ಗೆದ್ದ ಮೇಲೆ ಉಲ್ಟಾ ಹೊಡೆದ್ರಾ ಡಿಕೆಶಿ ? ರಾಜ್ಯದ ತೆರಿಗೆ ಕಟ್ಟುವವರಿಗೆ ಎರಡು ಸಾವಿರ ಸಿಗಲ್ವಾ.

Free Govt Schemes/ಸರ್ಕಾರಿ ಉಚಿತ ಯೋಜನೆಗಳು

ಸ್ನೇಹಿತರೆ ನಮಸ್ಕಾರ, ಇದೀಗ ಕಾಂಗ್ರೆಸ್ ಪಕ್ಷ ಗೆದ್ದು ಅಧಿಕಾರ ಹಿಡಿದಿದೆ.‌ ಆದರೆ ರಾಜ್ಯದ ಜನತೆಗೆ ಮಾತ್ರ ಸಾಕಷ್ಟು ಕುತೂಹಲ ಉಂಟಾಗಿದೆ. ಹೌದು, ಕಾಂಗ್ರೆಸ್ ಹೇಳಿದ ಗ್ಯಾರಂಟಿ ಯಾವಾಗ ನಮ್ಮ ಪಾಲಿಗೆ ಬರುತ್ತದೆ ಎಂಬ ಕುತೂಹಲ ಹೆಚ್ಚಾಗಿದೆ.

ಹೌದು, ಡಿಕೆಶಿ ಹಾಗೂ ಸಿದ್ದರಾಮಯ್ಯನವರು ಪಕ್ಷ ಗೆಲ್ಲುವುದಕ್ಕೆ ಗ್ಯಾರಂಟಿ ಎಂಬ ಹೊಸ ಅಸ್ತ್ರ ಪ್ರಯೋಗ ಮಾಡಿದ್ದರು. ಇದರಿಂದ ಸಾಕಷ್ಟು ಕನ್ನಡಿಗರು ಕಾಂಗ್ರೆಸ್ ಪಕ್ಷಕ್ಕೆ ಮತ ಹಾಕಿ ಗೆಲ್ಲಿಸಿದ್ದಾರೆ. ಆದರೆ ಗೆದ್ದ ಬಳಿಕ ಕಾಂಗ್ರೆಸ್ ಪಕ್ಷದ ಕೆಲವೊಂದು ಗ್ಯಾರಂಟಿ ವಿಚಾರಕ್ಕೆ ಸಾಕಷ್ಟು ಷರತ್ತು ವಿಧಿಸುತ್ತಿದೆ.

ಕಾಂಗ್ರೆಸ್ ಕೊಟ್ಟ ಐದು ಗ್ಯಾರಂಟಿಗಳಿಗೂ ಸಾಕಷ್ಟು ಷರತ್ತು ಹಾಕಲಾಗಿದೆ. ಪದವಿ ಮುಗಿಸಿದ ವಿದ್ಯಾರ್ಥಿಗಳಿಗೆ ಮೂರು ಸಾವಿರ ನೀಡುವ ವಿಚಾರಕ್ಕೂ ಕೂಡ ಸಾಕಷ್ಟು ಷರತ್ತು ಹಾಕಲಾಗಿದೆ. ಇನ್ನು ಮಹಿಳೆಯರಿಗೆ ಉಚಿತ ಬಸ್ ಪ್ರಯಾಣ ವಿಚಾರಕ್ಕೂ ಕೂಡ ಹಲವಾರು ನಿಯಮಗಳನ್ನು ಜಾರಿಗೆ ತಂದಿದ್ದಾರೆ.

ಒಟ್ಟಾರೆಯಾಗಿ ಕಾಂಗ್ರೆಸ್ ಪಕ್ಷ ಗೆದ್ದ ಬಳಿಕ ಷರತ್ತಿನ ಮೂಲಕ ಉಚಿತ ಗ್ಯಾರಂಟಿ ನೀಡಲು ಮುಂದಾಗಿದೆ. ಇನ್ನು ಡಿಕೆ ಶಿವಕುಮಾರ್ ಹೇಳುವ ಪ್ರಕಾರ ರಾಜ್ಯದ ಎಲ್ಲಾ ಜನರಿಗೂ ಗ್ಯಾರಂಟಿ ನೀಡಲಾಗುವುದಿಲ್ಲ. ಕೆಲವೊಂದು ವರ್ಗದ ಜನರಿಗೆ ಹಾಗೂ ಕಡು ಬಡವರಿಗೆ ಮಾತ್ರ ಈ ಜಾರಿ ಎಂಬ ಮಾತು ಕೇಳಿ ಬರುತ್ತಿದೆ.

ನಿಮ್ಮ ಸ್ನೇಹಿತರಿಗೆ ಹಾಗು ವಾಟ್ಸಪ್ಪ್ / ಫೇಸ್ಬುಕ್ ಗ್ರೂಪ್ ಗಳಿಗೆ ಶೇರ ಮಾಡಿ...