ಜಗತ್ತಿನಲ್ಲಿ ಮಾಡೆಲಿಂಗ್ ಅನ್ನೊದು ಒಂದು ಬಣ್ಣದ ಜಗತ್ತು. ಅದೆಷ್ಟೋ ನಟಿಯರು ಇಂದು ಮಾಡೆಲ್ ಕ್ಷೇತ್ರದಿಂದಲೇ ಸಿನಿಮಾರಂಗಕ್ಕೆ ಎಂಟ್ರಿ ಕೊಟ್ಟಿದ್ದಾರೆ. ನಮ್ಮ ದೇಶಕ್ಕಿಂತಲೂ ಫಾರಿನ್ ಗಳಲ್ಲಿ ಮಾಡೆಲಿಂಗ್ ಪ್ರಪಂಚ ಬಹುದೊಡ್ದದು. ಇಲ್ಲಿ ಮಾಡೆಲಿಂಗ್ ಎನ್ನುವುದು ಬಹು ದೊಡ್ದ ವೃತ್ತಿ. ಸಾಕಷ್ಟು ಹುಡುಗಿಯರು, ತಮ್ಮ ವೃತ್ತಿಯನ್ನು ಮಾಡೆಲಿಂಗ್ ನಲ್ಲಿಯೇ ಕಂಡುಕೊಂಡಿದ್ದಾರೆ. ಇನ್ನು ಈ ರೂಪದರ್ಶಿಗಳಲ್ಲಿ ಅದೆಷ್ಟು ತಮ್ಮ ದೇಹದ ಸೌಂದರ್ಯದ ಬಗ್ಗೆ ವಿಶೇಷ ಕಾಳಜಿ ಮಾಡುತ್ತಾರೆ.
ತಮ್ಮ ದೇಹದ ಭಾಗಗಳಿಗೆ ಕೋಟಿಗಟ್ತಲೇ ರೂಪಾಯಿಗಳ ಇನ್ಸುರೆನ್ಸ್ ಮಾಡಿಸಿದವರೂ ಇದ್ದಾರೆ ಅಂದ್ರೆ ನೀವು ನಂಬಲೇಬೇಕು. ಇಲ್ಲೊಬ್ಬ ವಿಚಿತ್ರ ಮಾಡೆಲ್ ಇದ್ದಾಳೆ. ಇವಳ ಆಲೋಚನೆ ಕೇಳಿದ್ರೆ ನಿಜಕ್ಕೂ ಆಶ್ಚರ್ಯವಾಗಬಹುದು. ರೂಪದರ್ಶಿಗಳು ಅಂದ್ರೆ ಅವರು ಆಯ್ದುಕೊಳ್ಳುವ ಬಟ್ಟೆ, ಫರ್ಫ್ಯೂಮ್ ಎಲ್ಲವೂ ವಿಭಿನ್ನವಾಗಿರುತ್ತೆ.
ಆದರೆ ಈಕೆ ಮಾತ್ರ ಸುಮಾರು ಐದು ವರ್ಷಗಳಿಂದ ಯಾವ ಇತರ ಸುಗಂಧ ದ್ರವ್ಯಗಳನ್ನೂ ಬಳಸುವುದಿಲ್ಲ. ಬದಲಿಗೆ ತನ್ನ ಕಂಕುಳಿನ ಬೆವರಿನ ವಾಸನೆಯನ್ನೇ ಎಂಜಾಯ್ ಮಾಡುತ್ತಾರೆ. ಆ ರೂಪದರ್ಶಿ ಬಗ್ಗೆ ಇನ್ನಷ್ಟು ವಿಷಯಗಳನ್ನು ಹೇಳ್ತೇವೆ ಮುಂದೆ ಓದಿ. ಹೌದು, ಈಕೆ ಒಬ್ಬ ಖ್ಯಾತ ರೂಪದರ್ಶಿ. ಆಕೆಯ ಹೆಸರು ಫೆನೆಲ್ಲಾ ಫಾಕ್ಸ್. ಇವರು ಯುಕೆಯ ವೋರ್ಸೆಸ್ಟರ್‌ನ ಫ್ಯಾನ್ಸ್ ಮಾಡೆಲ್. ಇದರಲ್ಲೇನು ವಿಶೇಷ ಅಂತೀರಾ?
ಪರ್ಫ್ಯೂಮ್ ಆಗಲಿ, ಡಿಯೋ ಆಗಲಿ ತಮ್ಮ ದೇಹಕ್ಕೆ ಬಳಸುವುದೇ ಇಲ್ಲ. ಅಂಡರ್ ಆರ್ಮ್ \ ಕಂಕುಳಿನ ಶೇವ್ ಅಂತೂ ಮಾಡೋದೇ ಇಲ್ಲ. ತಮ್ಮ ಬೆವರಿನ ವಾಸನೆ ಪ್ರೀತಿಸುವ ಮಾಡೆಲ್ ಇವಳು. ಸಾಮಾನ್ಯವಾಗಿ ಹುಡುಗಿಯರು ಕಂಕುಳಿನ ಕೂದಲು ತೆಗೆಯುತ್ತಾರೆ. ಅದರಲ್ಲೂ ರೂಪದರ್ಶಿಯರು ಹೀಗೆ ಕೂದಲು ಬಿಡಲು ಸಾಧ್ಯವೇ ಇಲ್ಲ. ಆದರೆ ಫೆನೆಲ್ಲಾ ಮಾತ್ರೆಅ ವಿಚಿತ್ರ ನಿರ್ಧಾರ ಮಾಡಿದ್ದಾರೆ.
ತಮ್ಮ ದೇಹದ ನೈಸರ್ಗಿಕ ವಾಸನೆಯನ್ನು ಇಷ್ಟಪಡುವ ಇವರು ಜನರು ತಮ್ಮ ನೈಸರ್ಗಿಕ ವಾಸನೆಯನ್ನು ಒಪ್ಪಿಕೊಳ್ಳಬೇಕು ಎಂದು ಜನರನ್ನು ಒತ್ತಾಯಿಸಿದ್ದಾರೆ. ಫೆನೆಲ್ಲಾ ಫಾಕ್ಸ್ ಅವರು ಐದು ವರ್ಷಗಳ ಹಿಂದೆ ತನ್ನ ಕಂಕುಳಿನ ಕೂದಲನ್ನು ತೆಗೆಯುವುದನ್ನು ನಿಲ್ಲಿಸಿದರು. ಆಗಿನಿಂದಲೇ ಡಿಯೋಡರೆಂಟ್ ಅನ್ನು ಕೂಡ ತ್ಯಜಿಸಿರುವುದಾಗಿ ಹೇಳಿದ್ದರು.
ಸುಗಂಧ ದ್ರವ್ಯಗಳು ಮತ್ತು ಬಾಡಿ ಸ್ಪ್ರೇಗಳು ಫೆನೆಲ್ಲಾ ಅವರಿಗೆ ಉತ್ತಮ ವಾಸನೆಯನ್ನು ನೀಡುವುದಿಲ್ಲವಂತೆ. ನಾನು ನನ್ನ ಕಂಕುಳಿನ ಸಹಜ ವಾಸನೆಯನ್ನು ಇಷ್ಟಪಡುತ್ತೇನೆ. ಯಾವತ್ತಾದರೂ ಒಮ್ಮೊಮ್ಮೆ ಡಿಯೋಡರೆಂಟ್ ಅನ್ನು ಬಳಸುತ್ತೇನೆ ಎನ್ನುವ ಇವರು ನಮ್ಮ ದೇಹದ ನೈಸರ್ಗಿಕ ವಾಸನೆಯಲ್ಲಿ ನಾವು ಸೇವಿಸುವ ಆಹಾರ ಮತ್ತು ಜೀವನಶೈಲಿಯು ದೊಡ್ಡ ಪಾತ್ರ ವಹಿಸುತ್ತದೆ ಎಂಬುದು ಫೆನೆಲ್ಲಾ ಅವರ ಬಲವಾದ ನಂಬಿಕೆ.
ಸಾಮಾನ್ಯವಾಗಿ ಎಲ್ಲರೂ ತಮ್ಮ ನೈಸರ್ಗಿಕ ಕಂಕುಳಿನ ವಾಸನೆಯನ್ನು ಅಸ್ವಾಭಾವಿಕ ಪರಿಮಳಗಳೊಂದಿಗೆ ಮರೆಮಾಚಲು ಪ್ರಯತ್ನಿಸುತ್ತಾರೆ. ನಾವು ನಮ್ಮ ದೇಹದ ನೈಸರ್ಗಿಕ ವಾಸನೆಯನ್ನು ಇಷ್ಟಪಡಬೇಕು ಎಂಬುದು ಇವರ ಅಭಿಪ್ರಾಯ. 2017 ರಲ್ಲಿ ಫೆನೆಲ್ಲಾ ತನ್ನ ಕಂಕುಳಿನ ಶೇವ್ ಮಾಡುವುದನ್ನು ನಿಲ್ಲಿಸಿ, ಸ್ಟ್ರೀಮಿಂಗ್ ಪ್ಲಾಟ್‌ಫಾರ್ಮ್‌ನಲ್ಲಿ ಕಳೆದ ಎರಡು ವರ್ಷಗಳಲ್ಲಿ ಕಂಕುಳಿನ ಕೂದಲನ್ನು ಸೇಲ್ ಮಾಡಿ 2,87,90,025ರೂ. ಗಳಿಸಿದ್ದಾರೆ.
ಬಹಳಷ್ಟು ಜನರಿಗೆ ನನ್ನ ಕಂಕುಳಿನ ಕೂದಲು ಉದ್ದವಾಗಿಯೂ ಮತ್ತು ಬೆವರುವ ರೀತಿ ಇಷ್ಟ. ಅವರು ನನ್ನ ಬೆವರುವಿಕೆಯನ್ನು ನೋಡಲು ಇಷ್ಟಪಡುತ್ತಾರೆ. ಜಿಮ್‌ನಲ್ಲಿ ಬೆವರುತ್ತಿರುವಾಗ ನಾನು ತುಂಬಾ ಆಕರ್ಷಕವಾಗಿಯೂ ಕಾಣುತ್ತೇನೆ ಎಂದಿರುವ ಫೆನೆಲ್ಲಾ ನಾನು ನನ್ನ ಕಂಕುಳಿನ ಕೂದಲನ್ನು ತೆಗೆದರೆ ನನ್ನ ಅಭಿಮಾನಿಗಳು ಸಿಟ್ಟು ಮಾಡಿಕೊಳ್ಳುತ್ತಾರೆ ಎಂದಿದ್ದಾರೆ.