ತೆಲಂಗಾಣದ ಮಹಾಬೂಬಾದ್ ಜಿಲ್ಲೆಯ ತರಕಾರಿ ವ್ಯಾಪರಿಯೊಬ್ಬರು ಕಷ್ಟಪಟ್ಟು ಸಂಪಾದಿಸಿದ 2 ಲಕ್ಷ ರೂಪಾಯಿ ಹಣವನ್ನು ಇಲಿಗಳಿಂದ ಚೂರುಚೂರು ಮಾಡಿರುವುದನ್ನು ನೋಡಿ ಆಘಾತಕ್ಕೊಳಗಾಗಿದ್ದಾರೆ. ಈ ವ್ಯಾಪಾರಿ ತಮ್ಮ ಮನೆಯಲ್ಲಿ ಒಂದು ಚೀಲದೊಳಗೆ ಇಟ್ಟಿದ್ದ 2 ಲಕ್ಷ ರೂಪಾಯಿ ಮೌಲ್ಯದ ಕರೆನ್ಸಿ ನೋಟುಗಳ ಮೇಲೆ ಇಲಿಗಳು ಧಾಳಿ ನಡೆಸಿವೆ ಎಂದು ಹೇಳಿದ್ದಾರೆ.
ವೇಮುನೂರು ಗ್ರಾಮದ ಇಂದಿರಾನಗರ ತಾಂಡಾ ನಿವಾಸಿ ರೆಡಿಯಾ ನಾಯಕ್ ಹಣವನ್ನು ತಮ್ಮ ಬೀರುವಿನಲ್ಲಿ ಇಟ್ಟುಕೊಂಡಿದ್ದರು. ತನ್ನ ಕಿಬ್ಬೊಟ್ಟೆಯ ಶಸ್ತ್ರಚಿಕಿತ್ಸೆಗಾಗಿ ಹಣವನ್ನು ಉಳಿಸಿದ್ದಾರೆ ಮತ್ತು ಚೂರುಚೂರು ಮಾಡಿದ ಹಣವನ್ನು ತನ್ನ ಸಂಬಂಧಿಕರಿಂದ ಸಾಲವನ್ನಾಗಿ ಪಡೆದಿದ್ದರು. ಇಲಿ ಕಚ್ಚಿಹಾಕಿದ್ದ ಎಲ್ಲಾ ಕರೆನ್ಸಿ ನೋಟುಗಳು 500 ರೂಪಾಯಿಗಳಾದ್ದಾಗಿತ್ತು
“ತರಕಾರಿಗಳನ್ನು ಮಾರಾಟ ಮಾಡಿದ ನಂತರ ಇದು ನನ್ನ ಉಳಿತಾಯವಾಗಿತ್ತು. ನಾನು ಹಣವನ್ನು ಹತ್ತಿ ಚೀಲವೊಂದರಲ್ಲಿ ಇರಿಸಿದ್ದೆ, ನಾನು ಚೀಲವನ್ನು ತೆರೆದಾಗ, ಎಲ್ಲಾ 500 ರೂ. ಕರೆನ್ಸಿ ನೋಟುಗಳು ಇಲಿಗಳಿಂದ ಹಾನಿಗೊಳಗಾಗಿದ್ದನ್ನು ನೋಡಿ ನಾನು ಆಘಾತಗೊಂಡಿದ್ದೇನೆ” ಎಂದು ನಾಯಕ್ ಹೇಳಿದ್ದಾರೆ.
ತನ್ನ ದ್ವಿಚಕ್ರ ವಾಹನದಲ್ಲಿ ತರಕಾರಿಗಳನ್ನು ಮಾರಾಟ ಮಾಡುವ ಮೂಲಕ ಜೀವನ ಸಂಪಾದಿಸುವ ನಾಯಕ್, ನೋಟುಗಳನ್ನು ವಿನಿಮಯ ಮಾಡಿಕೊಳ್ಳಲು ಮಹಾಬೂಬಾದ್‌ನ ಹಲವಾರು ಬ್ಯಾಂಕ್‌ಗಳನ್ನು ಸಂಪರ್ಕಿಸಿದರೂ ಬ್ಯಾಂಕ್ ಅಧಿಕಾರಿಗಳು ನಿರಾಕರಿಸಿದರು.
ಹೈದರಾಬಾದ್‌ನ ರಿಸರ್ವ್ ಬ್ಯಾಂಕ್ (ಆರ್‌ಬಿಐ) ಯನ್ನು ಸಂಪರ್ಕಿಸಿ ಅವರ ಸಮಸ್ಯೆಯನ್ನು ವಿವರಿಸುವಂತೆ ಬ್ಯಾಂಕ್ ತರಕಾರಿ ಮಾರಾಟಗಾರರಿಗೆ ಸಲಹೆ ನೀಡಿತು. ಮಣ್ಣಾದ ಮತ್ತು ಹಾನಿಗೊಳಗಾದ ಕರೆನ್ಸಿ ನೋಟುಗಳನ್ನು ವಿನಿಮಯ ಮಾಡಿಕೊಳ್ಳಲು ಆರ್‌ಬಿಐ ಈ ಹಿಂದೆ ಬ್ಯಾಂಕುಗಳಿಗೆ ಸೂಚನೆ ನೀಡಿತ್ತು ಎಂಬುದನ್ನು ಗಮನಿಸಬೇಕು. ಆದಾಗ್ಯೂ, ಇಲಿಗಳಿಂದ ಅರ್ಧ ತಿಂದಿರುವ ನೋಟುಗಳ ವಿನಿಮಯ ಇದರಲ್ಲಿ ಸೇರ್ಪಡೆಯಾಗಿಲ್ಲ