ಸಂಚಾರ ಒಂದು ಸುರಕ್ಷಿತ ಸಂಚಾರ ಕೂಡ ಆಗುತ್ತದೆ. ಆದರೆ ಇತ್ತೀಚಿನ ವರ್ಷಗಳಲ್ಲಿ ಸಂಚಾರ ನಿಯಮಗಳನ್ನು ಪಾಲನೆ ಮಾಡುವವರ ಸಂಖ್ಯೆ ಕಡಿಮೆ ಆಗುತ್ತಿದೆ. ಅಪಘಾತಗಳ ಸಂಖ್ಯೆ ಕೂಡಾ ಹೆಚ್ಚಾಗುತ್ತಿದೆ. ಮನೆಯಿಂದ ಹೊರಗೆ ಹೋದವರು ಮತ್ತೆ ಮನೆಗೆ ಮರಳಿ ಬರುವವರೆಗೂ ಒಂದು ರೀತಿಯ ಅವ್ಯಕ್ತವಾದ ಭ ಯ ವು ಮನವನ್ನು ಕಾಡುತ್ತಲೇ ಇರುತ್ತದೆ. ಏಕೆಂದರೆ ರಸ್ತೆಗಳಲ್ಲಿ ಸಂಚರಿಸುವ ಅನೇಕರು ಯಾವುದೇ ನಿಯಮಗಳನ್ನು ಪಾಲನೆ ಮಾಡದೆ ರ‌್ಯಾಷ್ ಆಗಿ ವಾಹನಗಳನ್ನು ಚಲಾಯಿಸುವುದು ಒಂದು ಶೋಕಿಯಾಗಿದೆ.ಬೆಟ್ಟ ಪ್ರದೇಶಗಳಲ್ಲಿ, ಘಟ್ಟ ಗಳಂತಹ ಪ್ರದೇಶಗಳಲ್ಲಿ ರಸ್ತೆಯು ಕಿರಿದಾಗಿರುವುದು ಮಾತ್ರವೇ ಅಲ್ಲದೆ ಸಾಕಷ್ಟು ಅ ಪಾ ಯದಿಂದ ಕೂಡ ತುಂಬಿರುತ್ತದೆ. ಇಲ್ಲಿ ವಾಹನ ಚಲಾಯಿಸುವಾಗ

ವಾಹನ ಚಾಲಕನಿಗೆ ಅತಿಮುಖ್ಯವಾಗಿ ಬೇಕಾಗಿರುವುದು ತಾಳ್ಮೆ. ಏಕೆಂದರೆ ಘಟ್ಟಗಳಲ್ಲಿನ ತಿರುವುಗಳ ರಸ್ತೆಗಳಲ್ಲಿ ವಾಹನ ಚಲಾಯಿಸುವುದು ಎಂದರೆ ಅದು ಯಾವುದೇ ಸವಾಲಿಗಿಂತ ಕಡಿಮೆ ಏನಿಲ್ಲ. ಸ್ವಲ್ಪ ಏಮಾರಿದರೂ ಇಡೀ ವಾಹನ ಪ್ರಪಾತಕ್ಕೆ ಬೀಳುವ ಸಾಧ್ಯತೆಗಳು ಇರುತ್ತವೆ. ಅದಕ್ಕೆ ಇಂತಹ ರಸ್ತೆಗಳಲ್ಲಿ ವಾಹನ ಚಲಾಯಿಸುವ ಚಾಲಕರು ಮೈಯೆಲ್ಲಾ ಕಣ್ಣಾಗಿ ವಾಹನದ ಚಾಲನೆ ಮಾಡುವರು. ಇದು ವಾಹನ ಚಾಲಕರ ತಾಳ್ಮೆ ಗೆ ಒಂದು ಪರೀಕ್ಷೆಯಿದ್ದಂತೆ.ಸೋಶಿಯಲ್ ಮೀಡಿಯಾದಲ್ಲಿ ವಿಡಿಯೋ ಒಂದು ವೈರಲ್ ಆಗಿದ್ದು ಈ ವಿಡಿಯೋ ನೋಡಿದಾಗ ಘಟ್ಟಪ್ರದೇಶದ ಬೆಟ್ಟಗಳ ಸಾಲಿನಲ್ಲಿರುವ ರಸ್ತೆಯೊಂದರಲ್ಲಿ ಹೇಗೆ ಒಬ್ಬ ಸ್ಕಾರ್ಪಿಯೋ ವಾಹನ ಚಾಲಕ ಉದ್ದಟತನವನ್ನು

ಮೆರೆಯುತ್ತಾ ತನ್ನ ವಾಹನವನ್ನು ಚಾಲನೆ ಮಾಡಿದ್ದಾನೆ ಎಂಬುದು ಕಂಡುಬರುತ್ತಿದೆ. ವೈರಲ್ ಆಗಿರುವ ಈ ವಿಡಿಯೋವನ್ನು ಈಗಾಗಲೇ 62 ಲಕ್ಷಕ್ಕಿಂತ ಅಧಿಕ ಮಂದಿ ವೀಕ್ಷಣೆ ಮಾಡಿದ್ದಾರೆ.‌ಅನೇಕರು ಸ್ಕಾರ್ಪಿಯೋ ಚಾಲಕನ ವರ್ತನೆಯನ್ನು ಟೀಕೆ ಮಾಡಿದ್ದಾರೆ ಕೆಲವರು ಆತನ ಪ್ರವರ್ತನೆಯನ್ನು ಸಮರ್ಥಿಸಿಕೊಂಡಿದ್ದಾರೆ.
ಈ ವೈರಲ್ ವಿಡಿಯೋ ಗಮನಿಸಿದಾಗ ಮಹಾರಾಷ್ಟ್ರದ ಕೊಲ್ಹಾಪುರ ಜಿಲ್ಲೆಯ ಗಗನ್ ಘಾಟಿನ ರಸ್ತೆಯಲ್ಲಿ ಈ ಘಟನೆ ನಡೆದಿದೆ ಎನ್ನಲಾಗಿದೆ.ಈ ಘಟ್ಟ ಪ್ರದೇಶದ ರಸ್ತೆಯಲ್ಲಿ ವಾಹನಗಳು ಸಾಲಾಗಿ ಒಂದರ ಹಿಂದೆ ಮತ್ತೊಂದು ನಿಧಾನವಾಗಿ ಘಾಟ್ ನ ಮೇಲ್ಮುಖವಾದ ರಸ್ತೆಯಲ್ಲಿ ಚಲಿಸುತ್ತಿವೆ. ಅದರಲ್ಲಿ ಎಲ್ಲಕ್ಕಿಂತ ಮುಂದೆ ಒಂದು ಟ್ರಕ್, ಅದರ ಹಿಂದೆ ಬಸ್, ಬಸ್ ನ ಹಿಂದೆ ಒಂದು ಕಾರ್ ಬರುತ್ತಿದ್ದು

ಆ ಕಾರಿನ ಹಿಂಭಾಗದಲ್ಲಿ ಸ್ಕಾರ್ಪಿಯೋ ಬರುತ್ತಿದೆ. ರಸ್ತೆಯ ಒಂದು ಕಡಿದಾದ ತಿರುವಿನಲ್ಲಿ ಟ್ರಾಕ್ ಚಾಲಕ ವಾಹನವನ್ನು ನಡೆಸುವಾಗ ಅದು ಸರಾಗವಾಗಿ ಮುಂದಕ್ಕೆ ಹೋಗದೆ ಸ್ವಲ್ಪ ಹಿಂದೆ ಸರಿದಿದೆ. ಕೂಡಲೇ ಹಿಂದೆ ಇದ್ದ ಬಸ್ಸು ಕೂಡ ನಿಧಾನವಾಗಿದ್ದು, ಅದರ ಹಿಂದಿನ ವಾಹನಗಳು ಕೂಡ ವೇಗವನ್ನು ಕಡಿಮೆ ಮಾಡಿಕೊಂಡು ನಿಂತಿದೆ. ಟ್ರಕ್ ಚಾಲಕ ಬಹಳ ಪರಿಶ್ರಮದಿಂದ ಟ್ರಕ್ಕನ್ನು ಮುನ್ನಡೆಸುವ ಪ್ರಯತ್ನ ಮಾಡುತ್ತಿದ್ದಾನೆ.

ಆದರೆ ಅದೇ ಸಮಯದಲ್ಲಿ ವಾಹನಗಳ ಪಕ್ಕದಲ್ಲಿ ಇದ್ದ ಅಲ್ಪ ಜಾಗದಲ್ಲೇ ಸ್ಕಾರ್ಪಿಯೋ ಚಾಲಕ ತನ್ನ ವಾಹನವನ್ನು ನುಗ್ಗಿಸಿದ್ದಾನೆ. ತನ್ನ ಮುಂದಿನ ವಾಹನಗಳನ್ನು ಹಿಂದೆ ಹಾಕುತ್ತಾ, ರಾಂಗ್ ಸೈಡ್ನಲ್ಲಿ ಓವರ್ಟೇಕ್ ಮಾಡುತ್ತಾನೆ. ಈ ಘಟನೆಯನ್ನು ನೋಡಿ ಅಲ್ಲಿದ್ದ ಕಾರಿನ ಚಾಲಕ ಕೂಡಾ ಅದನ್ನು ಪ್ರಯತ್ನ ಮಾಡಲು ಹೋಗುತ್ತಾನೆ‌. ಈ ವೀಡಿಯೋ ನೋಡಿದಾಗ ಒಂದು ವೇಳೆ ಸ್ಟಾರ್ಪಿಯೋ ಮುಂದೆ ಬಂದಾಗಲೇ ಟ್ರಕ್ ಕೂಡಾ ಮುಂದೆ ಬಂದಿದ್ದರೆ ಅಲ್ಲಿ ಏನು ನಡೆದಿರುತ್ತಿತ್ತು ಎಂಬುದನ್ನು ಊಹಿಸುವುದು ಅಸಾಧ್ಯ ಎನಿಸುತ್ತದೆ. ಸ್ಕಾರ್ಪಿಯೋ ನ ಚಾಲಕ ತಾಳ್ಮೆಯನ್ನು ಕಳೆದುಕೊಂಡು ಆ ರೀತಿ ಮುನ್ನುಗ್ಗಿದ್ದು ಅಪಾಯಕ್ಕೆ ಆಹ್ವಾನವನ್ನು ನೀಡಿದಂತೆ ಕಾಣುತ್ತದೆ.

ವಿಡಿಯೋ ನೋಡಿ

ನಿಮ್ಮ ಸ್ನೇಹಿತರಿಗೆ ಮತ್ತು ಫೇಸ್ಬುಕ್ ಗ್ರೂಪ್ ಗೆ ಶೇರ ಮಾಡಿ...
  •  
  •  
  •  
  •  
  •  
  •  
  •