ಸಾವಿನಲ್ಲಿಯೂ ಅಂಗಾಂಗ ದಾನ ಮಾಡಿ ಸಾರ್ಥಕತೆ ಮೆರೆದ ದೀದಿ..! ಕೆಲವು ವ್ಯಕ್ತಿಗಳು ಬದುಕಿರುವಾಗ ಒಳ್ಳೆಯ ಕೆಲಸ ಮಾಡಿರುತ್ತಾರೋ ಇಲ್ಲವೋ ಆದರೆ ತಮ್ಮ ಸಾವಿನ ನಂತರ ಅವರ ಮಾಡಿದಂತಹ ಪುಣ್ಯದ ಕೆಲಸಗಳು, ಮಹತ್ಕಾರ್ಯಗಳು ಅವರನ್ನ ಸತ್ತ ನಂತರವೂ ಬದುಕಿಸುತ್ತದೆ. ಅದಕ್ಕೆ ಇತ್ತೀಚೆಗೆ ಅಕಾಲಿಕ ಮರಣ ಹೊಂದಿದ ಸ್ಟಾರ್ ನಟರಾದ ದಿ.ಪುನೀತ್ ರಾಜ್ ಕುಮಾರ್, ರಾಷ್ಟ್ರ ಪ್ರಶಸ್ತಿ ವಿಜೇತ ನಟ ದಿ. ಸಂಚಾರಿ ವಿಜಯ್ ಅವರು ತಮ್ಮ ನಿಧನದ ತಮ್ಮ ಅಂಗಾಂಗ ಮತ್ತು ನೇತ್ರದಾನ ಮಾಡುವ ಮೂಲಕ ಸಮಾಜಕ್ಕೆ ಮಾದರಿಯಾಗಿದ್ದಾರೆ. ತಮ್ಮ ಸಿನಿಮಾಗಳ ಮೂಲಕ ಅಪಾರ ಪ್ರಮಾಣದ ಅಭಿಮಾನಿ ಬಳಗವೊಂದಿರುವ ಇಂತಹ ಸ್ಟಾರ್ ನಟರೇ ನೇತ್ರದಾನ, ಅಂಗಾಂಗ ದಾನ ಮಾಡಿದಾಗ ಅವರನ್ನ ಫಾಲೋ ಮಾಡುವ ಅವರ ಅಭಿಮಾನಿಗಳು ಕೂಡ ಇಂತಹ ಪುಣ್ಯದ ಕೆಲಸಗಳನ್ನ ಮಾಡಲು ಮುಂದೆ ಬರುತ್ತಾರೆ.

ಅಂತೆಯೇ ಅಪ್ಪು ಅವರು ನಿಧನರಾದ ಬಳಿಕ ರಾಜ್ಯದಾದ್ಯಂತ ಅವರ ಅಭಿಮಾನಿಗಹು ಮತ್ತು ಅನೇಕ ಸಂಘ ಸಂಸ್ಥೆಗಳು ನೇತ್ರದಾನ ಶಿಬಿರ ಏರ್ಪಡಿಸಿ ಸಾವಿರಾರು ಮಂದಿ ನೇತ್ರದಾನ ಮಾಡಲು ನೋಂದಾಯಿಸಿಕೊಂಡರು. ಅದರಂತೆ ಇದೀಗ ನರ್ಸ್ ಒಬ್ಬರು ತನ್ನ ಸಾವಿನ ನಂತರ ಅಂಗಾಂಗ ದಾನ ಮಾಡಿ ಸಾರ್ಥಕತೆ ಮೆರೆದಿದ್ದಾರೆ. ಹೌದು ಚಿಕ್ಕಮಗಳೂರು ಜಿಲ್ಲೆಯ ನರಸಿಂಹರಾಜಪುರ ತಾಲ್ಲೂಕಿನ ಕೆರೆ ಮನೆಯ ಕೃಷ್ಣೇಗೌಡ ಮತ್ತು ಲೀಲಾವತಿ ದಂಪತಿಗಳ ಗಾನವಿ ಎಂಬ ಪುತ್ರಿ ಖಾಸಗಿ ಆಸ್ಪತ್ರೆಯೊಂದರಲ್ಲಿ ನರ್ಸ್ ಆಗಿ ಕಾರ್ಯ ನಿರ್ವಹಿಸುತ್ತಿರುತ್ತಾರೆ. ಹೀಗೆ ಕಳೆದ ಫೆಬ್ರವರಿ 8 ರಂದು ಆಸ್ಪತ್ರೆಯಲ್ಲಿ ತಮ್ಮ ಕಾರ್ಯ ನಿರ್ವಹಿಸುತ್ತಿರುವಾಗ ಇದ್ದಿಕಿದ್ದಂತೆ ಕುಸಿದು ಬೀಳುತ್ತಾರೆ. ತಕ್ಷಣ ಅಲ್ಲಿದ್ದಂತಹ ಸಿಬ್ಬಂದಿ ಮತ್ತು ವೈದ್ಯರು ಚಿಕಿತ್ಸೆ ನೀಡಿದರು ಕೂಡ ಯಾವುದೇ ರೀತಿಯ ಪ್ರಯೋಜನವಾಗದೆ ಶುಶ್ರೂಕಿಯಾಗಿದ್ದ ಗಾನವಿ ಅವರು ಆಸ್ಪತ್ರೆಯಲ್ಲಿ ಕೊನೆಯುಸಿರೆಳೆಯುತ್ತಾರೆ.

ತನ್ನ ಮಗಳು ಗಾನವಿ ಸಾವನ್ನಪ್ಪಿದಳು ಎಂಬ ಆಘಾತಕಾರಿ ಸುದ್ದಿ ಕೇಳಿ ಗಾನವಿ ಪೋಷಕರು ಒಮ್ಮೆರೆ ದಿಗ್ಬ್ರಮೆಯಾಗುತ್ತಾರೆ. ಎದೆ ಮಟ್ಟಕ್ಕೆ ಬೆಳೆದಿದ್ದಂತಹ ಮಗಳನ್ನ ಕಳೆದುಕೊಂಡು ನೋವಿನಲ್ಲಿದ್ದ ಗಾನವಿ ಪೋಷಕರು ತಮ್ಮ ಮಗಳ ಅಂಗಾಂಗ ದಾನ ಮಾಡುವ ನಿರ್ಧಾರಕ್ಕೆ ಬರುತ್ತಾರೆ. ಅದರಂತೆ ನಿಧನರಾದ ಗಾನವಿ ಅವರ ಎರಡು ಕಿಡ್ನಿಗಳು, ಯಕೃತ್ ಮತ್ತು ರಕ್ತನಾಳಗಳನ್ನ ಪಡೆಯಲಾಗುತ್ತದೆ. ಈ ಮೂಲಕ ನರ್ಸ್ ಆಗಿದ್ದಂತಹ ಗಾನವಿ ಅವರು ತಮ್ಮ ಸಾವಿನಲ್ಲಿಯೂ ಕೂಡ ಸಾರ್ಥಕತೆ ಮೆರೆದು ಸಮಾಜಕ್ಕೆ ಮಾದರಿಯಾಗಿದ್ದಾರೆ.