ಈ ಹುಡುಗಿ 10-ನೇ ಕ್ಲಾಸ್ ಫೇಲ್!ಆದರೆ ಸಂಬಳ ತಿಂಗಳಿಗೆ 2 ಲಕ್ಷ,ಏನು ಕೆಲಸ ಮಾಡ್ತಾರೆ ಗೊತ್ತಾ?

ನಮಸ್ತೆ ಸ್ನೇಹಿತರೆ, ಈ ಕಾಲದಲ್ಲಿ ಡಿಗ್ರಿ, ಮಾಸ್ಟರ್ ಡಿಗ್ರಿ ಮಾಡುವವರಿಗೆ ಸರಿಯಾಗಿ ಕೆಲಸ ಸಿಗುತ್ತಿಲ್ಲ.. ಈಗಿರುವ ಸಂದರ್ಬದಲ್ಲಿ ಕೇವಲ ಹತ್ತನೇ ತರಗತಿ ಓದಿದವರ ಗತಿ ಏನಾಗುತ್ತದೆ ಎಂದು ನಾವು ಊಹಿಸಿಕೊಳ್ಳಬಹುದು.. ಇನ್ನೂ ಇಲ್ಲೊಬ್ಬ ಮಹಿಳೆ ಓದಿರೋದು ಕೇವಲ 10 ನೇ ತರಗತಿ ಮಾತ್ರ ಆದರೆ ಇವರ ಸಂಬಳ ಏಷ್ಟು ಗೊತ್ತಾ? ತಿಂಗಳಿಗೆ 2 ಲಕ್ಷ ರೂಪಾಯಿ.. ಇನ್ನೂ ಈ ಯುವತಿ ಯಾರು ಮತ್ತು ಹೇಗೆ ಅಷ್ಟೊಂದು ಸಂಪಾದನೆ ಮಾಡುತ್ತಿದ್ದಾರೆ ಎಂಬುದನ್ನು ಸಂಪೂರ್ಣವಾಗಿ ತಿಳಿಯೋಣ.  ಈ ಯುವತಿ ಹೆಸರು ನಂದಿನಿ, ಇವರ ವಯಸ್ಸು 33 ವರ್ಷ.. ಇವರು ಹುಟ್ಟಿದ್ದು ಬೆಂಗಳೂರು ಸಮೀಪದ ಒಂದು ಹಳ್ಳಿಯಲ್ಲಿ.
ಇನ್ನೂ ನಂದಿನಿಯವರಿಗೆ ಚಿಕ್ಕ ವಯಸ್ಸಿನಿಂದಲೂ ಡಾಕ್ಟರ್ ಆಗಬೇಕೆನ್ನುವ ಕನಸನ್ನು ಹೊತ್ತಿರುತ್ತಾರೆ.. ಆದರೆ ಬಡತನದ ಕಾರಣದಿಂದ 10ನೇ ತರಗತಿಗೆ ತನ್ನ ವಿದ್ಯಾಭ್ಯಾಸವನ್ನು ನಿಲ್ಲಿಸುತ್ತಾರೆ.. ನಂತರ ಇವರಿಗೆ ಮನೆಯವರು ಮದುವೆ ಮಾಡಿ ಗಂಡನ ಮನೆಗೆ ಕಳುಹಿಸಿಬಿಡುತ್ತಾರೆ.. ಇವರ ಪತಿಯ ಹೆಸರು ಶ್ರೀಕಾಂತ್.. ನಂದಿನಿಯವರ ತಂದೆ ತೀರಿಕೊಂಡಾಗ ತವರು ಮನೆಯ ಜವಾಬ್ದಾರಿ ಈಕೆಯ ಮೇಲೆ ಬೀಳುತ್ತದೆ.. ಈಗೆ ಒಂದಾದ ನಂತರ ಒಂದು ಕಷ್ಟಗಳು ನಂದಿನಿಯವರಿಗೆ ಬರುತ್ತಲೇ ಇರುತ್ತದೆ.. ಈಗಿರುವಾಗ ನಂದಿನಿಯವರು ಗಂಡನ ಜೊತೆ ಸೇರಿ ಕೆಲಸ ಮಾಡಿ ಸ್ವಲ್ಪ ಸಂಪಾದನೆ ಮಾಡುತ್ತಾರೆ.. ಆದರೆ ಅದರಿಂದ ಯಾವ ಕಷ್ಟಗಳು ಸಹ ತೀರುವುದಿಲ್ಲ..

10th-Class-Fail

ಈ ಸಂದರ್ಬದಲ್ಲಿ ಅವರ  ಸ್ಥಳೀಯರು ಊಬರ್ ಸಂಸ್ಥೆಯ ಬಗ್ಗೆ ಹೇಳುತ್ತಾರೆ.. ಇದರಲ್ಲಿ ಕಾರನ್ನು ಅಟ್ಯಾಚ್ ಮಾಡಿದರೆ ಒಳ್ಳೆಯ ಲಾಭವಿದೆ ಎಂದು ಯೋಚನೆ ಮಾಡಿದ ನಂದಿನಿಯವರು.. ತನ್ನಲ್ಲಿದ್ದ ಎಲ್ಲಾ ಆಭರಣಗಳನ್ನು ಅಡವಿಟ್ಟು ಒಂದು ಟೊಯೋಟಾ ಕಾರನ್ನು ಖರೀದಿ ಮಾಡುತ್ತಾರೆ.. ಇಷ್ಟೇ ಅಲ್ಲದೇ ಊಬರ್ ನಲ್ಲಿ ದುಡ್ಡನ್ನು ಸಂಪಾದನೆ ಮಾಡಲು ಇನ್ನೊಂದು ದಾರಿ ಕೂಡ ಇರುತ್ತದೆ.. ಅದೇನೆಂದರೆ! ತನ್ನ ಮ‌ೂಲಕ ಇನ್ನೊಂದು ಕಾರನ್ನು ಅಟ್ಯಾಚ್ ಮಾಡಿದರೆ ಅವರಿಗೆ ಇಷ್ಟು ಪರ್ಸೆಂಟೇಜ್ ಅಂತ ಹಣ ಸಿಗುತ್ತದೆ..

ಇದನ್ನು ಯೋಚನೆ ಮಾಡಿದ ನಂದಿನಿಯವರು ಚಿಕ್ಕದಾಗಿ ಒಂದು ಆಪಿಸ್ ಅನ್ನು ಓಪನ್ ಮಾಡಿ ನಾಲ್ಕು ಜನರನ್ನ ಕೆಲಸಕ್ಕೆ ಇಟ್ಟುಕೊಳ್ಳುತ್ತಾರೆ.. ಈಗೆ ಕೆಲವು ಕಾರುಗಳನ್ನ ನೋಡುತ್ತಾ ನಂದಿನಿಯವರು ಇದುವರೆಗೂ ಸುಮಾರು 6000 ಸಾವಿರ ಕಾರುಗಳನ್ನು ಅಟ್ಯಾಚ್ ಮಾಡಿದ್ದಾರೆ. ಇದರಿಂದ ಅವರ ಸಂಪಾದನೆ ಕೂಡ ಹೆಚ್ಚಾಗುತ್ತಾ ಹೋಗುತ್ತದೆ.. ಈಗ ನಂದಿನಿಯವರು ತಿಂಗಳಿಗೆ 2 ಲಕ್ಷ ರೂಪಾಯಿಯನ್ನು ಸಂಪಾದನೆ ಮಾಡುತ್ತಿದ್ದಾರೆ.. ನೋಡಿದರಲ್ವಾ ಸ್ನೇಹಿತರೆ ಕೇವಲ 10 ನೇ ತರಗತಿ ಓದಿದರು ಜೀವನದಲ್ಲಿ ಯಾವ ರೀತಿ ಮುಂದೆ ಬರಬಹುದು ಸಾಧನೆ ಮಾಡಬಹುದು ಅಂತಾ.. ಇದಕ್ಕೆ ನಂದಿನಿಯವರೇ ಉತ್ತಮ ಉದಾಹರಣೆ.

ನಿಮ್ಮ ಸ್ನೇಹಿತರಿಗೂ/ಫೇಸ್ಬುಕ್ ಗ್ರೂಪ್ ಗೆ ಶೇರ್ ಮಾಡಿ...
  •  
  •  
  •  
  •  
  •  
  •  
  •  
  •