anu-prabhakar

ಮೊದಲ ಗಂಡನನ್ನು ನೆನೆದು ಕಣ್ಣೀರಿಟ್ಟ ನಟಿ ಅನು ಪ್ರಭಾಕರ್,ಗರಂ ಆದ ರಘು ಮುಖರ್ಜಿ

CINEMA/ಸಿನಿಮಾ Entertainment/ಮನರಂಜನೆ

ಅನು ಪ್ರಭಾಕರ್.. ಕನ್ನಡ ಸಿನಿಮಾ ಇಂಡಸ್ಟ್ರಿಯ ಎವರ್ ಗ್ರೀನ್ ನಟಿ.. 90 ರ ದಶಕದ ಹುಡುಗರ ಪಾಲಿನ ಕ್ರಶ್ ಎಂದರೂ ತಪ್ಪಾಗಲಾರದು.. ಹೃದಯ ಹೃದಯ.. ಸ್ನೇಹಲೋಕ.. ಚಂದ್ರ ಮುಖಿ ಪ್ರಾಣಸಖಿ ಇನ್ನೂ ಮುಂತಾದ ಚಿತ್ರಗಳ‌ ಮೂಲಕ ಜನರ ಮನಗೆದ್ದ ಅನುಪ್ರಭಾಕರ್ ಸದ್ಯ ಇಂದು ನಲವತ್ತನೇ ವಸಂತಕ್ಕೆ ಕಾಲಿಡುತ್ತಿದ್ದು ಈ ದಿನ ಭಾವನಾತ್ಮಕ ಪತ್ರವೊಂದನ್ನು ಬರೆದು ತಮಗೆ ತಾವೇ ಹುಟ್ಟುಹಬ್ಬದ ಶುಭಾಶಯಗಳನ್ನು ತಿಳಿಸಿಕೊಂಡಿದ್ದಾರೆ.

ಹೌದು ಅನು ಪ್ರಭಾಕರ್ ಅವರ ವ್ಯಯಕ್ತಿಕ ಜೀವನದ ವಿಚಾರಕ್ಕೆ ಬಂದರೆ ನಟಿ ಗಾಯತ್ರಿ ಪ್ರಭಾಕರ್ ಅವರ ಮಗಳು ಅನು ಚಿಕ್ಕ ವಯಸ್ಸಿನಲ್ಲಿಯೇ ದೊಡ್ಡ ಯಶಸ್ಸು ಕಂಡವರು.. ನಂತರ ಹಿರಿಯ ನಟಿ ಜಯಂತಿ ಅವರ ಪುತ್ರನ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟ ಅನು ಪ್ರಭಾಕರ್ ಕೆಲ ವರ್ಷಗಳ ಹಿಂದೆ ಪತಿಯಿಂದ ದೂರಾದರು.. ನಂತರ ರಘು ಮುಖರ್ಜಿ ಅವರೊಂದಿಗೆ ನೂತನ ಜೀವನ ಆರಂಭಿಸಿದ ಅನು ಪ್ರಭಾಕರ್ ಸದ್ಯ ನಂದನ ಎಂಬ ಹೆಣ್ಣು ಮಗುವಿಗೆ ತಾಯಿಯಾಗಿ ರಘು ಮುಖರ್ಜಿ ಅವರಿಗೆ ಪರಿ ಪೂರ್ಣ ಮಡದಿಯಾಗಿ ಸಂತೋಷದ ಜೀವನ ಸಾಗಿಸುತ್ತಿದ್ದಾರೆ..

Anu Prabhakar: ನಟಿ ಅನು ಪ್ರಭಾಕರ್​ಗೆ ಕೊರೋನಾ ಸೋಂಕು ದೃಢ

ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ಆಕ್ಟೀವ್ ಆಗಿರುವ ಅನು ಪ್ರಭಾಕರ್ ಅವರು ಆಗಾಗ ಪತಿ ಹಾಗೂ ಮಗಳೊಟ್ಟಿಗಿನ ಫೋಟೋಗಳನ್ನು ಹಂಚಿಕೊಳ್ಳುತ್ತಿರುತ್ತಾರೆ.. ಅಷ್ಟೇ ಅಲ್ಲದೇ ರಘು ಮುಖರ್ಜಿ ಅವರು ನನ್ನ ಬಾಳಿಗೆ ಬಂದ ನಂತರ.. ಮಗಳು ನಂದನ ಹುಟ್ಟಿದ ಬಳಿಕ ನನ್ನ ಜೀವನ ಪರಿಪೂರ್ಣವಾಗಿದೆ.. ಇದು ಲೈಫ್ ಟೈಮ್ ಲವ್ ಎಂದಿದ್ದರು.. ಇದೀಗ ತಮ್ಮ ನಲವತ್ತನೇ ಹುಟ್ಟುಹಬ್ಬದ ದಿನವಾದ ಇಂದು ಭಾವನಾತ್ಮಕ ಪತ್ರವೊಂದನ್ನು ಬರೆದು ತಮಗೆ ತಾವೇ ವಾಗ್ದಾನ ಕೊಟ್ಟುಕೊಂಡಿದ್ದಾರೆ.. ಹೌದು ಇಲ್ಲಿದೆ ನೋಡಿ ಅನು ಅವರ ಮನದಾಳದ ಮಾತುಗಳು..

“ಇವತ್ತು ನಾನು ನಲವತ್ತಕ್ಕೆ ಕಾಲಿಡುತ್ತಿದ್ದೇನೆ.. ಕೃತಜ್ಞತೆ ಎಂಬ ಒಂದು ಪದವು ಇಂದು ನನ್ನ ಹೃದಯವನ್ನು ತುಂಬುತ್ತದೆ.. ನನಗೆ ಈ ಅದ್ಭುತವಾದ ಜೀವನ.. ತಂದೆ ತಾಯಿಗಳು.. ಕುಟುಂಬ.. ಮತ್ತು ಕುಟುಂಬದಂತಿರುವ ಸ್ನೇಹಿತರನ್ನು ನೀಡಿರುವ ದೇವರು ಮತ್ತು ಈ ಪ್ರಪಂಚಕ್ಕೆ ಋಣಿಯಾಗಿದ್ದೇನೆ.. ಹಾಗೂ ವಂದನೆಗಳನ್ನು ಸಲ್ಲಿಸುತ್ತೇನೆ.. ಗಾಯತ್ರಿ ಮತ್ತು ಪ್ರಭಾಕರ್ ಅವರ ಮಗಳಾಗಿ.. ವಿಕ್ಕಿಯ ತಂಗಿಯಾಗಿ.. ಅನ್ನಪೂರ್ಣಳಾಗಿ ನನ್ನ ಬಾಲ್ಯ ಕಳೆದೆ.. ಅನಂತರ ಲಕ್ಷಾಂತರ ಕನ್ನಡಿಗರ ಹೃದಯದಲ್ಲಿ ಅನು ಪ್ರಭಾಕರ್ ಆಗಿ ನೆಲೆಸಿದೆ..

It's splitsville for Anu Prabhakar and Krishna Kumar | Kannada Movie News - Times of India

ರಘು ಅವರ ಜೀವನ ಸಂಗಾತಿಯಾಗಿ.. ನಂದನಾಳ ಅಮ್ಮನಾಗುವ ಮೂಲಕ ನನ್ನ ಸುಂದರವಾದ ಜೀವನ ನಿಜವಾದ ಅರ್ಥದಲ್ಲಿ ಪರಿಪೂರ್ಣವಾಯಿತು.. ಈ ನಲವತ್ತು ವರ್ಷಗಳು ಸ್ಮರಣಯೋಗ್ಯ ಜೀವನವಾಗುವಂತೆ ಮಾಡಿದ ಪ್ರತಿಯೊಬ್ಬರಿಗೂ ನನ್ನ ವಂದನೆಗಳನ್ನು ಅರ್ಪಿಸುತ್ತೇನೆ.. ಕೃತಜ್ಞತೆ ತುಂಬಿದ ಜೀವನ ನಡೆಸುವಲ್ಲಿ ನನ್ನ ತಂದೆ ತಾಯಿಗಳು ನನ್ನಲ್ಲಿ ಅಂತರ್ಗತ ಮಾಡಿರುವ ಮೂಲ ತತ್ವಗಳಂತೆ ಜೀವನವನ್ನು ಸಾಗಿಸುತ್ತೇನೆಂದು ನನಗೆ ನಾನೇ ವಾಗ್ದಾನ ಮಾಡಿಕೊಳ್ಳುತ್ತೇನೆ..

ಇದನ್ನೂ ಓದಿ >>>  ಬಜೆಟ್ ವಿದ್ಯಾರ್ಥಿಗಳಿಗೆ ಭರ್ಜರಿ ಗಿಫ್ಟ್? ಇಲ್ಲಿದೆ ಸಂಪೂರ್ಣ ಮಾಹಿತಿ! ಮಿಸ್‌ ಮಾಡದೇ ನೋಡಿ ನಿಮ್ಮ ಸ್ನೇಹಿತರಿಗೂ ತಿಳಿಸಿ

ಅಪ್ಪ ನಾನು ನಿಮ್ಮನ್ನು ತುಂಬಾ ಮಿಸ್ ಮಾಡಿಕೊಳ್ಳುತ್ತೇನೆ.. ಆದರೆ ನನಗೆ ಗೊತ್ತು ಪ್ರತಿಕ್ಷಣ ನೀವು ನನ್ನ ಪಕ್ಕದಲ್ಲಿದ್ದು ನನ್ನ ಕೈಹಿಡಿದು ಆಶೀರ್ವಾದ ಮಾಡಿ ನನ್ನನ್ನು ನಡೆಸುತ್ತೀರಿ ಎಂದು.. ಹ್ಯಾಪಿ ಬರ್ತ್ ಡೇ ಟು ಮಿ..” ಎಂದು ಬರೆದು ಪೋಸ್ಟ್ ಮಾಡಿದ್ದಾರೆ..

ಸದ್ಯ ಅನು ಪ್ರಭಾಕರ್ ಅವರ ಪೋಸ್ಟ್ ಗೆ ಕಮೆಂಟ್ ಮೂಲಕ ಸ್ನೇಹಿತರು ಅಭಿಮಾನಿಗಳು ಹುಟ್ಟುಹಬ್ಬದ ಶುಭಾಶಯಗಳನ್ನು ತಿಳಿಸಿದ್ದು‌ ಮುಂದಿನ ಜೀವನ ಅಂದುಕೊಂಡಂತೆ ಸಾಗಲಿ ಎಂದು ಹಾರೈಸಿದ್ದಾರೆ..

ನಿಮ್ಮ ಸ್ನೇಹಿತರಿಗೆ ಹಾಗು ವಾಟ್ಸಪ್ಪ್ / ಫೇಸ್ಬುಕ್ ಗ್ರೂಪ್ ಗಳಿಗೆ ಶೇರ ಮಾಡಿ...