ಕನ್ನಡ ಚಿತ್ರ ರಂಗದಲ್ಲಿ ಪದ್ಮಾವತಿ ಎಂದೇ ಖ್ಯಾತಿಯಾದ ರಮ್ಯಾ ಅವರು ಸಿನಿಮಾ ರಂಗಕ್ಕೆ ಬಂದು ನಿನ್ನೆಗೆ 20 ವರ್ಷ ತುಂಬಿದೆ. ಪುನೀತ್ ರಾಜಕುಮಾರ್ ನಟನೆಯ ‘ಅಭಿ’ ಸಿನಿಮಾದ ಮೂಲಕ ಚಿತ್ರ ರಂಗಕ್ಕೆ ಪಾದಾರ್ಪಣೆ ಮಾಡಿ ನಂತರ ಚಿತ್ರರಂಗದ ಕ್ವೀನ್ ಆಗಿ ಮೆರೆದರು.
ರಮ್ಯಾ ಮೊದಲ ಹೆಸರು ದಿವ್ಯ ಸ್ಪಂದನ. ಉದ್ಯಮಿ ಆರ್. ಟಿ. ನಾರಾಯಣ್ ಮತ್ತು ರಂಜಿತ್ ದಂಪತಿಗಳು ಏಕೈಕ ಪುತ್ರಿ. ಪ್ರಾಥಮಿಕ ಶಿಕ್ಷಣವನ್ನು ಊಟಿ ಮತ್ತು ಪ್ರೌಢ ಶಿಕ್ಷಣವನ್ನು ಚನ್ನೈ ನಲ್ಲಿ ಮುಗಿಸಿದ ನಂತರ ಚಿತ್ರರಂಗಕ್ಕೆ ಕಾಲಿಟ್ಟರು. ನಟನೆಯ ಬಗ್ಗೆ ಒಂದಿಷ್ಟು ಕನಸು ಕಾಣದೇ ಇರದಂಥ ಈ ನಟಿ ಚಿತ್ರರಂಗಕ್ಕೆ ಬಂದಿದ್ದು ಅಕಸ್ಮಾತ್ ಆದರೂ, ಬಂದು ನಂತರ ಕನ್ನಡ ಚಿತ್ರರಂಗದಲ್ಲಿ no 1 ನಟಿಯಾಗಿ ಬೆಳೆದಿದ್ದು ರೋಚಕ.
ಅವರು ಅಂದುಕೊಂಡಅಂತೆ ಆಗಿದ್ದಾರೆ ಅಪ್ಪು ಅವರ ಮೊದಲ ಸಿನಿಮಾ ಅಪ್ಪು ಮೂಲಕವೇ ಚಿತ್ರರಂಗಕ್ಕೆ ಪ್ರವೇಶ ಮಾಡಬೇಕಿತ್ತು. ಆದರೆ ಬೇರೆ ಬೇರೆ ಕಾರಣಗಳಿಂದ ಈ ಚಿತ್ರದಲ್ಲಿ ರಮ್ಯಾ ಅವರಿಗೆ ನಟಿಸಲು ಸಾಧ್ಯವಾಗಲಿಲ್ಲ. ಆ ಪಾತ್ರ ನಟಿ ರಕ್ಷಿತಾ ಪಲಾಯಿತು. ಹೀಗಾಗಿ ಕನ್ನಡದ ಖ್ಯಾತ ನಿರ್ಮಾಪಕಿ ಪಾರ್ವತಮ್ಮ ರಾಜ್ ಕುಮಾರ್ ತಮ್ಮ ಬ್ಯಾನರ್ ನ, ಪುನೀತ್ ರಾಜಕುಮಾರ್ ನಟನೆಯ ಎರಡನೇ ಚಿತ್ರಕ್ಕೆ ರಮ್ಯಾ ಅವರನ್ನು ನಾಯಕಿಯಾಗಿ ಆಯ್ಕೆ ಆದರು.
ಅಭಿ ನಂತರ ಎಕ್ಸ್ ಕ್ಯೂಸ್ ಮಿ ಚಿತ್ರದಲ್ಲಿ ನಟಿಸಿದರು ರಮ್ಯಾ. ಅಭಿನಯಿಸಿದ ಎರಡು ಚಿತ್ರಗಳು ಸೂಪರ್ ಹಿಟ್ ಆದವು ಒಳ್ಳೇ ಕಲೆಕ್ಷನ್ ಮಾಡಿದವು. ಹಾಗಾಗಿ ಮೂರನೇ ಚಿತ್ರವನ್ನು ತೆಲುಗಿನಲ್ಲಿ ಮಾಡಿದರು. ಅತೀ ಕಡಿಮೆ ಅವಧಿಯಲ್ಲಿ ಬೇರೆ ಭಾಷೆಗೆ ಹೋದ ಕನ್ನಡದ ನಟಿ ಎಂಬ ಹೆಮ್ಮೆಗೂ ಅವರು ಪಾತ್ರರಾದರು. ಅಲ್ಲಿಂದ ತಮಿಳು, ಕನ್ನಡ, ತೆಲುಗು ಹೀಗೆ ಬೇರೆ ಬೇರೆ ಭಾಷೆಗಳಲ್ಲಿ ರಮ್ಯಾ ಅಭಿನಯಿಸಿದರು.
ರಮ್ಯಾ ಬಂದ ಅವಧಿಯಲ್ಲಿ ರಕ್ಷಿತಾ ಕೂಡ ಚಿತ್ರರಂಗಕ್ಕೆ ಬಂದಾಗಿತ್ತು. ಹಾಗಾಗಿ ಸಹಜವಾಗಿ ಇವರಿಬ್ಬರ ನಡುವೆ ಪೈಪೋಟಿ ಕೂಡ ಇತ್ತು. ಹಾಗೂ ಇವರಿಬ್ಬರು ಶ್ನೆಹಿತರಾಗಿದ್ದರು ಕೆಲಸದಲ್ಲಿ ಚಿತ್ರಗಳಲ್ಲಿ ಜಗಳವಡಿಕೊಂಡಿದ್ದರು. ಎಂಬ ಸುದ್ದಿಯು ಆಗಿತ್ತು. ಏನೇ ಆದರೂ, ರಮ್ಯಾ ಮಾತ್ರ ತಮ್ಮ No1 ಪಟ್ಟವನ್ನು ಯಾವತ್ತೂ ಯಾರಿಗೂ ಬಿಟ್ಟುಕೊಡಲಿಲ್ಲ. ಬಹುತೇಕ ಸ್ಟಾರ್ ನಟರ ಜೊತೆಗೆ ತೆರೆ ಹಂಚಿಕೊಂಡು ಕನ್ನಡ ಚಿತ್ರರಂಗದಲ್ಲಿ ರಾಣಿಯಗಿಯೇ ಬೆಳೆದರೂ.
ನಂತರ ರಾಜಕೀಯ ಪ್ರವೇಶ ಮಾಡಿದರು. ಮಂಡ್ಯ ಕ್ಷೇತ್ರದ ಸಂಸದೆಯಾಗಿ ಜನರ ಸೇವೆ ಮಾಡಿದರು. ಮತ್ತೆ ಸೋತರು. ಕಾಂಗ್ರೆಸ್ ಪಕ್ಷದ ಸಾಮಾಜಿಕ ಜಾಲತಾಣದಲ್ಲಿ ದೊಡ್ಡ ಹುದ್ದೆಯಲ್ಲಿದ್ದರು ರಮ್ಯಾ ಸಾಧ್ಯ ಚಿತ್ರರಂಗ ಹಾಗೂ ರಾಜಕೀಯ ಕ್ಷೇತ್ರದಿಂದ ದೂರವಿದ್ದರೆ. ಸದ್ಯದಲ್ಲೇ ಮತ್ತೆ ಚಿತ್ರರಂಗಕ್ಕೆ ಬರುತ್ತಾರೆ ಎನ್ನುವ ಸುದ್ದಿ ಕೂಡ ಕೇಳಿ ಬರುತ್ತಿದ್ದೆ.
ಒಂದು ಕಾಲದಲ್ಲಿ No1 ಸ್ಥಾನ ದಲ್ಲಿ ಮೆರೆದ ರಮ್ಯಾ ಮತ್ತೆ ಬಂದು ಅದೇನ್ ಮೋಡಿ ಮಾಡಬೇಕೋ ಈ ಸುದ್ದಿ ಕೇಳಿ ಪಡ್ಡೆ ಹುಡುಗರ ಹಾರ್ಟ್ ನಲ್ಲಿ ಹಾರ್ಟ್ ಬೀಟ್ ಜೋರಾಗಿದೆ. ನಮ್ಮ ಈ ಮಾಹಿತಿ ನಿಮಗೆ ಇಷ್ಟ ವಾಗಿದ್ದರೆ ನಿಮ್ಮ ಅನಿಸಿಕೆ ತಿಳಿಸಿ.