ನನಗೆ 5 ಜನ ಗಂಡಂದಿರು..ಅಚ್ಚರಿಯ ಮಾಹಿತಿ ಬಿಚ್ಚಿಟ್ಟ ಮಾಡ್ರನ್ ದ್ರೌಪದಿ !

Today News / ಕನ್ನಡ ಸುದ್ದಿಗಳು

ಹಿಂದೂಗಳ ಮಹಾಕಾವ್ಯ ಮಹಾಭಾರತದ ಪತಿವೃತೆ ಶಿರೋಮಣಿ ಪಂಚ ಪಾಂಡವರ ಪತ್ನಿ ದ್ರೌಪದಿ ಬಗ್ಗೆ ಪುರಾಣಗಳಲ್ಲಿ ಓದಿದ್ದೇವೆ ಜೊತೆಗೆ ದೃಶ್ಯಕಾವ್ಯಗಳ ಮೂಲಕ ನೋಡಿದ್ದೇವೆ. ಹೌದು, ದ್ರೌಪದಿಯು ತನ್ನ ಐದು ಜನ ಪತಿಯರ ಜೊತೆ ಹೊಂದಿಕೊಂಡು ಸಂಸಾರ ಮಾಡಿರುವುದು, ಅದೇ ರೀತಿ ಆ ಪಂಚ ಪಾಂಡವರು ಕೂಡ ದ್ರೌಪದಿ ಜೊತೆಯಾಗಿ ಹೊಂದಿಕೊಡನು ಸಂಸಾರ ನಡೆಸಿರುವುದುನ್ನ ನಾವು ತಿಳಿದಿದ್ದೇವೆ.

ಇನ್ನು ಇದೆ ರೀತಿ ಈ ಕಲಿಗಾಲದಲ್ಲಿ ನಡೆಯುವುದು ಸಾಧ್ಯವೇ.. ಏನೋ ಹಣಕೋಸ್ಕರ ಈ ರೀತಿ ಮದುವೆ ಮಾಡಿಕೊಂಡು ಮೋಸ ಮಾಡುವುದನ್ನ ನಾವು ನೋಡಿದ್ದೇವೆ. ಆದರೆ ಮಹಿಳೆಯೊಬ್ಬಳು ಐದು ಜನರನ್ನ ಮದುವೆಯಾಗಿ ಸಂಸಾರ ನಡೆಸುವುದು ಸಾಧ್ಯವೇ ಇಲ್ಲ ಅಲ್ಲವೇ..

ಆದರೆ..ನೀವು ನಂಬಲೇಬೇಕು..ಇಲ್ಲಿ ಒಬ್ಬ ಆಧುನಿಕ ದ್ರೌಪತಿ ಇದ್ದಾರೆ. ಐದು ಜನರನ್ನ ಮದುವೆಯಾಗಿರುವ ಈಕೆ ಅನೋನ್ಯವಾಗಿ ಸಂಸಾರ ಮಾಡಿಕೊಂಡು ಹೋಗುತ್ತಿದ್ದಾಳೆ. ಈಗಂತೂ ಒಬ್ಬರನ್ನ ಮದುವೆಯಾಗಿ ಸಂಸಾರ ಸುಧಾರಿಸುವುದು ಕಷ್ಟ. ಇನ್ನು ಐದು ಜನ ಅಂದಮೇಲೆ..ಆದರೆ ರಾಜೋ ಎಂಬ ಮಹಿಳೆ ಐದು ಜನ ಇರುವ ಸಹೋದರರನ್ನೇ ಮದುವೆಯಾಗಿದ್ದು ಅಸಾಧ್ಯವೆನಿಸಿರುವುದನ್ನ ಸಾಧ್ಯ ಮಾಡಿ ತೋರಿಸಿದ್ದಾಳೆ. ಡೆಹ್ರಾಡೂನ್ ಸಮೀಪದ ಹಳ್ಳಿಯೊಂದರಲ್ಲಿ ವಾಸ ಮಾಡುತ್ತಿರುವ ರಾಜೋ ತನ್ನ ಐದು ಗಂಡಂದಿರೊಂದಿಗೆ ಸುಖವಾಗಿ ಸಂಸಾರ ಮಾಡುತ್ತಿದ್ದಾಳಂತೆ.

ಐದು ಜನರೊಂದಿಗೂ ಹೊಂದಾಣಿಕೆ ಮಾಡಿಕೊಂಡು ಸುಖ ಸಂಸಾರ ಮಾಡುತ್ತಿದ್ದಾಳೆ. ಇನ್ನು ರಾಜೋ ಹೇಳಿರುವ ಹಾಗೆ ಎಲ್ಲಾ ಗಂಡಂದಿರು ನನ್ನನ್ನ ತುಂಬಾ ಪ್ರೀತಿ ಮಾಡುತ್ತಾರೆ. ನಾನು ನನ್ನ ಐದು ಪತಿಯರ ಜೊತೆಗೆ ಸಮನಾಗಿ ಕಾಲ ಕಳೆಯುವುದರಿಂದ ಯಾರಲ್ಲಿಯೂ ಕೂಡ ಅಸೂಯೆ ಇಲ್ಲದೆ ಒಂದೇ ಮನೆಯಲ್ಲಿ ಸುಖವಾಗಿ ಬಾಳುತ್ತಿದ್ದೇವೆ ಎಂದು ಹೇಳಿದ್ದಾಳೆ. ಆಕೆ ಹೇಳುವ ಹಾಗೆ ಐದು ಜನರನ್ನ ಮದುವೆಯಾಗುವುದು ಅವರ ಕುಟುಂಬದ ಸಂಪ್ರದಾಯವಂತೆ.

ಇದನ್ನ ಅವರ ಕುಟುಂಬಗಳು ಅನೇಕ ವರ್ಷಗಳಿಂದ ಪಾಲಿಸಿಕೊಂಡು ಬರುತ್ತಿದ್ದು ಹಾಗೂ ಈ ಪರಂಪರೆಯನ್ನ ಕುಟುಂಬದ ಸದಸ್ಯರು ಮುಂದುವರಿಸಿಕೊಂಡು ಹೋಗಬೇಕು ಎಂದು ಅವರು ಹೇಳಿದ್ದಾರೆ. ಇನ್ನು ಈ ರೀತಿಯ ಸಂಪ್ರದಾಯಕ್ಕೂ ಒಂದು ಕಾರಣವಿದೆ. ಈ ಪ್ರದೇಶದಲ್ಲಿ ಹೆಣ್ಣು ಹಾಗೂ ಗಂಡಿನ ಸಂಖ್ಯಾನುಪಾತವೇ ಇದಕ್ಕೆ ಬಹುಮುಖ್ಯ ಕಾರಣವಂತೆ. ಇನ್ನು ಐದು ಜನರ ಪತ್ನಿ ರಾಜೋಗೆ 4 ವರ್ಷದ ಮಗುವಿದೆ.

ಆದರೆ ವಿಚಿತ್ರ ಎಂದರೆ ಆ ಮಗುವಿನ ತಂದೆ ಯಾರು ಎಂಬುದೇ ಗೊತ್ತಿಲ್ಲವಂತೆ. ಇನ್ನು ಕುತೂಹಲ ಎಂದರೆ ರಾಜೋ ಅವರ ಗಂಡಂದಿರ ವಯಸ್ಸು. ಐವರು ಸಹೋದರರ ವಯಸ್ಸು 20 ರಿಂದ 36 ನಡುವೆ ಇರಬಹುದು ಎಂದು ಹೇಳಲಾಗಿದ್ದು ರಾಜೋ ಮಹಿಳೆ ತನ್ನ ಇದು ಜನ ಪತಿಯರೊಂದಿಗೆ ಸಮಾನವಾಗಿ ಸಮಯ ಕಳೆಯುತ್ತಾ ಸುಖ ಸಂಸಾರ ನಡೆಸುತ್ತಿದ್ದಾರೆ.

ನಿಮ್ಮ ಸ್ನೇಹಿತರಿಗೆ ಹಾಗು ವಾಟ್ಸಪ್ಪ್ / ಫೇಸ್ಬುಕ್ ಗ್ರೂಪ್ ಗಳಿಗೆ ಶೇರ ಮಾಡಿ...
ಇದನ್ನೂ ಓದಿ >>>  VIDEO : ಹಾವು ಕಚ್ಚಿದ್ರೆ ಭಯ ಪಡ್ಬೇಡಿ,ತಕ್ಷಣ ಮಾಡಿ ಈ ಕೆಲಸ...ನೋಡಿ...