Anu-Prabhakar

ನಟಿ ಅನುಪ್ರಭಾಕರ್ ನಿಜಕ್ಕೂ ಟೈಗರ್ ಪ್ರಭಾಕರ್ ಮಗಳಾ? ರಿವೀಲ್ ಆಯ್ತು ನೋಡಿ ಹೊಸ ಸುದ್ಧಿ.

CINEMA/ಸಿನಿಮಾ Entertainment/ಮನರಂಜನೆ

Anu Prabhakar ಕನ್ನಡ ಚಿತ್ರರಂಗದ ಎವರ್ಗ್ರೀನ್ ನಟಿಯರಲ್ಲಿ ನಟಿ ಅನು ಪ್ರಭಾಕರ್(Anu Prabhakar) ಅವರು ಕೂಡ ಮುಂಚೂಣಿ ಸ್ಥಾನದಲ್ಲಿ ಕಾಣಿಸಿಕೊಳ್ಳುತ್ತಾರೆ. ಹೌದು ಮಿತ್ರರೇ, 1999 ರಲ್ಲಿ ಶಿವರಾಜ್ ಕುಮಾರ್(Shivarajkumar) ನಟನೆಯ ಹೃದಯ ಹೃದಯ ಸಿನಿಮಾದಲ್ಲಿ ನಾಯಕ ನಟಿಯಾಗಿ ಕಾಣಿಸಿಕೊಳ್ಳುವ ಮೂಲಕ ಕನ್ನಡ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡುತ್ತಾರೆ.

ಇದಾದ ನಂತರ ಒಂದಾದ ಮೇಲೆ ಒಂದರಂತೆ ಅವರ ಪ್ರತಿಯೊಂದು ಸಿನಿಮಾಗಳು ಬಾಕ್ಸ್ ಆಫೀಸ್ ನಲ್ಲಿ ಮಾತ್ರವಲ್ಲದೆ ಜನರ ಮನಸ್ಸನ್ನು ಗೆಲ್ಲುವುದಕ್ಕೆ ಕೂಡ ಯಶಸ್ವಿಯಾಗಿತ್ತು ಹೀಗಾಗಿ ಅವರನ್ನು ಕನ್ನಡ ಚಿತ್ರರಂಗದ ಅತ್ಯಂತ ಯಶಸ್ವಿ ನಾಯಕ ನಟಿಯರ ಲಿಸ್ಟಿನಲ್ಲಿ ಶಾಮಿಲ್ ಆಗುತ್ತಾರೆ. ಅಂದಿನ ಸಮಯದ ಕನ್ನಡ ಪ್ರೇಕ್ಷಕರ ನೆಚ್ಚಿನ ನಟಿಯಾಗಿ ಅನುಪ್ರಭಾಕರ್(Anu Prabhakar) ಅವರು ಕಾಣಿಸಿಕೊಳ್ಳುತ್ತಾರೆ.

ಒಂದು ಕಾಲದಲ್ಲಿ ನಿಮ್ಮ ಬಾಲ್ಯದಲ್ಲಿ ನಿಮಗೂ ಕೂಡ ನೆನಪಿರಬಹುದು ಅನುಪ್ರಭಾಕರ್ ಅವರನ್ನು ಟೈಗರ್ ಪ್ರಭಾಕರ್(Tiger Prabhakar) ಅವರ ಮಗಳು ಎನ್ನುವುದಾಗಿ ಭಾವಿಸಲಾಗುತ್ತಿತ್ತು. ಇದಕ್ಕೆ ಸ್ವತಹ ನಟಿ ಆಗಿರುವಂತಹ ಅನುಪ್ರಭಾಕರ್ ಅವರೇ ಸಂಪೂರ್ಣ ವಿವರವಾಗಿ ಸ್ಪಷ್ಟೀಕರಣ ನೀಡಿದ್ದು ಎಲ್ಲಾ ಗೊಂದಲವನ್ನು ಪರಿಹರಿಸುವಂತಹ ಕೆಲಸವನ್ನು ಮಾಡಿದ್ದಾರೆ ಎಂದು ಹೇಳಬಹುದಾಗಿದೆ.

ನನ್ನ ಹೆಸರು ಅನ್ನಪೂರ್ಣ ಆಗಿತ್ತು ಆದರೆ ಚಿತ್ರರಂಗಕ್ಕೆ ಕಾಲಿಟ್ಟ ಸಂದರ್ಭದಲ್ಲಿ ಪಾರ್ವತಮ್ಮ ರಾಜಕುಮಾರ್(Parvathamma Rajkumar) ಅವರು ನನ್ನ ಹೆಸರನ್ನು ಅನುಶ್ರೀ ಎಂದು ಇಡುತ್ತೇನೆ ಎಂಬುದಾಗಿ ಹೇಳಿದಾಗ ನಾನು ನನ್ನ ತಂದೆಯ ಹೆಸರನ್ನು ಕೂಡ ಇಡುತ್ತೀರಾ ಎಂದು ಹೇಳಿದ್ದೆ. ಅದಕ್ಕೆ ನನ್ನ ತಂದೆ ಪ್ರಭಾಕರ್(Prabhakar) ಅವರ ಹೆಸರನ್ನು ಸೇರಿಸಿ ನನ್ನ ಹೆಸರು ಅನುಪ್ರಭಾಕರ್ ಆಯ್ತು ಎಂಬುದಾಗಿ ತಮ್ಮ ಹೆಸರನ್ನು ಹಿಂದಿನ ಕಥೆಯನ್ನು ನಟಿ ಅನುಪ್ರಭಾಕರ್ ಅವರು ಬಿಟ್ಟಿದ್ದಾರೆ.

ನಿಮ್ಮ ಸ್ನೇಹಿತರಿಗೆ ಹಾಗು ವಾಟ್ಸಪ್ಪ್ / ಫೇಸ್ಬುಕ್ ಗ್ರೂಪ್ ಗಳಿಗೆ ಶೇರ ಮಾಡಿ...