ನಟಿ ನೋರಾ ಫತೇಹಿ ಬಾಲಿವುಡ್ ಸಿನಿಮಾ ಇಂಡಸ್ಟ್ರಿಯಲ್ಲಿ ಬಹು ಬೇಡಿಕೆಯ ನಟಿ. ಇವರು ನಾಯಕಿಯಾಗಿ ಕಾಣಿಸಿಕೊಂಡಿದ್ದಕ್ಕಿಂತ ಡ್ಯಾನ್ಸರ್ ಆಗಿಯೇ ಹೆಚ್ಚಾಗಿ ಗುರುತಿಸಿಕೊಂಡಿದ್ದಾರೆ. ನೋರಾ ಫತೇಹಿ ಅವರಿಗೆ ಡ್ಯಾನ್ಸ್ ಇಷ್ಟ ಪಡುವ ಫ್ಯಾನ್ಸ್ ಗಳೇ ಹೆಚ್ಚು. ಬಾಲಿವುಡ್ ನಲ್ಲಿ ನೋರಾ ಫತೇಹಿ ಅಷ್ಟು ಚೆನ್ನಾಗಿ ನೃತ್ಯ ಮಾಡಬಲ್ಲ ನಟಿಯರು ಸದ್ಯ ಯಾರು ಕಾಣಿಸಿಕೊಳ್ಳುತ್ತಿಲ್ಲ. ಯಾಕೆಂದರೆ ನೋರಾ ಫತೇಹಿ ಒಮ್ಮೆ ಸೊಂಟ ಬಳುಕಿಸಿದರೆ ಸಾಕು ಎಲ್ಲರೂ ಹುಚ್ಚೇದ್ದು ಕುಣಿಯುತ್ತಾರೆ.
ನೋರಾ ಫತೇಹಿ ಮೂಲತಃ ಕೆನಡಾದವರು. ಆದರೆ ಅವರು ಬಾಲಿವುಡ್ ಸಿನಿಮಾದಲ್ಲಿಯೇ ಹೆಚ್ಚಾಗಿ ಗುರುತಿಸಿಕೊಂಡಿದ್ದಾರೆ. ಇನ್ನು ಅಚ್ಚರಿಯ ವಿಚಾರ ಅಂದ್ರೆ ಬಾಲಿವುಡ್ ನಲ್ಲಿ ಈಗ ಬ್ಯಾಕ್ ಟು ಬ್ಯಾಕ್ ಸಿನಿಮಾಗಳಲ್ಲಿ ಕಾಣಿಸಿಕೊಳ್ಳುತ್ತಿರುವ ನೋರಾ ಫತೇಹಿ ತೆಲುಗು ಸಿನಿಮಾ ಇಂಡಸ್ಟ್ರಿಯಲ್ಲಿ ಐಟಂ ಸಾಂಗ್ ಒಂದಕ್ಕೆ ನೃತ್ಯ ಮಾಡುವುದರ ಮೂಲಕ ಹೆಚ್ಚು ಫೇಮಸ್ ಆದವರು.
ಹೌದು ನೋರಾ ಫತೇಹಿ ಜೂನಿಯರ್ ಎನ್ಟಿಆರ್ ಅವರ ಟೆಂಪರ್ ಚಿತ್ರದಲ್ಲಿ ಐಟಂ ಸಾಂಗ್ ಒಂದಕ್ಕೆ ನೃತ್ಯ ಮಾಡಿದ್ದರು. ಅದಾದ ಬಳಿಕ ಅವರು ಹೆಚ್ಚಾಗಿ ಸಿನಿಮಾಗಳಲ್ಲಿ ನೃತ್ಯ ಮಾಡುವುದರಲ್ಲಿ ಕಾಣಿಸಿಕೊಂಡಿದ್ದಾರೆ. ನೋರಾ ಫತೇಹಿ ತಮ್ಮ ಸಿನಿಮಾ ವೃತ್ತಿ ಜೀವನವನ್ನು ಆರಂಭಿಸಿದ್ದು 2014ರಲ್ಲಿ. ಕಳೆದ ಎಂಟು ವರ್ಷಗಳಲ್ಲಿ 15 ಕ್ಕೂ ಹೆಚ್ಚು ಐಟಂ ಸಾಂಗ್ ಗಳಿಗೆ ನೋರಾ ಫತೇಹಿ ಸೊಂಟ ಬಳಕಿಸಿದ್ದಾರೆ.
ನೋರಾ ಫತೇಹಿ ಅವರ ಮೊದಲ ಸಿನಿಮಾ ರೋರ್ ದಿ ಟೈಗರ್ ಆಫ್ ದಿ ಸುಂದರ್ ಬನ್ಸ್. ಈ ಸಿನಿಮಾದಲ್ಲಿ ನೋರಾ ಅವರ ಜೊತೆಗೆ ಸಹ ಕಲಾವಿದ ಒಬ್ಬ ಅನುಚಿತವಾಗಿ ವರ್ತಿಸಿದ್ದನಂತೆ. ಆಗಲೇ ಆತನಿಗೆ ಕಪಾಳ ಮೋಕ್ಷ ಮಾಡಿದ ಗಟ್ಟಿಗಿತ್ತಿ ನೋರಾ ಫತೇಹಿ. ಈ ಬಗ್ಗೆ ನಡೆದ ಘಟನೆಯನ್ನು ಕಪಿಲ್ ಶರ್ಮಾ ಶೋನಲ್ಲಿ ಹೇಳಿಕೊಂಡಿದ್ದಾರೆ.
ಕಪಿಲ್ ಶರ್ಮಾ ನಡೆಸಿಕೊಡುವ ದಿ ಕಪಿಲ್ ಶರ್ಮ ಶೋ ಬಾಲಿವುಡ್ ನಲ್ಲಿ ಸಿಕ್ಕಾಪಟ್ಟೆ ಫೇಮಸ್ ಆಗಿರುವ ಒಂದು ಹಾಸ್ಯ ಶೋ ಆಗಿದೆ. ಇದರಂತೆ ಕನ್ನಡದಲ್ಲಿ ಮಜಾ ಟಾಕೀಸ್ ಬಂದಿರುವುದು ನಿಮಗೂ ಗೊತ್ತಿರಬಹುದು. ಇನ್ನು ದಿ ಕಪಿಲ್ ಶರ್ಮಾ ಶೋ ನಲ್ಲಿ ಹೊಸ ಹೊಸ ಸಿನಿಮಾದ ಪ್ರಚಾರಕ್ಕಾಗಿ ನಾಯಕರು ನಾಯಕಿಯರು ಬರುತ್ತಾರೆ. ಹೀಗೆ ನೂರಾ ಫತೇಹಿ ಕೂಡ ಗೆಸ್ಟ್ ಆಗಿ ಹೋಗಿದ್ದ ಸಂದರ್ಭದಲ್ಲಿ ತಮ್ಮ ಮೊದಲ ಸಿನಿಮಾದ ಕೆಟ್ಟ ಅನುಭವದ ಬಗ್ಗೆ ಹೇಳಿಕೊಂಡಿದ್ದಾರೆ.
ಅದು ನನ್ನ ಮೊದಲ ಚಿತ್ರವಾಗಿತ್ತು ಸಹ ಕಲಾವಿದನೊಬ್ಬ ನನ್ನ ಜೊತೆ ಅನುಚಿತವಾಗಿ ನಡೆದುಕೊಂಡ ನನಗೆ ಅದು ಸರಿ ಬರಲಿಲ್ಲ ಹಾಗಾಗಿ ಆತನ ಕೆನ್ನೆಗೆ ಒಂದು ಬಾರಿಸಿದೆ. ಆತನು ತಿರುಗಿ ನನಗೆ ಹೊಡೆದ. ನಾನು ಮತ್ತೆ ಆತನ ಕಪಾಳಕ್ಕೆ ಹಾರೈಸಿದೆ. ಆತನನ ಜಡೆ ಹಿಡಿದು ಎಳೆದಾಡಿದ. ಇದೊಂದು ಕೆಟ್ಟ ಫೈಟ್ ಆಗಿತ್ತು ಎಂದು ನೂರಾ ಹೇಳಿಕೊಂಡಿದ್ದಾರೆ. ಆದರೆ ನೋರಾ ಫತೇಹಿ ಈ ಘಟನೆಯನ್ನು ಫನ್ನಿ ಆಗಿ ತೆಗೆದುಕೊಂಡಿದ್ದಾರೆ. ಅವರಿಗೆ ಇದೊಂದು ತಮಾಷೆಯ ಮೆಮೊರಿ ಆಗಿದೆ.
ಸದ್ಯ ಬಾಲಿವುಡ್ ನಲ್ಲಿ ಸಿನಿಮಾ ಇಂಡಸ್ಟ್ರಿಯಲ್ ಬ್ಯುಸಿ ಆಗಿರುವ ನಟಿ ನೋರಾ ಫತೇಹಿ ಬ್ಯಾಕ್ ಟು ಬ್ಯಾಕ್ ಒಂದಲ್ಲ ಒಂದು ಸಿನಿಮಾದಲ್ಲಿ ಅಭಿನಯಿಸುತ್ತಿದ್ದಾರೆ. ಇನ್ನು ನೋರಾ ಫತೇಹಿ ಅಭಿನಯದ ಅಭಿನಯದ 100% ಹಾಗೂ ಮಡಗಾಂವ್ ಎಕ್ಸ್ಪ್ರೆಸ್ ಇನ್ನೇನು ತೆರೆಗೆ ಬರಲಿದೆ. ಇದರ ಜೊತೆಗೆ ಡ್ಯಾನ್ಸ್ ರಿಯಾಲಿಟಿ ಶೋಗಳಲ್ಲಿ ಜಡ್ಜ್ ಆಗಿಯೂ ಕಾಣಿಸಿಕೊಳ್ಳುತ್ತಾರೆ ನೋರಾ.