ಪಾಟ್ನಾ: ಮನೆಗೆ ಬಂದ ಮಗಳ ಗೆಳತಿ ಮೇಲೆ ತಂದೆ ಅತ್ಯಾಚಾರ ಎಸಗಿರುವ ಘಟನೆ ಬಿಹಾರ ರಾಜ್ಯದ ವೈಶಾಲಿ ಜಿಲ್ಲೆಯ ಪಾತೇಪುರದ ಮೌದ್ಹಾದಲ್ಲಿ ನಡೆದಿದೆ. ಬಾಲಕಿ ಆರು ತಿಂಗಳು ಗರ್ಭಿಣಿಯಾದಾಗ ಪ್ರಕರಣ ಬೆಳಕಿಗೆ ಬಂದಿದೆ.

10ನೇ ತರಗತಿಯಲ್ಲಿ ಓದುತ್ತಿದ್ದ ವಿದ್ಯಾರ್ಥಿನಿ ಅಭ್ಯಾಸಕ್ಕಾಗಿ ನೆರೆ ಮನೆಯ ಗೆಳತಿ ಬಳಿ ಹೋಗಿದ್ದಳು. ಆದ್ರೆ ಮನೆಯಲ್ಲಿ ಗೆಳತಿ ಇರಲಿಲ್ಲ. ಇದೇ ವೇಳೆ ಮನೆಗೆ ಬಂದ ಗೆಳತಿ ತಂದೆ ಬಾಗಿಲು ಹಾಕಿ ಅತ್ಯಾಚಾರ ಎಸಗಿದ್ದಾನೆ. ನಂತರ ವಿಷಯ ಯಾರಿಗಾದ್ರೂ ಹೇಳಿದರೆ ತಮ್ಮಂದಿರನ್ನ ಕೊಲ್ಲುವುದಾಗಿ ಬೆದರಿಕೆ ಹಾಕಿ ಹೊರಗೆ ಕಳಿಸಿದ್ದಾನೆ. ಮನೆಗೆ ಬಂದ ವಿದ್ಯಾರ್ಥಿನಿ ಭಯದಿಂದ ಕೆಲ ದಿನ ಹೊರಗೆ ಹೋಗಿರಲಿಲ್ಲ. ಗೆಳತಿ ಮನೆಯಲ್ಲಿ ನಡೆದ ಘಟನೆ ಬಗ್ಗೆಯೂ ಯಾರಿಗೂ ತಿಳಿಸಿರಲಿಲ್ಲ.

Daughter's-girlfriend

ಕೆಲ ದಿನಗಳ ಹಿಂದೆ ವಿದ್ಯಾರ್ಥಿನಿ ಆರೋಗ್ಯದಲ್ಲಿ ಏರುಪೇರು ಕಂಡುಬಂದ ಹಿನ್ನೆಲೆ ಪೋಷಕರು ಆಸ್ಪತ್ರೆಗೆ ಕರೆದುಕೊಂಡು ಹೋದಾಗ ಬಾಲಕಿ ಆರು ತಿಂಗಳು ಗರ್ಭಿಣಿಯಾಗಿರುವ ವಿಷಯವನ್ನ ವೈದ್ಯರು ಖಚಿತಪಡಿಸಿದ್ದಾರೆ. ಈ ವೇಳೆ ಆರು ತಿಂಗಳು ಹಿಂದೆ ಸ್ನೇಹಿತೆಯ ಮನೆಯಲ್ಲಿ ಆಕೆ ತಂದೆ ಅತ್ಯಾಚಾರ ಎಸಗಿರುವ ವಿಚಾರವನ್ನ ಪೋಷಕರಿಗೆ ತಿಳಿಸಿದ್ದಾಳೆ.

ಪೋಷಕರು ಮಗಳ ಮೇಲೆ ನಡೆದ ಅತ್ಯಾಚಾರದ ಕುರಿತು ಸ್ಥಳೀಯ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಎಫ್‍ಐಆರ್ ದಾಖಲು ಮಾಡಿಕೊಂಡಿರುವ ಪೊಲೀಸರು ಬಾಲಕಿಯನ್ನ ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿದ್ದಾರೆ. ಆರೋಪಿಯನ್ನ ಬಂಧಿಸಿದ್ದು, ತನಿಖೆ ನಡೆಸುತ್ತಿದ್ದಾರೆ.

ನಿಮ್ಮ ಸ್ನೇಹಿತರಿಗೂ/ಫೇಸ್ಬುಕ್ ಗ್ರೂಪ್ ಗೆ ಶೇರ್ ಮಾಡಿ...
  •  
  •  
  •  
  •  
  •  
  •  
  •  
  •