ಕಪ್ಪಗಿದ್ಯ ಬೇಡ ಅಂದ್ರು.ಈಗ ಕನ್ನಡದ ಟಾಪ್ ನಟಿಯ ಕಾಲ್ ಶೀಟ್ ಗೆ ಕ್ಯೂ ನಲ್ಲಿರೋ ನಿರ್ಮಾಪಕರು

ಕಪ್ಪಗಿದ್ಯ ಬೇಡ ಅಂದ್ರು.ಈಗ ಟಾಪ್ ನಟಿಯ ಕಾಲ್ ಶೀಟ್ ಗೆ ಕ್ಯೂ ನಲ್ಲಿರೋ ನಿರ್ಮಾಪಕರು

ಕನ್ನಡಿಗ ಬ್ಯಾಡ್ಮಿಂಟನ್ ಆಟಗಾರ ಪ್ರಕಾಶ್ ಪಡುಕೋಣೆಯವರ ಮಗಳು ದೀಪಿಕಾ ಪಡುಕೋಣೆ. ಇವರು ಈಗ ಬಾಲಿವುಡ್ ನ ನಂಬರ್ ಒನ್ ನಟಿ. ಇವರ ಕಾಲ್ ಶೀಟ್ ಗೆ ನಿರ್ಮಾಪಕರು ಅವರ ಮನೆ ಮುಂದೆ ಕ್ಯೂನಲ್ಲಿ ನಿಲ್ಲುತ್ತಾರೆ. ಮಾಡಿದ ಅಷ್ಟೂ ಚಿತ್ರಗಳೂ ಸೂಪರ್ ಹಿಟ್ ಆಗಿವೆ. ಹಾಗಾಗಿ ಇಂದಿಗೂ ಈಕೆ ನಂಬರ್ ಒನ್ ನಟಿ.

ಆದರೆ ನಿಮಗೆ ಗೊತ್ತಿರಲಿ‌. ದೀಪಿಕಾ ಪಡುಕೋಣೆ ಮೂಲತ ಕನ್ನಡತಿ. ಬೆಂಗಳೂರಿನವರು. ಮೊದಲು ಮಾಡೆಲಿಂಗ್ ನಲ್ಲಿ ಇದ್ದರು. ಚಿತ್ರಗಳಲ್ಲಿ ನಟಿಸಲು ಆಕೆ ಅನೇಕ ಜನ ನಿರ್ಮಾಪಕ, ನಿರ್ದೇಶಕರ ಹತ್ತಿರ ಸಂದರ್ಶನಕ್ಕೆ ಹೋಗಿದ್ದಳು. ಆದರೆ ನೀನು ಕಪ್ಪಗಿದಿಯಾ , ಸ್ವಲ್ಪ ದಪ್ಪ ಇರಬೇಕಿತ್ತು ಎಂದು ಇವಳನ್ನು ರಿಜೆಕ್ಟ್ ಮಾಡಿದರು. ಆಕೆಯ ಪ್ರಯತ್ನ ಮುಂದುವರೆಯುತ್ತಲೇ ಇತ್ತು.

Deepika-Padukone-new

ಕಡೆಗೆ ಕನ್ನಡದ ನಿರ್ದೇಶಕ ಇಂದ್ರಜಿತ್ ಲಂಕೇಶ್ ರವರು ತಮ್ಮ ಐಶ್ವರ್ಯ ಚಿತ್ರಕ್ಕೆ ಈಕೆಯನ್ನು ನಾಯಕಿಯಾಗಿ ಸೆಲೆಕ್ಟ್ ಮಾಡಿದರು. ಆ ಚಿತ್ರದಲ್ಲಿ ಉಪೇಂದ್ರ ಇದ್ದರು. ಇದು ತೆಲುಗಿನ ರಿಮೇಕ್ ಚಿತ್ರ.ಈ ಚಿತ್ರ ಯಶಸ್ವಿ ಆಗಿದ್ದೇ ತಡ ದೀಪಿಕಾ ಸೀದಾ ಬಾಲಿವುಡ್ ಗೆ ಹಾರಿದಳು. ಅಲ್ಲಿ ಶಾರುಖ್ ಖಾನ್ ಜೊತೆ ಓಂ ಶಾಂತಿ ಓಂ ಚಿತ್ರದಲ್ಲಿ ನಟಿಸಿದಳು. ಈ ಚಿತ್ರ ಭರ್ಜರಿ ಯಶಸ್ಸು ಗಳಿಸಿತು . ನಂತರ ಈಕೆ ಹಿಂದಿರುಗಿದ್ದೇ ಇಲ್ಲ.

ಕನ್ನಡದ ಚಿತ್ರದ ಮೂಲಕ ಈಕೆ ಬೆಳೆದಳು. ಆದರೆ ಎಂದಿಗೂ ತಾನು ಕನ್ನಡದ ಚಿತ್ರದ ಮೂಲಕ ಪರಿಚಯವಾದೆ ಎಂದು ಹೇಳಿಯೇ ಇಲ್ಲ. ಹತ್ತಿದ ಏಣಿ ಒದೆಯುವದಂದರೆ ಇದೆ. ಈಗ ಈಕೆ ಮುಟ್ಟಿದ್ದೆಲ್ಲಾ ಚಿನ್ನವಾಗುತ್ತಿದೆ. ಆದರೆ ಎಂದಿಗೂ ಕನ್ನಡ,ಕರ್ನಾಟಕವನ್ನು ಇವಳು ನೆನಪು ಮಾಡಿಕೊಂಡಿಲ್ಲ.

ನಿಮ್ಮ ಸ್ನೇಹಿತರಿಗೂ ಶೇರ್ ಮಾಡಿ...