ಬೆಂಗಳೂರು: ಸ್ಯಾಂಡಲ್‍ವುಡ್ ಸ್ಟಾರ್ ಗಳು ತಮ್ಮ ಹುಟ್ಟುಹಬ್ಬವನ್ನು ಅದ್ಧೂರಿಯಾಗಿ ಆಚರಿಸುವುದು ಕಾಮನ್. ಅದೇ ರೀತಿಯಾಗಿ ಸ್ಟಾರ್ ಮಕ್ಕಳು ಕೂಡ ಬರ್ತ್ ಡೇಯನ್ನು ಅಷ್ಟೇ ಸ್ಪೇಷಲ್ ಆಗಿ ಸೆಲೆಬ್ರೇಟ್ ಮಾಡೋದು ಟ್ರೇಂಡ್ ಆಗಿದೆ.

ಕ್ರೇಜಿ ಕ್ವೀನ್ ರಕ್ಷಿತಾ ಮತ್ತು ಜೋಗಿ ಪ್ರೇಮ್ ದಂಪತಿಯ ಮುದ್ದಾದ ಮಗ ಸೂರ್ಯ 12ನೇ ವರ್ಷಕ್ಕೆ ಕಾಲಿಟ್ಟಿದ್ದಾನೆ. ಮಗನ ಹುಟ್ಟುಹಬ್ಬಕ್ಕೆ ತಾಯಿ ರಕ್ಷಿತಾ ತಮ್ಮ ಇನ್‍ಸ್ಟಾಗ್ರಾಮ್ ಖಾತೆಯ ಮೂಲಕವಾಗಿ ವಿಶ್ ಮಾಡಿದ್ದಾರೆ.

actor-rakshita

ಇನ್‍ಸ್ಟಾದಲ್ಲಿ ರಕ್ಷಿತಾ ಬರೆದುಕೊಂಡಿದ್ದೇನು?:
ನೀನು 12ನೇ ವರ್ಷಕ್ಕೆ ಕಾಲಿಡುತ್ತಿರುವುದು ನನಗೆ ತುಂಬಾ ಸಂತೋಷವಾಗಿದೆ. ನನಗೆ ತಿಳಿದಿರುವಂತೆ ಅರ್ಥ ಮಾಡಿಕೊಂಡು ಸಹಾಯದ ಗುಣವನ್ನು ಹೊಂದಿರುವ ಪ್ರೀತಿಯ ಮಗು ನೀನು ಸೂರ್ಯ. ನಿನಗೆ ನಾನು ಬೆಂಬಲವಾಗಿರಬೇಕು. ಆದರೆ 12 ವರ್ಷದ ನೀನು ನನಗೆ ತೋರಿಸಿದ ಬೆಂಬಲ ಯಾರು ದೊಡ್ಡವರು ಎಂದು ನನಗೆ ಆಲೋಚಿಸುವಂತೆ ಮಾಡುತ್ತದೆ. ನಾನು ಯಾವಾಗಲೂ ನಿನ್ನಲ್ಲಿ ಒಬ್ಬ ಸ್ನೇಹಿತನನ್ನು ನೋಡಿದ್ದೇನೆ. ನನ್ನ ಜೀವನದ ಈ ಜರ್ನಿಯಲ್ಲಿ ತುಂಬಾ ಸಂತೋಷ ತಂದಿದ್ದೀಯಾ. ಮೂಕಂಬಿಕಾ ನನಗೆ ನೀಡಿರುವ ಅತ್ಯುತ್ತಮ ಉಡುಗೊರೆ ನೀನು. ನನ್ನ ಮುಖದ ಮೇಲೆ ಮುಗುಳುನಗೆ ಮೂಡುತ್ತದೆ ಎಂದರೆ ಅದು ನಿನ್ನಿಂದ ಮಾತ್ರ ಸಾಧ್ಯ ಮಗು. ಸಂತೋಷ, ಆರೋಗ್ಯ, ಪ್ರೀತಿ ಎಲ್ಲವೂ ನಿನಗೆ ಸಿಗಲಿ ಹುಟ್ಟುಹಬ್ಬದ ಸುಭಾಶಯ ಎಂದು ರಕ್ಷಿತಾ ಪ್ರೇಮ್ ತಮ್ಮ ಇನ್‍ಸ್ಟಾಗ್ರಾಮ್ ಖಾತೆಯಲ್ಲಿ ಮುದ್ದು ಮಗನಿಗೆ ವಿಶ್ ಮಾಡಿದ್ದಾರೆ.

ಸ್ಟಾರ್ ಮಕ್ಕಳು ಅಭಿಮಾನಿಗಳ ದೃಷ್ಟಿಯಲ್ಲಿ ಸ್ಟಾರ್‍ಗಳಿದ್ದಂತೆ. ರಕ್ಷಿತಾ ಮತ್ತು ಪ್ರೇಮ್ ದಂಪತಿಯ ಏಕೈಕ ಪುತ್ರ ಸೂರ್ಯನ ಬರ್ತ್ ಡೇಯನ್ನು ಪ್ರತಿವರ್ಷ ಕಲರ್ ಫುಲ್ ಗಾಗಿ ಸೆಲೆಬ್ರೆಟ್ ಮಾಡುತ್ತಾರೆ.

ನಿಮ್ಮ ಸ್ನೇಹಿತರಿಗೂ/ಫೇಸ್ಬುಕ್ ಗ್ರೂಪ್ ಗೆ ಶೇರ್ ಮಾಡಿ...
  •  
  •  
  •  
  •  
  •  
  •  
  •  
  •