ಟೆನಿಸ್ ಕೃಷ್ಣ ಅವರು ಸೋಶಿಯಲ್ ಮೀಡಿಯಾಗಳಲ್ಲಿ ಇಲ್ಲ, ಇವರನ್ನು ಯಾವ ಚಾನಲ್ ನವರು ಕೂಡ ಸಂದರ್ಶನ ಮಾಡಿ, ಇವರ ಕುಟುಂಬದ ಬಗ್ಗೆ ಹೇಳಿಲ್ಲ! ಇವರ ಕುಟುಂಬದ ಬಗ್ಗೆ ತಿಳಿದುಕೊಳ್ಳುವ ಕುತೂಹಲ ಬಹಳಷ್ಟು ಜನರಿಗೆ ಇದೆ. ಟೆನಿಸ್ ಕೃಷ್ಣ ಅವರ ಕುಟುಂಬ ಹೇಗಿದೆ, ಹೆಂಡತಿ ಯಾರು, ಮಗಳು ಹೇಗಿದ್ದಾಳೆ ಗೊತ್ತಾ! ಸ್ಕ್ರಾಲ್ ಡೌನ್ ಮಾಡಿ ನೋಡಿರಿ

ಟೆನ್ನಿಸ್ ಕೃಷ್ಣ ಅವರ ವೈಯಕ್ತಿಕ ಜೀವನದ ವಿಷಯಕ್ಕೆ ಬರುವುದಾದರೆ ಇವರಿಗೆ ಒಬ್ಬ ಮಗಳಿದ್ದಾಳೆ. ಮಗಳ ಹೆಸರು ರಂಜಿತಾ. ನೋಡಲು ಬಹಳ ಸುಂದರವಾಗಿರುವ ರಂಜಿತಾ ಯಾವುದೇ ಹೀರೋಯಿನ್ ಗಳಿಗೂ ಕಡಿಮೆ ಇಲ್ಲ ಎನ್ನಬಹುದು. ಆದರೆ ಚಿತ್ರರಂಗದಿಂದ ದೂರವಿದ್ದಾರೆ. ಟೆನಿಸ್ ಕೃಷ್ಣ ಅವರು ಮಗಳು, ಬೆಂಗಳೂರಿನ ಒಂದು ಖಾಸಗಿ ಕಂಪನಿಯಲ್ಲಿ ದೊಡ್ಡ ಹುದ್ದೆಯಲ್ಲಿ ಕೆಲಸ ಮಾಡುತ್ತಾ ತಮ್ಮ ಜೀವನದಲ್ಲಿ, ತಮ್ಮ ಕುಟುಂಬದ ಜೊತೆ ಬಹಳ ಬ್ಯುಸಿ ಆಗಿದ್ದಾರೆ. ರಂಜಿತಾರಿಗೆ ಮದುವೆಯಾಗಿ, ಈಗ ಗ-ರ್ಭಿಣಿಯಾಗಿದ್ದಾರೆ. ಶೀಘ್ರದಲ್ಲೇ ಮೊಮ್ಮಗುವನ್ನು ನೋಡುವ ತವಕದಲ್ಲಿದ್ದಾರೆ ಟೆನ್ನಿಸ್ ಕೃಷ್ಣ.

2010ರ ಸಮಯದಲ್ಲಿ ಟೆನ್ನಿಸ್ ಕೃಷ್ಣ ಅವರಿಗೆ ಹೆಚ್ಚಿನ ಅವಕಾಶಗಳು ಸಿಗದೆ ಮನೆಯಲ್ಲೇ ಇರುವಂತಹ ಪರಿಸ್ಥಿತಿ ಎದುರಾದಾಗ ಅವರ ಮಗಳು ರಂಜಿತಾ ಗಂಡು ಮಗನ ಹಾಗೆ ಮನೆ ಜವಾಬ್ದಾರಿ ತೆಗೆದುಕೊಂಡು ತಂದೆ ತಾಯಿಯನ್ನು ನೋಡಿಕೊಂಡಿದ್ದಾರೆ. ಸಧ್ಯಕ್ಕೆ ರಂಜಿತಾ ಮತ್ತು ಅವರ ಪತಿ ಇಬ್ಬರೂ ಕೂಡ ಬೆಂಗಳೂರಿನಲ್ಲೇ ಇದ್ದಾರೆ. ರಂಜಿತಾರ ಇಷ್ಟದ ಹವ್ಯಾಸ ಬೈಕ್ ರೈ-ಡಿಂಗ್. ಸಿನಿಮಾ ಮತ್ತು ಧಾರಾವಾಹಿಗಳಲ್ಲಿ ನಟಿಸಲು ಈಗಾಗಲೇ ಇವರಿಗೆ ಸಾಕಷ್ಟು ಅವಕಾಶಗಳು ಬಂದಿದ್ದು, ಮುಂದಿನ ದಿನಗಳಲ್ಲಿ ಆದರು ರಂಜಿತಾ ತೆರೆಮೇಲೆ ಕಾಣಿಸಿಕೊಳ್ಳುತ್ತಾರ ಎಂಬುದನ್ನು ಕಾದು ನೋಡಬೇಕು..ಈ ಸುದ್ದಿ ಇಷ್ಟ ವಾಗಿದ್ದಲ್ಲಿ ಇದನ್ನು ಲೈಕ್ ಮಾಡಿ ಶೇರ್ ಮಾಡಿ ಹಾಗು ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ಕಾಮೆಂಟ್ ಮೂಲಕ ನಮಗೆ ತಿಳಿಸಿರಿ. ಕನ್ನಡ ಚಿತ್ರಗಳ ಬಗ್ಗೆ, ಕನ್ನಡ ನಾಡಿನ ಬಗ್ಗೆ, ಕನ್ನಡ ನಟ ನಟಿಯರ ಬಗ್ಗೆ, ಕನ್ನಡ ಧಾರಾವಾಹಿಗಳ ಬಗ್ಗೆ, ಕನ್ನಡದ ಕಲಾವಿದರ ಬಗ್ಗೆ ಸಾಕಷ್ಟು ಮಾಹಿತಿಗಾಗಿ ನಮ್ಮ ಪೇಜನ್ನು ಇಂದೇ ಫಾಲೋ ಮಾಡಿ.

ನಿಮ್ಮ ಸ್ನೇಹಿತರಿಗೆ ಮತ್ತು ಫೇಸ್ಬುಕ್ ಗ್ರೂಪ್ ಗೆ ಶೇರ ಮಾಡಿ...