ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಂದರೆ ಯಾರಿಗೆ ತಾನೇ ಇಷ್ಟ ಇಲ್ಲ ಹೇಳಿ, ದರ್ಶನ್ ಅವರು ಕೇವಲ ಸಿನಿಮಾಗಳಲ್ಲಿ ಮಾತ್ರವಲ್ಲದೆ ನಿಜ ಜೀವನದಲ್ಲಿ ಕೂಡ ಹೀರೋ ಅನಿಸಿಕೊಂಡ ಒಬ್ಬ ವ್ಯಕ್ತಿ ಎಂದು ಹೇಳಿದರೆ ತಪ್ಪಾಗಲ್ಲ. ಕನ್ನಡ ಚಿತ್ರರಂಗದಲ್ಲಿ ಅತೀ ಹೆಚ್ಚು ಅಭಿಮಾನಿಗಳನ್ನ ಹೊಂದಿರುವ ನಟ ಅಂದರೆ ಅದೂ ನಮ್ಮ ಚಾಲೆಂಜಿಂಗ್ ಸ್ಟಾರ್ ದರ್ಶನ್ ಎಂದು ಹೇಳಿದರೆ ತಪ್ಪಾಗಲ್ಲ. ಇನ್ನು ದರ್ಶನ್ ಅವರು ಕೇವಲ ಸಿನಿಮಾಗಳಲ್ಲಿ ಮಾತ್ರವಲ್ಲದೆ ತಮ್ಮನ ತಾವು ಸಾಮಾಜಿಕ ಕಾರ್ಯಗಳಲ್ಲಿ ಕೂಡ ತೊಡಗಿಸಿಕೊಂಡಿದ್ದಾರೆ, ಹೌದು ಬೇರೆಯವರ ಕಷ್ಟಗಳಿಗೆ ಯಾವಾಗಲೂ ಹೆಗಲು ಕೊಡುವ ದರ್ಶನ್ ಅವರು ತಮ್ಮ ಸಾಮಾಜಿಕ ಕೆಲಸಗಳಿಂದ ಪ್ರಸಿದ್ಧಿಯನ್ನ ಪಡೆದುಕೊಂಡಿದ್ದಾರೆ ಎಂದು ಹೇಳಿದರೆ ತಪ್ಪಾಗಲ್ಲ.

ಇನ್ನು ಈಗ ವಿಷಯಕ್ಕೆ ಬರುವುದಾದರೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಮೇಲೆ ಈಗ ದೂರ ದಾಖಲಾಗಿದ್ದು ಜನರಿಗೆ ಶಾಕ್ ಆಗಿದೆ ಎಂದು ಹೇಳಬಹುದು. ಹಾಗಾದರೆ ದರ್ಶನ್ ಮಾಡಿದ ತಪ್ಪೇನು ಮತ್ತು ಅವರ ಮೇಲೆ ದೂರು ದಾಖಲಾಗಲು ಕಾರಣ ಏನು ಮತ್ತು ದರ್ಶನ್ ಮಾಡಿದ ಅನ್ನುವುದರ ಬಗ್ಗೆ ಸಂಪೂರ್ಣ ಮಾಹಿತಿಯನ್ನ ನಾವು ಈಗ ನಿಮಗೆ ಕೊಡುತ್ತೀವಿ ಪೂರ್ತಿಯಾಗಿ ಓದಿ ಮತ್ತು ಇದರ ಬಗ್ಗೆ ನಿಮ್ಮ ಅನಿಸಿಕೆಯನ್ನ ನಮಗೆ ತಿಳಿಸಿ. ಹೌದು ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ಕೆಲವು ದಿನಗಳಿಂದ ತಮ್ಮನ್ನ ತಾವು ರಾಜಕೀಯದಲ್ಲಿ ತೊಡಗಿಸಿಕೊಂಡಿದ್ದಾರೆ ಎಂದು ಹೇಳಬಹುದು, ಹೌದು ದರ್ಶನ್ ಅವರು ಆರ್ ಆರ್ ನಗರದ ಚುನಾವಣೆಯಲ್ಲಿ ಭರ್ಜರಿ ಪ್ರಚಾರವನ್ನ ಮಾಡಿದ್ದರು.

ಹೌದು ಆರ್ ಆರ್ ನಗರದ ಚುನಾವಣೆಯ ಅಂಗವಾಗಿ ದರ್ಶನ್ ಅವರು ಮುನಿರತ್ನ ಅವರ ಪರವಾಗಿ ಚುನಾವಣಾ ಪ್ರಚಾರವನ್ನ ಮಾಡಿದ್ದರು. ಈ ಹಿಂದೆ ದರ್ಶನ್ ಅವರು ಸುಮಲತಾ ಅವರ ಪರ ಪ್ರಚಾರ ಮಾಡಿದ್ದರು ಮತ್ತು ಅವರ ಗೆಲುವಿನಲ್ಲಿ ಪ್ರಮುಖವಾದ ಕಾರಣವನ್ನ ವಹಿಸಿದ್ದರು. ಇನ್ನು ದರ್ಶನ್ ಅವರು ಯಾವಾಗಲೂ ಪಕ್ಷವನ್ನ ನೋಡಿ ಪ್ರಚಾರ ಮಾಡುವವರಲ್ಲ ಬದಲಾಗಿ ಅವರು ವ್ಯಕ್ತಿಯನ್ನ ನೋಡಿ ಪ್ರಚಾರ ಮಾಡುವವರು ಆಗಿದ್ದಾರೆ, ಇನ್ನು ಮೊನ್ನೆ ಮೊನ್ನೆತಾನೆ ದರ್ಶನ್ ಅವರು ಚುನಾವಣೆಯ ಸಲುವಾಗಿ ನಟಿ ಅಮೂಲ್ಯ ಅವರ ಪರವಾಗಿ ಕೂಡ ಚುನಾವಣಾ ಪ್ರಚಾರವನ್ನ ಮಾಡಿದ್ದರು.

ಇನ್ನು ದೇಶದಲ್ಲಿ ಮಾತ್ರವಲ್ಲ ಇಡೀ ವಿಶ್ವದಲ್ಲೇ ಕರೋನ ಮಹಾಮಾರಿ ಯಾವಾಗ ರೀತಿಯಲ್ಲಿ ಹಬ್ಬುತ್ತಿದೆ ಅನ್ನುವುದು ಸಾಮಾನ್ಯವಾಗಿ ಎಲ್ಲರಿಗೂ ತಿಳಿದೇ ಇದೆ, ಮತ್ತು ಈ ಕರೋನ ಮಹಾಮಾರಿಯನ್ನ ತಡೆಗಟ್ಟುವ ನಿಟ್ಟಿನಲ್ಲಿ ಸರ್ಕಾರ ಯಾವ ಕ್ರಮಗಳನ್ನ ಈಗಾಗಲೇ ಜಾರಿಗೆ ತಂದಿದೆ ಅನ್ನುವುದು ಕೂಡ ನಿಮಗೆಲ್ಲ ತಿಳಿದಿದೆ. ಇನ್ನು ಸರ್ಕಾರ ಜಾರಿಗೆ ತಂದಿರುವ ಈ ಮಾರ್ಗಸೂಚಿಗಳನ್ನ ಯಾರು ಕೂಡ ಮೀರುವ ಹಾಗೆ ಇಲ್ಲ, ಆದರೆ ಮೊನ್ನೆ ದರ್ಶನ್ ಅವರು ಚುನಾವಣಾ ಪ್ರಚಾರದಲ್ಲಿ ಈ ಮಾರ್ಗಸೂಚಿಗಳನ್ನ ಉಲ್ಲಂಘನೆ ಮಾಡಿದ್ದಾರೆ ಅನ್ನುವ ಕಾರಣಕ್ಕೆ ದರ್ಶನ್ ಅವರ ಮೇಲೆ ದೂರು ದಾಖಲಾಗಿದೆ.

ಹೌದು ಕರೋನ ಮಾರ್ಗ ಸೂಚಿಯನ್ನ ಪಾಲಿಸ ಇರುವ ಹಿನ್ನಲೆಯಲ್ಲಿ ವಿಪತ್ತು ನಿರ್ವಹಣಾ ಕಾಯಿದೆಯ ಅಡಿಯಲ್ಲಿ ದರ್ಶನ್ ಅವರ ಮೇಲೆ ದೂರು ದಾಖಲಾಗಿದೆ. ಹೌದು ಚುನಾವಣೆಯ ಪ್ರಚಾರದಲ್ಲಿ ಅಧಿಕವಾದ ಜನರು ಸೇರಿದ್ದು ಜನರು ಕರೋನ ಮಾರ್ಗಸೂಚಿಯನ್ನ ಪಾಲನೆ ಮಾಡಿಲ್ಲ ಮತ್ತು ದರ್ಶನ್ ಅವರನ್ನ ನೋಡಲು ಹೆಚ್ಚಿನ ಜನರು ಈ ಚುನಾವಣಾ ಪ್ರಚಾರದಲ್ಲಿ ಭಾಗಿಯಾಗಿದ್ದರು ಮತ್ತು ಹಿನ್ನಲೆಯಲ್ಲಿ ದರ್ಶನ್ ಅವರ ಮೇಲೆ ದೂರು ದಾಖಲಾಗಿದೆ.

ನಿಮ್ಮ ಸ್ನೇಹಿತರಿಗೂ/ಫೇಸ್ಬುಕ್ ಗ್ರೂಪ್ ಗೆ ಶೇರ್ ಮಾಡಿ...
  •  
  •  
  •  
  •  
  •  
  •  
  •  
  •