ಒಬ್ಬಳು ಹೆಂಡತಿಯನ್ನೇ ಸುಧಾರಿಸುವುದು ಕಷ್ಟ. ಅಂತಹದ್ದರಲ್ಲಿ ಕೆಲವರು ಎರಡೆರಡು ಮದುವೆ ಆಗಿ ಪಜೀತಿ ಪಡುವುದನ್ನು ನೋಡಿದ್ದೇವೆ. ಅದರಲ್ಲೂ ಮನೆಯಲ್ಲಿ ಒಬ್ಬ ಹೆಣ್ಣು ಗರ್ಭಿಣಿ ಆದರೆ ಸಂತೋಷಪಡುತ್ತೇವೆ. ಆದರೆ ಮನೆಯ ಅಷ್ಟೂ ಜನ ಹೆಣ್ಣೂ ಗರ್ಭಿಣಿಯಾದರೆ ಯಾವಾಗ ಯಾರ ಡೆಲಿವರಿ ಆಗುತ್ತದೆ ಎಂದು ಭಯವಾಗುತ್ತದೆ. ಆದರೆ ಇಲ್ಲೊಬ್ಬ ಭೂಪನಿದ್ದಾನೆ. ಅವನಿಗೆ ಒಂದಲ್ಲ ಎರಡಲ್ಲ ಬರೋಬ್ಬರಿ 13 ಹೆಂಡತಿಯರು. ಅವನು ನೈಜಿರಿಯಾ ಮೂಲದವನು. ಆ 13 ಜನ ಹೆಣ್ಣು ಮಕ್ಕಳನ್ನು ಒಂದೇ ಸಲ ಮದುವೆಯಾದನಂತೆ. ಆದರೆ ವಿಚಿತ್ರ ಅದಲ್ಲ , ಅವನ 13 ಜನ ಹೆಂಡತಿಯರೂ ಒಂದೇ ಸಲ ಗರ್ಬಿಣಿಯಾಗಿದ್ದಾರೆ.

ಅವನ ಶ್ರಿಮಂತಿಕೆಗೂ ಅಥವಾ ಅವನ ಪ್ರೀತಿಗೋ ಏನೋ ಮೋಹಗೊಂಡು ಅವನ ಹೆಂಡತಿಯರು ಅವನ ಬಲೆಗೆ ಬಿದ್ದಿದ್ದಾರೆ. ಸಮಾಧಾನಕರ ವಿಷಯ ಏನೆಂದರೆ ಅವರೆಲ್ಲಾ ಒಂದೇ ಮನೆಯಲ್ಲಿದ್ದು ಬಹಳ ಅನ್ಯೋನ್ಯವಾಗಿದ್ದಾರೆ. ಎರಡು ಜಡೆ ಇರುವ ಕಡೆ ಜಗಳ ಕಾಮನ್ ಅಂತಾರೆ. ಆದರೆ ಅದನ್ನು ಸುಳ್ಳು ಮಾಡಿದ್ದಾರೆ.ಅವನ ಹೆಂಡತಿಯರು ಒಂದೇ ಸಲ ಗರ್ಭಿಣಿಯಾದರೂ ಅವರ ಪ್ರಸವ ಸಮಯ 10 ಹತ್ತು ದಿನ ಹೆಚ್ಚು ಕಡಿಮೆಯಲ್ಲಿ ಆಗುತ್ತದಂತೆ. ಇದರಿಂದ ಸ್ವಲ್ಪ ಅವನು ಸುಧಾರಿಸಿಕೊಳ್ಳಬಹುದು. ಇನ್ನೂ ಪ್ರಪಂಚದಲ್ಲಿ ಅತಿ ಹೆಚ್ಚು ಹೆಂಡತಿಯರನ್ನು ಹೊಂದಿದವರಲ್ಲಿ ಗಿನ್ನಿಸ್ ದಾಖಲೆಯಲ್ಲಿ ಇವನು ಎರಡನೇ ಸ್ಥಾನ ಪಡೆದಿದ್ದಾನೆ.

13 wife

ಹಾಗಾದರೆ ಮೊದಲ ಸ್ಥಾನ ಹೊಂದಿರುವವರು ಯಾರು ? ಅವನಿಗೆ ಎಷ್ಟು ಹೆಂಡತಿಯರು ಇದ್ದಾರೆ ? ನಮ್ಮ ಭಾರತದ ಮಿಜೋರಾಮ್ ರವರಿಗೆ 39 ಹೆಂಡತಿಯರು ಇದ್ದಾರೆ. ಅವರು ಅತಿ ಹೆಚ್ಚು ಹೆಂಡತಿಯರನ್ನು ಹೊಂದಿರುವ ದಾಖಲೆಯಲ್ಲಿ ಮೊದಲ ಸ್ಥಾನ ಹೊಂದಿದ್ದಾನೆ.
.ಇನ್ನು ನೈಜಿರಿಯಾದವನ 13 ಹೆಂಡತಿಯರ ಫೋಟೋ ಎಲ್ಲಾ ಕಡೆ ವೈರಲ್ ಆಗಿದೆ. ಇಂಟರ್ನೆಟ್ ತುಂಬಾ ಇವನದೇ ಸುದ್ದಿ. ಇದು ಸುಳ್ಳು ಸುದ್ದೀನಾ ? ಅಥವಾ ಯಾರಾದರೂ ಈ ರೀತಿಯಲ್ಲಿ ಫೋಟೋ ಎಡಿಟ್ ಮಾಡಿದ್ದಾರಾ ? ಗೊತ್ತಾಗುತ್ತಿಲ್ಲ. ಮೇಲಿನ ಎಲ್ಲಾ ಮಾಹಿತಿ ನಮಗೆ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಿದೆ ಮತ್ತು ಈ ಮಾಹಿತಿಯ ಬಗ್ಗೆ ನಿಮ್ಮ ಅಭಿಪ್ರಾಯಗಳನ್ನು ನಮ್ಮ ಕಾಮೆಂಟ್ ಬಾಕ್ಸ್ ಗೆ ತಿಳಿಸಿ ಹಾಗೆ ತಪ್ಪದೇ ಶೇರ್ ಮಾಡಿ ಧನ್ಯವಾದಗಳು..

ನಿಮ್ಮ ಸ್ನೇಹಿತರಿಗೂ/ಫೇಸ್ಬುಕ್ ಗ್ರೂಪ್ ಗೆ ಶೇರ್ ಮಾಡಿ...
  •  
  •  
  •  
  •  
  •  
  •  
  •  
  •