ದೇಶದಲ್ಲಿ ಅಗತ್ಯ ವಸ್ತುಗಳ ಬೆಲೆ ಏರಿಕೆ ಆಗಿರುವುದರಿಂದ ಬಡವರು ಹಾಗೂ ಮಧ್ಯಮ ವರ್ಗದವರ ಜೀವನ ನಿರ್ವಹಣೆ ಬಹಳ ಕ’ಷ್ಟವಾಗುತ್ತಿದೆ. ಇದನ್ನು ಮನಗಂಡ ಕೇಂದ್ರ ಸರ್ಕಾರವು (Government) ಕೋವಿಡ್ ಸಮಯದಲ್ಲಿ ಸ್ಥಗಿತಗೊಳಿಸಿದ್ದ LPG ಸಬ್ಸಿಡಿ (Subsidy) ವಿತರಣೆಯನ್ನು ಮತ್ತೆ ಪುನರಾರಂಭಿಸಿದೆ. ಈ ಬಗ್ಗೆ ಕೇಂದ್ರ ಸಚಿವ ಸಂಪುಟದಲ್ಲಿ ತೀರ್ಮಾನ ಆಗಿದ್ದು ಸುದ್ದಿಗೋಷ್ಠಿಯಲ್ಲಿ ಕೇಂದ್ರ ಸಚಿವರು ಈ ಬಗ್ಗೆ ಮಾಹಿತಿಯನ್ನು ಹಂಚಿಕೊಂಡಿದ್ದಾರೆ.
ಗೃಹ ಬಳಕೆಯ LPG ಸಿಲಿಂಡರ್ ಗೆ 200ರೂ. ಹಾಗೂ ಉಜ್ವಲ ಯೋಜನೆಯಡಿ ಸಿಲಿಂಡರ್ ಸೌಲಭ್ಯ ಪಡೆದಿರುವವರಿಗೆ ಈಗಾಗಲೇ ಸಿಗುತ್ತಿರುವ 200ರೂ. ಸಹಾಯಧನ ಜೊತೆಗೆ ಹೆಚ್ಚುವರಿ 200ರೂ. ಅಂದರೆ ಒಟ್ಟಾರೆಯಾಗಿ 400ರೂ. ಸಬ್ಸಿಡಿ ಸಿಗಲಿದೆ. ಈ ವಿಷಯದ ಕುರಿತು ಕೆಲವು ಮುಖ್ಯ ಮಾಹಿತಿಯನ್ನು ಈ ಅಂಕಣದಲ್ಲಿ ತಿಳಿಸುತ್ತಿದ್ದೇವೆ.
ಸಿಲಿಂಡರ್ ಸಬ್ಸಿಡಿ ಹಣ ಪಡೆಯಲು ಅರ್ಹತೆಗಳು:-
● ಒಂದು ವರ್ಷದಲ್ಲಿ 12 ಸಿಲಿಂಡರ್ ಬಳಸುವ ಕುಟುಂಬಗಳು 12 ಸಿಲಿಂಡರ್ ಗಳ ಖರೀದಿ ಮೇಲೆ ಈ ಸಬ್ಸಿಡಿ ಸೌಲಭ್ಯ ಪಡೆಯಬಹುದು.
● ಈ ಸೌಲಭ್ಯವನ್ನು ಪಡೆಯಲು ಫಲಾನುಭವಿಗಳು ತಮ್ಮ ಆಧಾರ್ ಸಂಖ್ಯೆಯನ್ನು LPG ಸಂಪರ್ಕದೊಂದಿಗೆ ಲಿಂಕ್ ಮಾಡಿರಬೇಕು.
● ನೀವು ಯಾವ ಏಜೆನ್ಸಿಯಿಂದ ಪ್ರತಿ ತಿಂಗಳು LPG ಖರೀದಿ ಮಾಡೀರುತ್ತಿರೋ ಆ ಕಚೇರಿಯಲ್ಲಿ ಬ್ಯಾಂಕ್ ಖಾತೆ ವಿವರಗಳನ್ನು ಕೊಟ್ಟು ಅಪ್ಡೇಟ್ ಮಾಡಿರಬೇಕು. ಈಗಾಗಲೇ ಇದನ್ನು ಪೂರ್ತಿ ಕಳಿಸಿದರೆ ಮತ್ತೊಮ್ಮೆ ಮಾಡಬೇಕಾದ ಅವಶ್ಯಕತೆ ಇಲ್ಲ.● ಮೊದಲಿಗೆ https://www.mylpg.in ವೆಬ್ ಸೈಟ್ ಗೆ ಭೇಟಿ ಕೊಡಬೇಕು. ಎಲ್ಲಾ LPG ಕಂಪನಿಗಳ ಹೆಸರು ಕೂಡ ಇರುತ್ತದೆ. ಭರತ್ / ಇಂಡಿಯನ್ / HP ಮೂರರಲ್ಲಿ ನಿಮ್ಮ ಮನೆಗೆ ಬರುತ್ತಿರುವ ಸಿಲಿಂಡರ್ ಕಂಪನಿ ಯಾವುದು ಅದನ್ನು ಸೆಲೆಕ್ಟ್ ಮಾಡಿ.
● ಬಳಿಕ ಹೊಸ ಬಳಕೆದಾರ ಎಂದು ಇರುವ ಆಪ್ಷನ್ ಮೇಲೆ ಕ್ಲಿಕ್ ಮಾಡಿ ನಿಮಗೆ LPG ಗ್ರಾಹಕ ಸಂಖ್ಯೆ ಮತ್ತು ಮೊಬೈಲ್ ಸಂಖ್ಯೆಯನ್ನು ನಮೂದಿಸಿ ಮುಂದುವರೆಯಿರಿ.
ಈ ಪ್ರಕ್ರಿಯೆ ಮುಗಿದ ನಂತರ ನಿಮ್ಮ ಮೊಬೈಲ್ ಗೆ OTP ಸಂದೇಶ ಬರುತ್ತದೆ, Click here to generate OTP ಎನ್ನುವ ಆಯ್ಕೆ ಕಾಣುತ್ತದೆ, ಆ ಆಪ್ಷನ್ ಮೇಲೆ ಕ್ಲಿಕ್ ಮಾಡಿ.
● ಮತ್ತೊಂದು OTP ಬರುತ್ತದೆ, ಅದನ್ನು ನಮೂದಿಸಿ ವೇರಿಫೈ ಮಾಡಿ ಮುಂದುವರೆಯಿರಿ.
● ಬಳಕೆದಾರರ ID ಮತ್ತು Password create ಆಪ್ಷನ್ ಇರುತ್ತದೆ ಅದನ್ನು ಕ್ಲಿಕ್ ಮಾಡುವ ಮೂಲಕ ಈ ಪ್ರಕ್ರಿಯೆಯನ್ನು ಪೂರ್ತಿಗೊಳಿಸಿ.
● ಈಗ ಅದೇ ಐಡಿ ಮತ್ತು ಪಾಸ್ವರ್ಡ್ ಬಳಸಿ ಯಶಸ್ವಿಯಾಗಿ log in ಆಗಿ
● ಲಾಗಿನ್ ಆದ ಬಳಿಕ ಮೆನು ಕ್ಲಿಕ್ ಮಾಡಿದರೆ ಸಿಲಿಂಡರ್ ಬುಕಿಂಗ್ ಇತಿಹಾಸವನ್ನು ನೋಡಿ ಎನ್ನುವ ಮತ್ತೊಂದು ಆಪ್ಷನ್ ಕಾಣುತ್ತದೆ.
● ಆ ಆಪ್ಷನ್ ನ್ನು ಕ್ಲಿಕ್ ಮಾಡಿದ ಕೂಡಲೇ ನೀವು ಯಾವಾಗ ಸಿಲಿಂಡರ್ ಬುಕ್ ಮಾಡಿದ್ದೀರಾ, ಆ ಬುಕಿಂಗ್ ನಿಮಗೆ ಎಷ್ಟು ಸಬ್ಸಿಡಿ ಹಣ ಬಂದಿದೆ, ಅದು ನಿಮ್ಮ ಯಾವ ಬ್ಯಾಂಕ್ ಖಾತೆಗೆ ಜಮೆ ಆಗಿದೆ ಎನ್ನುವ ಸಂಪೂರ್ಣ ಮಾಹಿತಿ ಬರುತ್ತದೆ.