ಗ್ಯಾಸ್ ಸಿಲಿಂಡರ್ ಬಳಸುವವರಿಗೆ ಶಾಕಿಂಗ್ ಸುದ್ದಿ,ಈ ನಂಬರ್ ಇಲ್ಲದೆ ನಿಮಗೆ ಸಿಗಲ್ಲ ಗ್ಯಾಸ್ ಸಿಲಿಂಡರ್.

ದೇಶದಲ್ಲಿ ತಂತ್ರಜ್ಞಾನ ಮುಂದುವರೆದಂತೆ ಅದರ ಸದ್ಬಳಕೆ ಹೇಗೆ ಆಗುತ್ತಿದೆಯೋ ಹಾಗೆ ಕೆಲವು ಜನರು ದುರುಪಯೋಗ ಕೂಡ ಮಾಡಿಕೊಳ್ಳುತ್ತಿದ್ದಾರೆ ಎಂದು ಹೇಳಬಹುದು. ಹೌದು ದೇಶದಲ್ಲಿ ಜನರು ಕೆಲವು ವಿಷಯಗಳಲ್ಲಿ ಸರ್ಕಾರಕ್ಕೆ ಮೋಸ ಮಾಡುತ್ತಿರುವುದು ಇತ್ತೀಚಿನ ದಿನಗಳಲ್ಲಿ ಬೆಳಕಿಗೆ ಬರುತ್ತಿದೆ ಮತ್ತು ಇದನ್ನ ತಡೆಗಟ್ಟುವ ನಿಟ್ಟಿನಲ್ಲಿ ಸರ್ಕಾರ ಏನೇ ಕ್ರಮಗಳನ್ನ ಕೈಗೊಂಡರು ಕೂಡ ಜನರು ಸರ್ಕಾರಕ್ಕೆ ಮೋಸ ಮಾಡುವುದನ್ನ ಮಾತ್ರ ಕಡಿಮೆ ಮಾಡಿಲ್ಲ ಎಂದು ಹೇಳಬಹುದು. ಇನ್ನು ದೇಶದಲ್ಲಿ ಗ್ಯಾಸ್ ಸಿಲಿಂಡರ್ ಬಳಸದವರ ಮನೆ ಇಲ್ಲ ಎಂದು ಹೇಳಬಹುದು. ಯಾವಾಗ ನರೇಂದ್ರ ಮೋದಿಯವರು ಉಜ್ವಲ ಯೋಜನೆಯನ್ನ ಜಾರಿಗೆ ತಂದರೋ ಅಂದಿನಿಂದ ದೇಶದ ಎಲ್ಲಾ ಬಡಜನರು ಕೂಡ ಈ ಗ್ಯಾಸ್ ಸಿಲಿಂಡರ್ ಗಳನ್ನ ಬಳಕೆ ಮಾಡಲು ಆರಂಭ ಮಾಡಿದರು.

ಇನ್ನು ದೇಶದಲ್ಲಿ ಹೇಗೆ ಜನರು ಹೆಚ್ಚು ಗ್ಯಾಸ್ ಸಿಲಿಂಡರ್ ಗಳನ್ನ ಬಳಕೆ ಮಾಡಲು ಆರಂಭ ಮಾಡಿದರೋ ಅದೇ ರೀತಿಯಲ್ಲಿ ಜನರು ಹೆಚ್ಚಿನ ಪ್ರಮಾಣದಲ್ಲಿ ಸರ್ಕಾರಕ್ಕೆ ಮೋಸ ಮಾಡಲು ಕೂಡ ಆರಂಭ ಮಾಡಿದರು ಎಂದು ಹೇಳಬಹುದು. ಹೌದು ಸ್ನೇಹಿತರೆ ಗ್ಯಾಸ್ ಸಿಲಿಂಡರ್ ವಿಷಯದಲ್ಲಿ ಅದೆಷ್ಟೋ ಜನರು ಸರ್ಕಾರಕ್ಕೆ ಮೋಸ ಮಾಡುತ್ತಿರುವುದು ಇತ್ತೀಚಿನ ದಿನಗಳಲ್ಲಿ ಬೆಳಕಿಗೆ ಬಂದಿದೆ ಮತ್ತು ಮುಂದಿನ ದಿನಗಳಲ್ಲಿ ಜನರು ಹೀಗೆ ಸರ್ಕಾರಕ್ಕೆ ಮೋಸ ಮಾಡಬಾರದು ಅನ್ನುವ ಉದ್ದೇಶದಿಂದ ಕೇಂದ್ರ ಸರ್ಕಾರ ಈಗ ಒಂದು ಮಹತ್ವದ ನಿರ್ಧಾರವನ್ನ ಮಾಡಿದ್ದು ಇದು ಕೆಲವು ಜನರ ಮೆಚ್ಚುಗೆಗೆ ಕಾರಣವಾದರೆ ಇನ್ನು ಕೆಲವು ಜನರ ತಲೆಬಿಸಿಗೆ ಕಾರಣವಾಗಿದೆ ಎಂದು ಹೇಳಿದರೆ ತಪ್ಪಾಗಲ್ಲ.

Gas-cylinder

ಹಾಗಾದರೆ ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಆ ಹೊಸ ನಿಯಮ ಏನು ಅನ್ನುವುದರ ಬಗ್ಗೆ ಸಮೋಪುರ್ಣ ಮಾಹಿತಿಯನ್ನ ನಾವು ಈಗ ನಿಮಗೆ ಕೊಡುತ್ತೀವಿ ಪೂರ್ತಿಯಾಗಿ ಓದಿ ಮತ್ತು ಸರ್ಕಾರ ಈ ನಿಲುವಿನ ಬಗ್ಗೆ ನಿಮ್ಮ ಅನಿಸಿಕೆಯನ್ನ ನಮಗೆ ತಿಳಿಸಿ. ಹೌದು ಗ್ಯಾಸ್ ಸಿಲಿಂಡರ್ ಕೊಳ್ಳುವಿಕೆಯಲ್ಲಿ ಜನರು ಸರ್ಕಾರಕ್ಕೆ ವಂಚನೆಯನ್ನ ಮಾಡುತ್ತಿರುವುದು ಈಗ ಬೆಳಕಿಗೆ ಬಂದಿರುವ ಕಾರಣದಿಂದ ಇನ್ನುಮುಂದೆ ಅನಿಲಗಳ ಸಿಲಿಂಡರ್ ನಾವು ಪಡೆದುಕೊಳ್ಳುವ ಸಮಯದಲ್ಲಿ ಒಟಿಪಿ ನೀಡುವ ಹೊಸ ನಿಯಮವನ್ನ ಕೇಂದ್ರ ಸರ್ಕಾರ ಜಾರಿಗೆ ತಂದಿದೆ. ಮುಂದಿನ ತಿಂಗಳು ಅಂದರೆ ನವೆಂಬರ್ 1 ನೇ ತಾರೀಕಿನಿಂದ ಈ ನಿಯಮ ಜಾರಿಗೆ ಬರಲಿದೆ ಕೇಂದ್ರ ಸರ್ಕಾರ ಸ್ಪಷ್ಟನೆಯನ್ನ ಕೊಟ್ಟಿದೆ.

ಗ್ಯಾಸ್ ಸಿಲಿಂಡರ್ ಕಳ್ಳತನ ಮಾಡುವುದನ್ನ ತಡೆಗಟ್ಟುವ ನಿಟ್ಟಿನಲ್ಲಿ ಮತ್ತು ಗ್ರಾಹಕರನ್ನ ಗುರುತು ಮಾಡುವ ಉದ್ದೇಶದಿಂದ ಈ ನಿಯಮವನ್ನ ಜಾರಿಗೆ ತರಲಾಗಿದ್ದು ನಾವು ಇನ್ನುಮುಂದೆ ಗ್ಯಾಸ್ ಸಿಲಿಂಡರ್ ಖರೀದಿ ಮಾಡುವ ಸಮಯದಲ್ಲಿ ನಮ್ಮ ನೋಂದಾಯಿತ ಮೊಬೈಲ್ ಸಂಖ್ಯೆಗೆ ಒಂದು ಒಟಿಪಿ ಬರುತ್ತದೆ ಮತ್ತು ಆ ಒಟಿಪಿ ಅನ್ನು ನಾವು ಗ್ಯಾಸ್ ಸರಬರಾಜು ಮಾಡುವವರಿಗೆ ನೀಡಿ ಗ್ಯಾಸ್ ಸಿಲಿಂಡರ್ ಅನ್ನು ಪಡೆಯಬೇಕೆಗುತ್ತದೆ.

ಹೌದು ನಾವು ಗ್ಯಾಸ್ ಸಿಲಿಂಡರ್ ಅನ್ನು ಬುಕ್ ಮಾಡಿದ ಸಮಯದಲ್ಲಿ ನಿಮ್ಮ ಮೊಬೈಲ್ ಸಂಖ್ಯೆಗೆ ನೀವು ಯಾವ ಕಂಪನಿಯ ಗ್ಯಾಸ್ ಬುಕ್ ಮಾಡಿರುತ್ತೀರೋ ಆ ಕಂಪನಿಯ ಒಂದು ಒಟಿಪಿ ನಂಬರ್ ನಿಮಗೆ ಬರುತ್ತದೆ ಮತ್ತು ನೀವು ಆ ಒಟಿಪಿ ಅನ್ನು ಗ್ಯಾಸ್ ಸಿಲಿಂಡರ್ ತರುವ ವ್ಯಕ್ತಿಗೆ ನೀಡಿ ಗ್ಯಾಸ್ ಸಿಲಿಂಡರ್ ಅನ್ನು ಖರೀದಿ ಮಾಡಬೇಕಾಗುತ್ತದೆ ಮತ್ತು ನೀವು ತಪ್ಪು ಒಟಿಪಿ ಅನ್ನು ಅವರಿಗೆ ನೀವು ನೀಡಿದರೆ ನೀವು ಗ್ಯಾಸ್ ಸಿಲಿಂಡರ್ ಅನ್ನು ಖರೀದಿ ಮಾಡಲು ಸಾಧ್ಯವಿಲ್ಲವಾಗಿದೆ. ಸ್ನೇಹಿತರೆ ಈ ಮಾಹಿತಿಯನ್ನ ಗ್ಯಾಸ್ ಸಿಲಿಂಡರ್ ಬಳಕೆ ಮಾಡುವ ಪ್ರತಿಯೊಬ್ಬ ಗ್ರಾಹಕರಿಗೂ ತಲುಪಿಸಿ.

ನಿಮ್ಮ ಸ್ನೇಹಿತರಿಗೂ ಶೇರ್ ಮಾಡಿ...