ಕಥೆ ಬದಲಾವಣೆ ಮಾಡಲು ಹೋಗಿ ಧಾರವಾಹಿಯೊಂದು ಪೇಚಿಗೆ ಸಿಲುಕಿಕೊಂಡಿದೆ. ತಮ್ಮ ಸೀರಿಯಲ್ ಕಥೆಯಲ್ಲಿ ಸಮಾಜಕ್ಕೆ ಕೆ’ಟ್ಟ ಸಂದೇಶ ನೀಡುವಂತಹ ಟ್ವಿಸ್ಟ್ ಒಂದನ್ನು ಈ ಧಾರವಾಹಿ ನೀಡಿದ್ದು, ಅಭಿಮಾನಿಗಳು ಈ ಧಾರವಾಹಿ ಬ್ಯಾನ್ ಆಗಬೇಕು ಎಂದು ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಲು ಶುರು ಮಾಡಿದ್ದಾರೆ. ಅಷ್ಟಕ್ಕೂ ಈ ಧಾರಾವಾಹಿಯಲ್ಲಿ ನಟಿಸುತ್ತಿರುವ ನಟ ನಟಿಯರು ಯಾರು? ಏನೋ ಮಾಡಲು ಹೋಗಿ ಇನ್ನೇನು ಆಗಿದ್ದು ಹೇಗೆ, ಅಷ್ಟಕ್ಕೂ ಈ ಧಾರಾವಾಹಿಯಲ್ಲಿ ಏನಿದೆ ಗೊತ್ತಾ? ಜನರು ಇಷ್ಟೊಂದು ಗರಂ ಆಗಿರುಡುವುದು ಯಾಕೆ ಗೊತ್ತಾ?

ಇದರ ಬಗ್ಗೆ ತಿಳಿಯಲು ಮುಂದೆ ಓದಿರಿ.ಪ್ರತಿದಿನ ಧಾರವಾಹಿ ವೀಕ್ಷಿಸುವ ಪ್ರೇಕ್ಷಕರು ಒಂದೊಳ್ಳೆ ಕಥೆಯ ಜೊತೆ ಉತ್ತಮ ಸಾರಾಂಶ ಮತ್ತು ಏನಾದರೂ ಹೊಸತನ ಇರಲಿ ಎಂದು ಅಪೇಕ್ಷೆ ಪಡುತ್ತಾರೆ. ಧಾರವಾಹಿಗಳ ತಯಾರಕರು ಸಹ ವೀಕ್ಷಕರಿಗೆ ಇಷ್ಟ ಆಗಬೇಕು ಎಂದು ನಾನಾ ರೀತಿಯ ಪ್ರಯತ್ನ ಮಾಡುತ್ತಾರೆ. ಹೀಗೆ ಹಿಂದಿ ಭಾಷೆಯ ಗಮ್ ಹೈ ಕಿ’ಸಿ ಕೇ ಪ್ಯಾರ್ ಮೈ ಹೆಸರಿನ ಧಾರವಾಹಿಯಲ್ಲಿ ಟ್ವಿಸ್ಟ್ ನೀಡಲು ಹೋಗಿ ದೊಡ್ಡ ಇ’ಕ್ಕಟ್ಟಿಗೆ ಸಿಕ್ಕಿಹಾಕಿಕೊಂಡಿದೆ ಧಾರವಾಹಿ ತಂಡ. ಈ ಧಾರವಾಹಿಯಲ್ಲಿ ಅತ್ತಿಗೆ ಮತ್ತು ಮೈದುನನ ಪಾತ್ರದ ನಡುವೆ ಪ್ರೀತಿ ಬೆಳೆಯುವ ಹಾಗೆ ಕಥೆ ಮಾಡಿದ್ದಾರೆ.ಮೈದುನ ಮತ್ತು ಅತ್ತಿಗೆಯ ನಡುವೆ ಶುರುವಾಗುವ ಪ್ರೀತಿಯ ಸನ್ನಿವೇಶಗಳನ್ನೇ ಹೆಚ್ಚಾಗಿ ತೋರಿಸಿ, ಇವರಿಬ್ಬರ ಪ್ರೀತಿಯನ್ನು ಮನೆಯಲ್ಲಿರುವ ಹಿರಿಯರು ಸಹ ಒಪ್ಪಿಕೊಳ್ಳುವ ಹಾಗೆ ಕಥೆಯನ್ನು ಹೆಣೆದಿದ್ದಾರೆ. ಕಥೆ ಈ ರೀತಿ ಹೋಗುತ್ತಿರುವುದರಿಂದ ಒಳ್ಳೆಯ ಪ್ರಶಂಸೆ ಪಡೆಯುತ್ತಿದ್ದ ಈ ಧಾರವಾಹಿ ಈಗ ಕಳಪೆ ಎನ್ನುವ ಕಟ್ಟಕ್ಕೆ ಇಳಿದಿದೆ. ನೆಟ್ಟಿಗರು ಮತ್ತು ಧಾರವಾಹಿ ಅಭಿಮಾನಿಗಳು, ಈಗಲೇ ಈ ಧಾರವಾಹಿ ಬ್ಯಾನ್ ಆಗಬೇಕು ಎನ್ನುತ್ತಿದ್ದಾರೆ. ಅತ್ತಿಗೆ ಮೈದುನನ ನಡುವೆ ಶುರುವಾಗಿರುವ ಈ ಪ್ರೀತಿ ನೋಡುಗರಿಗೆ ಮತ್ತು ಈ ಸಮಾಜಕ್ಕೆ ಕೆಟ್ಟ ಸಂದೇಶ ನೀಡುತ್ತಿದೆ ಎಂದು ನೆಟ್ಟಿಗರು ಹೇಳುತ್ತಿದ್ದಾರೆ.ಇದರಿಂದ ಕುಟುಂಬಗಳು ಜೊತೆಯಾಗಿ ಕುಳಿತು ನೋಡಲು ಆಗುತ್ತಿಲ್ಲ, ಮಕ್ಳಳ ಮನಸ್ಸಿನ ಮೇಲೆ ಇದು ಕೆಟ್ಟ ಪರಿಣಾಮ ಬೀರುತ್ತದೆ. ಈ ಧಾರವಾಹಿ ಕೂಡಲೇ ಬ್ಯಾನ್ ಆಗಬೇಕು ಎಂದು ಸೋಷಿಯಲ್ ಮೀಡಿಯಾದಲ್ಲಿ ಹ್ಯಾಶ್ ಟ್ಯಾಗ್ ಮಾಡಿ #BoycottGHKKPM ಇದನ್ನು ಟ್ವಿಟರ್ ನಲ್ಲಿ ಟ್ರೆಂಡ್ ಮಾಡುತ್ತಿದ್ದಾರೆ. ಇದಲ್ಲದೇ ನಿಜ ಜೀವನದಲ್ಲಿ ಕೂಡ ಈ ಅತ್ತಿಗೆ ಮೈದುನ ಪಾತ್ರ ಮಾಡುತ್ತಿರುವ ಕಲಾವಿದರು ಮದುವೆ ಆಗುತ್ತಿದ್ದಾರೆ ಎನ್ನುವ ಸುದ್ದಿ ಬಂದಿದ್ದು, ಇದನ್ನು ಸಹ ನೆಟ್ಟಿಗರು ಮತ್ತು ಅಭಿಮಾನಿಗಳು ವಿರೋಧಿಸುತ್ತಿದ್ದಾರೆ. ಇದರ ಬಗ್ಗೆ, ಇಂತಹ ದಾರಾವಾಹಿಗಳ ಬಗ್ಗೆ ನಿಮ್ಮ ಅನಿಸಿಕೆ ಅಭಿಪ್ರಾಯ ಗಳನ್ನೂ ತಪ್ಪದೆ ಕಾಮೆಂಟ್ ಮೂಲಕ ನಮಗೆ ತಿಳಿಸಿರಿ. ಇಂತಹ ಧಾರಾವಾಹಿಗಳನ್ನು ಬ್ಯಾನ್ ಮಾಡಬೇಕೆ? ನಿಮ್ಮ ಅನಿಸಿಕೆ ಕಾಮೆಂಟ್ ಮೂಲಕ ನಮಗೆ ತಿಳಿಸಿರಿ.

ನಿಮ್ಮ ಸ್ನೇಹಿತರಿಗೂ/ಫೇಸ್ಬುಕ್ ಗ್ರೂಪ್ ಗೆ ಶೇರ್ ಮಾಡಿ...
  •  
  •  
  •  
  •  
  •  
  •  
  •  
  •