ದಕ್ಷಿಣ ಭಾರತ ಚಿತ್ರರಂಗದ ಪಾಲಿಗೆ 80 ಹಾಗೂ 90ರ ದಶಕ ಗೋಲ್ಡನ್ ಎರಾ ಎಂದರೆ ತಪ್ಪಾಗಲಾರದು. 80ರ ದಶಕದಲ್ಲಿ ಹಲವಾರು ಪ್ರತಿಭಾನ್ವಿತ ಕಲಾವಿದರು ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ್ದಾರೆ. ನಟನೆ ಮೂಲಕ ಹೊಸ ಛಾಪು ಮೂಡಿಸಿ ತಮ್ಮದೇ ಆದ ಅಭಿಮಾನಿ ಬಳಗವನ್ನು ಸಂಪಾದಿಸಿದ್ದಾರೆ ಹಲವಾರು ಕಲಾವಿದರು. ಅವರಲ್ಲಿ, ಎಂದಿಗೂ ಮರೆಯದ ನಟರಲ್ಲಿ ಒಬ್ಬರು ಶ್ರೀಧರ್. ಇವರ ನೃತ್ಯ ವೈಖರಿಯನ್ನು ಯಾರು ಮರೆಯಲು ಸಾಧ್ಯವಿಲ್ಲ. ನಟ ಶ್ರೀಧರ್ ಅವರು ಸಾಕಷ್ಟು ಕನ್ನಡ ಚಿತ್ರಗಳಲ್ಲಿ, ಕನ್ನಡ ಧಾರಾವಾಹಿಗಳಲ್ಲಿ ಕೆಲಸ ಮಾಡಿದ್ದಾರೆ. ಇವರ ಪತ್ನಿ ಯಾರು ಗೊತ್ತಾ, ಇವರ ಕುಟುಂಬ ಹೇಗಿದೆ ಗೊತ್ತಾ! ತಿಳಿಯಲು ಸ್ಕ್ರಾಲ್ ಡೌನ್ ಮಾಡಿ ಮುಂದೆ ಓದಿರಿ..’

Actor-Sridhar

ನಟ ಶ್ರೀಧರ್ ಅಪ್ಪಟ ಕನ್ನಡ ಮ-ಣ್ಣಿನ ಪ್ರತಿಭೆ. ಇವರು ಹುಟ್ಟಿದ್ದು 1960ರ ನವೆಂಬರ್ 2ರಂದು. ಈಗ ಇವರಿಗೆ 60 ವರ್ಷವಾಗಿದೆ. ಶ್ರೀಧರ್ ಅವರು ಓದಿದ್ದು ಇಂಜಿನಿಯರಿಂಗ್. ನೃತ್ಯದಲ್ಲಿ ಬಹಳ ಆಸಕ್ತಿ ಹೊಂದಿದ್ದ ಇವರು, ಭರತನಾಟ್ಯಮ್ ಪ್ರವೀಣರು, ಇವರು ಕೋರಿಯೋಗ್ರಾಫರ್ ಮತ್ತು ಡ್ಯಾನ್ಸ್ ಸ್ಕಾಲರ್ ಕೂಡ ಹೌದು. 1984 ರಲ್ಲಿ ಸ್ಯಾಂಡಲ್ ವುಡ್ ನ ಚಿತ್ರಬ್ರಹ್ಮ ಎಂದೇ ಖ್ಯಾತಿಯಾಗಿದ್ದ ನಿರ್ದೇಶಕ ಪುಟ್ಟಣ್ಣ ಕಣಗಾಲ್ ಅವರು ನಿರ್ದೇಶನ ಮಾಡಿದ ಅಮೃತ ಘಳಿಗೆ ಸಿನಿಮಾ ಮೂಲಕ ನಾಯಕನಾಗಿ ಕನ್ನಡ ಚಿತ್ರರಂಗಕ್ಕೆ ಪರಿಚಯವಾದರು ನಟ ಶ್ರೀಧರ್. ಇಲ್ಲಿಯವರೆಗೂ 60ಕ್ಕೂ ಹೆಚ್ಚು ಸಿನಿಮಾಗಳಲ್ಲಿ ಅಭಿನಯಿಸಿದ್ದಾರೆ.

ಕನ್ನಡ ಮಾತ್ರವಲ್ಲದೆ ಮಲಯಾಳಂ, ತಮಿಳು, ತೆಲುಗು ಮತ್ತು ಹಿಂದಿ ಸಿನಿಮಾಗಳಲ್ಲಿ ಕೂಡ ಅಭಿನಯಿಸಿದ್ದಾರೆ. ಹಲವಾರು ಪ್ರಶಸ್ತಿ ಪುರಸ್ಕಾರಗಳನ್ನು ಪಡೆದಿದ್ದಾರೆ. ಸಂತ ಶಿ-ಶುನಾಳ ಶರೀಫ ಸಿನಿಮಾದ ಅತ್ಯತ್ತಮವಾದ ಅಭಿನಯಕ್ಕಾಗಿ ಕರ್ನಾಟಕ ರಾಜ್ಯ ಪ್ರಶಸ್ತಿ ಪಡೆದರು ನಟ ಶ್ರೀಧರ್. ಹಲವಾರು ಭಕ್ತಿ ಪೂರ್ವಕ ಸಿನಿಮಾಗಳಲ್ಲಿ ನಟಿಸಿದ್ದಾರೆ. ಹಾಗೆ, ಕಮರ್ಷಿಯಲ್ ಸಿನಿಮಾಗಳಲ್ಲಿ ಸಹ ನಟಿಸಿ ಯಶಸ್ಸು ಪಡೆದಿದ್ದಾರೆ. ಸುಂದರ ಸ್ವಪ್ನಗಳು, ಬೊoಬಾಟ್ ಹೆo-ಡ್ತಿ, ಮಾಂಗಲ್ಯ, ಹ-ಠಮಾರಿ ಹೆಣ್ಣು ಕಿ-ಲಾಡಿ ಗಂಡು ಸೇರಿದಂತೆ ಹಲವಾರು ಯಶಸ್ವಿ ಸಿನಿಮಾಗಳಲ್ಲಿ ನಟಿಸಿ, ಆಗಿನ ಕಾಲದ ಹೆo-ಗೆಳೆಹರ ಫೇವರೆಟ್ ನಟ ಆಗಿದ್ದರು ಶ್ರೀಧರ್. ತೆಲುಗು ಧಾರಾವಾಹಿಯೊಂದರಲ್ಲಿ ಇವರು ನಿರ್ವಹಿಸಿದ ಶಿವನ ಪಾತ್ರದಿಂದ ಆಂಧ್ರ ಜನತೆಗೆ ಬಹಳ ಹತ್ತಿರವಾಗಿದ್ದರು. ತಮಿಳು ಚಿತ್ರರಂಗಕ್ಕೆ ಇವರನ್ನು ಪರಿಚಯಿಸಿದ್ದು ಹೆಸರಾಂತ ನಿರ್ದೇಶಕ ಕೆ.ಬಾಲಚಂದರ್ ಅವರು.

Actor-Sridhar

ಶ್ರೀಧರ್ ಅವರ ಕೌಟುಂಬಿಕ ವಿಚಾರಕ್ಕೆ ಬರುವುದಾದರೆ,. ಅವರ ಪತ್ನಿಯ ಹೆಸರು ಅನುರಾಧ. ಅನುರಾಧ ಅವರನ್ನು ಶ್ರೀಧರ್ ಅವರು ಮೊದಲು ಭೇಟಿಯಾಗಿದ್ದು ಅವರ ಗುರು ಶ್ರೀಧರ್ ಅವರ ಬಳಿ ನೃತ್ಯ ಕಲಿಯುತ್ತಿದ್ದಾಗ. 1991 ರಲ್ಲಿ ಅನುರಾಧ ಮತ್ತು ಶ್ರೀಧರ್ ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ಇವರು ಕೂಡ ಕ್ಲಾಸಿಕಲ್ ಡ್ಯಾನ್ಸರ್. ನಟ ಶ್ರೀಧರ್ ಮತ್ತು ಪತ್ನಿ ಅನುರಾಧ ಜೊತೆಯಾಗಿ ಹಲವಾರು ಶೋಗಳಲ್ಲಿ ನೃತ್ಯ ಪ್ರದರ್ಶನ ನೀಡಿದ್ದಾರೆ. ಈ ದಂಪತಿಗೆ ಒಬ್ಬ ಮಗಳಿದ್ದಾಳೆ, ಇವರ ಮಗಳ ಹೆಸರು ಅನಘ ಗೌರಿ, ಇವರು ಕೂಡ ಡ್ಯಾನ್ಸರ್. ಶ್ರೀಧರ್ ಅವರ ಪುಟ್ಟ ಕುಟುಂಬ ಯಾವಾಗಲೂ ಸಂತೋಷವಾಗಿರಲಿ ಎಂದು ಹಾರೈಸೋಣ.

Actor-Sridhar

ಕನ್ನಡದ ಹಳೆಯ ನಟ ಶ್ರೀಧರ್ ಅವರ ಪತ್ನಿ ಹಾಗು ಮಕ್ಕಳ ಸುಂದರ ಫೋಟೋಗಳನ್ನು, ಕುಟುಂಬದ ಸುಂದರ ಕ್ಷಣಗಳನ್ನು ನೀವು ಇಲ್ಲಿ ನೋಡಬಹುದು! ಈ ಸುದ್ದಿ ಇಷ್ಟ ವಾಗಿದ್ದಲ್ಲಿ ಇದನ್ನು ಲೈಕ್ ಮಾಡಿ ಶೇರ್ ಮಾಡಿ ಹಾಗು ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ತಪ್ಪದೆ ಕಾಮೆಂಟ್ ಮೂಲಕ ನಮಗೆ ತಿಳಿಸಿರಿ. ಕನ್ನಡ ಚಿತ್ರಗಳ ಬಗ್ಗೆ, ಕನ್ನಡ ನಟ ನಟಿಯರ ಬಗ್ಗೆ, ಕನ್ನಡ ಧಾರಾವಾಹಿಗಳ ಬಗ್ಗೆ, ಕನ್ನಡ ರಿಯಾಲಿಟಿ ಶೋಗಳ ಬಗ್ಗೆ ಹಾಗು ಬೇರೆ ಎಲ್ಲಾ ಮಾಹಿತಿ ಗಳಿಗಾಗಿ ನಮ್ಮ ಪೇಜನ್ನು ಇಂದೇ ಫಾಲೋ ಮಾಡಿ.

ನಿಮ್ಮ ಸ್ನೇಹಿತರಿಗೂ/ಫೇಸ್ಬುಕ್ ಗ್ರೂಪ್ ಗೆ ಶೇರ್ ಮಾಡಿ...
  •  
  •  
  •  
  •  
  •  
  •  
  •  
  •