ಅಪ್ರಾಪ್ತ ಸೋದರಿಯರನ್ನ ಅಪಹರಿಸಿ 6 ಯುವಕರಿಂದ ಗ್ಯಾಂಗ್‍ರೇಪ್

ಜೈಪುರ: ಅಪ್ರಾಪ್ತ ಸೋದರಿಯರನ್ನ ಅಪಹರಿಸಿದ ಆರು ಯುವಕರು ಅತ್ಯಾಚಾರ ಎಸಗಿರುವ ಘಟನೆ ರಾಜಸ್ಥಾನದ ಜಾಲೋರ್ ಜಿಲ್ಲೆಯ ಭಿನ್ಮಲ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ಅತ್ಯಾಚಾರದ ಬಳಿಕ ಅಪ್ರಾಪ್ತ ಸೋದರಿಯರಿಬ್ಬರನ್ನು ಕಾಮುಕರು ಜಸ್ವಂತಪುರ ಕ್ಷೇತ್ರದ ರಾಜಪುರ ಸುಂಧಾಮಾತಾ ಬೆಟ್ಟದಲ್ಲಿ ಬಿಟ್ಟು ಹೋಗಿದ್ದಾರೆ. ರಕ್ತದ ಮಡುವಿನಲ್ಲಿದ್ದ ಬಾಲಕಿಯರನ್ನ ಕಂಡ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಘಟನಾ ಸ್ಥಳಕ್ಕೆ ದೌಡಾಯಿಸಿದ ಪೊಲೀಸರು ಬಾಲಕಿಯರನ್ನ ರಕ್ಷಿಸಿ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದು, ಇಬ್ಬರಿಗೂ ಚಿಕಿತ್ಸೆ ನೀಡಲಾಗುತ್ತಿದೆ.
ಮನೆಗೆ ನುಗ್ಗಿದ ಆರು ಜನರು ಇಬ್ಬರು ಬಾಲಕಿಯರನ್ನ ಅಪಹರಿಸಿದ್ದಾರೆ. ನಂತರ ಸುಂಧಾಮಾತಾ ಬೆಟ್ಟದಲ್ಲಿರುವ ನಿರ್ಜನ ಪ್ರದೇಶಕ್ಕೆ ಕರೆದೊಯ್ದು ಅತ್ಯಾಚಾರ ಎಸಗಿದ್ದಾರೆ. ಸಂತ್ರಸ್ತೆ ತಂದೆ ಸ್ಥಳೀಯ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಓರ್ವನನ್ನು ವಶಕ್ಕೆ ಪಡೆದು ವಿಚಾರಣೆಗೆ ಒಳಪಡಿಸಿದ್ದಾರೆ. ಇನ್ನುಳಿದ ಆರೋಪಿಗಳ ಗುರುತು ಪತ್ತೆಯಾಗಿದ್ದು, ಬಂಧನಕ್ಕಾಗಿ ವಿಶೇಷ ತಂಡ ರಚನೆ ಮಾಡಲಾಗಿದೆ.
Minor-Sister

ಲಾಕಪ್‍ನಲ್ಲಿ 10 ದಿನಗಳ ಕಾಲ 5 ಪೊಲೀಸರಿಂದ ಗ್ಯಾಂಗ್ ರೇಪ್

ಭೋಪಾಲ್: ಐವರು ಪೊಲೀಸರು ಲಾಕಪ್‍ನಲ್ಲಿಯೇ 20 ವರ್ಷದ ಮಹಿಳೆ ಮೇಲೆ ಹತ್ತು ದಿನಗಳ ಕಾಲ ಸಾಮೂಹಿಕ ಅತ್ಯಾಚಾರ ಎಸಗಿದ್ದಾರೆ ಎಂಬ ಗಂಭೀರ ಆರೋಪ ಕೇಳಿ ಬಂದಿದೆ.

ಮಧ್ಯ ಪ್ರದೇಶದ ರೇವಾ ಜಿಲ್ಲೆಯಲ್ಲಿ ಘಟನೆ ನಡೆದಿದ್ದು, ಸ್ಟೇಷನ್ ಇನ್‍ಚಾರ್ಜ್ ಸೇರಿ ಐವರು ಪೊಲೀಸರು 10 ದಿನಗಳ ಕಾಲ ಲಾಕಪ್‍ನಲ್ಲಿಯೇ ಮೇಲೆ ನನ್ನ ಮೇಲೆ ನಿರಂತರವಾಗಿ ಸಾಮೂಹಿಕ ಅತ್ಯಾಚಾರ ಎಸಗಿದ್ದಾರೆ ಎಂದು ಮಹಿಳೆ ಆರೋಪಿಸಿದ್ದಾಳೆ.

ಮಹಿಳೆ ಕೊಲೆ ಪ್ರಕರಣದಲ್ಲಿ ಆರೋಪಿಯಾಗಿದ್ದು ಆಕೆಯನ್ನು ಕೋರ್ಟ್ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿತ್ತು. ಆಕ್ಟೋಬರ್ 10ರಂದು ಹೆಚ್ಚುವರಿ ಜಿಲ್ಲಾ ನ್ಯಾಯಾಧೀಶರು ಹಾಗೂ ವಕೀಲರ ತಂಡ ಜೈಲಿನ ತಪಾಸಣೆಗೆ ತೆರಳಿದಾಗ ಈ ಮಾಹಿತಿ ಬಹಿರಂಗವಾಗಿದೆ.

ಈ ಕುರಿತು ಹೆಚ್ಚುವರಿ ಜಿಲ್ಲಾನ್ಯಾಯಾಧೀಶರ ಮುಂದೆ ಮಹಿಳೆ ಅಳಲು ತೋಡಿಕೊಂಡಿದ್ದು, ಪೊಲೀಸರು ಅತ್ಯಾಚಾರ ಎಸಗಿದ್ದಾರೆ ಎಂದು ಆರೋಪಿಸಿದ್ದಾಳೆ. ಪ್ರಕರಣವನ್ನು ನ್ಯಾಯಾಂಗ ತನಿಖೆಗೆ ಆದೇಶಿಸಲಾಗಿದೆ.

ತಪಾಸಣೆ ನಡೆಸಲು ಪೊಲೀಸ್ ಠಾಣೆಗೆ ಆಗಮಿಸಿದ ತಂಡಕ್ಕೆ ಮಹಿಳೆ ತಿಳಿಸಿದ್ದು, ಐವರು ಪೊಲೀಸರು ಮೇ 9 ರಿಂದ 21ರ ವೆರೆಗೆ 10 ದಿನಗಳ ಕಾಲ ನನ್ನ ಮೇಲೆ ಅತ್ಯಾಚಾರ ಎಸಗಿದ್ದಾರೆ. ಈ ಕುರಿತು ಮಹಿಳಾ ಕಾನ್‍ಸ್ಟೇಬಲ್ ಎದರು ಪ್ರತಿಭಟನೆ ನಡೆಸಿದರೂ ಅವರೂ ತಲೆ ಕೆಡಿಸಿಕೊಳ್ಳಲಿಲ್ಲ ಎಂದು ಆರೋಪಿಸಿದ್ದಾಳೆ.

ಅತ್ಯಾಚಾರದ ಕುರಿತು ಮಹಿಳೆ ಜೈಲು ವಾರ್ಡನ್‍ಗೂ ತಿಳಿಸಿದ್ದು, ಮೂರು ತಿಂಗಳ ಹಿಂದೆ ಅತ್ಯಾಚಾರವಾಗಿರುವುದಾಗಿ ಆರೋಪಿ ತಿಳಿಸಿದ್ದಾಳೆ. ಮಹಿಳೆ ಮೇಲೆ ಅತ್ಯಾಚಾರ ನಡೆದಿರುವುದು ವಾರ್ಡನ್‍ಗೂ ತಿಳಿದಿತ್ತು ಎಂದು ಜೈಲಿಗೆ ಭೇಟಿ ನೀಡಿದ್ದ ಕಾನೂನು ತಂಡದ ವಕೀಲರೊಬ್ಬರು ಮಾಹಿತಿ ನೀಡಿದ್ದಾರೆ. ಮಹಿಳೆಯನ್ನು ಮೇ 21ರಂದು ಬಂಧಿಸಲಾಗಿತ್ತು.

ನಿಮ್ಮ ಸ್ನೇಹಿತರಿಗೂ/ಫೇಸ್ಬುಕ್ ಗ್ರೂಪ್ ಗೆ ಶೇರ್ ಮಾಡಿ...
  •  
  •  
  •  
  •  
  •  
  •  
  •