annabhagya-beneficiaries-money-deposit

ಅನ್ನಭಾಗ್ಯ ಫಲಾನುಭವಿಗಳಿಗೆ ಭರ್ಜರಿ ಗುಡ್ ನ್ಯೂಸ್,ಆಗಸ್ಟ್ ತಿಂಗಳ ಹಣ ಜಮೆ ಪ್ರಾರಂಭ ನಿಮ್ಮ ಅಕೌಂಟ್ ಗೆ ಹಣ ಜಮೆ ಆಗಿದಿಯೋ ಇಲ್ಲವೋ ಚೆಕ್ ಮಾಡುವ ಲಿಂಕ್ ಇಲ್ಲಿದೆ ನೋಡಿ.!

Free Govt Schemes/ಸರ್ಕಾರಿ ಉಚಿತ ಯೋಜನೆಗಳು RATION CARD/ರೇಷನ್ ಕಾರ್ಡ್ ಮಾಹಿತಿ ಗೃಹ ಜ್ಯೋತಿ ಯೋಜನೆ/Gruha Jyoti Scheme ಗೃಹಲಕ್ಷ್ಮಿ ಯೋಜನೆ / Gruhalakshmi Scheme

ಕರ್ನಾಟಕ ಸರ್ಕಾರದ (Karnataka government) ಗ್ಯಾರಂಟಿ ಯೋಜನೆಗಳಲ್ಲಿ (Guarantee Scheme) ಒಂದಾದ ಅನ್ನಭಾಗ್ಯ (Annabhagya) ಯೋಜನೆಯು ಜುಲೈ ತಿಂಗಳಿನಿಂದ ಜಾರಿಯಾಗಿದೆ. ಅನ್ನಭಾಗ್ಯ ಯೋಜನೆಯಡಿ ಉಚಿತ ಪಡಿತರವನ್ನು ಪ್ರತಿ ಸದಸ್ಯನಿಗೆ 10Kg ನೀಡಲಾಗುವುದು ಎಂದು ಚುನಾವಣೆ ಪ್ರಣಾಳಿಕೆ ವೇಳೆ ಕಾಂಗ್ರೆಸ್ ಪಕ್ಷವು ಹೇಳಿತ್ತಾದರೂ ದಾಸ್ತಾನು ಲಭ್ಯವಾಗದ ಕಾರಣ ಪ್ರತಿ ಸದಸ್ಯನಿಗೆ 5kg ಅಕ್ಕಿ ಹಾಗೂ ಹೆಚ್ಚುವರಿ 5Kg ಅಕ್ಕಿ ಬದಲಿಗೆ 170 ರೂಪಾಯಿಯನ್ನು ಕುಟುಂಬದ ಮುಖ್ಯಸ್ಥನ (Head of the family) ಬ್ಯಾಂಕ್ ಖಾತೆಗೆ ವರ್ಗಾವಣೆ ಮಾಡಿತ್ತು.

ಜುಲೈ ತಿಂಗಳಲ್ಲಿ ರಾಜ್ಯದ 1.28 ಕೋಟಿ ಪಡಿತರ ಚೀಟಿಯ (Ration Card) 4.42. ಕೋಟಿ ಫಲಾನುಭವಿಗಳು ಹಣ ಪಡೆಯಲು ಅರ್ಹರಾಗಿದ್ದರು. ಆದರೆ ಕುಟುಂಬದ ಮುಖ್ಯಸ್ಥರ ಬ್ಯಾಂಕ್ ಖಾತೆ ಮಾಹಿತಿ ಹೊಂದಾಣಿಕೆಯಾಗದ (bank account details) ಕಾರಣಗಳಿಂದ ಎಲ್ಲರೂ ಕೂಡ ಅನ್ನಭಾಗ್ಯ ಯೋಜನೆ ಹಣ ಪಡೆದಿಲ್ಲ. ಈಗ ಸರ್ಕಾರ ಅನ್ನಭಾಗ್ಯ ಯೋಜನೆಯ ಆಗಸ್ಟ್ ತಿಂಗಳಿನ (Annabhagya August month amount release) ಹಣ ಬಿಡುಗಡೆ ಮಾಡುತ್ತಿದೆ.

ಈ ತಿಂಗಳಿನಲ್ಲಿ ಕಳೆದ ತಿಂಗಳಿಗಿಂತ ಹೆಚ್ಚು ಫಲಾನುಭವಿಗಳು ಹಣ ಪಡೆಯುವ ಸಾಧ್ಯತೆ ಇದೆ. ಆಹಾರ ಇಲಾಖೆ ಅಧಿಕೃತ ವೆಬ್ಸೈಟ್ ಗೆ ಭೇಟಿ ಕೊಟ್ಟು ಫಲಾನುಭವಿಗಳು ಆಗಸ್ಟ್ ತಿಂಗಳಿನಲ್ಲಿ ತಮ್ಮ ಕುಟುಂಬದ ಮುಖ್ಯಸ್ಥರ ಖಾತೆಗೆ ಹಣ ಜಮೆ ಆಗಿದೆಯೇ ಇಲ್ಲವೇ ಯಾವ ಬ್ಯಾಂಕ್ ಖಾತೆಗೆ ಆಗಿದೆ ಮತ್ತು ಎಷ್ಟು ಹಣಕ್ಕೆ ಕುಟುಂಬ ಅರ್ಹವಾಗಿದೆ ಎನ್ನುವ ವಿವರವನ್ನು ಪಡೆದುಕೊಳ್ಳಬಹುದು. ಅದಕ್ಕಾಗಿ ಈ ಸರಳ ಹಂತಗಳನ್ನು ಪಾಲಿಸಿ.

ಅನ್ನಭಾಗ್ಯ ಯೋಜನೆಯ ಸ್ಟೇಟಸ್ (Annabhagya Status Check) ಚೆಕ್ ಮಾಡುವ ವಿಧಾನ:-

● ಆಹಾರ ಮತ್ತು ನಾಗರಿಕ ಸರಜರಾಜು ಇಲಾಖೆಯ (Food and civil supply department) ವೆಬ್ಸೈಟ್ ಆದ
https://ahara.kar.nic.in/Home/EServices ಭೇಟಿಕೊಡಿ.
● ಮುಖಪುಟದ ಎಡಭಾಗದಲ್ಲಿರುವ 3 ಗೆರೆಗಳ ಮೇಲೆ ಕ್ಲಿಕ್ ಮಾಡಿ.
● ಅದರಲ್ಲಿ e-Status ಎನ್ನುವ ಆಯ್ಕೆ ಕಾಣುತ್ತದೆ. ಆ ಆಯ್ಕೆಯನ್ನು ಸೆಲೆಕ್ಟ್ ಮಾಡಿ, ನಂತರ DBT Status ಎನ್ನುವುದರ ಮೇಲೆ ಕ್ಲಿಕ್ ಮಾಡಿ.

● ಮತ್ತೊಂದು ಪೇಜ್ ಓಪನ್ ಆಗುತ್ತದೆ ಸ್ಕ್ರೀನ್ ಮೇಲೆ ಜಿಲ್ಲೆಗಳಿಗೆ ಅನುಸಾರವಾಗಿ ವಿಭಾಗ ಮಾಡಲಾಗಿರುವ ಮೂರು ಲಿಂಕ್ ಗಳು ಕಾಣುತ್ತವೆ. ಅದರಲ್ಲಿ ನಿಮ್ಮ ಜಿಲ್ಲೆಯ ಹೆಸರು ಯಾವ ಲಿಂಕ್ ಅಲ್ಲಿ ಕಾಣುತ್ತದೆ ಆ ಲಿಂಕ್ ಕ್ಲಿಕ್ ಮಾಡಿ.
● ಮತ್ತೊಂದು ಪೇಜ್ ಓಪನ್ ಆಗುತ್ತದೆ ಕೊನೆಯಲ್ಲಿ, ಎಡ ಭಾಗದ ಮೆನುವಿನ ಕೊನೆ ಆಪ್ಷನ್ ಅಲ್ಲಿ DBT Status ಎನ್ನುವ ಆಪ್ಷನ್ ಕಾಣುತ್ತದೆ. ಅದರ ಮೇಲೆ ಕ್ಲಿಕ್ ಮಾಡಿ.

● ಆಹಾರ ಇಲಾಖೆಯ ಅಫಿಷಿಯಲ್ ಪೇಜ್ ಓಪನ್ ಆಗುತ್ತದೆ. ಅದರಲ್ಲಿ ತಿಂಗಳು ಎನ್ನುವ ಆಪ್ಷನ್ ಅಲ್ಲಿ ಜುಲೈ ತಿಂಗಳು ಇರುತ್ತದೆ ಅದನ್ನು ಆಗಸ್ಟ್ ಎಂದು ಬದಲಾಯಿಸಿ, ನಿಮ್ಮ ಪಡಿತರ ಚೀಟಿ ಸಂಖ್ಯೆ (Ration Card Number) ನಮೂದಿಸಿ. ನಂತರ ಸಂಖ್ಯೆಗಳ ಕ್ಯಾಪ್ಚಾ (Number code captcha) ಬರುತ್ತದೆ ಅದನ್ನು ಎಂಟ್ರಿ ಮಾಡಿ Go ಎಂಬ ಆಯ್ಕೆಯ ಮೇಲೆ ಕ್ಲಿಕ್ ಮಾಡಿದರೆ ಈ ಮೇಲೆ ತಿಳಿಸಿದಂತೆ ಹಣ ಜಮೆ ಆಗಿರುವ ಕಂಪ್ಲೀಟ್ ಡೀಟೇಲ್ಸ್ ಬರುತ್ತದೆ.

● ಅನ್ನಭಾಗ್ಯ ಯೋಜನೆಯ ಎಷ್ಟು ಹಣವು ಫಲಾನುಭವಿಯ ಯಾವ ಬ್ಯಾಂಕ್ ಖಾತೆಗೆ ಜಮೆ ಆಗಿದೆ ಅಥವಾ ಅದರ ಸ್ಥಿತಿ ಹೇಗಿದೆ ಎಂಬುವುದನ್ನು ಈ ರೀತಿ ಚೆಕ್ ಮಾಡಿ ತಿಳಿದುಕೊಳ್ಳಬಹುದು. ಹಣ ವರ್ಗಾವಣೆ ಆಗಲು ಸಮಸ್ಯೆ ಇದ್ದಲ್ಲಿ, ಕೆಳಗೆ ಆಹಾರ ಇಲಾಖೆಯ ಘೋಷಣೆ ಇರುತ್ತದೆ ಅದನ್ನು ಗಮನಿಸಬೇಕು.

DIRECT LINK : https://ahara.kar.nic.in/lpg/

ಕೆಳಗೆ,ನಿಮ್ಮ ಸ್ನೇಹಿತರಿಗೆ ಹಾಗೂ ವಾಟ್ಸಪ್ಪ್ - ಫೇಸ್ಬುಕ್ ಗ್ರೂಪ್ ಗಳಿಗೆ ಶೇರ ಮಾಡಿ...ಧನ್ಯವಾದ.