ಕರ್ನಾಟಕ ರಾಜ್ಯ ಕೃಷಿ ಇಲಾಖೆಯಿಂದ ರಾಜ್ಯಾದ್ಯಂತ ಇರುವ ಎಲ್ಲಾ ರೈತರಿಗೆ ಕೃಷಿ ಉತ್ಪನ್ನ ಸಂಸ್ಕರಣ ಸಲಕರಣೆಗಳಿಗಾಗಿ ಹೊಸ ಅರ್ಜಿಗೆ ಆಹ್ವಾನ ನೀಡಲಾಗಿದೆ. ಅಂದರೆ ರೈತರ ಕೃಷಿಗೆ ಉಪಯೋಗವಾಗುವ ಕೃಷಿ ಉತ್ಕರಣ ಸಲಕರಣೆಗಳು, ಅಂದರೆ ಕೃಷಿ ಸಂಸ್ಕರಣ ಯೋಜನೆ ಅಡಿಯಲ್ಲಿ, ಕೃಷಿಗೆ ಬೇಕಾದ ಯಂತ್ರಗಳನ್ನು,
ಸಹಾಯ ಧನ ಮೂಲಕ ಪಡೆದುಕೊಳ್ಳಲು, ಹೊಸ ಅರ್ಜಿಗಳನ್ನು ಆಹ್ವಾನ ನೀಡಲಾಗಿದೆ. ಇದರಲ್ಲಿ ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡಕ್ಕೆ ಒಳಪಡುವವರಿಗೆ ಶೇಕಡ 90ರಷ್ಟು ಸಬ್ಸಿಡಿ ಸಹಾಯ ಧನವನ್ನು ನೀಡಲಾಗುತ್ತದೆ.
ಹಾಗೂ ಇತರೆ ಜನಾಂಗದವರಿಗೆ ಶೇಕಡ 50ರಷ್ಟು ಸಬ್ಸಿಡಿ ಸಹಾಯಧನವನ್ನು ನೀಡಲಾಗುತ್ತದೆ.
ಹಾಗಾದರೆ ಬನ್ನಿ ಯಾವಾಗ ಹಾಗೂ ಎಲ್ಲಿ ಅರ್ಜಿಗಳನ್ನು ಸಲ್ಲಿಸಬೇಕು? ಇನ್ನು ಇದಕ್ಕೆ ಬೇಕಾಗುವ ದಾಖಲೆಗಳು ಏನು? ಯಾವಾಗ ದೊರೆಯುತ್ತದೆ? ಹಾಗೂ ಇದನ್ನು ಹೇಗೆ ಪಡೆಯಬೇಕು? ಈ ರೀತಿಯ ಸಾಕಷ್ಟು ಪ್ರಶ್ನೆಗಳು ನಿಮ್ಮಲ್ಲಿ ಕಾಡುತ್ತಿರಬಹುದು. ಇನ್ನು ಎಲ್ಲ ಪ್ರಶ್ನೆಗಳಿಗೆ ಇಂದು ಉತ್ತರಿಸುತ್ತೇವೆ ಈ ಪುಟವನ್ನು ಪೂರ್ತಿಯಾಗಿ ಓದಿ..
ಕೃಷಿ ಇಲಾಖೆಯಿಂದ 2022- 23ನೆ ಸಾಲಿನ ಕೃಷಿ ಸಂಸ್ಕರಣೆ ಯೋಜನೆ ಅಡಿಯಲ್ಲಿ, ಕೃಷಿ ಉತ್ಪನ್ನಗಳ ಸಂಸ್ಕರಣ ಸಲಕರಣೆಗಳಿಗಾಗಿ, ಕೃಷಿ ಸಂಸ್ಕರಣ ಯೋಜನೆ ಅಡಿಯಲ್ಲಿ, ಹಿಟ್ಟಿನ ಗಿರಡಿ, ಕಾರ ಕಟ್ಟುವ ಯಂತ್ರ, ಶಾವಿಗೆ ಯಂತ್ರ, ರಾಗಿ ಕ್ಲೀನಿಂಗ್ ಮಿಲ್, ಪಲ್ವರೈಸರ್, ಕಬ್ಬಿನ ಹಾಲು ತೆಗೆಯುವ ಯಂತ್ರ,
ಮೋಟಾರು ಸೇರಿತ ಸಣ್ಣ ಎಣ್ಣೆ ಗಾಣ ಸೇರಿದಂತೆ, ಇತರೆ ಯಂತ್ರಗಳನ್ನು ಸಹಾಯ ಧನದ ರೂಪದಲಿ ವಿತರಣೆ ಮಾಡಲಾಗುವುದು. ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರಿಗೆ, ಶೇಕಡಾ 90 ಮತ್ತು ಸಾಮಾನ್ಯ ವರ್ಗದವರಿಗೆ ಶೇಕಡಾ 50 ರಷ್ಟು ಸಹಾಯ ಧನ ನೀಡಲಾಗುತ್ತಿದೆ.
ಆಸಕ್ತ ರೈತರು ತಮ್ಮ ಸಮೀಪದ ರೈತ ಸಂಪರ್ಕ ಕೇಂದ್ರಗಳು ಭೇಟಿ ನೀಡಿ, ಅರ್ಜಿಗಳನ್ನು ಸಲ್ಲಿಸಬಹುದಾಗಿದೆ. ಅರ್ಜಿಯ ಜೊತೆಗೆ ಪಹಣಿ, ಆಧಾರ್ ಕಾರ್ಡ್, ಬ್ಯಾಂಕ್ ಖಾತೆ ಪುಸ್ತಕ, ಹಾಗೆ ಭಾವ ಚಿತ್ರಗಳನ್ನು ಸಲ್ಲಿಸಬೇಕು. ಹೆಚ್ಚಿನ ಮಾಹಿತಿಗಾಗಿ ಸಮೀಪದ ರೈತ ಸಂಪರ್ಕ ಕೇಂದ್ರಕ್ಕೆ ಸಂಪರ್ಕಿಸಬಹುದು ಎಂದು ಸಹಾಯಕರು ತಿಳಿಸಿದ್ದಾರೆ.
ರಾಜ್ಯದ್ಯಂತ ಇರುವ ಎಲ್ಲ ರೈತರಿಗೂ, ಕೃಷಿ ಇಲಾಖೆ ಅಂದರೆ ರಾಜ್ಯ ಕೃಷಿ ಇಲಾಖೆ ಹೊಸದಾಗಿ ಕರೆಯಲಾಗಿರುವ ಕೃಷಿ ಉತ್ಪನ್ನಗಳ ಸಂಸ್ಕರಣ ಸಲಕರಣೆಗಳಿಗಾಗಿ ಹೊಸ ಅರ್ಜಿಗಳನ್ನು ಕರೆಯಲಾಗಿರುವ ವಿಷಯವನ್ನು ಎಲ್ಲರಿಗೂ ತಲಪುವರೆಗೂ ದಯವಿಟ್ಟು ಶೇರ್ ಮಾಡಿ.