avani-avvooo-official

Video: ರೀಲ್ಸ್ ಮಾಡುವ ಭರದಲ್ಲಿ ಒಮ್ಮೆಲೇ ಏನಾಯಿತು ನೋಡಿ ಈ ಪುಟ್ಟ ಹುಡುಗಿಗೆ! ವೈರಲ್ ವೀಡಿಯೋ…

Entertainment/ಮನರಂಜನೆ

ಕಲೆ ಯಾರ ಸ್ವತ್ತೂ ಇಲ್ಲ. ಒಂದು ವೇಳೆ ನಿಮ್ಮಲ್ಲಿ ಅದ್ಭುತವಾದ ಕಲೆ ಏನಾದರೂ ಇದ್ದರೆ ಸಾಕು ಸೋಶಿಯಲ್ ಮೀಡಿಯಾ ಮುಖಾಂತರ ಕ್ಷಣದಲ್ಲೇ ಎಲ್ಲರಿಗೂ ಪರಿಚಯವಾಗಿ ಬಿಡುತ್ತೀರಿ. ಅದಕ್ಕೆ ಕಾರಣ ಇಂಟರ್ನೆಟ್ ಜಗತ್ತಿನಲ್ಲಿರುವ ವಿವಿಧ ಪ್ಲಾಟ್ ಫಾರ್ಮ್ ಗಳು. ಇಲ್ಲಿ ಎಲ್ಲರಿಗೂ ಸ್ಪರ್ಧಿಸುವ ಅವಕಾಶವಿದೆ. ಇದರಿಂದಲೇ ಅನೇಕರು ಯಾವುದೇ ರೀತಿಯ ಗಾಡ್ ಫಾದರ್ ಇಲ್ಲದೆ ಫೋಕಸ್ ನಲ್ಲಿ ಬಂದಿದ್ದಾರೆ. ಅದರಲ್ಲೂ ಇರುವ ಅನೇಕ ಕಲೆಗಳಲ್ಲಿ ನಿಮಗೆ ಡಾನ್ಸ್ ಬರುತ್ತಿದ್ದರೆ ನೀವು ಬಹುಬೇಗ ಫೇಮಸ್ ಆಗುತ್ತೀರಿ. ಕಾರಣ ಸೋಶಿಯಲ್ ಮೀಡಿಯಾದಲ್ಲಿ ನೃತ್ಯವನ್ನು ತುಂಬಾ ಇಷ್ಟಪಡುತ್ತಾರೆ. ಸದ್ಯ ಸೋಶಿಯಲ್ ಮೀಡಿಯಾದಲ್ಲಿ ಯುವತಿಯೊಬ್ಬಳು ಮಾಡಿದ ತುಂಬಾ ಸಿಂಪಲ್ ಡ್ಯಾನ್ಸ್ ಫುಲ್ ವೈರಲ್ ಆಗುತ್ತಿದೆ.

ಸಾಮಾಜಿಕ ಜಾಲತಾಣಗಳಲ್ಲಿ ಇಂದು ಯಾವ ವಿಡಿಯೋ ವೈರಲ್ ಆಗುತ್ತವೆ ಅಂತ ಹೇಳೋಕೆ ಸಾಧ್ಯವೇ ಇಲ್ಲ. ಏಕೆಂದರೆ ಇಂದು ಹುಟ್ಟಿದ ಮಗುವಿನ ಹಿಡಿದು ಮುಪ್ಪಿಗೆ ಬಂದ ವೃದ್ಧರ ವರೆಗೆ ಎಲ್ಲರೂ ರೀಲ್ಸ್ ಮಾಡುತ್ತಾರೆ. ರೀಲ್ಸ್ ಮಾಡೋದರಲ್ಲಿ ಇಂದು ಪುರುಷರಿಗಿಂತ ಸ್ತ್ರೀಯರದೇ ಮೇಲುಗೈ. ಇಂದಿನ ಒಂದು ವರುಷದ ಹುಡಗಿ ಸಹ ಉತ್ತಮವಾದ ರೀಲ್ಸ್ ಮಾಡುತ್ತಾಳೆ ಅಲ್ಲದೆ ನೂರು ವಯಸ್ಸಿನ ಅಜ್ಜಿಯು ಸಹ ಪಡ್ಡೆ ಹುಡುಗರ ನಿದ್ದೆ ಕೆಡಿಸುವೆ ಹಾಗೆ ರೀಲ್ಸ್ ಮಾಡುವದನ್ನು ನಾವು ಎಷ್ಟೋ ನೋಡಿದ್ದೇವೆ.

ಇಂದಿನ ಯುವಪೀಳಿಗೆ ಏನು ಮಾಡುತ್ತಾರೆ ಅಂತ ಹೇಳಲು ಸಾಧ್ಯವಿಲ್ಲ ಏಕೆಂದರೆ ಇಂದಿನ ಯಾಂತ್ರಿಕ ಯುಗದಲ್ಲಿ ಪ್ರತಿಯೊಬ್ಬರ ಬುದ್ಧಿ ತುಂಬಾನೇ ಸ್ಪೀಡ್ ಆಗಿ ಬೆಳೆಯುತ್ತಿದೆ. ಅಲ್ಲದೆ ಮೊಬೈಲ್ ಹಾಗೂ ಅಂತರಜಾಲದ ಸಹಾಯದಿಂದ ಪ್ರತಿಯೊಬ್ಬರೂ ತಮಗೆ ಗೊತ್ತಿರದ ವಿಷಯದ ಬಗ್ಗೆ ಕೆಲ ಸೆಕೆಂಡಗಳಲ್ಲೇ ಮಾಹಿತಿ ಪಡೆದುಕೊಳ್ಳುವರು. ಮೊಬೈಲ್ ಹೊಂದಿದ ಪ್ರತಿ ವ್ಯಕ್ತಿ ತಾನು ಸಹ ಏನಾದರೂ ಮಾಡಿ ಎಲ್ಲೆಡೆಗೆ ಹೆಸರು ಗಳಿಸಬೇಕು ಅನ್ನೋ ಉದ್ದೇಶದಿಂದ ವಿವಿಧ ಪ್ರಕಾರದ ವೀಡಿಯೋ ಮಾಡಿ ಅದನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಲು ಬಿಡುತ್ತಾರೆ. ಯಾರ ಅದೃಷ್ಟ ಮತ್ತು ವಿಡಿಯೋದಲ್ಲಿಯ ಕಂಟೆಂಟ್ ಸೂಪರ್ ಆಗಿರುತ್ತದೆಯೋ ಅವರು ರಾತ್ರೋ ರಾತ್ರಿ ಫೇಮಸ್ ಆಗಿ ಬಿಡುತ್ತಾರೆ.

ಸೋಶಿಯಲ್ ಮಿಡಿಯಾದಲ್ಲಿ ಫೇಮಸ್ ಆಗಬೇಕು ಅನ್ನೋ ಹುಚ್ಚು ಇಂದು ಎಲ್ಲರಿಗೂ ಹಿಡಿದಿದೆ. ಸದ್ಯಕ್ಕೆ ಅಂತಹದೇ ಒಂದು ವೀಡಿಯೋ ವೈರಲ್ ಆಗುತ್ತಿದೆ. ಈ ವಿಡಿಯೋದಲ್ಲಿ ಸಹ ಒಬ್ಬ ಹುಡುಗಿ ತಾನು ಸಹ ರೀಲ್ಸ್ ಮಾಡಿ ಸೋಶಿಯಲ್ ಮಿಡಿಯಾದಲ್ಲಿ ಶೇರ್ ಮಾಡಬೇಕು ಎಂದಿರುತ್ತಾಳೆ. ರೀಲ್ಸ್ ಮಾಡುವ ಸಮಯದಲ್ಲಿ ಆಕೆಗೆ ಆದ ಅನುಭವ ಎಂದೂ ಅವಳು ಮರೆಯುವದಿಲ್ಲ. ಅಷ್ಟಕ್ಕೂ ಅಲ್ಲಿ ನಡೆದದ್ದು ಏನೆಂದರೆ, ಈ ಪುಟ್ಟ ಹುಡುಗಿ ಚಿಕನಿ ಚಮೇಲಿ ಎಂಬ ಹಿಂದಿ ಹಾಡಿನ ಮೇಲೆ ಸ್ಟೆಪ್ ಹಾಕುವವಳಿರುತ್ತಾಳೆ ಮೊದಲಿಗೆ ತನ್ನ ಸೊಂಟವನ್ನು ಬಳುಕಸಿ ನೆಲದ ಮೇಲೆ ತನ್ನ ಎರಡು ಕೈಯೂರಿ ಲಾಗಾ ಹೊಡೀಬೇಕು ಎಂದುಕೊಂಡು, ಕೆಳಗೆ ಕೈ ಉರುತ್ತಲೇ ಕೈ ಜಾರಿ ದೊಪ್ಪನೆ ಕೆಳಗೆ ಬಿಳುತ್ತಾಳೆ. ಬಿದ್ದಾಗ ಆಕೆಯ ಬಟ್ಟೆ ಹಾಗೂ ಆಕೆಯ ಮುಖ ನೋಡುವಂತದ್ದು.

ವಿಡಿಯೋ ನೋಡಿ.

ಈ ಪುಟ್ಟ ಬಾಲಕಿಯ ವೀಡಿಯೋ ಸೋಶಿಯಲ್ ಮೀಡಿಯಾ ಇನ್ಸ್ಟಾಗ್ರಾಮ್ ನಲ್ಲಿ avani_avvooo_official ಎಂಬ ಹೆಸರಿನ ಖಾತೆಯ ಮೂಲಕ ಶೇರ್ ಮಾಡಲಾಗಿದೆ. ಇದುವರೆಗೆ ಈ ವೀಡಿಯೋ ವನ್ನು ಐದು ಮಿಲಿಯನ್ ರಷ್ಟು ಜನರು ವೀಕ್ಷಣೆ ಮಾಡಿದ್ದಾರೆ ಅಲ್ಲದೆ ಸುಮಾರು ನಾಲ್ಕು ಲಕ್ಷಕ್ಕೂ ಹೆಚ್ಚು ಜನರು ಈ ವೀಡಿಯೋ ಲೈಕ್ ಮಾಡಿದ್ದಾರೆ.

 

View this post on Instagram

 

A post shared by avooos (@avani_avooos_official)

ನಿಮ್ಮ ಸ್ನೇಹಿತರಿಗೆ ಹಾಗು ವಾಟ್ಸಪ್ಪ್ / ಫೇಸ್ಬುಕ್ ಗ್ರೂಪ್ ಗಳಿಗೆ ಶೇರ ಮಾಡಿ...