ಕಾಂಗ್ರೆಸ್ ನೀಡಿದ ಐದು ಗ್ಯಾರಂಟಿಗಳಲ್ಲಿ ಪ್ರಮುಖವಾದದ್ದು ಅನ್ನಭಾಗ್ಯ ಕೂಡ ಒಂದು ಈಗಾಗಲೇ ಗೃಹಜೋತಿ ಯೋಜನೆ, ಶಕ್ತಿ ಯೋಜನೆ ಮತ್ತು ಅನ್ನಭಾಗ್ಯ ಯೋಜನೆಗಳು 10-07-2023 ರಂದು ಜಾರಿ ಮಾಡಿ ಅನುಷ್ಠಾನಕ್ಕೆ ತರಲಾಗಿದೆ. ಇನ್ನೇನು ಗೃಹಲಕ್ಷ್ಮಿ ಯೋಜನೆಯ ಹಣ ಕೂಡ ಆಗಸ್ಟ್ 30ನೇ ತಾರೀಕು ನಿಮ್ಮ ಖಾತೆಗೆ ಬರುತ್ತಿದೆ. ಅನ್ನಭಾಗ್ಯ ಯೋಜನೆ ಅಡಿಯಲ್ಲಿ 10 ಕೆಜಿ ಅಕ್ಕಿಯನ್ನು ನೀಡುವ ಭರವಸೆಯನ್ನು ಕಾಂಗ್ರೆಸ್ ಪಕ್ಷ ಕೊಟ್ಟಿತ್ತು. ಆದರೆ ಹೆಚ್ಚುವರಿ 5 ಕೆಜಿ ಅಕ್ಕಿ ಸಿಗದ ಕಾರಣ ಅದರ ಬದಲು ಹಣ ನೀಡುವುದಾಗಿ ನಿರ್ಧಾರ ಮಾಡಿತ್ತು ಅದರಂತೆ ಬಿಪಿಎಲ್ ಕಾರ್ಡ್ ಹೊಂದಿರುವ ಕುಟುಂಬದ ಪ್ರತಿ ಸದಸ್ಯರಿಗೆ 170 ರೂಪಾಯಿ ದುಡ್ಡು ಕೊಡಲಾಗುತ್ತಿದೆ. ಕಳೆದ ತಿಂಗಳು ಅನ್ನಭಾಗ್ಯದ ಹಣ ಎಲ್ಲರಿಗೂ ಬಂದಿತ್ತು. ಆದರೆ ಆಗಸ್ಟ್ ತಿಂಗಳು 20ನೇ ತಾರೀಕು ದಾಟಿದರೂ ಇನ್ನೂ ಹಣ ಬಂದಿಲ್ಲ ಎಂದು ಸಾಕಷ್ಟು ಜನ ಕೇಳುತ್ತಿದ್ದಾರೆ ಹಾಗಾದರೆ ಯಾವಾಗ ಹಣ ಬರುತ್ತದೆ ಆಹಾರ ಸಚಿವರು ಹೇಳಿದ್ದೇನು ನೋಡೋಣ ಬನ್ನಿ.
ಅನ್ನಭಾಗ್ಯದ ಹಣ ಈ ತಿಂಗಳು ಇನ್ನೂ ಬಂದಿಲ್ಲದ ಕಾರಣ ಮಾಧ್ಯಮದವರು ಆಹಾರ ಸಚಿವರಿಗೆ ಪ್ರಶ್ನೆ ಮಾಡಿದ್ದಾರೆ ಅದಕ್ಕೆ ಆಹಾರ ಸಚಿವರು ಆಗಸ್ಟ್ ತಿಂಗಳ ಹಣ ಯಾರಿಗೂ ಹೋಗಿಲ್ಲ ಅನ್ನುವುದು ನನಗೂ ಗೊತ್ತಿದೆ ಈಗ ಸಾಕಷ್ಟು ಯೋಜನೆಗಳು ಮತ್ತು ಕೆಲಸಗಳು ಅನುಷ್ಠಾನಕ್ಕೆ ತರುತ್ತಿದ್ದೇವೆ ಹಾಗಾಗಿ ಸ್ವಲ್ಪ ತಡವಾಗಿದೆ ಈ ತಿಂಗಳು 25 ಅಥವಾ 27ನೇ ತಾರೀಕಿನಂದು ಅನ್ನ ಭಾಗ್ಯದ ಹಣ ನಿಮ್ಮ ಖಾತೆಗೆ ಬರಲಿದೆ ಎಂದು ಹೇಳಿದ್ದಾರೆ ಕಳೆದ ಬಾರಿಯಾಗೆ ಜಿಲ್ಲೆಗಳನ್ನು ಗುಂಪುಗಳನ್ನಾಗಿ ಮಾಡಿ ಬೇರೆ ಬೇರೆ ತಾರೀಕಿನಂದು ಹಣವನ್ನು ಹಾಕಲಾಗುತ್ತದೆ.
ಒಟ್ಟಿನಲ್ಲಿ ಸಚಿವರು ಸ್ಪಷ್ಟನೆಪಡಿಸಿದ್ದಾರೆ ಈ ತಿಂಗಳು 25 ಅಥವಾ 27 ನೇ ತಾರೀಕಿನಂದು ಹಣ ಬರಲಿದೆ ಎಂದು ಅನ್ನಭಾಗ್ಯದ ಹಣ ನಿಮ್ಮ ಆಧಾರ್ ಕಾರ್ಡ್ ಗೆ ಯಾವ ಬ್ಯಾಂಕ್ ಲಿಂಕ್ ಆಗಿದೆ ಆ ಖಾತೆಗೆ ಹಣ ಬರುತ್ತದೆ.